ಬೆಂಗಳೂರು ಅಪಾರ್ಟ್ಮೆಂಟ್ ನಿವಾಸಿಗಳಿಗೆ ಹೊಸ ಟೆನ್ಷನ್! ಜಿಬಿಎ ಯಡವಟ್ಟಿನ ನಿರ್ಧಾರಕ್ಕೆ ಪ್ರಾಪರ್ಟಿ ಟ್ಯಾಕ್ಸ್ ಕಟ್ಟೋಕೆ ಆಗದೆ ನಿವಾಸಿಗಳು ಪರದಾಟ

ಬೆಂಗಳೂರು ಅಪಾರ್ಟ್ಮೆಂಟ್ ನಿವಾಸಿಗಳಿಗೆ ಆಸ್ತಿ ತೆರಿಗೆ ಪಾವತಿಯಲ್ಲಿ ಹೊಸ ಸಮಸ್ಯೆ ಎದುರಾಗಿದೆ. ಜಿಬಿಎ ನಿಯಮದಂತೆ, ಆನ್‌ಲೈನ್ ಮೂಲಕ ತೆರಿಗೆ ಕಟ್ಟಲು ಒಣ ಮತ್ತು ಹಸಿ ಕಸದ ವಿಲೇವಾರಿ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಪ್ರತಿ ಫ್ಲಾಟ್‌ನ ನಿವಾಸಿ ಈ ಮಾಹಿತಿ ನೀಡದಿದ್ದರೆ ಪಾವತಿ ಅಸಾಧ್ಯ. ಇದರಿಂದ ಅನೇಕರು ಪರದಾಡುತ್ತಿದ್ದು, ಬೆಂಗಳೂರು ಅಪಾರ್ಟ್ಮೆಂಟ್ ಅಸೋಸಿಯೇಷನ್ ತಕ್ಷಣದ ಪರಿಹಾರಕ್ಕೆ ಒತ್ತಾಯಿಸಿದೆ.

ಬೆಂಗಳೂರು ಅಪಾರ್ಟ್ಮೆಂಟ್ ನಿವಾಸಿಗಳಿಗೆ ಹೊಸ ಟೆನ್ಷನ್! ಜಿಬಿಎ ಯಡವಟ್ಟಿನ ನಿರ್ಧಾರಕ್ಕೆ ಪ್ರಾಪರ್ಟಿ ಟ್ಯಾಕ್ಸ್ ಕಟ್ಟೋಕೆ ಆಗದೆ ನಿವಾಸಿಗಳು ಪರದಾಟ
ಬೆಂಗಳೂರು ಅಪಾರ್ಟ್ಮೆಂಟ್ ನಿವಾಸಿಗಳಿಗೆ ಹೊಸ ಟೆನ್ಷನ್!

Updated on: Apr 15, 2026 | 11:28 AM

ಬೆಂಗಳೂರು, ಏಪ್ರಿಲ್ 15: ನಗರದಲ್ಲಿನ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಪ್ರಾಪರ್ಟಿ ಟ್ಯಾಕ್ಸ್ ಪಾವತಿಯಲ್ಲಿ ಹೊಸ ಸಮಸ್ಯೆ ಎದುರಾಗಿದೆ. ಜಿಬಿಎ (GBA) ತೆಗೆದುಕೊಂಡಿರುವ ಇತ್ತೀಚಿನ ನಿರ್ಧಾರದಿಂದಾಗಿ ನಿವಾಸಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಆನ್‌ಲೈನ್ ಮೂಲಕ ಪ್ರಾಪರ್ಟಿ ಟ್ಯಾಕ್ಸ್ ಕಟ್ಟಲು ಇದೀಗ ಕಸದ ವಿಲೇವಾರಿ ಕುರಿತು ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕಾಗಿದೆ.

ಜಿಬಿಎ ಹೊಸ ನಿಯಮಕ್ಕೆ ನಿವಾಸಿಗಳು ಕಂಗಾಲು

ಮನೆಯಲ್ಲಿ ಉತ್ಪತ್ತಿಯಾಗುವ ಒಣ ಕಸ ಮತ್ತು ಹಸಿ ಕಸದ ಪ್ರಮಾಣವನ್ನು ಪ್ರತ್ಯೇಕವಾಗಿ ದಾಖಲಿಸದಿದ್ದರೆ ಆನ್‌ಲೈನ್ ಮೂಲಕ ಪ್ರಾಪರ್ಟಿ ಟ್ಯಾಕ್ಸ್ ಕಟ್ಟಲು ಸಾಧ್ಯವಿಲ್ಲ. ಈ ನಿಯಮದಿಂದಾಗಿ ಅನೇಕರು ಟ್ಯಾಕ್ಸ್ ಕಟ್ಟಲು ಪರದಾಡುತ್ತಿದ್ದಾರೆ. ವಿಶೇಷವಾಗಿ ಅಪಾರ್ಟ್ಮೆಂಟ್‌ಗಳಲ್ಲಿ ದಿನವೂ 100 ಕಿಲೋಗ್ರಾಂಕ್ಕೂ ಹೆಚ್ಚು ಕಸ ಸಂಗ್ರಹವಾಗುತ್ತಿದ್ದು, ಈ ಮಟ್ಟವನ್ನು ಮೀರಿ ಹೋದರೆ ಜಿಬಿಎ ವತಿಯಿಂದ ಕಸದ ನಿರ್ವಹಣೆ ಮಾಡಲಾಗುವುದಿಲ್ಲ ಎಂಬ ಅಂಶ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ.

ಹಿಂದೆ ಈ ರೀತಿಯ ಆಯ್ಕೆಯೇ ಇರಲಿಲ್ಲ

ಹೀಗಾಗಿ ಹಲವಾರು ಅಪಾರ್ಟ್ಮೆಂಟ್‌ಗಳು ಖಾಸಗಿ ಸಂಸ್ಥೆಗಳ ಮೂಲಕವೇ ಕಸದ ವಿಲೇವಾರಿ ಮಾಡಿಸುತ್ತಿವೆ. ಆದರೆ ಈಗ ಪ್ರತಿ ಫ್ಲ್ಯಾಟ್‌ನ ನಿವಾಸಿಯೂ ತನ್ನದೇ ಆದ ಕಸದ ಲೆಕ್ಕವನ್ನು ಆನ್‌ಲೈನ್‌ನಲ್ಲಿ ನೀಡಬೇಕು ಎಂಬ ನಿಯಮ ಜಾರಿಗೆ ಬಂದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಅಂದಾಜಿನಲ್ಲಿ ಒಂದೊಂದು ಕೆಜಿ ಅಂತ ಲೆಕ್ಕ ಹಾಕಿ, ನಾಲ್ಕು ಕೆಜಿ ಅಂತ ದಾಖಲಿಸಿದ್ರೂ ಹಣ ಪಾವತಿ ಆಗ್ತಿಲ್ಲ100KGಗಿಂತ ಮೇಲೆ ದಾಖಲು ಮಾಡಬೇಕು ಅಂತ ತೋರಿಸುತ್ತಿದೆ ಎಂದು ನಿವಾಸಿಗಳು ದೂರುತ್ತಿದ್ದಾರೆ. ಹಿಂದೆ ಈ ರೀತಿಯ ಆಯ್ಕೆಯೇ ಇರಲಿಲ್ಲ ಎಂದು ನಿವಾಸಿಗಳು ಹೇಳುತ್ತಿದ್ದಾರೆ. ಈ ಕುರಿತು ಬೆಂಗಳೂರು ಅಪಾರ್ಟ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಸತೀಶ್ ಮಲ್ಯ ತಕ್ಷಣ ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿದ್ದಾರೆ.

ವರದಿ: ಅರುಣ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us