Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Rains: ಪ್ರಯಾಣಿಕರೇ ಗಮನಿಸಿ, ಇಂದು ಈ ವಿಮಾನಗಳು ಬೆಂಗಳೂರಿನಲ್ಲಿ ಲ್ಯಾಂಡ್ ಆಗಲ್ಲ!

Weather Forecast: ಪ್ರತಿಕೂಲ ಹವಾಮಾನದಿಂದಾಗಿ ಬೆಂಗಳೂರಿನಲ್ಲಿ ಇಳಿಯಬೇಕಾಗಿದ್ದ 10ಕ್ಕೂ ಹೆಚ್ಚು ವಿಮಾನಗಳನ್ನು ಚೆನ್ನೈಗೆ ತಿರುಗಿಸಲಾಗಿದೆ. ಏರ್ ಇಂಡಿಯಾ, ಇಂಡಿಗೋ ತನ್ನ ಪ್ರಯಾಣಿಕರಿಗೆ ಕೆಲವು ಸೂಚನೆಗಳನ್ನು ಹೊರಡಿಸಿದೆ. ಏರ್ ಇಂಡಿಯಾ ಮತ್ತು ಇಂಡಿಗೋ ಮಳೆಯ ಪರಿಸ್ಥಿತಿಯ ಬಗ್ಗೆ ಪೋಸ್ಟ್ ಮಾಡಿ ಹವಾಮಾನವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ತಿಳಿಸಿವೆ. ಇಂದು ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದ್ದು, ವಿಮಾನ ಸಂಚಾರದ ಮೇಲೆ ಕೂಡ ಪರಿಣಾಮ ಬೀರಿದೆ.

Bengaluru Rains: ಪ್ರಯಾಣಿಕರೇ ಗಮನಿಸಿ, ಇಂದು ಈ ವಿಮಾನಗಳು ಬೆಂಗಳೂರಿನಲ್ಲಿ ಲ್ಯಾಂಡ್ ಆಗಲ್ಲ!
Flight
Follow us
ಸುಷ್ಮಾ ಚಕ್ರೆ
|

Updated on: Mar 22, 2025 | 10:15 PM

Bengaluru Rain Updates: ಬೆಂಗಳೂರು, ಮಾರ್ಚ್ 22: ಕರ್ನಾಟಕದ ರಾಜಧಾನಿ ದೆಹಲಿಯಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಬೆಂಗಳೂರಿಗೆ ಆಗಮಿಸಬೇಕಾಗಿದ್ದ ಹಲವಾರು ವಿಮಾನಗಳನ್ನು ಚೆನ್ನೈಗೆ ತಿರುಗಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ವಿಮಾನಯಾನ ಸಂಸ್ಥೆಗಳು, ಏರ್ ಇಂಡಿಯಾ ಮತ್ತು ಇಂಡಿಗೋ ಮಳೆಯ ಪರಿಸ್ಥಿತಿಯ ಬಗ್ಗೆ ಪೋಸ್ಟ್ ಮಾಡಿ ಹವಾಮಾನವನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ ಎಂದು ತಿಳಿಸಿವೆ. ಕರ್ನಾಟಕದ ರಾಜಧಾನಿಯಲ್ಲಿ ಭಾರೀ ಮಳೆಯಿಂದಾಗಿ ಬೆಂಗಳೂರಿಗೆ ಹೋಗುತ್ತಿದ್ದ ಕನಿಷ್ಠ 10 ವಿಮಾನಗಳನ್ನು ಚೆನ್ನೈಗೆ ತಿರುಗಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಬೆಂಗಳೂರಿನಲ್ಲಿ ವಿಮಾನ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿವೆ ಎಂದು ಇಂಡಿಗೋ ತನ್ನ ಪ್ರಯಾಣ ಸಲಹೆಯಲ್ಲಿ ತಿಳಿಸಿದೆ. “ಇದು ನಿಮ್ಮ ಪ್ರಯಾಣ ಯೋಜನೆಗಳ ಮೇಲೆ ಮತ್ತಷ್ಟು ಪರಿಣಾಮ ಬೀರಬಹುದು ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಿಮ್ಮ ತಾಳ್ಮೆಯನ್ನು ನಾವು ಪ್ರಾಮಾಣಿಕವಾಗಿ ಪ್ರಶಂಸಿಸುತ್ತೇವೆ. ಲ್ಯಾಂಡಿಂಗ್ ಸಮಯದ ನವೀಕರಣಗಳಿಗಾಗಿ ನಿಮ್ಮ ವಿಮಾನ ಸ್ಥಿತಿಯ ಮೇಲೆ ನಿಗಾ ಇಡಲು ನಾವು ನಿಮ್ಮ ಬಳಿ ಮನವಿ ಮಾಡುತ್ತೇವೆ. ನಿಮ್ಮ ಪ್ರಯಾಣ ಯೋಜನೆಗಳನ್ನು ಬದಲಿಸಬೇಕಿದ್ದಲ್ಲಿ, ನೀವು ಮರುಬುಕಿಂಗ್ ಆಯ್ಕೆಗಳನ್ನು ಅನುಸರಿಸಬಹುದು ಅಥವಾ ನಮ್ಮ ವೆಬ್‌ಸೈಟ್ ಮೂಲಕ ಅನುಕೂಲಕರವಾಗಿ ಮರುಪಾವತಿಯನ್ನು ಪಡೆಯಬಹುದು” ಎಂದು ವಿಮಾನಯಾನ ಸಂಸ್ಥೆ ಎಕ್ಸ್​ ನಲ್ಲಿ ಪೋಸ್ಟ್ ಮಾಡಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆ ಅಬ್ಬರ: ಕೆರೆಯಂತಾದ ರಸ್ತೆಗಳು, ಹಲವೆಡೆ ಸಂಚಾರ ಅಸ್ತವ್ಯಸ್ತ

ಏರ್ ಇಂಡಿಯಾ ಪ್ರಯಾಣ ಸಲಹೆ:

ಪ್ರಯಾಣದ ಸಲಹೆಯಲ್ಲಿ ಏರ್ ಇಂಡಿಯಾ ಪ್ರಯಾಣಿಕರನ್ನು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ವಿಮಾನ ಸ್ಥಿತಿಯನ್ನು ಪರಿಶೀಲಿಸಲು ಮನವಿ ಮಾಡಿದೆ. “ಬೆಂಗಳೂರಿನಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ವಿಮಾನ ಕಾರ್ಯಾಚರಣೆಗಳು ಪರಿಣಾಮ ಬೀರುತ್ತಿವೆ. ಇದರ ಪರಿಣಾಮವಾಗಿ ವಾಯು ಸಂಚಾರ ದಟ್ಟಣೆ ಉಂಟಾಗಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲು ನಮ್ಮ ಎಲ್ಲಾ ಪ್ರಯಾಣಿಕರು ತಮ್ಮ ವಿಮಾನ ಸ್ಥಿತಿಯನ್ನು ಇಲ್ಲಿ ಪರಿಶೀಲಿಸಲು ನಾವು ಸಲಹೆ ನೀಡುತ್ತೇವೆ- http://airindia.com/in/en/manage/flight-status.html ಈ ವೆಬ್ ಸೈಟಿನಲ್ಲಿ ಪರಿಶೀಲಿಸಬಹುದು” ಎಂದು ಏರ್ ಇಂಡಿಯಾ ಪೋಸ್ಟ್ ಮಾಡಿದೆ.

“ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲು ನಮ್ಮ ಎಲ್ಲಾ ಪ್ರಯಾಣಿಕರು ತಮ್ಮ ವಿಮಾನ ಸ್ಥಿತಿಯನ್ನು ಪರಿಶೀಲಿಸಲು ನಾವು ಸಲಹೆ ನೀಡುತ್ತೇವೆ” ಎಂದು ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದೆ.

ಬೆಂಗಳೂರಿನ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ