ಬೆಂಗಳೂರಿನಲ್ಲಿ ಮಳೆರಾಯನ ಆರ್ಭಟ: ವಾಹನ ಸವಾರರು ಪರದಾಟ, ಆಟೋ ಮೇಲೆ ಬಿದ್ದ ಮರ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 16, 2024 | 8:27 PM

ಕಳೆದ ಮೂರು ದಿನಗಳ ಹಿಂದೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಮಳೆಗೆ ಹಲವು ಅವಾಂತರಗಳು ಸೃಷ್ಟಿಯಾಗಿದ್ದು, ರಾಜಧಾನಿಯ ಹಲವು ರಸ್ತೆಗಳು ಕೆಸರು ನೀರು ನಿಂತು ಜಲಾವೃತಗೊಂಡಿತ್ತು. ಅದರಂತೆ ಇಂದು(ಆ.16)ವರಮಹಾಲಕ್ಷ್ಮಿ ಹಬ್ಬದಂದೆ ನಗರದ ಹಲವೆಡೆ ವರುಣನ ಆಗಮನವಾಗಿದ್ದು, ದಿಢೀರ್​ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಗಿ್ದೆ.

ಬೆಂಗಳೂರಿನಲ್ಲಿ ಮಳೆರಾಯನ ಆರ್ಭಟ: ವಾಹನ ಸವಾರರು ಪರದಾಟ, ಆಟೋ ಮೇಲೆ ಬಿದ್ದ ಮರ
ಬೆಂಗಳೂರು ಮಳೆ
Follow us on

ಬೆಂಗಳೂರು, ಆ.16: ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ವರಮಹಾಲಕ್ಷ್ಮಿ ಹಬ್ಬದಂದೆ ವರುಣನ ಆಗಮನವಾಗಿದೆ. ದಿಢೀರ್ ಮಳೆಗೆ ಹಬ್ಬದ ಸಡಗರದಲ್ಲಿದ್ದ ಸಿಟಿಮಂದಿ ಸುಸ್ತಾಗಿದ್ದಾರೆ. ನಗರದ ವಿಧಾನ ಸೌಧ, ಕಾರ್ಪೊರೇಷನ್ ಸರ್ಕಲ್, ರಾಜಾಜಿನಗರ, ವಿಜಯನಗರ, ಬಸವೇಶ್ವರನಗರ,  ಶಾಂತಿನಗರ, ರಿಚ್ಮಂಡ್ ಸರ್ಕಲ್ ಸೇರಿದಂತೆ ಹಲವೆಡೆ ಮಳೆ(Rain) ಆಗಿದ್ದು, ದಿಢೀರ್​ ಮಳೆಯಿಂದಾಗಿ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲೂ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು, ಪೀಣ್ಯಾ, ದಾಸರಹಳ್ಳಿ, ಬಾಗಲಗುಂಟೆ, ಶೆಟ್ಟಿಹಳ್ಳಿ, ಹೆಸರಘಟ್ಟ ಸೇರಿದಂತೆ ಹಲವಾರು ಕಡೆ ಮಳೆ ಆರಂಭವಾಗಿದೆ.

ಬೃಹತ್​ ಮರ ಉರುಳಿಬಿದ್ದು ಜಖಂಗೊಂಡಿರುವ ಆಟೋ

ಇನ್ನು ಮಳೆಯ ಅಬ್ಬರಕ್ಕೆ ವಿಜಯನಗರದ ಎಂ.ಸಿ.ಲೇಔಟ್​​ನಲ್ಲಿ ಬೃಹತ್​ ಮರವೊಂದು ಉರುಳಿಬಿದ್ದು ಆಟೋ ಜಖಂಗೊಂಡಿದೆ. ಮರ ಉರುಳಿಬಿದ್ದ ಹಿನ್ನಲೆ ಆಟೋ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ‌‌ ಬಿಬಿಎಂಪಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಿದ್ದಿರುವ ಮರ ತೆರವುಗೊಳಿಸಲಾಗುತ್ತಿದೆ.


ಇದನ್ನೂ ಓದಿ:ಬಾಗಲಕೋಟೆಯ ಕಲಾದಗಿಯಲ್ಲಿ ಬಿರುಗಾಳಿ ಸಮೇತ ಭಾರೀ ಮಳೆ, ಸನ್ನಿವೇಶ ಆನಂದಿಸಿದ ಶಾಲಾಮಕ್ಕಳು!

ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿತ್ತು. ಇನ್ನುಳಿದಂತೆ ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದ್ದು, ಮುಂದಿನ ಎರಡು ದಿನ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎನ್ನಲಾಗಿತ್ತು. ಜೊತೆಗೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಸೂಚಿಸಲಾಗಿದೆ.

ಬಾಗಲಕೋಟೆ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ

ಚಿಕ್ಕಮಗಳೂರು: ನಗರದಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭಾರೀ ಮಳೆಗೆ ಚಿಕ್ಕಮಗಳೂರು ನಗರ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶದಿಂದ ಹರಿದು ಬರುತ್ತಿರುವ ಮಳೆ ನೀರು ಉಪ್ಪಳ್ಳಿ ಬಡಾವಣೆಯ ಮನೆಗಳಿಗೆ ನುಗ್ಗಿದ್ದು, 12ಕ್ಕೂ ಅಧಿಕ ಮನೆಗಳು ಜಲಾವೃತವಾಗಿವೆ. ಪರಿಣಾಮ ಮನೆಯೊಳಗಿದ್ದ ದಿನಸಿ ಸಾಮಗ್ರಿಗಳು ಸೇರಿದಂತೆ ಗೃಹ ಉಪಯೋಗಿ ವಸ್ತುಗಳಿಗೆ ಹಾನಿಯಾಗಿದೆ. ಕಳೆದ ಅರ್ಧಗಂಟೆಯಿಂದ ಧಾರಾಕಾರವಾಗಿ ಸುರಿಯಿತ್ತಿರುವ ಮಳೆಗೆ ಬಡಾವಣೆ ಜನರು ಅಕ್ಷರಶಃ ಕಂಗಾಲಾಗಿದ್ದಾರೆ.

ರಬಕವಿ-ಬನಹಟ್ಟಿಯಲ್ಲಿ ಭಾರಿ ಮಳೆ

ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿಯಲ್ಲಿ ಭಾರಿ ಮಳೆಯಿಂದಾಗಿ ಬನಹಟ್ಟಿಯ ಕಾಲೇಜು ಕಾಂಪೌಂಡ್​ ಕುಸಿದಿದೆ. ನಿರಂತರ ಅರ್ಧ ಗಂಟೆಗೂ ಅಧಿಕ ಕಾಲ ಸುರಿದ‌ ಮಳೆಗೆ ಜಿಲ್ಲೆಯಲ್ಲಿ ಹಲವಾರು ಅವಾಂತರ ಸೃಷ್ಟಿ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:52 pm, Fri, 16 August 24