AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PSI ಮನೆ ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಪೊಲೀಸ್ ಕುಟುಂಬಸ್ಥರೇ ಸೃಷ್ಟಿಸಿದ್ದ ಕಟ್ಟುಕಥೆ ಬಹಿರಂಗ

ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದ್ದ ಪಿಎಸ್ಐ ಮನೆಯಲ್ಲಿನ ಕಳ್ಳತನ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಸಿಸಿಟಿವಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಅಸಲಿಯತ್ತು ಬಯಲಾಗಿದೆ. ಕುಟುಂಬಸ್ಥರ ವಿಚಾರಣೆ ಮಾಡಿದಾಗ ಕಳ್ಳತನದ ಸ್ಟೋರಿಯೇ ಒಂದು ಕಟ್ಟು ಕಥೆ ಅನ್ನೋದು ಗೊತ್ತಾಗಿದೆ..ಹಾಗಾದ್ರೆ ಅಸಲಿಗೆ ನಡೆದಿದ್ದೇನು? ಎನ್ನುವ ವಿವರ ಇಲ್ಲಿದೆ ನೋಡಿ.

PSI ಮನೆ ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಪೊಲೀಸ್ ಕುಟುಂಬಸ್ಥರೇ ಸೃಷ್ಟಿಸಿದ್ದ ಕಟ್ಟುಕಥೆ ಬಹಿರಂಗ
ರಾಚಪ್ಪಾಜಿ ನಾಯ್ಕ್
| Updated By: ರಮೇಶ್ ಬಿ. ಜವಳಗೇರಾ|

Updated on: Aug 16, 2024 | 6:50 PM

Share

ಬೆಂಗಳೂರು, (ಆಗಸ್ಟ್ 16): ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿರೊ ಅದೊಂದು ಕಳ್ಳತನ ಪ್ರಕರಣ ಪೊಲೀಸ್ ಇಲಾಖೆಯಲ್ಲಿಯೇ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಪಿಎಸ್ಐ ಒಬ್ಬರ ಮನೆಯಲ್ಲಿಯೇ ನಡೆದಿದೆ ಎನ್ನಲಾದ ಕೃತ್ಯ ಹಲವು ಅನುಮಾನಕ್ಕೆ ಹುಟ್ಟು ಹಾಕಿದೆ. ತನಿಖೆ ಇಳಿದು ಸಿಸಿಟಿವಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಯಾರ ಚಲನ ವಲನ ಕೂಡ ಪತ್ತೆ ಆಗಿರಲಿಲ್ಲ. ಹಾಗಾಗಿ ಕೂಲಂಕುಶ ವಿಚಾರಣೆ ವೇಳೆ ಇದೊಂದು ಕಟ್ಟುಕಥೆ ಎನ್ನುವುದು ಬಹಿರಂಗ ಗೊಂಡಿದೆ. ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣವನ್ನು ತವರು ಮನೆಗೆ ನೀಡಿ ಕಳ್ಳತನ ಆಗಿದೆ ಎಂದು ನಾಟಕವಾಡಿದ್ದಾರೆ.

ಜುಲೈ 11 ರಂದು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿರುವ ಪುಟ್ಟಸ್ವಾಮಿಯ ಕೋರಮಂಗಲದಲ್ಲಿರುವ ಮನೆಯಲ್ಲಿ ಕಳ್ಳತನ ಆಗಿದೆ ಅನ್ನೋ ದೂರು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಮನೆಗೆ ನುಗ್ಗಿದ್ದ ಕಳ್ಳರು ಪಿಎಸ್ಐ ಮನೆಯಿಂದ ಚಿನ್ನಾಭರಣ ಹಾಗೂ ಹಣ ದೋಚಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು..ಕೋರಮಂಗಲ ಪೊಲೀಸ್ ಠಾಣೆ ಕೂಗಳತೆ ಹಾಗೂ ಆಗ್ನೇಯ ವಿಭಾಗ ಡಿಸಪಿ ಕಚೇರಿ ಎದುರಲ್ಲೇ ಇರುವ ಪಿಎಸ್ಐ ಮನೆಯಲ್ಲಿ ಕಳ್ಳತನ ಆಗಿದೆ ಅಂದ್ರೆ ನಂಬೋದಕ್ಕೆ ಸ್ವಲ್ಪ ಅನುಮಾನವೇ ಆಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ಟಿವಿ9 ವರದಿ ಪ್ರಸಾರ ಮಾಡಿತ್ತು. ಟಿವಿ9 ವರದಿ ಬಳಿಕ ತನಿಖೆಗಾಗಿ ನಗರ ಪೊಲೀಸ್ ಆಯುಕ್ತ ದಯಾನಂದ್ ಎಸಿಪಿ ನೇತೃತ್ವದ ತಂಡ‌ ರಚನೆ ಮಾಡಿದ್ದರು. ಸದ್ಯ ಇದೇ ತಂಡ ವರದಿ ಸಲ್ಲಿಸಿದ್ದು ಅಸಲಿಯತ್ತು ಬಯಲಾಗಿದೆ.

ಇದನ್ನೂ ಓದಿ: ಪಿಎಸ್​ಐ ಮನೆಯಲ್ಲೇ ದರೋಡೆ, ಎಫ್​ಐಆರ್​ ದಾಖಲು: ಅನುಮಾನ ಹುಟ್ಟಿಸಿದ ಪೊಲೀಸರ ನಡೆ

ಹೌದು ತನಿಖೆ ಇಳಿದು ಸಿಸಿಟಿವಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಯಾರ ಚಲನ ವಲನ ಕೂಡ ಪತ್ತೆ ಆಗಿರಲಿಲ್ಲ. ಹಾಗಾಗಿ ಕೂಲಂಕುಶ ವಿಚಾರಣೆ ವೇಳೆ ಇದೊಂದು ಕಟ್ಟುಕಥೆ ಅನ್ನೋದು ಬಹಿರಂಗ ಗೊಂಡಿದೆ. ಪಿಎಸ್ಐ ಪತ್ನಿ ಕುಟುಂಬಸ್ಥರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಹಾಗಾಗಿ ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣವನ್ನು ತವರು ಮನೆಗೆ ನೀಡಿ ಕಳ್ಳತನ ಆಗಿದೆ ಎಂದು ನಾಟಕವಾಡಿದ್ದಾರೆ. ಹಾಗಾಗಿ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು…ವಿಚಾರ ಗೊತ್ತಿದ್ರು ಕೋರಮಂಗಲ ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾದ ಬಳಿಕ ತನಿಖೆ ವೇಗ ಪಡೆದಿತ್ತು..ಸದ್ಯ ನಡೆದ ಎಲ್ಲಾ ಸಂಗತಿಗಳು ಎಸಿಪಿ ನೇತೃತ್ವದ ತಂಡ ನೀಡಿದ ವರದಿಯಲ್ಲಿ ಉಲ್ಲೇಖವಾಗಿದೆ.

ಒಟ್ಟಾರೆಯಾಗಿ ಹಲವು ಅನುಮಾನಗಳಿಗೆ ಕಾರಣವಾಗಿದ್ದ ಪಿಎಸ್ಐ ಮನೆಯಲ್ಲಿನ ಕಳ್ಳತನ ಪ್ರಕರಣ ಸದ್ಯ ಸುಖಾಂತ್ಯ ಕಂಡಿದ್ದು ಕುಟುಂಬಸ್ಥರೇ ರಚಿಸಿದ ಕಟ್ಟುಕಥೆ ಅನ್ನೋದು ಗೊತ್ತಾಗಿದೆ. ಇನ್ನು ಸುಳ್ಳು ಪ್ರಕರಣ ನೀಡಿದ್ದರಿ ದ ಪಿಎಸ್ಐ ವಿರುದ್ಧ ಶಿಸ್ತು ಕ್ರಮಕ್ಕೆ ನಗರ ಪೊಲೀಸ್ ಆಯುಕ್ತ ದಯಾನಂದ್ ಸೂಚಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ