Bengaluru Stamped: RCBಗೆ ಮತ್ತಷ್ಟು ಸಂಕಷ್ಟು, ಕಬ್ಬನ್​ ಪಾರ್ಕ್​ ಠಾಣೆಯಲ್ಲಿ ಮತ್ತೆರಡು ಕೇಸ್ ದಾಖಲು

Bengaluru RCB Victory Celebrations Stampede: ಆರ್​ಸಿಬಿ ಗೆಲುವನ್ನು ಸಂಭ್ರಮಿಸಲು ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವಿಜಯೋತ್ಸವ ಕಾರ್ಯಕ್ರಮ ವೀಕ್ಷಿಸಲು ಕ್ರೀಡಾಂಗಣಕ್ಕೆ ಲಕ್ಷಾಂತರ ಅಭಿಮಾನಿಗಳು ಆಗಮಿಸಿದ್ದರು. ಈ ವೇಳ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಟ್ಟಿದ್ದಾರೆ. ಈ ಕಾಲ್ತುಳಿತದಲ್ಲಿ ಗಾಯಗೊಂಡ ಓರ್ವ ವ್ಯಕ್ತಿ ಆರ್​ಸಿಬಿ ಫ್ರಾಂಚೈಸಿ ವಿರುದ್ಧ ದೂರು ನೀಡಿದ್ದಾರೆ. ಈ ಮೂಲಕ ಆರ್​ಸಿಬಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

Bengaluru Stamped: RCBಗೆ ಮತ್ತಷ್ಟು ಸಂಕಷ್ಟು, ಕಬ್ಬನ್​ ಪಾರ್ಕ್​ ಠಾಣೆಯಲ್ಲಿ ಮತ್ತೆರಡು ಕೇಸ್ ದಾಖಲು
ಆರ್​ಸಿಬಿ, ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆ
Updated By: ವಿವೇಕ ಬಿರಾದಾರ

Updated on: Jun 06, 2025 | 4:04 PM

ಬೆಂಗಳೂರು, ಜೂನ್​ 06: ಬೆಂಗಳೂರಿನ (Bengaluru) ಎಂ. ಚಿನ್ನಸ್ವಾಮಿ ಕ್ರೀಡಾಂಗಣದ (Chinnaswamy stadium) ಹೊರಗೆ ನಡೆದ ಕಾಲ್ತುತಿಳಿತದಲ್ಲಿ 11 ಮಂದಿ ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಂಭ್ರಮಾಚರಣೆಗೆ ಸೂತಕ ಅಂಟಿಕೊಂಡಿದೆ. ಈ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್​ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮತ್ತೆ ಎರಡು ಪ್ರಕರಣ ದಾಖಲಾಗಿವೆ. ಕಾಲ್ತುಳಿತದಲ್ಲಿ ಗಾಯಗೊಂಡ ರೋಲನ್ ಗೊಮೆಸ್ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಆರ್​ಸಿಬಿ ಫ್ರಾಂಚೈಸಿ, ಕೆಎಸ್​ಸಿಎ ಮತ್ತು ಡಿಎನ್​ಎ ಕಂಪನಿ ವಿರುದ್ಧ ಬಿಎನ್​ಎಸ್​​ ಕಾಯ್ದೆ 2023 (U/s-125(a)) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಜಾಲತಾಣದಲ್ಲಿ ಆರ್​ಸಿಬಿ ಪೋಸ್ಟ್​ ನೋಡಿ ನನ್ನ ಗೆಳೆಯರ ಜೊತೆ ಸಂಭ್ರಮಾಚರಣೆ ವೀಕ್ಷಿಸಲು ಬಂದಿದ್ದೆ. ತೆರದ ಬಸ್ ಮೂಲಕ ಮೆರಬಣಿಗೆ ಇದೆ ಎಂದು ತಿಳಿಸಲಾಗಿತ್ತು. ಗೇಟ್ ನಂಬರ್ 17ರಲ್ಲಿ ನಾನು ಹೋಗುವಾಗ ನೂಕುನುಗ್ಗಲು‌ ಆಯ್ತು. ಈ ವೇಳೆ ನನ್ನ ತೋಳಿಗೆ ಪೆಟ್ಟಾಗಿದೆ ಎಂದು ಗಾಯಾಳು ರೋಲನ್ ಗೊಮೆಸ್ ದೂರು ನೀಡಿದ್ದಾರೆ.

ಪ್ರಕರಣ ಸಂಬಂಧ ನಾಲ್ವರ ಬಂಧನ

ಕಬ್ಬನ್ ಪಾರ್ಕ್ ಇನ್ಸ್​ಪೆಕ್ಟರ್ ಗಿರೀಶ್ ದೂರು ನೀಡಿದ್ದ ಹಿನ್ನೆಲೆಯಲ್ಲಿ ಆರ್​ಸಿಬಿ ವಿರುದ್ಧ ಈಗಾಗಲೆ ಒಂದು ಎಫ್​ಐಆರ್​ ದಾಖಲಾಗಿತ್ತು. ಈಗ, ಗಾಯಾಳು ನೀಡಿದ ದೂರಿನ ಆಧಾರದ ಮೇಲೆ ಮತ್ತೇರಡು ಎಫ್​ಐಆರ್​ ದಾಖಲಾಗಿವೆ.

ಇದನ್ನೂ ಓದಿ
ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ ಕರ್ನಾಟಕ ಪೊಲೀಸರು ದಾಖಲಿಸಿದ FIR!
RCB ಮಾರ್ಕೆಟಿಂಗ್​ ಮುಖಸ್ಥ​​​​​​​ ನಿಖಿಲ್​ ಸೋಸಲೆ ಸೇರಿ ನಾಲ್ವರ ಬಂಧನ
ಎಡಿಜಿಪಿ ದರ್ಜೆ ಅಧಿಕಾರಿ ಸಸ್ಪೆಂಡ್, ಕರ್ನಾಟಕ ಪೊಲೀಸ್ ಇತಿಹಾಸದಲ್ಲೇ ಮೊದಲು
ಬೆಂಗಳೂರಿಗೆ ನೂತನ ಪೊಲೀಸ್​ ಕಮಿಷನರ್​ ಆಗಿ ಸೀಮಂತ್​ ಕುಮಾರ್ ಸಿಂಗ್ ನೇಮಕ

ಇದನ್ನೂ ಓದಿ: ಎಚ್​ಡಿಕೆ ಗಂಭೀರ ಆರೋಪ ಬೆನ್ನಲ್ಲೇ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ಗೋವಿಂದಾ!

ಕಬ್ಬನ್ ಪಾರ್ಕ್ ಇನ್ಸ್​ಪೆಕ್ಟರ್ ಗಿರೀಶ್ ದೂರು ನೀಡಿದ್ದ ದೂರಿನ ಆಧಾರದ ಮೇಲೆ ಬಿಎನ್​ಎಸ್​ ಸೆಕ್ಷನ್ 105, 115, 118ರಡಿ ಮೊಕದ್ದಮೆ ದಾಖಲಾಗಿದೆ. ಆರ್​ಸಿಬಿ ಮ್ಯಾನೇಜ್ಮೆಂಟ್ A-1 ಆಗಿದ್ದರೆ, ಕಾರ್ಯಕ್ರಮ ಆಯೋಜನೆ ಮಾಡಿದ್ದ DNA ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ A-2 ಆಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್​ನ A3 ಯನ್ನಾಗಿ ಮಾಡಿ ಎಫ್​ಐಆರ್ ದಾಖಲಿಸಲಾಗಿದೆ. ಆರ್​ಸಿಬಿ ಮಾರ್ಕೆಟಿಂಗ್​ ಮುಖಸ್ಥ​​​​​​​ ಸೇರಿ ನಾಲ್ವರನ್ನು ಬಂಧಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:46 pm, Fri, 6 June 25