AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರಿಗೆ ಟಚ್ ಮಾಡಿದಲ್ದೇ ಲಾಂಗ್ ಹಿಡಿದು ಪೌರುಷ: ಜನ ಸೇರುತ್ತಿದ್ದಂತೆಯೇ ಎದ್ನೋ ಬಿದ್ನೋ ಎಂದು ಓಡಿದ

ಬೆಂಗಳೂರಿನ ಶೇಷಾದ್ರಿಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಟಿಯೋಸ್​ ಮತ್ತು ಇನ್ನೋವಾ ಕಾರು ಮಧ್ಯೆ ಟಚ್ ಆಗಿದೆ. ಈ ವೇಳೆ ಇನ್ನೋವಾ ಕಾರು ಚಾಲಕನಿಂದ ಇಟಿಯೋಸ್​ ಕಾರು ಚಾಲಕನ ಮೇಲೆ ನಡು ರಸ್ತೆಯಲ್ಲಿ ಮಚ್ಚು ಹಿಡಿದು ಹಲ್ಲೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ.

ಕಾರಿಗೆ ಟಚ್ ಮಾಡಿದಲ್ದೇ ಲಾಂಗ್ ಹಿಡಿದು ಪೌರುಷ: ಜನ ಸೇರುತ್ತಿದ್ದಂತೆಯೇ ಎದ್ನೋ ಬಿದ್ನೋ ಎಂದು ಓಡಿದ
ಕಾರು ಟಚ್​ ಹಲ್ಲೆಗೆ ಯತ್ನ
ರಾಚಪ್ಪಾಜಿ ನಾಯ್ಕ್
| Updated By: ಗಂಗಾಧರ​ ಬ. ಸಾಬೋಜಿ|

Updated on:Jul 07, 2025 | 8:31 PM

Share

ಬೆಂಗಳೂರು, ಜುಲೈ 07: ಕಾರು (car) ಟಚ್ ಆಗಿದ್ದಕ್ಕೆ ನಡುರಸ್ತೆಯಲ್ಲಿ ಓರ್ವ ಕಾರು ಚಾಲಕನಿಂದ ಮತ್ತೋರ್ವ ಕಾರು ಚಾಲಕನಿಗೆ ಮಚ್ಚಿನಿಂದ ಹಲ್ಲೆಗೆ (attack) ಯತ್ನಿಸಿರುವಂತಹ ಘಟನೆ ಮಧ್ಯಾಹ್ನ 1:40 ರ ಸುಮಾರಿಗೆ ಶೇಷಾದ್ರಿಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಈ ಬಗ್ಗೆ ಶ್ರೀರಾಂಪುರ ಪೊಲೀಸರಿಗೆ ಹಲ್ಲೆಗೊಳಗಾದ ಕಾರು ಚಾಲಕ ದೂರು ನೀಡಿದ್ದಾರೆ.

ಶೇಷಾದ್ರಿಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ಗೇಟ್ ಹಿಂಭಾಗ ಇಟಿಯೋಸ್​ ಮತ್ತು ಇನ್ನೋವಾ ಕಾರು ಮಧ್ಯೆ ಟಚ್ ಆಗಿದೆ. ಕಾರು ಟಚ್​ ಮಾಡಿದ ಇನ್ನೋವಾ ಕಾರು ಚಾಲಕನೇ ಇಟಿಯೋಸ್​ ಕಾರು ಚಾಲಕನ ಮೇಲೆ ನಡು ರಸ್ತೆಯಲ್ಲಿ ಮಚ್ಚು ಹಿಡಿದು ಹಲ್ಲೆಗೆ ಯತ್ನಿಸಿದ್ದಾನೆ. ಗಾಡಿಯಲ್ಲಿ ಎಂಪ್ಲಾಯ್ಸ್ ಇದ್ದರು ಕೂಡ ಹಲ್ಲೆ ಮಾಡಲಾಗಿದೆ. ಬಳಿಕ‌ ಮಾತಿಗೆ ಮಾತು ಬೆಳೆದು ಕಾರಿನಿಂದ ಮಚ್ಚು ತಂದ ಇನ್ನೋವಾ ಚಾಲಕ ಇಟಿಯೋಸ್ ಕಾರು ಚಾಲಕನ ಕುತ್ತಿಗೆಗೆ ಇಟ್ಟಿದ್ದಾನೆ.

ಇದನ್ನೂ ಓದಿ: ಇಂದಿನಿಂದ ಅನ್ನಭಾಗ್ಯ ಆಹಾರ ಧಾನ್ಯ ಸಾಗಾಣಿಕೆ ಬಂದ್: ಪಡಿತರ ವಿತರಣೆಯಲ್ಲಿ ವ್ಯತ್ಯಯ!

ಇದನ್ನೂ ಓದಿ
Image
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
Image
ಅನ್ನಭಾಗ್ಯ ಆಹಾರ ಧಾನ್ಯ ಸಾಗಾಣಿಕೆ ಬಂದ್: ಪಡಿತರ ವಿತರಣೆಯಲ್ಲಿ ವ್ಯತ್ಯಯ
Image
ಮೂರ್ಛೆ ಹೋದ ಪ್ರೇಯಸಿ, ಸತ್ತಳೆಂದು ಪ್ರಿಯಕರ ನೇಣಿಗೆ ಶರಣು!
Image
ಪೈಪ್ ಕಳ್ಳತನ ಕೇಸ್​: ನಗರಸಭೆ ಸದಸ್ಯರು-ಅಧಿಕಾರಿಗಳೇ ಕಳ್ಳರು, ತನಿಖೆಲಿ ದೃಢ

ತಕ್ಷಣ ಇಟಿಯೋಸ್ ಕಾರು ಚಾಲಕನ ಸಹಾಯಕ್ಕೆ ಬಂದ ಜನ ತಡೆದು ಪೊಲೀಸರಿಗೆ ಫೋನ್ ಮಾಡಿದ್ದಾರೆ. ಎಲ್ಲರು ಬರ್ತಿದ್ದಂತೆ ಮಾತಾಡಿ ಎಸ್ಕೇಪ್ ಆಗಲು ಪ್ರಯತ್ನ ಮಾಡಿದ್ದಾನೆ. ಆಗ ಎಲ್ಲಾರೂ ಕಾರಿನ ಮೇಲೆ ಕಲ್ಲು ಎತ್ತಿಹಾಕಿ ತಡೆದಿದ್ದಾರೆ. ನಂತರ ಕಾರು ಅಲ್ಲೇ ಬಿಟ್ಟು ಇನ್ನೋವಾ ಚಾಲಕ ತಪ್ಪಿಸಿಕೊಂಡು ಹೋಗಿದ್ದಾನೆ. ಸದ್ಯ ಪೊಲೀಸರು ಆತನ ಪತ್ತೆ ಮಾಡಿದ್ದಾರೆ.

ಇಟಿಯೋಸ್ ಕಾರು ಚಾಲಕ ಕುಮಾರ್ ಹೇಳಿದ್ದಿಷ್ಟು 

ಈ ಬಗ್ಗೆ ಇಟಿಯೋಸ್ ಕಾರು ಚಾಲಕ ಕುಮಾರ್ ಹೇಳಿಕೆ ನೀಡಿದ್ದು, ಮಧ್ಯಾಹ್ನ 1:40 ರ ಸುಮಾರಿಗೆ ಘಟನೆ ನಡೆದಿದೆ. ಹಿಂಭಾಗದಿಂದ ನನ್ನ ಕಾರಿಗೆ ಇನ್ನೋವಾ ಕಾರ್ ಟಚ್ ಆಯ್ತು. ಕಾರು ಚಾಲಕ ಇಳಿದು ಬಂದು ನನಗೆ ನಾಲ್ಕು ಏಟು ಹೊಡೆದಿದ್ದಾನೆ ಎಂದಿದ್ದಾರೆ.

ಇದನ್ನೂ ಓದಿ: ಸ್ಮಾರ್ಟ್ ಮೀಟರ್: ಪಕ್ಕದ ರಾಜ್ಯದಲ್ಲಿ 900 ರೂ.ಇಲ್ಯಾಕೆ 10 ಸಾವಿರ: ಸರ್ಕಾರಕ್ಕೆ ಕೋರ್ಟ್ ಪ್ರಶ್ನೆ

ಗಾಡಿಯಲ್ಲಿ ಎಂಪ್ಲಾಯ್ಸ್ ಇದ್ದಿದ್ದರಿಂದ ನಾನು ಸುಮ್ಮನೆ ಇದ್ದೆ. ನಾನು ಕೂಡ ಕಾರಿನಿಂದ ಇಳಿದಿರಲಿಲ್ಲ. ಆಗ ಅವನು ಕಾರಿನಿಂದ ಮಚ್ಚು ತಂದು ಕುತ್ತಿಗೆಗೆ ಇಟ್ಟಿದ್ದ. ಸ್ಥಳೀಯರೆಲ್ಲಾ ಸೇರಿ ತಡೆದು ಪೊಲೀಸರಿಗೆ ಫೋನ್ ಮಾಡಿದ್ದಾರೆ. ಎಲ್ಲರ ಬರ್ತಿದ್ದಂತೆ ಮಾತಾಡಿ ಎಸ್ಕೇಪ್ ಆಗಲು ಪ್ರಯತ್ನ ಮಾಡಿದ್ದಾನೆ. ಆಗ ಎಲ್ಲಾರೂ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ತಡೆದಿದ್ದಾರೆ. ನಂತರ ಕಾರು ಅಲ್ಲೇ ಬಿಟ್ಟು ಆತ ತಪ್ಪಿಸಿಕೊಂಡು ಓಡಿದ್ದಾನೆ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:02 pm, Mon, 7 July 25