AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಎಸ್​​ಸಿಎಗೆ ಮತ್ತೊಂದು ಸಂಕಷ್ಟ: 10 ಕೋಟಿ ರೂ ಜಾಹೀರಾತು ತೆರಿಗೆ ಬಾಕಿ, ವಸೂಲಿಗೆ ಮುಂದಾದ ಬಿಬಿಎಂಪಿ

ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದಿದ್ದ ಕಾಲ್ತುಳಿತ ಪ್ರಕರಣದಲ್ಲಿ ಈಗಾಗಲೇ ಕೆಎಸ್​​ಸಿಎ ಸಿಐಡಿ ತನಿಖೆ ಎದುರಿಸುತ್ತಿದೆ. ಈ ಮಧ್ಯೆ ಬಿಬಿಎಂಪಿಯಿಂದ ಮತ್ತೊಂದು ಶಾಕ್ ಎದುರಾಗಿದೆ. ಅದೇನೆಂದರೆ ಬಾಕಿ ತೆರಿಗೆ ವಸೂಲಿಗೆ ಪಾಲಿಕೆ ಮುಂದಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸುಮಾರು 10 ಕೋಟಿ ರೂ ಜಾಹೀರಾತು ತೆರಿಗೆ ಬಾಕಿ ಉಳಿಸಿಕೊಂಡಿದೆ.

ಕೆಎಸ್​​ಸಿಎಗೆ ಮತ್ತೊಂದು ಸಂಕಷ್ಟ: 10 ಕೋಟಿ ರೂ ಜಾಹೀರಾತು ತೆರಿಗೆ ಬಾಕಿ, ವಸೂಲಿಗೆ ಮುಂದಾದ ಬಿಬಿಎಂಪಿ
ಬಿಬಿಎಂಪಿ, ಕೆಎಸ್​​ಸಿಎ
ಶಾಂತಮೂರ್ತಿ
| Edited By: |

Updated on:Jun 08, 2025 | 8:11 AM

Share

ಬೆಂಗಳೂರು, ಜೂನ್​ 08: ಆರ್​ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಲ್ಲಿ (Stampede) 11 ಜನರನ್ನ ಬಲಿ ಪಡೆದಿದ್ದ ಚಿನ್ನಸ್ವಾಮಿ ಸ್ಟೇಡಿಯಂಗೆ ಕಂಟಕ ತಟ್ಟಿದಂತಾಗಿದೆ. ಇತ್ತ ಕಾಲ್ತುಳಿತ ದುರಂತದ ಪ್ರಕರಣ ಎದುರಿಸುತ್ತಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿಗೆ (KSCA) ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ಜಾಹೀರಾತು ಪ್ರದರ್ಶನ ಮಾಡಿ ಪೋಸ್ ಕೊಡುತ್ತಿದ್ದ ಕ್ರಿಕೆಟ್ ಅಕಾಡೆಮಿಗೆ ಇದೀಗ ಬಿಬಿಎಂಪಿ ಶಾಕ್ ಕೊಡುವುದಕ್ಕೆ ಸಜ್ಜಾಗಿದೆ.

10 ಕೋಟಿ ರೂ. ಜಾಹೀರಾತು ತೆರಿಗೆ ಬಾಕಿ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಸಿಐಡಿ ತನಿಖೆ ಎದುರಿಸುತ್ತಿರುವ ಕೆಎಸ್​​ಸಿಎಗೆ ಇದೀಗ ಬಿಬಿಎಂಪಿ ಕೂಡ ಶಾಕ್ ನೀಡುವುದಕ್ಕೆ ಸಜ್ಜಾಗಿದೆ. ಹಲವು ವರ್ಷಗಳಿಂದ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ ಜಾಹೀರಾತು ಪ್ರದರ್ಶನ ಮಾಡಲಾಗುತ್ತಿರುವ ಕೆಎಸ್​​ಸಿಎ ಸರಿಸುಮಾರು 10 ಕೋಟಿ ರೂ. ಜಾಹೀರಾತು ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಇದೀಗ ಬಾಕಿ ತೆರಿಗೆ ವಸೂಲಿಗೆ ಬಿಬಿಎಂಪಿ ಪ್ಲಾನ್ ಮಾಡೋಕೆ ಮುಂದಾಗಿದೆ. ಇತ್ತ ಹಲವು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿರುವ ಕೆಎಸ್​​ಸಿಎಗೆ ಈಗಾಗಲೇ ನೋಟಿಸ್ ನೀಡಿದ್ದ ಪಾಲಿಕೆ ಇದೀಗ ಮತ್ತೆ ನೋಟಿಸ್ ಕೊಟ್ಟು ತೆರಿಗೆ ವಸೂಲಿ ಮಾಡುವುದಕ್ಕೆ ತಯಾರಿ ನಡೆಸಿದೆ.

ಇದನ್ನೂ ಓದಿ: Bengaluru Stampede: ಮೃತರ ಕುಟುಂಬಗಳಿಗೆ ಘೋಷಿಸಿದ್ದ ಪರಿಹಾರ ಮೊತ್ತ ಹೆಚ್ಚಿಸಿದ ಸರ್ಕಾರ

ಇದನ್ನೂ ಓದಿ
Image
Stampede: ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ವಿರುದ್ಧ ಬಿಜೆಪಿ ದೂರು
Image
ಚಿನ್ನಸ್ವಾಮಿ ದುರಂತ; ವಿರಾಟ್ ಕೊಹ್ಲಿ ವಿರುದ್ದ ದೂರು ದಾಖಲು
Image
RCB ಮಾರ್ಕೆಟಿಂಗ್​ ಮುಖಸ್ಥ​​​​​​​ ಸೇರಿ ನಾಲ್ವರಿಗೆ ನ್ಯಾಯಾಂಗ ಬಂಧನ
Image
Bengaluru Stampede: ಸುಮೋಟೋ ಕೇಸ್​ ​ದಾಖಲಿಸಿಕೊಂಡ ಮಾನವ ಹಕ್ಕುಗಳ ಆಯೋಗ

ಇನ್ನು ಜಾಹೀರಾತು ನಿಯಮಗಳ ಅನ್ವಯ ರೂಲ್ಸ್ ಬ್ರೇಕ್ ಮಾಡಿದ್ದ ಕೆಎಸ್​​ಸಿಎಗೆ ಈ ಹಿಂದೆ ಕೂಡ ಹಲವು ಬಾರಿ ಎಚ್ಚರಿಕೆ ನೀಡಿದರೂ ಕೂಡ ತೆರಿಗೆ ಪಾವತಿಯಾಗಿರಲಿಲ್ಲ. ಇದೀಗ ಕಬ್ಬಿಣ ಕಾದಾಗ ತಟ್ಟಬೇಕು ಅನ್ನೋ ಪ್ಲಾನ್ ಅನುಸರಿಸೋಕೆ ಹೊರಟಿರುವ ಪಾಲಿಕೆ ಮತ್ತೆ ನೋಟಿಸ್ ಕೊಡುವುದಕ್ಕೆ ಪ್ಲಾನ್ ಮಾಡುತ್ತಿದೆ. ಇನ್ನು ತೆರಿಗೆ ಬಾಕಿ ಜೊತೆಗೆ ದಂಡಾಸ್ತ್ರ ಪ್ರಯೋಗಕ್ಕೂ ಪಾಲಿಕೆ ಸಜ್ಜಾಗಿದ್ದು, ಈ ಬಾರೀ ಬಾಕಿ ಪಾವತಿಸದಿದ್ದರೆ ಕಾನೂನಾತ್ಮಕ ಕ್ರಮ ಕೈಗೊಳ್ಳೋದಾಗಿ ಕೂಡ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: Bengaluru Stampede: ಕಾಲ್ತುಳಿತದಲ್ಲಿ ಗಾಯಗೊಂಡವರು 65 ಮಂದಿ ಆರ್​ಸಿಬಿ ಅಭಿಮಾನಿಗಳು, ತನಿಖೆಯಲ್ಲಿ ಬಹಿರಂಗ

ಸದ್ಯ ಯಾವುದೇ ಪೂರ್ವ ತಯಾರಿ ಇಲ್ಲದೇ ಆರ್​ಸಿಬಿ ಕಪ್ ಸಂಭ್ರಮಾಚರಣೆ ಆಚರಿಸಿ ಸಂಕಷ್ಟಕ್ಕೆ ಸಿಲುಕಿರುವ ಕೆಎಸ್​​ಸಿಎಗೆ ಇದೀಗ ಏಟಿನ ಮೇಲೆ ಮತ್ತೊಂದು ಏಟು ಅನ್ನೋ ಹಾಗೇ ಪಾಲಿಕೆ ಕೂಡ ಸವಾರಿ ಮಾಡುವುದಕ್ಕೆ ತಯಾರಾಗಿ ನಿಂತಿದೆ. ಇತ್ತ ಕಾಲ್ತುಳಿತ ದುರಂತದ ಬಳಿಕ ವಿಚಾರಣೆ ಎದುರಿಸ್ತಿರೋ ಕೆಎಸ್​​ಸಿಎ ಇದೀಗ ಪಾಲಿಕೆಗೆ ಬಾಕಿ ಹಣ ಪಾವತಿ ಮಾಡುತ್ತ ಅನ್ನೋದನ್ನ ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:11 am, Sun, 8 June 25