AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ವೈಟ್​ಫೀಲ್ಡ್​​ನ ಈ ರಸ್ತೆಯಲ್ಲಿ ಭಾನುವಾರದಿಂದ 4 ದಿನ ವಾಹನ ಸಂಚಾರ ನಿರ್ಬಂಧ

ವೈಟ್​​ಫೀಲ್ಡ್​ನ ಈ ರಸ್ತೆಯಲ್ಲಿ ಮೇ 18 ರಿಂದ ನಾಲ್ಕು ದಿನಗಳ ಕಾಲ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಹೆಬ್ಬಾಳ ಮೇಲೇತುವೆಯಲ್ಲಿ ಮೇ 17 ರಿಂದ 21 ರವರೆಗೆ ರಾತ್ರಿ ಕಾಮಗಾರಿಯಿಂದಾಗಿ ಸಂಚಾರ ನಿರ್ಬಂಧ ಹಾಗೂ ಪರ್ಯಾಯ ಮಾರ್ಗಗಳ ಮಾಹಿತಿಯನ್ನು ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕರು ಸೂಚಿಸಿದ ಮಾರ್ಗಗಳನ್ನು ಬಳಸುವಂತೆ ಟ್ರಾಫಿಕ್​ ಪೊಲೀಸರು ವಿನಂತಿಸಿಕೊಂಡಿದ್ದಾರೆ.

ಬೆಂಗಳೂರು: ವೈಟ್​ಫೀಲ್ಡ್​​ನ ಈ ರಸ್ತೆಯಲ್ಲಿ ಭಾನುವಾರದಿಂದ 4 ದಿನ ವಾಹನ ಸಂಚಾರ ನಿರ್ಬಂಧ
ಸಾಂದರ್ಭಿಕ ಚಿತ್ರ
ವಿವೇಕ ಬಿರಾದಾರ
|

Updated on:May 17, 2025 | 3:22 PM

Share

ಬೆಂಗಳೂರು, ಮೇ 17: ಪಟ್ಟಂದೂರು ಅಗ್ರಹಾರದಲ್ಲಿ (Pattandur Agrahara) ಭಾನುವಾರ (ಮೇ.18) ದಿಂದ ನಾಲ್ಕು ದಿನಗಳ ಕಾಲ ದೀಪೋತ್ಸವ ಮತ್ತು ದೇವರ ಪಲ್ಲಕ್ಕಿಗಳ ಉತ್ಸವ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ (Vehicle Restriction). ಪರ್ಯಾಯ ಮಾರ್ಗವನ್ನು ಬೆಂಗಳೂರು ಸಂಚಾರಿ ಪೊಲೀಸರು ಸೂಚಿಸಿದ್ದಾರೆ.

ವಾಹನ ಸಂಚಾರ ನಿರ್ಬಂಧ

ಭಾನುವಾರ (ಮೇ. 18) ಮದ್ಯಾಹ್ನ 02.00 ಗಂಟೆಯಿಂದ ಬುಧವಾರ (ಮೇ. 21) ಸಂಜೆ 6 ಗಂಟೆಯವರೆಗೆ ಪಟ್ಟಂದೂರು ಅಗ್ರಹಾರ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಇದನ್ನೂ ಓದಿ
Image
ಬೆಂಗಳೂರು ತುಮಕೂರು ಮೆಟ್ರೋ ಸ್ಟುಪಿಡ್ ಐಡಿಯಾ ಎಂದ ತೇಜಸ್ವಿ ಸೂರ್ಯ!
Image
ಅಜೆರ್ಬೈಜಾನ್ ಬಾಯ್ಕಾಟ್ಗೆ ಮುಂದಾದ ಕನ್ನಡಿಗರು: ಟ್ರಿಪ್​ ಕ್ಯಾನ್ಸಲ್
Image
ಸಕಲೇಶಪುರ–ಸುಬ್ರಹ್ಮಣ್ಯ ಮಾರ್ಗ ಕಾಮಗಾರಿ: 6 ತಿಂಗಳು ರೈಲುಗಳ ಸಂಚಾರ ರದ್ದು
Image
ಹೆಬ್ಬಾಳ ಫ್ಲೈಓವರ್​​ ಇಂದಿನಿಂದ ಮೇ 21ರವರೆಗೆ ಪ್ರತಿದಿನ 3 ಗಂಟೆ ಬಂದ್

ಪರ್ಯಾಯ ಮಾರ್ಗ

  • ಐಟಿಪಿಎಲ್ ಕಡೆಯಿಂದ ಪಟ್ಟಂದೂರು ಅಗ್ರಹಾರ ಮಾರ್ಗವಾಗಿ ನಲ್ಲೂರಹಳ್ಳಿ ವೈಟ್ ಫೀಲ್ಡ್ ಕಡೆಗೆ ಸಂಚರಿಸುವ ಲಘು ವಾಹನಗಳು ಸತ್ಯಸಾಯಿ ಆಸ್ಪತ್ರೆ ವೈದೇಹಿ ಜಿ.ಇ ಕ್ರಾಸ್ ಮೂಲಕ ಸಾಗಬಹುದು.
  • ಸಿದ್ದಾಪುರ, ನಲ್ಲೂರಹಳ್ಳಿ, ರ್ಬೊವೆಲ್ ರಸ್ತೆಯಿಂದ ಪಟ್ಟಂದೂರು ಮಾರ್ಗವಾಗಿ ಐಟಿಪಿಎಲ್ ಕಡೆಗೆ ಸಂಚರಿಸುವ ಲಘು ವಾಹನಗಳು ಜಿ.ಇ ಕ್ರಾಸ್, ವೈದೇಹಿ ಆಸ್ಪತ್ರೆ ರಸ್ತೆ ಮುಖಾಂತರ ಸಾಗಬಹುದು.
  • ಇಮ್ಮಡಿಹಳ್ಳಿ ವೈಟ್ಫೀಲ್ಡ್ ಕಡೆಯಿಂದ ಪಟ್ಟಂದೂರು ಅಗ್ರಹಾರ ಮಾರ್ಗವಾಗಿ ಐಟಿಪಿಎಲ್ ಮತ್ತು ನಲ್ಲೂರಹಳ್ಳಿ ಕಡೆಗೆ ಸಂಚರಿಸುವ ಲಘು ವಾಹನಗಳು ಇ.ಸಿ.ಸಿ ರಸ್ತೆ, ಹೋಫ್ ಫಾರಂ ರಸ್ತೆ ಮೂಲಕ ಐಟಿಪಿಎಲ್ ಕಡೆಗೆ ಸಂಚರಿಸಬಹು.

ಹೆಬ್ಬಾಳ ಮೇಲೇತುವೆಯಲ್ಲಿ ಸಂಚಾರ ನಿರ್ಬಂಧ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೆ.ಆರ್. ಪುರ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಅಸ್ತಿತ್ವದಲ್ಲಿರುವ ಹೆಬ್ಬಾಳ ಮೇಲೇತುವೆಗೆ ಹೆಚ್ಚುವರಿ ಬ್ಯಾಂಪ್​ಗಳನ್ನು ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಕಾಮಗಾರಿಯ ಭಾಗವಾಗಿ, ರೈಲ್ವೆ ಹಳಿಗಳ ಮೇಲೆ 33.5 ಮೀ ಉದ್ದದ 07 ಉಕ್ಕಿನ ಗರ್ಡ್​ಗಳನ್ನು ಅಳವಡಿಸುವ ಕಾಮಗಾರಿ ಶನಿವಾರ (ಮೇ.17) ದಿಂದ ಬುಧವಾರ (ಮೇ.21) ವರೆಗೆ ರಾತ್ರಿ 12:00 ರಿಂದ ಬೆಳಗಿನ ಜಾವ 03:00 ರವರೆಗೆ ನಡೆಯುತ್ತದೆ. ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಕಾಮಗಾರಿ ನಡೆಯುವ ಸಮಯದಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಸಂಚಾರ ಮಾರ್ಪಾಡು ಮಾಡಿದ್ದಾರೆ.

ಸಂಚಾರ ನಿರ್ಬಂಧ

ಹೆಬ್ಬಾಳ ಮೇಲೇತುವೆಯಲ್ಲಿ ಎಸ್ಟೀಮ್ ಮಾಲ್ ನಿಂದ ಮೇದ್ರಿ ವೃತ್ತದ ಕಡೆಗೆ ರಾತ್ರಿ 12:00 ರಿಂದ ಬೆಳಿಗ್ಗೆ, 3:00 ರವರೆಗೆ ಎಲ್ಲಾ ರೀತಿಯ ವಾಹನಗಳನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: ಟರ್ಕಿ ಹಾಗೂ ಅಜರ್​ಬೈಜನ್​ಗೆ ಶಾಕ್ ಕೊಟ್ಟ ಬೆಂಗಳೂರಿನ ಬಟ್ಟೆ ವ್ಯಾಪಾರಿಗಳು: ಆಮದು, ರಫ್ತು ನಿಷೇಧ

ಪರ್ಯಾಯ ಮಾರ್ಗ

ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೇಖ್ರಿ ವೃತ್ತದ ಕಡೆಗೆ ಚಲಿಸುವ ವಾಹನಗಳು ಎಸ್ಟ್ರೀಮ್ ಮಾಲ್‌ನಲ್ಲಿರುವ ಸರ್ವಿಸ್ ರಸ್ತೆಯನ್ನು ಪ್ರವೇಶಿಸಿ ಹೆಬ್ಬಾಳ ವೃತ್ತದಲ್ಲಿ ಹೊರ ವರ್ತುಲಕ್ಕೆ ಬಲ ತಿರುವು ಪಡೆದು ತುಮಕೂರು ಮಾರ್ಗವಾಗಿ ಚಲಿಸಿ, ಕುವೆಂಪು ವೃತ್ತದಲ್ಲಿ ಎಡ ತಿರುವು ಪಡೆದು ನ್ಯೂ ಬಿಇಎಲ್ ರಸ್ತೆ ಮೂಲಕ ಮೇಖ್ರಿ ವೃತ್ತವನ್ನು ತಲುಪಬಹುದಾಗಿದೆ.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:21 pm, Sat, 17 May 25