
ಬೆಂಗಳೂರು, ಮೇ 14: ಮೆಜೆಸ್ಟಿಕ್, ಕಲ್ಯಾಣನಗರ, ವಿಲ್ಸನ್ ಗಾರ್ಡನ್, ಗಿರಿನಗರ, ಬಾಣಸವಾಡಿ ಸೇರಿದಂತೆ ಬೆಂಗಳೂರಿನ ವಿವಿಧಡೆ ಮಂಗಳವಾರ ಸಂಜೆ ಹಾಗೂ ರಾತ್ರಿ ಭಾರಿ ಮಳೆ (Bengaluru Rain) ಸುರಿದಿದೆ. ಪರಿಣಾಮವಾಗಿ 36ಕ್ಕೂ ಹೆಚ್ಚು ಬೃಹತ್ ಮರಗಳು ನೆಲಕ್ಕುರುಳಿದ್ದವು. ಬಿಬಿಎಂಪಿ (BBMP) 8 ವಲಯದಲ್ಲಿ 36ಕ್ಕೂ ಹೆಚ್ಚು ಮರಗಳು, 121 ಕೊಂಬೆಗಳು ಧರೆಗುರುಳಿದ್ದವು. ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ ವಲಯದಲ್ಲೇ ಹೆಚ್ಚು ಮರಗಳು ಉರುಳಿದ್ದವು, ಇದರಿಂದಾಗಿ ಸಂಚಾರ ದಟ್ಟಣೆಯೂ (Bangalore Traffic Jam) ಉಂಟಾಗಿತ್ತು. ಮಳೆ ಅವಾಂತರದಿಂದ ಮಂಗಳವಾರ ರಾತ್ರಿ ಉಂಟಾದ ಸಂಚಾರ ಸಮಸ್ಯೆ ಬುಧವಾರ ಬೆಳಗ್ಗೆಯೂ ಅನೇಕ ಕಡೆ ಸಮಸ್ಯೆ ಸೃಷ್ಟಿಸಿತು. ಬೆಂಗಳೂರಿನ ವಿವಿಧೆಡೆ ಸಂಚಾರ ದಟ್ಟಣೆ, ನಿಧಾನಗತಿಯ ಸಂಚಾರ ಇದ್ದು, ಆ ಕುರಿತು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಮಮೂರ್ತಿನಗರದ ಬಳಿ ನೀರು ನಿಂತಿರುವುದರಿಂದ ಹೊರಮಾವು ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ಬುಧವಾರ ಮುಂಜಾನೆ ಟ್ರಾಫಿಕ್ ಪೊಲೀಸರು ಟ್ವೀಟ್ ಮಾಡಿದ್ದಾರೆ.
“ಸಂಚಾರಸಲಹೆ / Traffic advisory”
ರಾಮಮೂರ್ತಿನಗರದ ಬಳಿ ನೀರು ನಿಂತಿರುವುದರಿಂದ ಹೊರಮಾವು ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
Due to water logging at Ramamurthy Nagar the road towards Horamavu is having slow-moving traffic. pic.twitter.com/a2cOmrmPDQ— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) May 14, 2025
ಪಾಣತ್ತೂರು ಆರ್ಯುಬಿ ಬಳಿ ಮಳೆ ನೀರು ನಿಲ್ಲುವುದರಿಂದ ಸಂಚಾರ ನಿಧಾನವಾಗಿದೆ. ತುರ್ತು ಸಂದರ್ಭಗಳಲ್ಲಿ ನೆರವಿಗೆ ಸಿದ್ಧರಾಗಿದ್ದೇವೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ತಕ್ಷಣದ ಸಹಾಯಕ್ಕಾಗಿ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಎಂದು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
🚨 ‘Traffic Advisory’
Slow moving traffic due to rain water logging near Panthur RUB🌧️
We are here assisting with your commute, 14.05.2025.📞112 for the immediate assistance during any emergency pic.twitter.com/nkShbdMFet
— WHITEFIELD TRAFFIC PS BTP (@wftrps) May 14, 2025
ಸಿಬಿಐ ಬಸ್ ನಿಲ್ದಾಣದ ಬಳಿ ವಾಹನ ಕೆಟ್ಟು ನಿಂತಿರುವುದರಿಂದ ಹೆಬ್ಬಾಳ ಫ್ಲೈಓವರ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. ರಾಮಮೂರ್ತಿನಗರದ ಬಳಿ ನೀರು ನಿಂತಿರುವುದರಿಂದ ಹೊರಮಾವು ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಸೇರಿ ಕರ್ನಾಟಕದ ವಿವಿಧೆಡೆ ಮಳೆ ಅಬ್ಬರ: ಹುಬ್ಬಳ್ಳಿಯಲ್ಲಿ ಮನೆಗಳಿಗೆ ನುಗ್ಗಿದ ನೀರು
ವೇಮನ ವೃತ್ತದ ಬಳಿ ಮರ ಬಿದ್ದ ಪರಿಣಾಮ ಬಾಣಸವಾಡಿ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. ಕೋಗಿಲು ಬಳಿ ನೀರು ನಿಂತಿರುವುದರಿಂದ ಏರ್ಪೋರ್ಟ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ಟ್ರಾಫಿಕ್ ಪೊಲೀಸರು ಸಾಮಾಜಿಕ ಮಾಧ್ಯಮ ತಾಣ ಎಕ್ಸ್ ಮೂಲಕ ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ