AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓಪನ್ ಹಾರ್ಟ್ ಸರ್ಜರಿಗೆ ಭಾರೀ ಬೇಡಿಕೆ: ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ 6 ತಿಂಗಳು ಕಾಯುವ ಸ್ಥಿತಿ!

ಇತ್ತೀಚೆಗೆ ಅನೇಕರಲ್ಲಿ ಹೆಚ್ಚಾಗಿ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಅದರಲ್ಲೂ ಓಪನ್ ಹಾರ್ಟ್ ಸರ್ಜರಿಗೆ (ಹೃದಯದ ತೆರೆದ ಶಸ್ತ್ರಚಿಕಿತ್ಸೆ) ಅಂತೂ ಬೇಡಿಕೆ ಹೆಚ್ಚಾಗಿದೆ.‌ ನಗರದ ಪ್ರತಿಷ್ಠಿತ ಜಯದೇವ ಆಸ್ಪತ್ರೆಯಲ್ಲಿ ದಿನದಿಂದ ದಿನಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಓಪನ್ ಹಾರ್ಟ್ ಸರ್ಜರಿಗೆ 6 ತಿಂಗಳಿಗೂ ಹೆಚ್ಚು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಓಪನ್ ಹಾರ್ಟ್ ಸರ್ಜರಿಗೆ ಭಾರೀ ಬೇಡಿಕೆ: ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ 6 ತಿಂಗಳು ಕಾಯುವ ಸ್ಥಿತಿ!
ಜಯದೇವ ಆಸ್ಪತ್ರೆ
Vinay Kashappanavar
| Updated By: Ganapathi Sharma|

Updated on: May 14, 2025 | 10:50 AM

Share

ಬೆಂಗಳೂರು, ಮೇ 14: ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆ ಆಸ್ಪತ್ರೆಯಲ್ಲಿ (Jayadeva Hospital Bengaluru) ಹೃದಯದ ತೆರೆದ ಶಸ್ತ್ರಚಿಕಿತ್ಸೆಗೆ (Open Heart Surgery) ಬೇಡಿಕೆ ಹೆಚ್ಚಾಗಿದೆ. ಇತ್ತೀಚೆಗೆ ಯುವ ಸಮೂಹ ಸೇರಿದಂತೆ ಎಲ್ಲಾ ವಯೋಮಾನದವರಲ್ಲೂ ಕೂಡಾ ಹೃದಯದ ಸಮಸ್ಯೆ ಹೆಚ್ಚುತ್ತಲೇ ಇದೆ. ಪರಿಣಾಮವಾಗಿ ಓಪನ್ ಹಾರ್ಟ್ ಸರ್ಜರಿಗೆ 6 ತಿಂಗಳು ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಓಪನ್ ಹಾರ್ಟ್ ಸರ್ಜರಿ ಮಾಡಿಸಲು ಖಾಸಗಿ ಆಸ್ಪತ್ರೆಯಲ್ಲಿ ಕನಿಷ್ಠ 10 ಲಕ್ಷ ರೂಪಾಯಿಗೂ ಹೆಚ್ಚು ಹಣ ಬೇಕು. ಆದರೆ, ಜಯದೇವ ಆಸ್ಪತ್ರೆಯಲ್ಲಿ ತುಂಬಾ ಕಡಿಮೆ ದುಡ್ಡು ಹಾಗೂ ಉಚಿತ ಸ್ಕೀಂನಲ್ಲಿ ಸರ್ಜರಿ ಮಾಡಿಸಿಕೊಡುವ ಹಿನ್ನೆಲೆ, ಜಯದೇವ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.

ಪ್ರತಿ ದಿನ 20 ರಷ್ಟು ಓಪನ್ ಹಾರ್ಟ್ ಸರ್ಜರಿ

ಸದ್ಯ ಜಯದೇವ ಆಸ್ಪತ್ರೆಯಲ್ಲಿ ಪ್ರತಿದಿನ 19 ರಿಂದ 20 ಓಪನ್ ಹಾರ್ಟ್ ಸರ್ಜರಿ ಮಾಡಲಾಗುತ್ತಿದೆ. ಒಂದು ಆಪರೇಷನ್ ಥಿಯೇಟರ್​​​ನಲ್ಲಿ ಪ್ರತಿ ದಿನಕ್ಕೆ ಎರಡರಿಂದ ಮೂರು ಸರ್ಜರಿ ಮಾಡಬಹುದಾಗಿದೆ. ಜಯದೇವದಲ್ಲಿ 10 ಆಪರೇಷನ್ ಥಿಯೇಟರ್​ಗಳು ಇವೆ. ಸದ್ಯ ಈ 10 ಆಪರೇಷನ್ ಥಿಯೇಟರ್​ಗಳು ಕೂಡಾ ವ್ಯ್ತಕವಾಗಿವೆ.

ಹೊಸದಾಗಿ ಬರುವ ರೋಗಿಗಳಿಗೆ ಓಪನ್ ಹಾರ್ಟ್ ಸರ್ಜರಿ ಮಾಡಬೇಕು ಅಂದರೆ 6ತಿಂಗಳ ಕಾಲ ಕಾಯಬೇಕಾದ ಸ್ಥಿತಿ ಎದುರಾಗಿದೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ರವೀಂದ್ರ ತಿಳಿಸಿದ್ದಾರೆ.

ಇದನ್ನೂ ಓದಿ
Image
ಬೆಂಗಳೂರು: ಪಿಜಿಯಲ್ಲಿ ಪಾಕ್ ಪರ ಘೋಷಣೆ, ಛತ್ತೀಸ್​ಗಢ ಮೂಲದ ಟೆಕ್ಕಿ ಬಂಧನ
Image
ಖಾಸಗಿ ಎಂಜಿನಿಯರಿಂಗ್ ಕಾಲೇಜು ಶುಲ್ಕ ಶೇ 7.5 ಹೆಚ್ಚಳ ಸಾಧ್ಯತೆ
Image
ಮಳೆ ಪರಿಣಾಮ ಬೆಂಗಳೂರಿನ ಹಲವೆಡೆ ಮುಂಜಾನೆಯೇ ಟ್ರಾಫಿಕ್ ಜಾಮ್: ಎಲ್ಲೆಲ್ಲಿ?
Image
ಬೆಂಗಳೂರು ಸೇರಿ ಕರ್ನಾಟಕದ ವಿವಿಧೆಡೆ ಮಳೆ ಅಬ್ಬರ: ಸಾಲು ಅವಾಂತರ

ಇದರ ಜೊತೆಗೆ ಸರ್ಕಾರದ ಉಚಿತ ಸ್ಕೀಮ್ ಅಡಿ ರೋಗಿಗಳಿಗೆ ತುಂಬಾ ಕಡಿಮೆ ದರ ನಿಗದಿಪಡಿಸಿರುವ ಕಾರಣ ಖಾಸಗಿ ಆಸ್ಪತ್ರೆಗಳು ಕೂಡಾ ಕೆಲವು ಪ್ರಕರಣಗಳಲ್ಲಿ ರೋಗಿಗಳನ್ನು ಜಯದೇವ ಆಸ್ಪತ್ರೆಗೆ ಶಿಫ್ಟ್ ಮಾಡುತ್ತಿದ್ದು, ಇದರಿಂದಾಗಿ ಬೇಡಿಕೆ ಹೆಚ್ಚಾಗಿದೆ.

ಮೂರು ತಿಂಗಳು ಮೊದಲೇ ಸಂಪರ್ಕಿಸಬೇಕು!

ಓಪನ್ ಹಾರ್ಟ್ ಸರ್ಜರಿ ಮಾಡಿಸಿಕೊಳ್ಳಲು ಕಡಿಮೆ ಎಂದರೂ 6 ರಿಂದ 8 ತಿಂಗಳು ಕಾಯಲೇಬೇಕಾಗದ ಪರಿಸ್ಥತಿ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ, ಇತರ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದು. ಬೆಂಗಳೂರು ಹೊರತುಪಡಿಸಿ ಬೇರೆ ನಗರಗಳಲ್ಲಿಯೂ ಜಯದೇವ ಘಟಕಗಳನ್ನು ಹೆಚ್ಚಿಸಲು ಚಿಂತನೆ ನಡೆಸಿದೆ. ಈ ಕುರಿತು ಖುದ್ದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಹ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕಲಬುರಗಿ ಜಯದೇವ ಹೃದ್ರೋಗ ಆಸ್ಪತ್ರೆ ಲೋಕಾರ್ಪಣೆ, ಇಲ್ಲಿದೆ ವಿಶೇಷತೆ

ಒಟ್ಟಿನಲ್ಲಿ, ಜಯದೇವ ಆಸ್ಪತ್ರೆಯಲ್ಲಿ ಓಪನ್ ಹಾರ್ಟ್ ಸರ್ಜರಿ ಮಾಡಿಸಿಕೊಳ್ಳಬೇಕು ಅಂದರೆ, ಮೂರು ತಿಂಗಳು ಮೊದಲೇ ವೈದ್ಯರನ್ನು ಸಂಪರ್ಕಿಸಬೇಕಿದೆ. ಇಲ್ಲವಾದರೆ ಶಸ್ತ್ರಚಿಕಿತ್ಸೆ ಸೌಲಭ್ಯ ದೊರೆಯುವುದೇ ಅನುಮಾನವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ