ಮನೆ ಬದಲಾಯಿಸಿದ್ದೀರಾ? ಆ ಮನೆಗೂ ಗೃಹಜ್ಯೋತಿ ಉಚಿತ ವಿದ್ಯುತ್ ಪಡೆಯಲು ಏನು ಮಾಡಬೇಕೆಂಬ ಮಾಹಿತಿ ಇಲ್ಲಿದೆ
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಐದು ಉಚಿತ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ ಅಡಿ ಗೃಹ ಬಳಕೆಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತದೆ. ಬಾಡಿಗೆ ಮನೆಯಲ್ಲಿ ವಾಸಿಸುವ ನಿವಾಸಿಗಳೂ ಈಗಾಗಲೇ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಬಾಡಿಗೆ ಮನೆ ಬದಲಾಯಿಸಿದ ಸಂದರ್ಭದಲ್ಲಿಯೂ ಡಿ ಲಿಂಕ್ ಮಾಡುವ ಮೂಲಕ ಹೊಸದಾಗಿ ಸ್ಥಳಾಂತರವಾದ ಮನೆಯಲ್ಲೂ ಉಚಿತ ವಿದ್ಯುತ್ ಪಡೆಯಲು ಅವಕಾಶವಿದೆ. ಅದಕ್ಕೆ ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು, ಮೇ 14: ಗೃಹ ಜ್ಯೋತಿ ಯೋಜನೆ (Gruha Jyothi Scheme) ಅಡಿ ಕರ್ನಾಟಕ ಕಾಂಗ್ರೆಸ್ ಸರ್ಕಾರ 200 ಯೂನಿಟ್ ವರೆಗೆ ಗೃಹ ಬಳಕೆಗೆ ಉಚಿತ ವಿದ್ಯುತ್ ನೀಡುತ್ತಿದೆ. ಬಾಡಿಗೆ ಮನೆಗಳಲ್ಲಿ ವಾಸಿಸುವವರಿಗೂ ಯೋಜನೆ ಅಡಿ ಉಚಿತ ವಿದ್ಯುತ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಬಾಡಿಗೆ ಮನೆಯನ್ನು ಬದಲಾಯಿಸಿದ ಸಂದರ್ಭದಲ್ಲಿ ಡಿ ಲಿಂಕ್ ಮಾಡುವ ಮೂಲಕ ಹೊಸದಾಗಿ ಸ್ಥಳಾಂತರಗೊಂಡ ಮನೆಯಲ್ಲಿ ಕೂಡ ಉಚಿತ ವಿದ್ಯುತ್ ಪಡೆಯುವ ಆಯ್ಕೆಯನ್ನು 2024 ರ ಆಗಸ್ಟ್‌ನಲ್ಲಿ ಸರ್ಕಾರ ಪರಿಚಯಿಸಿತ್ತು. ಇದೀಗ ಈ ಡಿ ಲಿಂಕ್ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಲಾಗಿದೆ. ಈ ಬಗ್ಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಬೆಸ್ಕಾಂ ಮಾಹಿತಿ ನೀಡಿದೆ.
ಮನೆ ಬದಲಾಯಿಸಿದ ಮೇಲೂ ಗೃಹಜ್ಯೋತಿ ಸೌಲಭ್ಯ ಪಡೆಯಲು ಡಿ-ಲಿಂಕ್ ವ್ಯವಸ್ಥೆ ಇದೀಗ ಮತ್ತಷ್ಟು ಸುಲಭವಾಗಿದೆ. ನೀವೂ ಈ ಕೆಳಗೆ ನೀಡಿರುವ ಲಿಂಕ್‌ಗಳ ಮೂಲಕ ಹೆಸರು ನೋಂದಾಯಿಸಿಕೊಳ್ಳಿ ಹಾಗೂ ಈ ಸೌಲಭ್ಯ ಪಡೆಯಿರಿ. ಸೇವಾಸಿಂಧು ಗ್ಯಾರೆಂಟಿ ಸ್ಕೀಮ್ ಪೋರ್ಟಲ್ (https://sevasindhugs.karnataka.gov.in) ಅಥವಾ (https://sevasindhu.karnataka.gov.in/GruhaJyothi_Delink/GetAadhaarData.aspx) ಮೂಲಕ ಹೆಸರು ನೋಂದಾಯಿಸಿಕೊಳ್ಳುವಂತೆ ಎಕ್ಸ್ ತಾಣದ ಮೂಲಕ ಬೆಸ್ಕಾಂ ಮನವಿ ಮಾಡಿದೆ.
ಬೆಸ್ಕಾಂ ಎಕ್ಸ್ ಸಂದೇಶ
ಮನೆ ಬದಲಾಯಿಸಿದ ಮೇಲೂ ಗೃಹಜ್ಯೋತಿ ಸೌಲಭ್ಯ ಪಡೆಯಲು ಡಿ-ಲಿಂಕ್ ವ್ಯವಸ್ಥೆ ಇದೀಗ ಮತ್ತಷ್ಟು ಸುಲಭ
ನೀವೂ ಈ ಕೆಳಗೆ ನೀಡಿರುವ ಲಿಂಕ್‌ಗಳ ಮೂಲಕ ನೋಂದಾಯಿಸಿಕೊಳ್ಳಿ ಹಾಗೂ ಈ ಸೌಲಭ್ಯ ಪಡೆಯಿರಿ.
ಸೇವಾಸಿಂಧು ಗ್ಯಾರೆಂಟಿ ಸ್ಕೀಮ್ ಪೋರ್ಟಲ್https://t.co/bsGvzlXT4x ಅಥವಾ https://t.co/6H4Kymeims #BESCOM #GruhaJyothiScheme… pic.twitter.com/vi8EOmmgHl
— Namma BESCOM | ನಮ್ಮ ಬೆಸ್ಕಾಂ (@NammaBESCOM) May 13, 2025
ಬಾಡಿಗೆ ಮನೆಯನ್ನು ಬದಲಾಯಿಸಬೇಕಾಗಿ ಬಂದಾಗ ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯವುದು ಹೇಗೆ ಎಂಬುದೇ ದೊಡ್ಡ ಪ್ರಶ್ನೆಯಾಗಿತ್ತು. ಬಾಡಿಗೆ ಮನೆಯ ಆರ್ಆರ್ ಸಂಖ್ಯೆ ನೀಡಿ ಯೋಜನೆಯಡಿ ಶೂನ್ಯ ಬಿಲ್ ಪಡೆಯುತ್ತಿದ್ದವರಿಗೆ ಮನೆ ಬದಲಾಯಿಸಬೇಕಾಗಿ ಬಂದಾಗ ಸಮಸ್ಯೆ ಆಗುತ್ತಿತ್ತು. ಇದನ್ನು ಮನಗಂಡ ಸರ್ಕಾರ ಕಳೆದ ವರ್ಷ ಹೊಸ ಆಯ್ಕೆಯನ್ನು ನೀಡಿತ್ತು. ಇದೀಗ ಆನ್ಲೈನ್ ಮೂಲಕವೇ ಡಿ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ.
ಡಿ ಲಿಂಕ್ ಮಾಡುವುದು ಹೇಗೆ?
- https://sevasindhugs.karnataka.gov.in ಈ ಲಿಂಕ್ ಕ್ಲಿಕ್ ಮಾಡಿ.
- ಹಳೆ ಬಾಡಿಗೆ ಮನೆಯ ಆರ್ಆರ್ ಸಂಖ್ಯೆಯನ್ನು ಡಿ ಲಿಂಕ್ ಮಾಡಿ.
- ಹೊಸದಾಗಿ ಸ್ಥಳಾಂತರಗೊಂಡ ಮನೆಯ ಆರ್ಆರ್ ಸಂಖ್ಯೆಯನ್ನು ಲಿಂಕ್ ಮಾಡಿ.
ಇದನ್ನೂ ಓದಿ: ಬಾಡಿಗೆ ಮನೆ ಬದಲಾಯಿಸಿದ ನಂತರವೂ ಉಚಿತ ವಿದ್ಯುತ್ ಪಡೆಯಬಹುದು! ಮಾಡಬೇಕಾದದ್ದೇನು? ಇಲ್ಲಿದೆ ಮಾಹಿತಿ
ಕರ್ನಾಟಕದಾದ್ಯಂತ ಈವರೆಗೆ 2,83,291 ಡಿ ಲಿಂಕ್ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ 2,11,456 ಡಿ ಲಿಂಕ್ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








