ಬೆಂಗಳೂರು, ಫೆ.25: ಬೇಸಿಗೆಯ ಬಿಸಿಲತಾಪದ ಜೊತೆಗೆ ಸಿಲಿಕಾನ್ ಸಿಟಿ ಜನರಿಗೆ ಜಲ ಕಂಟಕ ಎದುರಾಗಿದೆ. ಬೆಂಗಳೂರು (Bengaluru) ನಗರದಲ್ಲಿ ನೀರಿಗೆ ಹಾಹಾಕಾರ (Water Problem) ಎದ್ದಿದೆ. ಬೋರ್ವೆಲ್ಗಳಲ್ಲಿ ನೀರಿಲ್ಲದೆ ಟ್ಯಾಂಕರ್ ನೀರು ಖರೀದಿಸುತ್ತಿದ್ದಾರೆ. ಟ್ಯಾಂಕರ್ ನೀರಿನ ಬೆಲೆಯಲ್ಲೂ ದುಪ್ಪಟ್ಟಾಗಿದೆ. ಈ ನಡುವೆ, ಆರ್.ಆರ್.ನಗರ (RR Nagar) ಬಿಡಿಎ ಅಪಾರ್ಟ್ಮೆಂಟ್ನಲ್ಲೂ ಜಲ ದಾಹ ಎದುರಾಗಿದೆ.
ಆರ್.ಆರ್.ನಗರ ಬಿಡಿಎ ಅಪಾರ್ಟ್ ಮೆಂಟ್ನಲ್ಲಿ ಜಲ ದಾಹ ಶುರುವಾಗಿದ್ದು, 192 ಮನೆಗಳ ನಿವಾಸಿಗಳು ನೀರಿಲ್ಲದೇ ಹೈರಾಣಾಗಿದ್ದಾರೆ. 10 ವರ್ಷಗಳಿಂದ ಅಪಾರ್ಟ್ಮೆಂಟ್ ದಾಹ ತಣಿಸುತ್ತಿದ್ದ ಏಕೈಕ ಬೋರ್ವೆಲ್ನಲ್ಲಿ ನೀರು ಬತ್ತಿದೆ. ವಿಧಿ ಇಲ್ಲದೆ ನಿವಾಸಿಗಳು ಟ್ಯಾಂಕರ್ ನೀರು ಮೊರೆಹೋಗಿದ್ದಾರೆ.
ಇದನ್ನೂ ಓದಿ: ನೀರಿನ ಹಾಹಾಕಾರ, ಖಾಸಗಿ ಟ್ಯಾಂಕರ್ಗಳ ದಂಧೆಗೆ ಕಡಿವಾಣ ಹಾಕಬೇಕು- ಸಂಸದ ತೇಜಸ್ವಿ ಸೂರ್ಯ
ಬೇಸಿಗೆಗೂ ಮೊದಲೇ ಕಳೆದ 3 ತಿಂಗಳಿನಿಂದ ನಗರದ ಕೆಲವೆಡೆ ನೀರಿನ ಬರ ಎದುರಾಗಿದ್ದು, ಅಂತಹ ಪ್ರದೇಶದಲ್ಲಿನ ನಿವಾಸಿಗಳು ಟ್ಯಾಂಕರ್ ನೀರಿನ ಮೊರೆ ಹೋಗುತ್ತಿದ್ದಾರೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಟ್ಯಾಂಕರ್ ಮಾಲೀಕರು ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಇದರಿಂದಾಗಿ ಬಾಡಿಗೆ ಜೊತೆಗೆ ನೀರಿಗೂ ಹಣ ಕಟ್ಟಿ ಜನರು ಹೈರಾಣಾಗಿದ್ದಾರೆ.
ಪ್ರತಿ ತಿಂಗಳು 3 ರಿಂದ 4 ಲಕ್ಷ ಹಣ ನೀರಿಗಾಗಿ ಕಟ್ಟಬೇಕು ಎಂದು ನೀರು ಕೊಡದ ಬಿಡಿಎ, ಜಲಮಂಡಳಿ ವಿರುದ್ಧ ನಿವಾಸಿಗಳು ಕಿಡಿಕಾರಿದ್ದಾರೆ. ಅಲ್ಲದೆ, ನೀರಿಲ್ಲ ಎಂದು ಒಂದಷ್ಟು ಬಾಡಿಗೆದಾರರು ಫ್ಲಾಟ್ ಖಾಲಿ ಮಾಡಿದ್ದಾರೆ. ನಮಗೆ ಏನು ಬೇಡ ನೀರು ಕೊಡಿ ಅಂತ ಜನರು ಒತ್ತಾಯಿಸುತ್ತಿದ್ದಾರೆ.
ವರದಿ; ಶಾಂತಮೂರ್ತಿ, ಟಿವಿ9 ಬೆಂಗಳೂರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ