ಬೆಂಗಳೂರಿನಲ್ಲಿ ಯುವತಿ ಮೇಲೆ ರೇಪ್: ಆರೋಪಿ ಸುಳಿವು ಪತ್ತೆ, ಬಂಧನಕ್ಕೆ 40 ಜನರ ತಂಡ ರಚನೆ
ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ದೇವತಾಃ.. ಎಲ್ಲಿ ನಾರಿಯನ್ನ ಪೂಜಿಸಲಾಗುತ್ತೋ ಅಲ್ಲಿ ದೇವತೆಗಳು ನೆಲೆಸಿರ್ತಾರೆ ಅನ್ನೋ ದೇಶ ನಮ್ದು.. ಆದ್ರೆ, ಇಲ್ಲಿ ನಡೀತಿರೋ ಘಟನೆಗಳು ಮಾತ್ರ ಈ ಮಾತಿಗೆ ತದ್ವಿರುದ್ಧವಾಗಿವೆ. ಬೆಂಗಳೂರಿನಲ್ಲಿ ನಡೆದ ಯುವತಿ ರೇಪ್ ಕೇಸ್ ಸಂಬಂಧ ಮತ್ತಷ್ಟು ವಿಚಾರಗಳು ಬಹಿರಂಗವಾಗಿದ್ದು ಆರೋಪಿ ಸುಳಿವು ಪತ್ತೆಯಾಗಿದೆ.
ಬೆಂಗಳೂರು, ಆಗಸ್ಟ್.18: ಪಾನಮತ್ತ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ಗುರುತು ಪತ್ತೆಯಾಗಿದೆ ಎಂದು ಉನ್ನತ ಪೊಲೀಸ್ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಹೊರ ರಾಜ್ಯದವರಾಗಿದ್ದ ಸಂತ್ರಸ್ಥೆ ಬೆಂಗಳೂರಿನಲ್ಲಿ (Bengaluru) ಫೈನಲ್ ಇಯರ್ ಡಿಗ್ರಿ ವ್ಯಾಸಂಗ ಮಾಡ್ತಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆ ತಡರಾತ್ರಿ ಓರ್ವ ವ್ಯಕ್ತಿಯಿಂದ ಅತ್ಯಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದ್ದು ಸದ್ಯ ಆರೋಪಿಯ ಗುರುತು ಪತ್ತೆ ಮಾಡಲಾಗಿದೆ. ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಆರೋಪಿ ಯಾರು ಅಂತಾ ಗೊತ್ತಾಗಿದ್ದು ಶೀಘ್ರವೇ ಬಂಧಿಸಲಾಗುತ್ತೆ ಎಂದು ಟಿವಿ9ಗೆ ಉನ್ನತ ಪೊಲೀಸ್ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಇನ್ನು ಘಟನೆ ಸಂಬಂಧ ಪೂರ್ವ ವಲಯ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಪ್ರತಿಕ್ರಿಯೆ ನೀಡಿದ್ದು, ಯುವತಿ ತಡ ರಾತ್ರಿ 1.30ಕ್ಕೆ ಲಿಫ್ಟ್ ತೆಗೆದುಕೊಂಡಿದ್ದಾಳೆ. ಈ ವೇಳೆ ಅತ್ಯಾಚಾರ ಯತ್ನ ನಡೆದಿರುವ ಆರೋಪ ಕೇಳಿ ಬಂದಿದೆ. ಬೈಕ್ ನಲ್ಲಿ ಯುವತಿ ಬಂದಿದ್ದಾಳೆ. ಆ ಬಳಿಕ ಲಿಫ್ಟ್ ಪಡೆದು ಮತ್ತೊಂದು ಬೈಕ್ ನಲ್ಲಿ ಬಂದಿದ್ದಾಳೆ. ಈ ವೇಳೆ ಅತ್ಯಾಚಾರ ಯತ್ನ ನಡೆದಿದೆ. ಯುವತಿ ವಿದ್ಯಾರ್ಥಿನಿಯಾಗಿದ್ದಾಳೆ. ಸದ್ಯ ಐದು ತಂಡ ರಚಿಸಿ ಆರೋಪಿ ಪತ್ತೆಗೆ ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅತ್ತ ರಕ್ಷಣೆ ಬೇಕೆಂದು ಇಡೀ ದೇಶ ಹೋರಾಡುತ್ತಿದೆ, ಆದರೆ ಬೆಂಗಳೂರಿನಲ್ಲಿ ಮಧ್ಯ ರಾತ್ರಿ ಯುವತಿಯ ಮೇಲೆ ಅತ್ಯಾಚಾರ
ನಿನ್ನೆ ಸ್ನೇಹಿತರ ಜೊತೆ ಪಾರ್ಟಿಗೆ ಬಂದಿದ್ದ ಯುವತಿ, ಪಾರ್ಟಿ ಮುಗಿಸಿ ಹೋಗುವಾಗ ಸ್ನೇಹಿತರ ಕಾರ್ ಆಟೋಗೆ ಟಚ್ ಆಗಿದೆ. ಫೋರಂ ಮಾಲ್ ಬಳಿಯ ಟಾನಿಕ್ ಮುಂಭಾಗ ಆಟೊ ಚಾಲಕ ಹಾಗೂ ಸಂತ್ರಸ್ಥೆ ಯುವತಿಯ ಸ್ನೇಹಿತರ ನಡುವೆ ಗಲಾಟೆ ನಡೆದಿದೆ. ಇದೇ ವೇಳೆ ಸ್ಥಳಕ್ಕೆ ಹೊಯ್ಸಳ ವಾಹನ ಕೂಡ ಬಂದಿತ್ತು. ಆಗ ಬೈಕ್ ಒಂದರಲ್ಲಿ ಡ್ರಾಪ್ ತೆಗೆದುಕೊಂಡು ಯುವತಿ ಅಲ್ಲಿಂದ ಹೊರಟಿದ್ದರು. ನಂತರ ಮಾರ್ಗ ಮಧ್ಯೆ ಇಳಿದು ಮತ್ತೊಂದು ಬೈಕ್ ನಲ್ಲಿ ಡ್ರಾಪ್ ಪಡೆದಿದ್ದಾಳೆ. ಆಗ ಚಾಲಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಯುವತಿಯ ಮೇಲೆ ದೌರ್ಜನ್ಯ ಎಸಗಿದ್ದಾನೆ. ಈ ವೇಳೆ ಯುವತಿ ಎಮರ್ಜೆನ್ಸಿ ನಂಬರ್ಗಳಾಗಿ ತಂದೆ ಮತ್ತು ಸ್ನೇಹಿತೆಯ ನಂಬರ್ ಇಟ್ಟಿದ್ದಳು. ಮೊಬೈಲ್ ಮೂಲಕ ಎಮರ್ಜೆನ್ಸಿ ನಂಬರ್ ಗೆ ಕರೆ ಹೋದಾಗ ಸಂತ್ರಸ್ತೆಯ ತಂದೆ ಮಗಳ ಗೆಳತಿಗೆ ಕರೆ ಮಾಡಿದ್ರು. ಸ್ನೇಹಿತರು ಬಂದಾಗ ಸಂತ್ರಸ್ತೆಯ ಸ್ಥಿತಿ ಶೋಚನೀಯವಾಗಿತ್ತು ಎಂದು ತಿಳಿದುಬಂದಿದೆ. ಬಿಎನ್ಎಸ್ 64 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ 40 ಜನರ ಟೀಂ ರಚನೆ ಮಾಡಿ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ