ಬೆಸ್ಕಾಂ ಬೊಕ್ಕಸ ತುಂಬಿಸಿದ ಗೃಹ ಜ್ಯೋತಿ ಯೋಜನೆ; 10 ವರ್ಷಗಳಲ್ಲಿ ಆದಾಯ 3 ಪಟ್ಟು ಏರಿಕೆ

ಬೆಂಗಳೂರು ಸೇರಿ ಬರೋಬ್ಬರಿ 8 ಜಿಲ್ಲೆಗಳಿಗೆ ವಿದ್ಯುತ್ ಪೂರೈಕೆ ಹೊಣೆ ಹೊತ್ತಿರುವ ಬೆಸ್ಕಾಂ, ಗೃಹ ಬಳಕೆ ಹಾಗೂ ಕೈಗಾರಿಕಾ ವಲಯಗಳ ಬೇಡಿಕೆಗೆ ತಕ್ಕಂತೆ ಕಾರ್ಯ ನಿರ್ವಹಿಸುತ್ತಿದೆ. ಕಳೆದ 10 ವರ್ಷಗಳಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತ ಗಮನಾರ್ಹ ರೀತಿಯಲ್ಲಿ ಬೆಳವಣಿಗೆ ಕಂಡಿದ್ದು, ಬೆಸ್ಕಾಂಗೆ ಬೇಡಿಕೆ ಸಹ ಹೆಚ್ಚಾಗಿದೆ. ಕಳೆದ ಒಂದು ದಶಕದಲ್ಲಿ ಬೆಸ್ಕಾಂ ಗಳಿಸಿರುವ ಆದಾಯದ ಮಾಹಿತಿ ಇಲ್ಲಿದೆ.

ಬೆಸ್ಕಾಂ ಬೊಕ್ಕಸ ತುಂಬಿಸಿದ ಗೃಹ ಜ್ಯೋತಿ ಯೋಜನೆ; 10 ವರ್ಷಗಳಲ್ಲಿ ಆದಾಯ 3 ಪಟ್ಟು ಏರಿಕೆ
ಬೆಸ್ಕಾಂ
Follow us
| Updated By: ಗಣಪತಿ ಶರ್ಮ

Updated on: Jul 06, 2024 | 6:47 PM

ಬೆಂಗಳೂರು, ಜುಲೈ 6: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಬೆಸ್ಕಾಂ ನಗರಕ್ಕೆ ಮಾತ್ರವಲ್ಲದೆ ದಕ್ಷಿಣದ ಸುಮಾರು 8 ಜಿಲ್ಲೆಗಳಿಗೆ ವಿದ್ಯುತ್ ಪೂರೈಕೆ ಸೇವೆ ನೀಡುತ್ತಿದೆ. ವಿದ್ಯುತ್ ಸಂಗ್ರಹಣೆ ವ್ಯತ್ಯಯ ಆದಾಗಲೂ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸೇವೆ ನೀಡಲು ಶ್ರಮಿಸಿದೆ. ಕಳೆದ 10 ವರ್ಷದ ಬೆಸ್ಕಾಂ ಆದಾಯದ ಅಂಕಿ ಅಂಶ ಬಿಡುಗಡೆ ಆಗಿದ್ದು, ಆದಾಯ ಗಮನಾರ್ಹ ರೀತಿಯಲ್ಲಿ ಹೆಚ್ಚಾಗಿರುವುದು ದೃಢವಾಗಿದೆ. ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ ಗೃಹ ಜ್ಯೋತಿ ಯೋಜನೆಯಿಂದ ಎಸ್ಕಾಂಗಳು ನಷ್ಟಕ್ಕೆ ಒಳಗಾಗುತ್ತವೆ ಎಂಬ ಮಾತುಗಳ ಮಧ್ಯೆಯೇ, ಬೆಸ್ಕಾಂ 2023-24 ರ ಹಣಕಾಸು ವರ್ಷದಲ್ಲಿ 7 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಲಾಭ ಕಂಡಿರುವುದು ಗೊತ್ತಾಗಿದೆ.

2013-14 ಹಣಕಾಸು ವರ್ಷದಲ್ಲಿ 11 ಸಾವಿರ ಕೋಟಿ ರೂಪಾಯಿಗಳ ಆದಾಯ ಸಂಗ್ರಹ ಮಾಡಿದ್ದ ಬೆಸ್ಕಾಂ ಬಳಿಕ ಪ್ರತಿವರ್ಷ ಲಾಭದ ಹಳಿಯಲ್ಲಿಯೇ ಇದೆ. ತದನಂತರ ಪ್ರಮುಖವಾಗಿ ಕಳೆದ 5 ವರ್ಷಗಳನ್ನು ಗಮನಿಸಿದಾಗ 2020-21ರಲ್ಲಿ 19, 233 ಕೋಟಿ, 2021-22ರಲ್ಲಿ 20,712 ಕೋಟಿ ಹಾಗೂ 2022-23ರಲ್ಲಿ 24,700 ಕೋಟಿ ರೂಪಾಯಿ ಸಂಗ್ರಹ ಮಾಡಿದೆ. ಬಳಿಕ ಕಳೆದ ಹಣಕಾಸು ವರ್ಷ ಅಂದರೆ 2023-24ರಲ್ಲಿ ಬರೋಬ್ಬರಿ 31,378 ಕೋಟಿ ರೂಪಾಯಿಗಳ ಭರ್ಜರಿ ಆದಾಯ ಕಂಡಿದೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಬೆಸ್ಕಾಂ, ಬೇರೆ ಎಲ್ಲಾ ಸರ್ಕಾರದ ಸಂಸ್ಥೆಗಳು ನಷ್ಟ ಸುಳಿಯಲ್ಲಿ ಇರುವಾಗ ಬೆಸ್ಕಾಂ ಮಾತ್ರ ಆದಾಯದಲ್ಲಿರುವುದು ಸಂತೋಷ ಮತ್ತು ಬೆಸ್ಕಾಂ ಪ್ರತಿವರ್ಷವೂ ದರ ಹೆಚ್ಚಳ ಮಾಡುತ್ತದೆ. ಆದರೆ ಗ್ರಾಹಕರಿಗೆ ಹೊರೆ ಆಗದ ರೀತಿಯ 20 ರಿಂದ 30 ಪೈಸೆಯಷ್ಟು ಹೆಚ್ಚಳ ಮಾಡುತ್ತದೆ ಎಂದಿದೆ.

ಇದನ್ನೂ ಓದಿ: ಚಹಾ ಪ್ರಿಯರಿಗೆ ಬಿಗ್ ಶಾಕ್: ಕೃತಕ ಬಣ್ಣ, ರಾಸಾಯನಿಕವಿರುವ ಟೀ ಪುಡಿ ಬಳಕೆ ಶೀಘ್ರವೇ ಬ್ಯಾನ್‌

ಒಟ್ಟಾರೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ಬೆಸ್ಕಾಂ ವಿದ್ಯುತ್ ಪೂರೈಕೆ ಮಾಡುತ್ತಿದ್ದರೂ, ಆಗಾಗ್ಗೆ ಲೋಡ್‌ ಶೆಡ್ಡಿಂಗ್‌, ಬೆಲೆ ಏರಿಕೆಗಳು ಸಹ ಸದ್ದು ಮಾಡುತ್ತಿರುತ್ತದೆ. ಇಷ್ಟಾದರೂ ಸರ್ಕಾರಕ್ಕೆ ಒಳ್ಳೆಯ ಆದಾಯ ತಂದುಕೊಡುವ ಸಂಸ್ಥೆಗಳಲ್ಲಿ ಬೆಸ್ಕಾಂ ಮುಂದಿರುವುದು ಅಂಕಿಅಂಶಗಳಿಂದ ದೃಢಪಟ್ಟಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ