AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಎಂಟಿಸಿಯ 50 ಎಲೆಕ್ಟ್ರಿಕ್ ಬಸ್​ ಚಾಲಕರಿಗೆ ಗೇಟ್ ಪಾಸ್!

ಟಿವಿ9 ಬಿಗ್​ ಇಂಪ್ಯಾಕ್ಟ್​​: ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ ಏಜೆನ್ಸಿಗಳು ಕೇರಳದ ಹೆವಿ‌ ಲೈಸೆನ್ಸ್ ಮತ್ತು ಅನುಭವ ಇಲ್ಲದ ಚಾಲಕರಿಗೆ ಕೆಲಸ ನೀಡಿದ್ದವು. ಈ ಬಗ್ಗೆ ಟಿವಿ9 ಡಿಜಿಟಲ್​ ವರದಿ ಮಾಡಿತ್ತು. ಈ ವರದಿ ಎಚ್ಚತ್ತ ಬಿಎಂಟಿಸಿ 50 ಚಾಲಕರಿಗೆ ಗೇಟ್​​ ಪಾಸ್​ ನೀಡಿದೆ.

ಬಿಎಂಟಿಸಿಯ 50 ಎಲೆಕ್ಟ್ರಿಕ್ ಬಸ್​ ಚಾಲಕರಿಗೆ ಗೇಟ್ ಪಾಸ್!
ಬಿಎಂಟಿಸಿ ಎಲೆಕ್ಟ್ರಿಕ್​ ಬಸ್​​​
Kiran Surya
| Edited By: |

Updated on: Jun 18, 2024 | 8:12 AM

Share

ಬೆಂಗಳೂರು, ಜೂನ್ 18: ಬೃಹತ್​ ಬೆಂಗಳೂರು ಮಹಾನಗರ ಸಾರಿಗೆ (BMTC) ಅಂದರೆ ನಂಬಿಕೆ, ಬಿಎಂಟಿಸಿ ಅಂದರೆ ರಾಜಧಾನಿ ಜನರ ಜೀವನಾಡಿ. ಆದರೆ ಎಲೆಕ್ಟ್ರಿಕ್ ಬಸ್​​ಗಳಿಗೆ ಕನ್ನಡ ಬರದ ಮಲಯಾಳಿಗಳು, ಅನುಭವ ಇಲ್ಲದ ಸಣ್ಣಪುಟ್ಟ ಹುಡುಗರಿಗೆ ಬಸ್ ನೀಡಿದ್ದ ಬಗ್ಗೆ ಟಿವಿ9 ಡಿಜಿಟಲ್​ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಬಿಎಂಟಿಸಿ ಅಧಿಕಾರಿಗಳು ತನಿಖೆ ನಡೆಸಿ 50 ಎಲೆಕ್ಟ್ರಿಕ್ ಬಸ್​ (Electric Bus) ಚಾಲಕರಿಗೆ ಗೇಟ್ ಪಾಸ್ ನೀಡಿದೆ.

ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್​ಗಳಲ್ಲಿ ಕೇರಳದ ಚಾಲಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಇದರಿಂದ ಕನ್ನಡಿಗರಿಗೆ ಉದ್ಯೋಗವಿಲ್ಲದಂತಾಗಿತ್ತು. ಕೆಲಸಕ್ಕೆ ಸೇರಿಕೊಳ್ಳುವಾಗ 22.500 ರೂಪಾಯಿ ಸಂಬಳ ಕೊಡುತ್ತೇವೆ ಅಂತ ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದರು. ಆದರೆ ಈಗ ಡ್ರೈವರ್​ಗಳಿಗೆ ಕೇವಲ 18 ಸಾವಿರ ರೂಪಾಯಿ ಮಾತ್ರ ಸಂಬಳ ನೀಡುತ್ತಿದ್ದಾರೆ. ಇದರಿಂದ ಕನ್ನಡಿಗ ಡ್ರೈವರ್ಗಳು ಯಾರು ಕೆಲಸಕ್ಕೆ ಬರುತ್ತಿಲ್ಲ.

ಹೀಗಾಗಿ ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ ಏಜೆನ್ಸಿಗಳು ಕೇರಳದ ಹೆವಿ‌ ಲೈಸೆನ್ಸ್ ಮತ್ತು ಅನುಭವ ಇಲ್ಲದ ಚಾಲಕರನ್ನು ಕರೆದುಕೊಂಡು ಕೆಲಸ ನೀಡುತ್ತಿದ್ದವು. ಈ ಬಗ್ಗೆ ಟಿವಿ9 ಡಿಜಿಟಲ್​ ವರದಿ ಮಾಡಿತ್ತು. ವರದಿ ಬೆನ್ನಲ್ಲೇ ತನಿಖೆ ನಡೆಸಿದ ಬಿಎಂಟಿಸಿಯ ಅಧಿಕಾರಿಗಳು 20ಕ್ಕೂ ಹೆಚ್ಚು ಕೇರಳದ ಚಾಲಕರು ಮತ್ತು 30ಕ್ಕೂ ಅನುಭವ, ಹೆಚ್ಚು ಹೆವಿ ಡ್ರೈವಿಂಗ್​ ಲೈಸನ್ಸ್​​ ಇಲ್ಲದ ಚಾಲಕರನ್ನು ಪತ್ತೆ ಮಾಡಿ, ಅವರನ್ನು ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡ್ರೈವರ್ ಹುದ್ದೆಯಿಂದ ತೆಗೆದು ಹಾಕಲಾಗಿದೆ.

ಈ ಬಗ್ಗೆ ಮಾತಾನಾಡಿದ ಸಾರಿಗೆ ನೌಕರರ ಮುಖಂಡ ಚಂದ್ರು, ಮೊದಲು ಎಲೆಕ್ಟ್ರಿಕ್ ಬಸ್ ಕಂಪನಿಗಳು ಏಜೆನ್ಸಿ ಮೂಲಕ ಸಣ್ಣಪುಟ್ಟ ಯುವಕರಿಗೆ ಮತ್ತು ಕೇರಳ, ಬಿಹಾರ, ಅಸ್ಸಾಂದವರಿಗೆ ಡ್ರೈವರ್ ಕೆಲಸ ನೀಡುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬಾಂಗ್ಲಾದೇಶದಿಂದ ಚಾಲಕರಗಳನ್ನು ಕರೆದುಕೊಂಡು ಬಿಎಂಟಿಸಿ ಬಸ್ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬಿಎಂಟಿಸಿ ಬಸ್​ನಲ್ಲಿ ಕಿತ್ತಾಟ: ಚಾಲಕನನ್ನು ಫುಟ್​ ಬೋರ್ಡ್​ಗೆ ಎಳೆದು ತಂದ ಪ್ರಯಾಣಿಕ

ಎಲೆಕ್ಟ್ರಿಕ್ ಬಸ್ ಕಂಪನಿಗಳು ಸರಿಯಾಗಿ ಸಂಬಳ ನೀಡದ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ಬಸ್​ಗಳಿಗೆ ಚಾಲಕರಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಶಕ್ತಿ ಯೋಜನೆ ಆರಂಭವಾದ ಮೇಲೆ ಶಾಲಾ-ಕಾಲೇಜುಗಳಿಗೆ ಮತ್ತು ಉದ್ಯೋಗಕ್ಕೆ ಮಹಿಳೆಯರು ಲಕ್ಷಾಂತರ ಸಂಖ್ಯೆಯಲ್ಲಿ ಬಿಎಂಟಿಸಿಯಲ್ಲಿ ಸಂಚಾರ ಮಾಡುತ್ತಿದ್ದಾರೆ. ಆದರೆ ಪ್ರಯಾಣಿಕರ ಸಂಖ್ಯೆಗೆ ತಕ್ಕಂತೆ ಬಸ್​ಗಳು ಬರುತ್ತಿಲ್ಲ ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.

ಕೇರಳದ‌ ಮತ್ತು ಹೆವಿ ಡ್ರೈವಿಂಗ್​ ಲೈಸನ್ಸ್​​ ಇಲ್ಲದ ಚಾಲಕರನ್ನು ಆರ್ಯ ಟ್ರಾನ್ಸ್ ಸೆಲೂಷನ್ ಏಜೆನ್ಸಿ ಮೂಲಕ ನೇಮಕ ಮಾಡಿಕೊಳ್ಳಲಾಗಿತ್ತು. ಕಳೆದ ಏಳು ತಿಂಗಳಿನಿಂದ ಈ ಏಜೆನ್ಸಿ ಮೂಲಕ ಚಾಲಕರು ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಮಾತಾನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಎಲೆಕ್ಟ್ರಿಕ್ ಬಸ್​ಗಳಿಗೆ ನಾವು ಯಾರನ್ನೂ ನೇಮಕ ಮಾಡಿಕೊಂಡಿಲ್ಲ. ಇದು ಕೇಂದ್ರ ಸರ್ಕಾರದ ಯೋಜನೆ, ಎಲೆಕ್ಟ್ರಿಕ್ ಬಸ್​ಗಳಿಗೆ ಖಾಸಗಿ ಏಜೆನ್ಸಿಗಳ ಮೂಲಕ ನೇಮಕ ಮಾಡಿಕೊಂಡಿದ್ದಾರೆ. ನಾವು ಈಗಾಗಲೇ ನೋಟೀಸ್ ನೀಡಿದ್ದೀವೆ ತನಿಖೆ ಮಾಡಿದ್ದೇವೆ ಎಂದು ಹೇಳಿದರು.

ಒಟ್ಟಿನಲ್ಲಿ ಪ್ರತಿದಿನ ಲಕ್ಷಾಂತರ ಜನರು ಬಿಎಂಟಿಸಿ ಬಸ್​ನ್ನು ನಂಬಿ ಪ್ರಯಾಣ ಮಾಡುತ್ತಾರೆ. ಆದರೆ ಈ ಎಲೆಕ್ಟ್ರಿಕ್ ಬಸ್ ಕಂಪನಿಗಳು ಏಜೆನ್ಸಿ ಗಳ‌ ಮೂಲಕ ಸಣ್ಣಪುಟ್ಟ ಯುವಕರಿಗೆ ಬೇರೆಬೇರೆ ರಾಜ್ಯದ ಯುವಕರಿಗೆ ‌ಕೆಲಸ ಕೊಟ್ಟು ಬಿಎಂಟಿಸಿಗೆ ಕಳಂಕ ತರಲು ಹೊರಟಿರುವ ಬಗ್ಗೆ ಟಿವಿ9 ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಎಲ್ಲರಿಗೂ ಗೇಟ್ ಪಾಸ್ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ