AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru News: ಭಗ್ನ ಪ್ರೇಮಿಯಿಂದ ಚರ್ಚ್​ನಲ್ಲಿ ದಾಂಧಲೆ: ಅನೇಕ‌ ವಸ್ತುಗಳು ಧ್ವಂಸ

ಪ್ರೇಮ ವೈಫಲ್ಯದಿಂದ ಮಾನಸಿಕವಾಗಿ ನೊಂದಿದ್ದ ಯುವಕನೊಬ್ಬ, ಇಂದು(ಜೂ.21) ನಸುಕಿನ ಜಾವ 4 ಗಂಟೆಯ ಸುಮಾರಿಗೆ ಕಮ್ಮನಹಳ್ಳಿಯ ಚರ್ಚ್​ನ ಪಾಟ್​ಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಒಡೆದು ದಾಂಧಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

Bengaluru News: ಭಗ್ನ ಪ್ರೇಮಿಯಿಂದ ಚರ್ಚ್​ನಲ್ಲಿ ದಾಂಧಲೆ: ಅನೇಕ‌ ವಸ್ತುಗಳು ಧ್ವಂಸ
ಕೃತ್ಯ ಎಸಗಿದ ವ್ಯಕ್ತಿ
ಕಿರಣ್ ಹನುಮಂತ್​ ಮಾದಾರ್
|

Updated on: Jun 21, 2023 | 1:45 PM

Share

ಬೆಂಗಳೂರು: ಪ್ರೀತಿ ಎಂತಹವರನ್ನು ಬದುಕಿಸುವ ಜೊತೆಗೆ ಹೆಚ್ಚು ಕಮ್ಮಿಯಾದರೇ ಜೀವವನ್ನೇ ತೆಗೆಯುತ್ತದೆ. ಹೌದು ನಾವು ತುಂಬಾ ಪ್ರೀತಿಸುತ್ತಿರುವವರು ಸಡನ್​ ನಮ್ಮನ್ನ ಬಿಟ್ಟು ಹೋದರೇ ಆಗುವಂತಹ ನೋವು ಹೇಳತೀರದು. ಅದರಂತೆ ಇಲ್ಲೊಬ್ಬ ಯುವಕ ಪ್ರೇಮ ವೈಫಲ್ಯ(Love Failure)ದಿಂದ ಮಾನಸಿಕವಾಗಿ ನೊಂದು, ಇಂದು(ಜೂ.21) ನಸುಕಿನ ಜಾವ 4 ಗಂಟೆಯ ಸುಮಾರಿಗೆ ಕಮ್ಮನಹಳ್ಳಿ(Kammanahalli)ಯ ಚರ್ಚ್​ನ ಪಾಟ್​ಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಒಡೆದು ದಾಂಧಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮ್ಯಾಥ್ಯೂ ಎಂಬಾತನೇ ಕೃತ್ಯ ಎಸಗಿದ ಯುವಕ. ಈ ಘಟನೆಗೆ ಸಂಬಂಧಿಸಿದಂತೆ ಇದೀಗ ಆರೋಪಿ ಯುವಕನನ್ನ ಬಾಣಸವಾಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಚಾರಣೆ ವೇಳೆ ಪೊಲೀಸರಿಗೆ ತಲೆನೋವಾದ ಯುವಕ

ಮಾನಸಿಕವಾಗಿ ವರ್ತಿಸುತ್ತಿದ್ದ ಇತನನ್ನ ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ಹುಚ್ಚನಂತೆ ಹೇಳಿಕೆ ನೀಡಿದ್ದಾನೆ. ಹೌದು ಯಾರು ನೀನು ಎಂದು ಕೇಳಿದಾಗ, ನಾನು ದೇವರು. ನನ್ನ ತಂದೆ ಕೂಡ ದೇವರು ಎಂದಿದ್ದಾನೆ. ಏನು ಕೆಲಸ ಮಾಡುತ್ತಿಯಾ ಎಂದರೇ ‘ದೇವರು ಏನು ಕೆಲಸ ಮಾಡುತ್ತಾನೆ ಎಂದು ತಿರುಗಿ ಪೊಲೀಸರಿಗೆ ಪ್ರಶ್ನಿಸಿದ್ದಾನೆ. ಇನ್ನು ಈ ಕುರಿತು ತಲೆ ಕೆಡಿಸಿಕೊಂಡು ಘಟನಾ ಸ್ಥಳದಲ್ಲಿ ಪರಿಶೀಲನೆ ಮಾಡುತ್ತಿದ್ದ ವೇಳೆ ಯುವಕನ ತಾಯಿ ಬಂದಿದ್ದು, ಬಳಿಕ ಯುವಕನ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.

ಇದನ್ನೂ ಓದಿ:Goondagiri: ಬೆಂಗಳೂರಿನ ಅವೆನ್ಯೂ ರಸ್ತೆ ಬಳಿ ಹೋಟೆಲ್​ನಲ್ಲಿ 30 ದುಷ್ಕರ್ಮಿಗಳಿಂದ ದಾಂಧಲೆ

ಕೆಲಸಕ್ಕೆ ಹೋಗದ ಮ್ಯಾಥ್ಯೂಗೆ ಪ್ರೇಮ ವೈಫಲ್ಯ

ಕೇರಳ ಮೂಲದ ಇತ 30 ವರ್ಷವಾದರೂ ಕೆಲಸಕ್ಕೆ ಹೊಗುತ್ತಿರಲಿಲ್ಲ. ವಿದೇಶಗಳಲ್ಲಿಯು ಸಹ ಸಾಕಷ್ಟು ಓಡಾಟ ಮಾಡಿರುವ ಮ್ಯಾಥ್ಯೂವ್​ಗೆ ಈ ಹಿಂದೆ ಪ್ರೇಮ ವೈಫಲ್ಯವಾಗಿದೆಯಂತೆ. ಆದರಿಂದಲೇ ಮಾನಸಿಕವಾಗಿ ನೊಂದಿದ್ದ ಆತ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಹೌದು ತಾಯಿಯನ್ನ ವಿಚಾರಣೆ ವೇಳೆ ‘ಮನೆಯಲ್ಲಿ ದೇವರನ್ನು ಇಟ್ಟುಕೊಂಡು ಚರ್ಚ್ಗೆ ಯಾಕೆ ಹೋಗ್ತೀಯಾ ಎಂದು ತನ್ನ ತಾಯಿಗೆ ಅವಾಜ್ ಹಾಕುತ್ತಿದ್ದಾನೆ. ಇನ್ನು ಈ ಕುರಿತು ಬಾಣಸವಾಡಿ ಪೊಲೀಸರಿಂದ ವಿಚಾರಣೆ ನಡೆಯುತ್ತಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!