AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗರ ನಿದ್ದೆ ಕಸಿಯುತ್ತಿದೆ ಈ ತಾಪಮಾನ! ಹೇಗೆ ಗೊತ್ತಾ?

ಜಾಗತಿಕ ತಾಪಮಾನ ವೈಪರೀತ್ಯದಿಂದ ಬೆಂಗಳೂರಿಗರು ವರ್ಷಕ್ಕೆ ಸರಾಸರಿ 67 ಗಂಟೆಗಳ ನಿದ್ದೆ ಕಳೆದುಕೊಳ್ಳುತ್ತಿದ್ದಾರೆ ಎಂದು 'ಕ್ಲೈಮೇಟ್ ಸೆಂಟ್ರಲ್' ವರದಿ ತಿಳಿಸಿದೆ. ದೇಶದ ಇತರ ನಗರಗಳಿಗೆ ಹೋಲಿಸಿದರೆ ಹವಾಮಾನ ಬದಲಾವಣೆಯ ನೇರ ಪ್ರಭಾವದಿಂದ ಬೆಂಗಳೂರಿನ ಜನರೇ ಅತಿ ಹೆಚ್ಚು ನಿದ್ದೆ ಕಳೆದುಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ರಾತ್ರಿಯ ತಾಪಮಾನ ಏರಿಕೆಯು ಸಾರ್ವಜನಿಕ ಆರೋಗ್ಯದ ಮೇಲೆ ಬೀರುತ್ತಿರುವ ಗಂಭೀರ ಪರಿಣಾಮಗಳಿಂದಾಗಿಯೇ ಈ ಸಮಸ್ಯೆ ಎದುರಾಗಿದೆ.

ಬೆಂಗಳೂರಿಗರ ನಿದ್ದೆ ಕಸಿಯುತ್ತಿದೆ ಈ ತಾಪಮಾನ! ಹೇಗೆ ಗೊತ್ತಾ?
ಸಾಂದರ್ಭಿಕ ಚಿತ್ರImage Credit source: gettyimages.com
ಭಾವನಾ ಹೆಗಡೆ
|

Updated on: Jul 18, 2026 | 11:40 AM

Share

ಮುಖ್ಯಾಂಶಗಳು

  • ತಾಪಮಾನ ವೈಪರೀತ್ಯದಿಂದ ಬೆಂಗಳೂರಿಗರ ನಿದ್ದೆಗೆ ಭಾರಿ ಕಡುಕತ್ತಲು ಆವರಿಸಿದೆ.
  • ಹವಾಮಾನ ಬದಲಾವಣೆಯಿಂದ ಬೆಂಗಳೂರಿನಲ್ಲಿ ವರ್ಷಕ್ಕೆ ಎಂಟು ಗಂಟೆಗಳ ನಿದ್ದೆ ನಷ್ಟ.
  • ರಾತ್ರಿಯ ತಾಪಮಾನ ಏರಿಕೆಯಿಂದ ದೇಹ ತಂಪಾಗದೆ ನಿದ್ದೆ ಭಂಗವಾಗುತ್ತಿದೆ.

ಬೆಂಗಳೂರು, ಜುಲೈ 18: ನಗರದ ಜನರಿಗೆ ಟ್ರಾಫಿಕ್ ಕಿರಿಕಿರಿ, ವಾಯು ಮಾಲಿನ್ಯ ಸೇರಿದಂತೆ ಹಲವು ಸಮಸ್ಯೆಗಳು ದಿನಚರಿಯ ಭಾಗವಾಗಿಹೋಗಿವೆ. ಇದರ ನಡುವೆ ಹೊಸ ತಲೆನೋವೊಂದು ಉಲ್ಬಣಿಸಿದ್ದು, ಬೆಂಗಳೂರು ಜನರ ನಿದ್ದೆಗೆ ಕನ್ನ ಹಾಕುತ್ತಿದೆ. ಮುಂಗಾರಿನ ಮುನಿಸಿಂದ ಬೆಂಗಳೂರಿಗರು ತತ್ತರಿಸುತ್ತಿರುವಾಗಲೇ ತಾಪಮಾನ ಏರಿಕೆಯಿಂದಾಗಿ ನಗರದ ಜನರು ನಿದ್ದೆ ಕಳೆದುಕೊಳ್ಳುತ್ತಿದ್ದಾರೆ. ಹೌದು, ಅಮೆರಿಕ ಮೂಲದ ‘ಕ್ಲೈಮೇಟ್ ಸೆಂಟ್ರಲ್’ ಸಂಸ್ಥೆ ನಡೆಸಿರುವ ಜಾಗತಿಕ ಮಟ್ಟದ ಸಂಶೋಧನಾ ವರದಿಯೊಂದರಲ್ಲಿ ಈ ಆತಂಕಕಾರಿ ವಿಷಯ ಬಹಿರಂಗವಾಗಿದೆ.

ನಗರದ ಜನರು ವರ್ಷಕ್ಕೆ ಎಷ್ಟು ತಾಸು ನಿದ್ದೆ ಕಳೆದುಕೊಳ್ಳುತ್ತಾರೆ ಗೊತ್ತಾ?

ರಾತ್ರಿಯ ತಾಪಮಾನದಲ್ಲಿ ಆಗುತ್ತಿರುವ ದಿಢೀರ್ ಏರಿಕೆಯಿಂದಾಗಿ ಭಾರತದ ಮೆಟ್ರೋ ನಗರಗಳ ಜನರು ವರ್ಷಕ್ಕೆ ಸರಾಸರಿ 65 ರಿಂದ 93 ಗಂಟೆಗಳಷ್ಟು ನಿದ್ದೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಪೈಕಿ ಬೆಂಗಳೂರು ನಗರದಲ್ಲಿ ವಾತಾವರಣ ಬದಲಾವಣೆಯ ಅತಿ ದೊಡ್ಡ ಪ್ರಭಾವ ಕಾಣಸಿಗುತ್ತದೆ. ಬೆಂಗಳೂರಿಗರು ವರ್ಷಕ್ಕೆ ಸರಾಸರಿ 67 ಗಂಟೆಗಳ ಕಾಲ ನಿದ್ದೆಯಿಂದ ವಂಚಿತರಾಗುತ್ತಿದ್ದು, ಅದರಲ್ಲಿ ಶೇಕಡಾ 12 ರಷ್ಟು, ಅಂದರೆ ಸುಮಾರು 8 ಗಂಟೆಗಳ ನಿದ್ದೆ ಕೇವಲ ಮಾನವ ನಿರ್ಮಿತ ಜಾಗತಿಕ ತಾಪಮಾನ ಏರಿಕೆಯಿಂದಾಗಿಯೇ ನಷ್ಟವಾಗುತ್ತಿದೆ ಎಂದು ವರದಿ ತಿಳಿಸಿದೆ. ಭಾರತದ ಇತರ ನಗರಗಳಿಗೆ ಹೋಲಿಸಿದರೆ ಹವಾಮಾನ ಬದಲಾವಣೆಯ ನೇರ ಪರಿಣಾಮದಿಂದ ಅತಿ ಹೆಚ್ಚು ನಿದ್ದೆ ಕಳೆದುಕೊಳ್ಳುತ್ತಿರುವುದು ಬೆಂಗಳೂರಿಗರೇ ಎಂಬುದು ಈ ವರದಿಯಿಂದ ಸಾಬೀತಾಗಿದೆ.

ನಿದ್ದೆಗೂ ಹವಾಮಾನಕ್ಕೂ ಏನು ಸಂಬಂಧ?

ಮಾನವನ ದೇಹದ ಪ್ರಕೃತಿಯ ಪ್ರಕಾರ, ರಾತ್ರಿಯಾಗುತ್ತಿದ್ದಂತೆ ಆಳವಾದ ನಿದ್ದೆಗೆ ಜಾರಲು ದೇಹದ ಒಳಗಿನ ತಾಪಮಾನ ಕಡಿಮೆಯಾಗಬೇಕು. ಆದರೆ ಕಾಂಕ್ರೀಟ್ ಕಾಡಾಗುತ್ತಿರುವ ಬೆಂಗಳೂರಿನಲ್ಲಿ ರಾತ್ರಿಯ ವೇಳೆಯೂ ಸೆಕೆ ಹೆಚ್ಚಿರುವುದರಿಂದ ದೇಹ ಸುಲಭವಾಗಿ ತಂಪಾಗುವುದಿಲ್ಲ. ಪರಿಣಾಮವಾಗಿ, ಜನರು ಮಧ್ಯರಾತ್ರಿ ಪದೇ ಪದೇ ಎಚ್ಚರಗೊಳ್ಳುವುದು, ಲಘು ನಿದ್ದೆ (Light Sleep) ಅಥವಾ ನಿದ್ದೆಯಿಲ್ಲದೆ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಕೇವಲ ನಿದ್ದೆಯ ಸಮಸ್ಯೆಯಾಗಿ ಉಳಿಯದೆ, ಜನರ ಮಾನಸಿಕ ನೆಮ್ಮದಿ, ಕೆಲಸದ ಸಾಮರ್ಥ್ಯ ಹಾಗೂ ಹೃದಯದ ಆರೋಗ್ಯದ ಮೇಲೂ ತೀವ್ರ ಪರಿಣಾಮ ಬೀರುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸೌದಿ ಅರೇಬಿಯಾದಲ್ಲಿ ಮಂಗಳೂರಿನ ವಿಟ್ಲದ ಯುವಕನ ಸಾಧನೆ!
ಸೌದಿ ಅರೇಬಿಯಾದಲ್ಲಿ ಮಂಗಳೂರಿನ ವಿಟ್ಲದ ಯುವಕನ ಸಾಧನೆ!
ಚೆನ್ನಮ್ಮ ಆರೋಗ್ಯ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ
ಚೆನ್ನಮ್ಮ ಆರೋಗ್ಯ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ
ಬಂಟ್ವಾಳ ಕೊಲೆ ಆರೋಪಿ ಬಗ್ಗೆ ತಪ್ಪು ಮಾಹಿತಿ ಹರಡಿದವರ ವಿರುದ್ಧ ಕೇಸ್
ಬಂಟ್ವಾಳ ಕೊಲೆ ಆರೋಪಿ ಬಗ್ಗೆ ತಪ್ಪು ಮಾಹಿತಿ ಹರಡಿದವರ ವಿರುದ್ಧ ಕೇಸ್
ಮೆಕ್ಸಿಕೋದಲ್ಲಿ 7.4 ತೀವ್ರತೆಯ ಭೂಕಂಪ; ಸುನಾಮಿಯ ಮುನ್ನೆಚ್ಚರಿಕೆ
ಮೆಕ್ಸಿಕೋದಲ್ಲಿ 7.4 ತೀವ್ರತೆಯ ಭೂಕಂಪ; ಸುನಾಮಿಯ ಮುನ್ನೆಚ್ಚರಿಕೆ
ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಆರೋಗ್ಯ ವಿಚಾರಿಸಿದ ಆರ್. ಅಶೋಕ್
ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಆರೋಗ್ಯ ವಿಚಾರಿಸಿದ ಆರ್. ಅಶೋಕ್
ನೀರಾವರಿ ಪೈಪ್‌ಲೈನ್ ಒಡೆದು ಆಕಾಶದೆತ್ತರಕ್ಕೆ ಚಿಮ್ಮಿದ ನೀರು
ನೀರಾವರಿ ಪೈಪ್‌ಲೈನ್ ಒಡೆದು ಆಕಾಶದೆತ್ತರಕ್ಕೆ ಚಿಮ್ಮಿದ ನೀರು
ಅಲೆಗಳ ಮಧ್ಯೆ ಮುಳುಗುತ್ತಿದ್ದ ಮಾನಸಿಕ ಅಸ್ವಸ್ಥನ ಪ್ರಾಣ ಉಳಿಸಿದ ಖಾಕಿ ಪಡೆ
ಅಲೆಗಳ ಮಧ್ಯೆ ಮುಳುಗುತ್ತಿದ್ದ ಮಾನಸಿಕ ಅಸ್ವಸ್ಥನ ಪ್ರಾಣ ಉಳಿಸಿದ ಖಾಕಿ ಪಡೆ
ಬಿಡದಿ ಟೌನ್‌ಶಿಪ್ ಯೋಜನೆ ಪರ ರೈತರಿಂದ ಭೂ ಪರಿಹಾರಕ್ಕೆ ಅರ್ಜಿ ಸಲ್ಲಿಕೆ
ಬಿಡದಿ ಟೌನ್‌ಶಿಪ್ ಯೋಜನೆ ಪರ ರೈತರಿಂದ ಭೂ ಪರಿಹಾರಕ್ಕೆ ಅರ್ಜಿ ಸಲ್ಲಿಕೆ
ಉಳ್ಳಾಲ ಕಡಲತೀರಕ್ಕೆ ಅಪ್ಪಳಿಸಿದ ಲಕ್ಷಾಂತರ ಬೂತಾಯಿ ಮೀನಿನ ರಾಶಿ
ಉಳ್ಳಾಲ ಕಡಲತೀರಕ್ಕೆ ಅಪ್ಪಳಿಸಿದ ಲಕ್ಷಾಂತರ ಬೂತಾಯಿ ಮೀನಿನ ರಾಶಿ
ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ
ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ