ಯಡಿಯೂರಪ್ಪ ಆಡಳಿತ ನಮಗೆ ಆದರ್ಶ; ಸರ್ಕಾರಿ ನೌಕರರ ಕ್ರೀಡಾ -ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಡಿಯೂರಪ್ಪರನ್ನ ಹಾಡಿ ಹೊಗಳಿದ ಸಿಎಂ ಬೊಮ್ಮಾಯಿ
ನೌಕರರ ವೇತನದಲ್ಲಿ ಹಣ ಕಟ್ ಆಗಬಾರದು ಅಂತ ಯಡಿಯೂರಪ್ಪ ಸೂಚನೆ ಕೊಟ್ಟಿದ್ರು. ಯಡಿಯೂರಪ್ಪ ಆಡಳಿತ ನಮಗೆ ಆದರ್ಶವಾಗಿದೆ. ರೈತರು, ಆರೋಗ್ಯ ಶಿಕ್ಷಣ ಇಲಾಖೆಗೆ ಬಹಳಷ್ಟು ಕಾರ್ಯಕ್ರಮ ಕೊಟ್ಟಿದ್ದೇವೆ ಎಂದು ಭಾಷಣದುದ್ದಕ್ಕೂ ಯಡಿಯೂರಪ್ಪ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಹಾಡಿಹೊಗಳಿದ್ದಾರೆ.
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಸಮಾರಂಭವನ್ನು ಏರ್ಪಡಿಸಲಾಗಿದೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಮೂರು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ. ಇಂದು ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ(CM Basavaraj Bommai) ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವ ಆರ್. ಅಶೋಕ್, ಅಶ್ವತ್ಥ ನಾರಾಯಣ ಸೇರಿ ಹಲವಾರು ಕ್ರೀಡಾ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಇನ್ನು ಕಾರ್ಯಕ್ರಮ ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರು. ಒಟ್ಟಾಗಿ ದುಡಿದರೆ ಒಂದು ಕುಟುಂಬ ಬಹಳ ಉನ್ನತ ಮಟ್ಟಕ್ಕೆ ಹೋಗುತ್ತದೆ. ಆಳುವುದು ಮತ್ತು ಆಡಳಿತ ಮಾಡುವುದು ಒಂದು ಸಂಯೋಜಿತ ಸಂಬಂಧ ಇದೆ. ಇದರಿಂದ ಒಂದು ರಾಜ್ಯದ ಅಭಿವೃದ್ಧಿಗೆ ಸಹಾಯ ಆಗುತ್ತೆ. ರಾಜ್ಯದ ಅಭಿವೃದ್ಧಿಯಲ್ಲಿ ನೌಕರರ ಒಂದು ದೊಡ್ಡ ಪಾಲಿದೆ. ಷಡಕ್ಷರಿ ಬಂದ ಮೇಲೆ ನೌಕರರ ಸಂಘಕ್ಕೆ ಸಾಕಷ್ಟು ಬಲ ಬಂದಿದೆ. ಪಾದರಸ ದಂತೆ ಓಡಾಡುತ್ತಾರೆ. ನೌಕರರ ಸಂಘದ ಹಿತಾಸಕ್ತಿ ಕಾಪಾಡಲು ಬಂದ ಷಡಕ್ಷರಿ ಹಿಂದಿನ ಶಕ್ತಿ ನಮ್ಮ ನಾಯಕ ಯಡಿಯೂರಪ್ಪ. ನಮ್ಮ ನಾಯಕ ಯಡಿಯೂರಪ್ಪ ಅವರ ಪ್ರೀತಿಯ ಹುಡುಗ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ. ಬರುವಂತ ದಿನಗಳಲ್ಲಿ ವೇತನ ಆಯೋಗ ಸಂಬಂಧಿಸಿದ ಚರ್ಚೆ ಮಾಡುತ್ತೇವೆ ಎಂದು ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: UCIL Recruitment 2022: 10ನೇ ತರಗತಿ ಉತ್ತೀರ್ಣರಾದವರಿಗೆ UCILನಲ್ಲಿದೆ ಅಪ್ರೆಂಟಿಸ್ ಹುದ್ದೆಗಳು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಸಂಜೀವಿನಿ ಕಾರ್ಯಕ್ರಮ ಆದಷ್ಟು ಬೇಗ ಲೋಕಾರ್ಪಣೆ ಮಾಡುತ್ತೇನೆ. ಹತ್ತು ಹಲವು ಕಾರ್ಯಕ್ರಮ ಬಜೆಟ್ ನಲ್ಲಿ ಮಾಡಿದ್ದೇವೆ. ನೀವು ಸೌಲಭ್ಯದ ಬಗ್ಗೆ ಚಿಂತನೆ ಬಿಡಿ ಸ್ವಾಲಂಭಿಯಾಗಿ ಕೆಲಸ ಮಾಡಿ. ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿ. ಯಡಿಯೂರಪ್ಪ ನೇತೃತ್ವದಲ್ಲಿ ಕೋವಿಡ್ ಸಂದರ್ಭದಲ್ಲಿ ಬಹಳಷ್ಟು ಕೆಲಸ ಮಾಡಿದ್ದಾರೆ. ಕೋವಿಡ್ ನಿಯಂತ್ರಣದಿಂದ ಆರ್ಥಿಕವಾಗಿ ಮುಂದೆ ಹೋಗುತ್ತಿದ್ದೇವೆ. ಕೋವಿಡ್ ವೇಳೆ ಸರ್ಕಾರಿ ನೌಕರರ ವೇತನ ಕಟ್ ಮಾಡಿದ್ರು. ಆದರೆ ಅಂದು ನಮ್ಮ ನಾಯಕರಾದ ಯಡಿಯೂರಪ್ಪ ಸಾರಿಗೆ ನೌಕರರ ವೇತನ ಬಗ್ಗೆ ಚರ್ಚೆ ಮಾಡಿದ್ರು. ನೌಕರರ ವೇತನದಲ್ಲಿ ಹಣ ಕಟ್ ಆಗಬಾರದು ಅಂತ ಯಡಿಯೂರಪ್ಪ ಸೂಚನೆ ಕೊಟ್ಟಿದ್ರು. ಯಡಿಯೂರಪ್ಪ ಆಡಳಿತ ನಮಗೆ ಆದರ್ಶವಾಗಿದೆ. ರೈತರು, ಆರೋಗ್ಯ ಶಿಕ್ಷಣ ಇಲಾಖೆಗೆ ಬಹಳಷ್ಟು ಕಾರ್ಯಕ್ರಮ ಕೊಟ್ಟಿದ್ದೇವೆ. ಕ್ರೀಡೆಯಿಂದ ಶಿಸ್ತು ಬರುತ್ತೆ ಎಂದು ಭಾಷಣದುದ್ದಕ್ಕೂ ಯಡಿಯೂರಪ್ಪ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಹಾಡಿಹೊಗಳಿದ್ದಾರೆ.
Published On - 9:03 pm, Mon, 30 May 22