AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರೀಯ ಸ್ವಯಂ ಸೇವಕರ ಕಾಲಿನ ಧೂಳಿಗೂ ಕಾಂಗ್ರೆಸ್ ಸಮವಲ್ಲ: ಆರ್‌ಎಸ್‌ಎಸ್ ವಿರುದ್ಧ ಮಾತನಾಡುವವರಿಗೆ ಎಂ.ಪಿ.ರೇಣುಕಾಚಾರ್ಯ ತಿರುಗೇಟು

ಕಾಂಗ್ರೆಸ್ ವಿರುದ್ದ ಎಂ.ಪಿ.ರೇಣುಕಾಚಾರ್ಯ ಗರಂ ಆಗಿದ್ದು, ಆರ್‌ಎಸ್‌ಎಸ್ ವಿರುದ್ದ ಮಾತನಾಡುವವರಿಗೆ ಸಾಲು ಸಾಲು ಟ್ವೀಟ್ ಮಾಡುವ ಮೂಲಕ ಟಾಂಗ್ ನೀಡಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕರ ಕಾಲಿನ ಧೂಳಿಗೂ ಕಾಂಗ್ರೆಸ್ ಸಮವಲ್ಲ: ಆರ್‌ಎಸ್‌ಎಸ್ ವಿರುದ್ಧ ಮಾತನಾಡುವವರಿಗೆ ಎಂ.ಪಿ.ರೇಣುಕಾಚಾರ್ಯ ತಿರುಗೇಟು
ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: May 31, 2022 | 7:53 AM

Share

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕರ ಕಾಲಿನ ಧೂಳಿಗೂ ಕಾಂಗ್ರೆಸ್ ಸಮವಲ್ಲ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಾಲು ಸಾಲು ಟ್ವೀಟ್ ಮಾಡುವ ಮೂಲಕ ವಾಗ್ದಾಳಿ ಮಾಡಿದರು. ಫೇಸ್​​ಬುಕ್​ನಲ್ಲಿಯೂ​ ಪೋಸ್ಟ್​ ಹಾಕಿದ ಶಾಸಕ ಎಂ.ಪಿ.ರೇಣುಕಾಚಾರ್ಯ ​ಈಗಿನ ಕಾಂಗ್ರೆಸ್ ಆರ್​​ಎಸ್​ಎಸ್​​ನವರ ಕಾಲಿನ ಧೂಳಿಗೂ ಸಮವಲ್ಲ. ರಾಷ್ಟ್ರ ಭಕ್ತಿ ಸಂಘಟನನೆ ಆರ್​​ಎಸ್​ಎಸ್​​ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೇಸ್​ನವರಿಗೆ ಇಲ್ಲಾ ಎಂದು ಆರ್‌ಎಸ್‌ಎಸ್ ವಿರುದ್ಧ ಮಾತನಾಡುವವರಿಗೆ ಎಂ.ಪಿ. ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ದೇಶದಲ್ಲಿ ಕಾಂಗ್ರೇಸ್ ಅಡ್ರೆಸ್​ ಇಲ್ಲಾ, ವಿನಾಃ ಕಾರಣ ನಿಮ್ಮ ನಾಲಿಗೆ ಹರಿಬಿಡಬೇಡಿ. ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಕಚ್ಚಾಟ ನಡೆಯುತ್ತಿದ್ದು, ಆರ್​ಎಸ್​ಎಸ್​ ಬೈದರೆ ರಾಹುಲ್ ಗಾಂಧಿ ಅವರನ್ನು ಸಿಎಂ ಮಾಡುತ್ತಾರೆಂಬ ಭ್ರಮಾ ಲೋಕದಲ್ಲಿದ್ದಾರೆ ಎಂದು ಟಾಂಗ್ ನೀಡಿದರು.

ಇದನ್ನೂ ಓದಿ; ಕೃತಿ ಶೆಟ್ಟಿಗೆ ಪ್ರ್ಯಾಂಕ್ ಮಾಡಿದ ಆ್ಯಂಕರ್​; ನಿಲ್ಲಲೇ ನಟಿಯ ಕಣ್ಣೀರು

ಸಂಘ ಪರಿವಾರದ ಬಗ್ಗೆ ಟೀಕೆ ಮಾಡಿದರೆ ಜನ ನಿಮನ್ನ ಧೂಳಿಪಟ ಮಾಡುತ್ತಾರೆ. 2023 ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ರಾಹುಲ್ ಗಾಂಧಿ ರಾಜಕೀಯದಲ್ಲಿ ಬಚ್ಚಾ, ರಾಜಕೀಯ ಪ್ರಜ್ಞೆಯಿಲ್ಲಾ. ದೇಶದ ಬಗ್ಗೆ ಗೌರವವಿಲ್ಲಾ. ದೇಶಭಕ್ತಿ ಸಂಘಟನೆಗಳನ್ನು ಗೌರವಿಸಲ್ಲ. ವೋಟಿಗಾಗಿ ಅಲ್ಪಸಂಖ್ಯಾತರನ್ನ ಓಲೈಸುತ್ತಾರೆ. ಜನ ತಕ್ಕ ಪಾಠ ಕಲಿಸಿದ್ದಾರೆ. ಸಂಘಪರಿವಾರನ್ನು ಯಾರು ಟೀಕೆ ಮಾಡುತ್ತಾರೋ ಅವರು ದೇಶ ದ್ರೋಹಿಗಳು. ಆರ್​ಎಸ್​ಎಸ್​​ ರಾಷ್ಟ್ರಭಕ್ತಿ ಸಂಸ್ಥೆ. ರಾಷ್ಟ್ರದ್ರೋಹಿಗಳು ಭಯೋತ್ಪಾದಕರು ಉಗ್ರಗಾಮಿಗಳಿಗೆ ಬೆಂಬಲ ಕೊಡುವ ನೀವು ನಪುಸಂಕರು. ಕಾಂಗ್ರೇಸ್​ನವರು ರಾಷ್ಟ್ರದ್ರೋಹಿಗಳು, ದೇಶದ್ರೋಹಿಗಳು ಟಿಪ್ಪುಜಯಂತಿಯನ್ನು ಮಾಡುವ ನೀವು ನಪುಸಂಕರು ಎಂದು ಕಿಡಿಕಾರಿದರು.

ಯತ್ನಾಳ್​ ನನ್ನ ಆತ್ಮೀಯ ಸ್ನೇಹಿತರು. ನೀವು ಸರಕಾರ ಹಾಗೂ ಸಂಘಟನೆ ವಿರುದ್ದ ಮಾತನಾಡುವುದನ್ನು ಬಿಡಬೇಕು. ಜನರಿಗೆ ನಿಮ್ಮ ಬಗ್ಗೆ ತಪ್ಪು ಸಂದೇಶ ಹೋಗಲಿದೆ. ಈ ರೀತಿ ಮಾತನಾಡಿದರೆ ಪಕ್ಷ ಸಹಿಸಲ್ಲ ಎಂದು ಯತ್ನಾಳ್​ಗೂ ರೇಣುಕಾಚಾರ್ಯ ಕ್ಲಾಸ್​ ತೆಗೆದುಕೊಂಡದರು. ವಿಜಯೇಂದ್ರ ರಾಜಕೀಯದಲ್ಲಿ ಬೆಳೆಯಲು ಸಾಕಷ್ಟು ಅವಕಾಶ ಇದೇ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಹೇಳಿದ್ದಾರೆ. ಬಿ.ಎಲ್​ ಸಂತೋಷ್ ಅವರು ಟಿಕೇಟ್ ತಪ್ಪಿಸಿಲ್ಲಾ ಇದು ನೂರಕ್ಕೆ ನೂರು ಸುಳ್ಳು ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಟ್ವೀಟ್ ಮಾಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ