ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಅಭಾವ ಸೃಷ್ಟಿ: ಆನ್ ಲೈನ್ನಲ್ಲಿ ಒನ್ ಟು ಡಬಲ್ಗೆ ಸೇಲ್
ಕಂಪನಿಗಳು ಮಾರುಕಟ್ಟೆ ಬರುವ ಮುಂಚಿತವಾಗಿಯೇ ಅಗತ್ಯ ವಸ್ತುಗಳನ್ನ ಖರೀದಿಸಿ ಸ್ಟಾಕ್ ಮಾಡಲಾಗುತ್ತಿದೆ. ಇದರಿಂದ ಮಾರುಕಟ್ಟೆ ದಿನ ಬಳಕೆ ವಸ್ತುಗಳ ಬರೋದು ಶೇ.70 ರಷ್ಟು ಕಡಿಮೆಯಾಗಿದೆ.
ಬೆಂಗಳೂರು: ಆನ್ಲೈನ್ನಲ್ಲಿ ಅಗತ್ಯ ವಸ್ತುಗಳ ಮಾರಾಟ ಮಾಡುವ ಕಂಪನಿಗಳಿಂದ ಮಾಫಿಯಾ ಮಾಡಲಾಗುತ್ತಿದ್ದು ಬೆಂಗಳೂರಿನಲ್ಲಿ ನೂರಾರು ಆ್ಯಪ್ ಆಧಾರಿತ ಕಂಪನಿಗಳು ತಲೆ ಎತ್ತುತ್ತಿವೆ. ಮಾರುಕಟ್ಟೆಗೆ ಬರುವ ದಿನ ಬಳಕೆ ವಸ್ತುಗಳನ್ನ ಖರೀದಿಸಿ ಕಂಪನಿಗಳು ಸ್ಟಾಕ್ ಇಡುತ್ತಿವೆ. ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಅಭಾವ ಸೃಷ್ಟಿಸಿ, ನಂತರ ಆನ್ ಲೈನ್ನಲ್ಲಿ ಒನ್‌ಟು ಡಬಲ್ಗೆ ಸೇಲ್ ಮಾಡಲಾಗುತ್ತಿದೆ. ನಗರದ ಹಲವೆಡೆ ಕಂಪನಿಗಳು ಗೋದಾಮು ಹೊಂದಿದ್ದು, ಅಗತ್ಯ ವಸ್ತುಗಳನ್ನ ಸ್ಟಾಕ್ ಇಟ್ಟು, ಮಾರುಕಟ್ಟೆಯಲ್ಲಿ ಅಭಾವ ಸೃಷ್ಟಿ ಮಾಡುತ್ತಿವೆ. ಎಪಿಎಂಸಿ ವರ್ತಕರಿಂದ ಮಾಫಿಯಾ ಕರಾಳ ಮುಖ ಬಯಲು ಮಾಡಲಾಗಿದೆ.
ಎಪಿಎಂಸಿ ಮಾಜಿ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಟಿವಿ9 ಗೆ ಹೇಳಿಕೆ ನೀಡಿದ್ದು, ಎಪಿಎಂಸಿ ಕಾಯ್ದೆ ಬಂದ ನಂತರ ಇ-ಕಾರ್ಮಸ್ ಮಾಫಿಯಾ ತಲೆ ಎತ್ತಿದೆ. ಕಂಪನಿಗಳು ಮಾರುಕಟ್ಟೆ ಬರುವ ಮುಂಚಿತವಾಗಿಯೇ ಅಗತ್ಯ ವಸ್ತುಗಳನ್ನ ಖರೀದಿಸಿ ಸ್ಟಾಕ್ ಮಾಡಲಾಗುತ್ತಿದೆ. ಇದರಿಂದ ಮಾರುಕಟ್ಟೆ ದಿನ ಬಳಕೆ ವಸ್ತುಗಳ ಬರೋದು ಶೇ.70 ರಷ್ಟು ಕಡಿಮೆಯಾಗಿದೆ. ಇದರಿಂದ ದಿನ ಬಳಕೆ ವಸ್ತುಗಳ ದರ ಏರಿಕೆಯಾಗುತ್ತಿದ್ದು, ಇದೂವರೆಗೂ ಆನ್ ಲೈನ್ ಅಂಗಡಿಗಳು ನೊಂದಣಿಯಾಗಿಲ್ಲ ಎಂದು ಹೇಳಿದರು.
ಆಹಾರ ಮತ್ತು ಸರಬರಾಜು ಇಲಾಖೆಯ ಅಪರ ನಿರ್ದೇಶಕಿ ಸುಜಾತ ಹೇಳಿಕೆ ನೀಡಿದ್ದು, ಆನ್ ಲೈನ್ನಲ್ಲಿ ಅಗತ್ಯ ವಸ್ತುಗಳನ್ನ ಮಾರಾಟ ಮಾಡುವ ಕಂಪನಿಗಳ ನೋಂದಣಿ ಇನ್ನೂ ಆರಂಭ ಆಗಿಲ್ಲ. ಕೇಂದ್ರಸರ್ಕಾರದಿಂದ ಗೈಡ್ ಲೈನ್ ಬರಬೇಕಿದೆ. ಬಂದ ಕೂಡಲೇ ನೋಂದಣಿ ಪ್ರಕ್ರಿಯೆ ಆರಂಭ ಆಗಲಿದೆ. ಯಾರು, ಎಷ್ಟು ಅಗತ್ಯ ವಸ್ತುಗಳನ್ನ ಸ್ಟಾಕ್ ಇಡಬೇಕು ಎಂಬ ಕಾನೂನು ಇದೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:52 am, Thu, 25 August 22