AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಖ್ಯಮಂತ್ರಿ ಹುದ್ದೆ ಯಾರಪ್ಪನ ಆಸ್ತಿ ಅಲ್ಲ; ಸಿಟಿ ರವಿ ಹೇಳಿಕೆ

ಒಬ್ಬರು ಜೈಲಿಗೆ ಹೋಗಿ ಬಂದವರು. ಇನ್ನೂ ಕೆಲವರು ಜೈಲಿಗೆ ಹೋಗುವ ದಾರಿಯಲ್ಲಿ ಇದ್ದಾರೆ. ಇವರದ್ದು ದೇಶ ಭಕ್ತಿ ಅಲ್ಲ, ಸೋನಿಯಾ ಭಕ್ತಿ, ಭ್ರಷ್ಟಾಚಾರ ಭಕ್ತಿ.

ಮುಖ್ಯಮಂತ್ರಿ ಹುದ್ದೆ ಯಾರಪ್ಪನ ಆಸ್ತಿ ಅಲ್ಲ; ಸಿಟಿ ರವಿ ಹೇಳಿಕೆ
ಸಿ.ಟಿ.ರವಿ
TV9 Web
| Updated By: sandhya thejappa|

Updated on:Jul 24, 2022 | 2:28 PM

Share

ಬೆಂಗಳೂರು: ಕಾಂಗ್ರೆಸ್​ನಲ್ಲಿ (Congress) ಸಿಎಂ ಅಭ್ಯರ್ಥಿಗಾಗಿ ಪೈಪೋಟಿ ನಡೆಯುತ್ತಿರುವ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ನಾಯಕ ಸಿಟಿ ರವಿ (CT Ravi) ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿ ಹುದ್ದೆ ಯಾರಪ್ಪನ ಆಸ್ತಿ ಅಲ್ಲ. ಇಲ್ಲದ ಕುರ್ಚಿಗಾಗಿ ಕಾಂಗ್ರೆಸ್ ನಾಯಕರು ಹೋರಾಡುತ್ತಿದ್ದಾರೆ. ಕಾಂಗ್ರೆಸ್ಗೆ ಸಿಎಂ ಕುರ್ಚಿ ಸಿಗಲ್ಲ, ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಕೇವಲ ತುಷ್ಟೀಕರಣದ ಮೇಲೆ ಕಾಂಗ್ರೆಸ್ ಆಡಳಿತ ಮಾಡುತ್ತೆ. ಹಿಂದೆ ಅವರಿಗೆ ಅಧಿಕಾರ ನೀಡಿದಾಗ ಏನೆಲ್ಲ ಆಗಿದೆ ಅನ್ನೋದು ಗೊತ್ತು. ಒಬ್ಬರು ಜೈಲಿಗೆ ಹೋಗಿ ಬಂದವರು. ಇನ್ನೂ ಕೆಲವರು ಜೈಲಿಗೆ ಹೋಗುವ ದಾರಿಯಲ್ಲಿ ಇದ್ದಾರೆ. ಇವರದ್ದು ದೇಶ ಭಕ್ತಿ ಅಲ್ಲ, ಸೋನಿಯಾ ಭಕ್ತಿ, ಭ್ರಷ್ಟಾಚಾರ ಭಕ್ತಿ. ಇವರು ಹೋರಾಟ ಮಾಡುವುದರಲ್ಲಿ ಏನಿದೆ ಅರ್ಥ? ಎಂದು ಸಿಟಿ ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಎಸ್ಎಂ ಕೃಷ್ಣ ಬಳಿಕ ಮತ್ತೆ ಕಾಂಗ್ರೆಸ್​ನಲ್ಲಿ ಒಕ್ಕಲಿಗ ಸಿಎಂ ಆಗಲು ಡಿಕೆ ಶಿವಕುಮಾರ್ ಬೆಂಬಲ ಕೇಳಿದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸಿಟಿ ರವಿ, ಒಕ್ಕಲಿಗ ಸಣ್ಣ ಮನಸ್ಥಿತಿಯಿಂದ ಯೋಚನೆ ಮಾಡುವುದಿಲ್ಲ. ಒಕ್ಕಲಿಗರು ಭ್ರಷ್ಟಾಚಾರ ಬಯಸುವುದಿಲ್ಲ. ಒಕ್ಕಲಿಗರು ಸಣ್ಣ ಯೋಚನೆ ಮಾಡುವವರಲ್ಲ. ಯಾರ ಯೋಗ್ಯತೆ ಏನು ಎಂದು ಗೊತ್ತಿದೆ. ಒಕ್ಕಲಿಗರು ಇಷ್ಟಪಡುವುದು ಸರ್ವಹಿತ ಬಯಸುವ ರಾಜಕೀಯವನ್ನು. ಒಕ್ಕಲಿಗರು ಎಲ್ಲರಿಗೂ ದಾನ ಮಾಡುತ್ತಾರೆ. ಒಕ್ಕಲುತನ ಮಾಡುತ್ತಾರೆ. ನನಗೆ ನನ್ನ ಸಮುದಾಯದ ಮೇಲೆ ಗೌರವ ಇದೆ. ಎಲ್ಲಾ ಸಮುದಾಯಗಳನ್ನೂ ನಾನು ಇಷ್ಟ ಪಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Monkeypox: ಭಾರತದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಪತ್ತೆ; ಸೋಂಕಿತರ ಸಂಖ್ಯೆ 4ಕ್ಕೆ ಏರಿಕೆ

ಇದನ್ನೂ ಓದಿ
Image
Neeraj Chopra: ಚಿನ್ನದ ಹುಡುಗ ನೀರಜ್ ಚೋಪ್ರಾ ಎಷ್ಟು ಕೋಟಿಯ ಒಡೆಯ ಗೊತ್ತಾ? ದಿನದ ಆದಾಯ ಎಷ್ಟು?
Image
BSNL: ಬಿಎಸ್​ಎನ್​ಎಲ್​ನ 100 ರೂ. ಒಳಗಿನ ಈ ಮೂರು ಪ್ಲಾನ್​ನಲ್ಲಿದೆ ಬಂಪರ್ ಆಫರ್
Image
Viral Pics: ಪತ್ನಿಯ ಬದಲು ಪತ್ನಿಯ ಮುಖವಾಡದೊಂದಿಗೆ ಪ್ರವಾಸಕ್ಕೆ ತೆರಳಿದ ಪತಿಮಹಾಶಯ; ಕಾರಣ ಏನು ಗೊತ್ತಾ?
Image
ಹರಪನಹಳ್ಳಿಯಲ್ಲಿ ಹೊತ್ತಿ ಉರಿದ ಡೀಸೆಲ್ ಟ್ಯಾಂಕರ್! ಬೈಕ್ ಸವಾರ ಸಜೀವ ದಹನ

ಫ್ಲೆಕ್ಸ್ ಹಾಕಿದವರ ಮೇಲೆ ಎಫ್ಐಆರ್; ಸಿಟಿ ರವಿ ಹೇಳಿದ್ದೇನು?: ಸಿಟಿ ರವಿ ಹುಟ್ಟು ಹಬ್ಬದ ಹಿನ್ನೆಲೆ ಫ್ಲೆಕ್ಸ್ ಹಾಕಿದ್ದವರ ಮೇಲೆ ಎಫ್ಐಆರ್ ದಾಖಲಾಗಿದೆ ಈ ಬಗ್ಗೆ ಹೇಳಿಕೆ ನೀಡಿರುವ ರವಿ, ನಾನು ಫ್ಲೆಕ್ಸ್ ಹಾಕಲು ಹೇಳಿಲ್ಲ. ಹಾಕಿದ್ದನ್ನೂ ನಾನು ಸಮರ್ಥಿಸುವುದಿಲ್ಲ. ಅವರ ಮೇಲೆ‌ ಕಾನೂನು ಪ್ರಕಾರ ಕ್ರಮ ಆಗಲಿ. ಕಾನೂನು ಸಿದ್ದರಾಮಯ್ಯಗೂ ಒಂದೇ, ಸಿ.ಟಿ. ರವಿಗೂ ಒಂದೆ ಎಂದರು.

ಇನ್ನು ಇದೇ ವೇಳೆ ರಮೇಶ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ರವಿ, ಮಾಜಿ ಸ್ಪೀಕರ್​  ಸತ್ಯವನ್ನೇ ಹೇಳಿದ್ದಾರೆ. ರಮೇಶ್ ಕುಮಾರ್​ ಮುಖವಾಡ ಹಾಕಿಕೊಂಡು ಇರುತ್ತಾರೆ. ಈ ಬಾರಿ ತಮ್ಮ ಮುಖವಾಡ ಕಳಿಚಿದ್ದಾರೆ. ಸಣ್ಣ ಕಳ್ಳ ಮತ್ತೊಬ್ಬ ದೊಡ್ಡ ಕಳ್ಳನಿಗೆ ಬೆಂಬಲ ನೀಡಿದಂತಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Neeraj Chopra: ಚಿನ್ನದ ಹುಡುಗ ನೀರಜ್ ಚೋಪ್ರಾ ಎಷ್ಟು ಕೋಟಿಯ ಒಡೆಯ ಗೊತ್ತಾ? ದಿನದ ಆದಾಯ ಎಷ್ಟು?

Published On - 2:21 pm, Sun, 24 July 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ