AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಡಿಯೂರಪ್ಪ ಚುನಾವಣಾ ನಿವೃತ್ತಿ ಹೇಳಿಕೆ ವಾಪಸ್ ಪಡೆಯಬೇಕು; ನನಗೆ ಬರ್ತ್ಡೇ ಗಿಫ್ಟ್ ನೀಡಬೇಕು ಎಂದ ಶಾಸಕ ಎಸ್ ಆರ್ ವಿಶ್ವನಾಥ್

ಯಡಿಯೂರಪ್ಪನವರು ಶ್ರೀಕೃಷ್ಣ, ಭೀಷ್ಮನ ರೀತಿ ನಮ್ಮ ಜೊತೆ ಇರಬೇಕು. ಬಿಎಸ್ವೈ ತಮ್ಮ ಹೇಳಿಕೆ ಹಿಂಪಡೆದು ನನಗೆ ಬರ್ತ್ಡೇ ಗಿಫ್ಟ್ ನೀಡಬೇಕು ಎಂದು ಬೆಂಗಳೂರಿನ ಯಲಹಂಕದಲ್ಲಿ ಶಾಸಕ ಎಸ್ಆರ್ ವಿಶ್ವನಾಥ್ ಹೇಳಿದ್ದಾರೆ.

ಯಡಿಯೂರಪ್ಪ ಚುನಾವಣಾ ನಿವೃತ್ತಿ ಹೇಳಿಕೆ ವಾಪಸ್ ಪಡೆಯಬೇಕು; ನನಗೆ ಬರ್ತ್ಡೇ ಗಿಫ್ಟ್ ನೀಡಬೇಕು ಎಂದ ಶಾಸಕ ಎಸ್ ಆರ್ ವಿಶ್ವನಾಥ್
ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ
TV9 Web
| Edited By: |

Updated on:Jul 24, 2022 | 4:03 PM

Share

ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಎಸ್ಆರ್ ವಿಶ್ವನಾಥ್ (SR Vishwanath), ಚುನಾವಣಾ ನಿವೃತ್ತಿ ಹೇಳಿಕೆಯನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದ್ದಾರೆ. ಪುತ್ರ ವಿಜಯೇಂದ್ರಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟರೂ ಸಮಸ್ಯೆಯಿಲ್ಲ. ಬಿಎಸ್ವೈಗಾಗಿ ರಾಜ್ಯದ ಯಾವುದೇ ಕ್ಷೇತ್ರವನ್ನಾದರೂ ಬಿಟ್ಟುಕೊಡಲು ಸಿದ್ಧ. ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಬಿಎಸ್ವೈ ಸ್ಪರ್ಧಿಸಿದರೂ ಗೆಲ್ಲಿಸುತ್ತೇವೆ. ಬಿಎಸ್ವೈ ಚುನಾವಣಾ ನಿವೃತ್ತಿ ವಿಚಾರ ನನ್ನಲ್ಲಿ ಉತ್ಸಾಹ ಕಡಿಮೆ ಆಗಿದೆ ಎಂದರು.

ಯಡಿಯೂರಪ್ಪನವರು ಶ್ರೀಕೃಷ್ಣ, ಭೀಷ್ಮನ ರೀತಿ ನಮ್ಮ ಜೊತೆ ಇರಬೇಕು. ಬಿಎಸ್ವೈ ತಮ್ಮ ಹೇಳಿಕೆ ಹಿಂಪಡೆದು ನನಗೆ ಬರ್ತ್ಡೇ ಗಿಫ್ಟ್ ನೀಡಬೇಕು ಎಂದು ಬೆಂಗಳೂರಿನ ಯಲಹಂಕದಲ್ಲಿ ಶಾಸಕ ಎಸ್ಆರ್ ವಿಶ್ವನಾಥ್ ಹೇಳಿದ್ದಾರೆ.

ರೆಸಾರ್ಟ್​ನಲ್ಲಿ ಅದ್ಧೂರಿ ಹುಟ್ಟುಹಬ್ಬ ಆಚರಣೆ: ಯಲಹಂಕದ ಖಾಸಗಿ ರೆಸಾರ್ಟ್​ನಲ್ಲಿ ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್ಆರ್ ವಿಶ್ವನಾಥ್ ಅದ್ಧೂರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭಾಗಿಯಾಗಿದ್ದರು. ಹಾಗೇ, ವಿ.ಸೋಮಣ್ಣ, ಕೆ.ಗೋಪಾಲಯ್ಯ ಸೇರಿದಂತೆ ಹಲವು ಸಚಿವರು ಶಾಸಕರಿಗೆ ಶುಭ ಕೋರಿದ್ದಾರೆ.

ಇದನ್ನೂ ಓದಿ
Image
Virat Kohli: ಧೋನಿಯಲ್ಲ, ವಿರಾಟ್ ಕೊಹ್ಲಿ ಮೊದಲ ಟಿ20 ನಾಯಕ ಯಾರು ಗೊತ್ತಾ?
Image
ಗಂಡು ಮಗುವಿಗೆ ತಂದೆಯಾದ ಕೃನಾಲ್ ಪಾಂಡ್ಯ, ಚಿಕ್ಕಪ್ಪನಾಗಿ ಬಡ್ತಿ ಪಡೆದ ಹಾರ್ದಿಕ್; ಮಗುವಿನ ಹೆಸರೇನು ಗೊತ್ತಾ?
Image
Photo Gallery: ಜಗಳ ಮಾಡದೆ ನಿಮ್ಮವರಿಗೆ ಹೇಳಬೇಕಾಗಿರುವುದನ್ನು ಹೇಳುವುದು ಹೇಗೆ?
Image
ಚಾಮರಾಜನಗರ: ಕಾರಿನ ಚಕ್ರಕ್ಕೆ ಸಿಲುಕಿ 4 ವರ್ಷದ ಬಾಲಕ ಸಾವು

ಇದನ್ನೂ ಓದಿ: ಪ್ರಧಾನಿ ಪ್ರಯೋಗಾಲಯದಲ್ಲಿನ ಹೊಸ ಪ್ರಯೋಗಗಳಿಂದಾಗಿ ಭಾರತದ ಭದ್ರತೆ ಮತ್ತು ಯುವಕರ ಭವಿಷ್ಯ ಅಪಾಯದಲ್ಲಿದೆ: ರಾಹುಲ್ ಗಾಂಧಿ

ಸಿಎಂ ಹುದ್ದೆಗಾಗಿ ಕಚ್ಚಾಟ ಶುರುವಾಗಿದೆ- ಯಡಿಯೂರಪ್ಪ: ಎಸ್ಆರ್ ವಿಶ್ವನಾಥ್​ ಶೀಘ್ರ ಸಚಿವ ಸಂಪುಟ ಸೇರಬೇಕು. ಸಿಎಂ ಬಸವರಾಜ ಬೊಮ್ಮಾಯಿಗೆ ಒತ್ತಾಯ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದರು. ವಿಶ್ವನಾಥ್​ಗೆ ಮುಂದೆ ಒಳ್ಳೆಯ ಕಾಲ ಬರಲಿದೆ. 150ಕ್ಕೂ ಹೆಚ್ಚು ಸ್ಥಾನ ಗೆದ್ದು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್​ನಲ್ಲಿ ಈಗಾಗಲೇ ಸಿಎಂ ಹುದ್ದೆಗಾಗಿ ಕಚ್ಚಾಟ ಶುರುವಾಗಿದೆ. ಯಾವುದೇ ಕಾರಣಕ್ಕೂ ಅವರನ್ನು ಅಧಿಕಾರಕ್ಕೆ ಬರಲು ಬಿಡಲ್ಲ ಎಂದರು.

ಇದನ್ನೂ ಓದಿ: ಒಕ್ಕಲಿಗರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಿ; ಶಿವಕುಮಾರ್, ಜಮೀರ್​ಗೆ ಒಳ್ಳೆಯದಾಗಲ್ಲ ಎಂದ ಸಚಿವ ಆರ್ ಅಶೋಕ್

Published On - 4:00 pm, Sun, 24 July 22