AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲೇ ಪೆಟ್ರೋಲ್​ ಬೆಲೆ ಗಗನಕ್ಕೆ ಚಿಮ್ಮಿದೆ, ಅಂಥಾದ್ರಲ್ಲಿ ನೀರು ಮಿಶ್ರಣ ಮಾಡಿ ಮಾರಾಟ!

ಪೆಟ್ರೋಲ್‌ಗೆ ನಾವು ನೀರು ಮಿಶ್ರಣ ಮಾಡಿಲ್ಲ. ಮಳೆಯಿಂದಾಗಿ ಪೆಟ್ರೋಲ್‌ಗೆ ನೀರು ಮಿಶ್ರಣವಾಗಿರಬಹುದು ಎಂದು ಸಿಬ್ಬಂದಿ ಹೇಳುತ್ತಿದ್ದಾರಾದರೂ 3-4 ದಿನದಿಂದ ಈ ಭಾಗದಲ್ಲಿ ಮಳೆಯೇ ಹೆಚ್ಚಾಗಿ ಆಗಿಲ್ಲ! ಅದು ಹೇಗೆ ಪೆಟ್ರೋಲ್‌ಗೆ ನೀರು ಸೇರುತ್ತೆ ಎಂದು ಜನ ಪ್ರಶ್ನೆ ಮಾಡತೊಡಗಿದ್ದಾರೆ.

ಮೊದಲೇ ಪೆಟ್ರೋಲ್​ ಬೆಲೆ ಗಗನಕ್ಕೆ ಚಿಮ್ಮಿದೆ, ಅಂಥಾದ್ರಲ್ಲಿ ನೀರು ಮಿಶ್ರಣ ಮಾಡಿ ಮಾರಾಟ!
ಪ್ರಾತಿನಿಧಿಕ ಚಿತ್ರ
TV9 Web
| Edited By: ಸಾಧು ಶ್ರೀನಾಥ್​|

Updated on:Nov 01, 2021 | 1:12 PM

Share

ಬೆಂಗಳೂರು: ಮೊದಲೇ ಪೆಟ್ರೋಲ್​ ಬೆಲೆ ಗಗನಕ್ಕೆ ಚಿಮ್ಮಿದೆ, ಅಂಥಾದ್ರಲ್ಲಿ ನೀರು ಮಿಶ್ರಣ ಮಾಡಿ ಮಾರಾಟ ಮಾಡಿದರೆ ಗ್ರಾಹನ ಗತಿಯೇನು? ಎಂದು ಕೇಳುವಂತಾಗಿದೆ ಜೆ.ಪಿ. ನಗರದಲ್ಲಿರುವ ಪೆಟ್ರೋಲ್ ಬಂಕ್ ಪುರಾಣ ಕೇಳಿದಾಗ. ಘಟನೆ ಕಳೆದ ವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸೆಂಚ್ಯುರಿ ಬಾರಿಸಿರೋ ಪೆಟ್ರೋಲ್‌ ದರದ ಮಧ್ಯೆ ಮಾಲೀಕರ ಚೆಲ್ಲಾಟ ಕಂಡು ಜನ ರೋಸಿಹೋಗಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಲು ವಾಹನ ಸವಾರರು ಮುಂದಾಗಿದ್ದಾರೆ.

ಪೆಟ್ರೋಲ್‌ಗೆ ನೀರು ಮಿಶ್ರಣ ಮಾಡಿ ಮಾರಾಟ ಮಾಡುತ್ತಿರುವ ಆರೋಪ ಬೆಂಗಳೂರಿನ ಜೆ.ಪಿ.ನಗರದಲ್ಲಿ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ವಿರುದ್ಧ ಇದೀಗ ಕೇಳಿಬಂದಿದೆ. ರೊಚ್ಚಿಗೆದ್ದ ಗ್ರಾಹಕರು ಪೆಟ್ರೋಲ್ ಬಂಕ್‌ಗೆ ಮುತ್ತಿಗೆ ಹಾಕಿದ್ದಾರೆ. ಪೆಟ್ರೋಲ್‌ನಲ್ಲಿ ನೀರು ಮಿಶ್ರಣ ಮಾಡುತ್ತರುವ ಹಿನ್ನೆಲೆಯಲ್ಲಿ ವಾಹನಗಳ ಇಂಜಿನ್‌ಗೆ ಹಾನಿಯುಂಟಾಗುತ್ತದೆ. ಇದರಿಂದ 10ಕ್ಕೂ ಹೆಚ್ಚು ವಾಹನಗಳ ಇಂಜಿನ್‌ಗೆ ಹಾನಿಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಪೆಟ್ರೋಲ್‌ಗೆ ನಾವು ನೀರು ಮಿಶ್ರಣ ಮಾಡಿಲ್ಲ. ಮಳೆಯಿಂದಾಗಿ ಪೆಟ್ರೋಲ್‌ಗೆ ನೀರು ಮಿಶ್ರಣವಾಗಿರಬಹುದು ಎಂದು ಸಿಬ್ಬಂದಿ ಹೇಳುತ್ತಿದ್ದಾರಾದರೂ 3-4 ದಿನದಿಂದ ಈ ಭಾಗದಲ್ಲಿ ಮಳೆಯೇ ಹೆಚ್ಚಾಗಿ ಆಗಿಲ್ಲ! ಅದು ಹೇಗೆ ಪೆಟ್ರೋಲ್‌ಗೆ ನೀರು ಸೇರುತ್ತೆ ಎಂದು ಜನ ಪ್ರಶ್ನೆ ಮಾಡತೊಡಗಿದ್ದಾರೆ.

Power Star ಸಿನಿಮಾಗಳ ಬಗ್ಗೆ ಹಿರಿಯ ಅಭಿಮಾನಿ ಗುಣಗಾನ ಮಾಡಿದ್ದು ಹೇಗೆ? |Tv9Kannada

Also Read: Top 5 automatic cars: ಭಾರತದಲ್ಲಿ ಖರೀದಿಸಬಹುದಾದ 10 ಲಕ್ಷ ರೂಪಾಯಿ ಒಳಗಿನ ಟಾಪ್ 5 ಆಟೋಮೆಟಿಕ್ ಕಾರುಗಳಿವು

(despite petrol prices hike jp nagar petrol bunk allegedly mixes water with petrol)

Published On - 1:06 pm, Mon, 1 November 21

Follow Us
Web contact
Web contact

TV9 Kannada

Read More
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​