‘ನಾಚಿಕೆ, ಮಾನ, ಮರ್ಯಾದೆ ಇಲ್ವಾ?’: ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ವಾಗ್ದಾಳಿ

ರಾಜೀನಾಮೆ ಬೆದರಿಕೆ ಹಾಕಿದ ಶಾಸಕರ ತಾಲೂಕುಗಳನ್ನು ಮಾತ್ರ ಬರ ಪಟ್ಟಿಗೆ ಸೇರಿಸಲಾಗಿದೆ ಎಂದು ಆರೋಪಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ಆರೋಪ ವಿಚಾರ ಸಂಬಂಧವೂ ಕಿಡಿ ಕಾರಿರುವ ಅವರು, ಕೇಂದ್ರದ ಮೇಲೆ ಆರೋಪಿಸುವುದು ಬಿಟ್ರೆ ಏನೂ ಗೊತ್ತಿಲ್ಲ. ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವದಲ್ಲಿರುವುದೇ ಹೆಚ್ಚು ಎಂದಿದ್ದಾರೆ.

ನಾಚಿಕೆ, ಮಾನ, ಮರ್ಯಾದೆ ಇಲ್ವಾ?: ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ವಾಗ್ದಾಳಿ
ಪ್ರಹ್ಲಾದ್​ ಜೋಶಿ (ಫೈಲ್​​ ಚಿತ್ರ)
Image Credit source: Pralhad Joshi Facebook Page
Edited By:

Updated on: Sep 25, 2026 | 2:34 PM

ಬೆಂಗಳೂರು, ಸೆಪ್ಟೆಂಬರ್​​ 25: ರಾಜೀನಾಮೆ ಕೊಡ್ತೇನೆ ಎಂದ ಎಲ್ಲ ಶಾಸಕರ ತಾಲೂಕು ಬರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ವಿಪಕ್ಷದವರನ್ನು ಬಿಟ್ಟು ಎಲ್ಲಾ ಶಾಸಕರ ತಾಲೂಕು ಬರ ಪಟ್ಟಿಗೆ ಸೇರಿಸಿದ್ದಾರೆ. ನಾಚಿಕೆ, ಮಾನ ಮರ್ಯಾದೆ ಇಲ್ವಾ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಎಸ್​ಡಿಆರ್​ಎಫ್​ನಲ್ಲಿ ಹಣ ಇದೆ, ಯಾಕೆ ಬಿಡುಗಡೆ ಮಾಡ್ತಿಲ್ಲ ಎಂದೂ ಅವರು ಪ್ರಶ್ನಿಸಿದ್ದಾರೆ.

‘ಕೇಂದ್ರದ ಮೇಲೆ ಆರೋಪಿಸುವುದು ಬಿಟ್ರೆ ಏನೂ ಗೊತ್ತಿಲ್ಲ’

ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ಆರೋಪ ವಿಚಾರ ಸಂಬಂಧವೂ ಕಿಡಿ ಕಾರಿರುವ ಅವರು, ಕೇಂದ್ರದ ಮೇಲೆ ಆರೋಪಿಸುವುದು ಬಿಟ್ರೆ ಏನೂ ಗೊತ್ತಿಲ್ಲ. ದಿವಾಳಿ ಆಗಿದ್ದೇವೆ, ಕಾಂಟ್ರ್ಯಾಕ್ಟರ್​ಗೆ ಕೊಡೋಕೆ‌ ದುಡ್ಡಿಲ್ಲ ಅಂದವರ್ಯಾರು? ಮೊದಲು ಅದನ್ನ ಸರಿ ಮಾಡಿ. ದಿವಾಳಿ ಅನ್ನೋದು ಬಿಟ್ಟು ಆ ಪತ್ರದಲ್ಲಿ ಎಲ್ಲ ಹೇಳಿದ್ದಾರೆ. ದಿವಾಳಿ ಆಗಿರುವುದನ್ನು ಡೈವರ್ಟ್ ಮಾಡಲು ಹೀಗೆ ಹೇಳ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿಯೊಂದರಲ್ಲೂ ಭ್ರಷ್ಟಾಚಾರ, ಹಣ ಸೋರಿಕೆ ಆಗ್ತಿದೆ. ಪ್ರಮುಖ ಹುದ್ದೆಗಳು‌ ಹರಾಜು ಆಗ್ತಿವೆ. ಒಬ್ಬ ತಹಶೀಲ್ದಾರ್​ 50 ಲಕ್ಷ ಹಣ ಪಡೆದುಕೊಳ್ಳುತ್ತಾನೆ. ಆ ತಹಶೀಲ್ದಾರ್​​ರನ್ನ ಹಾಕಿದ್ದು ಯಾರು? ಆತ ಅಧಿಕಾರ ವಹಿಸಿಕೊಂಡು ಎರಡು ತಿಂಗಳಾಗಿದೆ ಅಷ್ಟೇ ಎಂದವರು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ‘ಈಗಲೂ ನಮಗೆ ಸಿದ್ದರಾಮಯ್ಯನವರೇ ಆರ್ಮಿ ಕ್ಯಾಪ್ಟನ್​’: ಮಾಜಿ ಸಿಎಂ ಜೊತೆಗಿನ ವೈಮನಸ್ಸೆಂಬ ವದಂತಿಗೆ ಸತೀಶ್​​ ಜಾರಕಿಹೊಳಿ ತೆರೆ

ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಕಾಂಗ್ರೆಸ್ ಪ್ರತಿಭಟನೆ ವಿಚಾರ ಸಂಬಂಧವೂ ಪ್ರತಿಕ್ರಿಯಿಸಿರುವ ಪ್ರಹ್ಲಾದ್​​ ಜೋಶಿ, ರಾಹುಲ್ ಗಾಂಧಿ‌ ಸುದ್ದಿಗೋಷ್ಠಿ ನೋಡಿದ್ದೀರಿ. ಮೋದಿ ಯಾಕೆ ಸೋಲಲ್ಲ ಅಂತ ಕೇಳ್ತಾರೆ. ಇಂತವರಿಗೆ ಏನು ಹೇಳೋದು? 1947-67 ತಮಿಳುನಾಡಿನಲ್ಲಿ ಕಾಂಗ್ರೆಸ್ ಇತ್ತು. ಪಶ್ಚಿಮ ಬಂಗಾಳದಲ್ಲಿ 1975ರಿಂದ ಐದು ಬಾರಿ ಗೆದ್ದಿದ್ರು. ಮೋದಿ ಹಳ್ಳಿ ಹಳ್ಳಿಗೆ, ಗಲ್ಲಿಗೆ ತಿರುಗಿದ್ರು. ರಾಹುಲ್ ಗಾಂಧಿ ಫಾರಿನ್‌ ತಿರುಗುತ್ತಿದ್ದರು. ಕಾಂಗ್ರೆಸ್ ಅಸ್ತಿತ್ವದಲ್ಲಿರುವುದೇ ಹೆಚ್ಚು ಎಂದವರು ಆರೋಪಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:32 pm, Fri, 25 September 26

Anil Kalkere
Loading...
Unable to load recommendations.
Follow Us