AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಈಗಲೂ ನಮಗೆ ಸಿದ್ದರಾಮಯ್ಯನವರೇ ಆರ್ಮಿ ಕ್ಯಾಪ್ಟನ್​’: ಮಾಜಿ ಸಿಎಂ ಜೊತೆಗಿನ ವೈಮನಸ್ಸೆಂಬ ವದಂತಿಗೆ ಸತೀಶ್​​ ಜಾರಕಿಹೊಳಿ ತೆರೆ

ಸಿದ್ದರಾಮಯ್ಯ ಈಗಲೂ ನಮಗೆ ಆರ್ಮಿ ಕ್ಯಾಪ್ಟನ್ ಇದ್ದಂತೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಜೊತೆಗಿನ ವೈಮನಸ್ಸಿನ ವದಂತಿಗಳನ್ನು ಸಚಿವ ಸತೀಶ್ ಜಾರಕಿಹೊಳಿ ತಳ್ಳಿಹಾಕಿದ್ದಾರೆ. 2028ಕ್ಕೂ ಡಿ.ಕೆ.ಶಿವಕುಮಾರ್​ರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ, ಅವರೇ ಮುಖ್ಯಮಂತ್ರಿ ಆಗಲಿ ಎಂದ ಅವರು, ತನ್ನ ಮೇಲೆ ನಡೆದ ಇಡಿ ದಾಳಿ ರಾಜಕೀಯ ಪ್ರೇರಿತ. ಎಲ್ಲವನ್ನೂ ತಾನು ರಾಜಕೀಯವಾಗಿ ಎದುರಿಸುತ್ತೇನೆ ಎಂದು ಹೇಳಿದ್ದಾರೆ.

'ಈಗಲೂ ನಮಗೆ ಸಿದ್ದರಾಮಯ್ಯನವರೇ ಆರ್ಮಿ ಕ್ಯಾಪ್ಟನ್​': ಮಾಜಿ ಸಿಎಂ ಜೊತೆಗಿನ ವೈಮನಸ್ಸೆಂಬ ವದಂತಿಗೆ ಸತೀಶ್​​ ಜಾರಕಿಹೊಳಿ ತೆರೆ
ಸತೀಶ್​​ ಜಾರಕಿಹೊಳಿ ಮತ್ತು ಸಿದ್ದರಾಮಯ್ಯImage Credit source: Tv9 Kannada
ರಾಮ್​, ಮೈಸೂರು
| Edited By: |

Updated on: Sep 25, 2026 | 12:57 PM

Share

ಮೈಸೂರು, ಸೆಪ್ಟೆಂಬರ್​​ 25: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಸತೀಶ್​​ ಜಾರಕಿಹೊಳಿ ನಡುವೆ ವೈಮನಸ್ಸು ಉಂಟಾಗಿದೆ ಎಂಬ ಊಹಾಪೋಹಗಳ ನಡುವೆ ಸಿದ್ದರಾಮಯ್ಯ ಆರ್ಮಿ ಛಿದ್ರವಾಗಿಲ್ಲ. ಅವರು ಈಗಲೂ ನಮಗೆ ಆರ್ಮಿ ಕ್ಯಾಪ್ಟನ್​. ನಾನು ಅದರ ವೈಸ್​ ಕ್ಯಾಪ್ಟನ್​, ಯಾರಿಗೂ ಅನುಮಾನ ಬೇಡ ಎಂದು ಸತೀಶ್​ ಜಾರಕಿಹೊಳಿ ಅವರೇ ತಿಳಿಸಿದ್ದಾರೆ. ನಾನು, ಸಿದ್ದರಾಮಯ್ಯ ಚೆನ್ನಾಗಿಯೇ ಇದ್ದೇವೆ‌. ನಾವು ಹಿಂದೆಯೂ ಪ್ರತಿ ಬಾರಿ ಭೇಟಿಯಾಗುತ್ತಿರಲಿಲ್ಲ, ಅವಶ್ಯಕತೆ ಇದ್ದಾಗ ಮೀಟ್​​ ಆಗುತ್ತಿದ್ದೆವು ಎಂದು ಹೇಳುವ ಮೂಲಕ ಎಲ್ಲ ಗಾಳಿ ಸುದ್ದಿಗಳಿಗೆ ಅವರು ತೆರೆ ಎಳೆದಿದ್ದಾರೆ.

ಇಡಿ ದಾಳಿ ನಂತರ ಯತೀಂದ್ರ ನನ್ನನ್ನು ಭೇಟಿಯಾಗಿದ್ದರು. ಮನೆಯಲ್ಲಿ ಒಬ್ಬರು ಸಾಂತ್ವನ ಹೇಳಿದ್ದಾರೆ, ಅದೇ ಸಾಕು. ಮನೆಯಲ್ಲಿ ಎಲ್ಲರೂ ಸಾಂತ್ವನ ಹೇಳಬೇಕೆಂದು ಬಯಸಬಾರದು. ಮದುವೆ, ಗೃಹ ಪ್ರವೇಶಕ್ಕೆ ಮನೆಯಿಂದ ಒಬ್ಬರು ಹೋಗುತ್ತಾರೆ. ಎಲ್ಲರೂ ಬರಬೇಕೆಂದು ನಿರೀಕ್ಷೆ ಮಾಡಿದರೆ ಹೇಗೆ? ಎಂದು ಸತೀಶ್​​ ಪ್ರಶ್ನಿಸಿದ್ದಾರೆ. ಮೊನ್ನೆ ಬೆಂಗಳೂರಿನಲ್ಲಿ ನಡೆದಿದ್ದು ಅಹಿಂದ ಸಮಾವೇಶ ಅಲ್ಲ. ಅದು ಹಿಂದುಳಿದವರ ಸಮಾವೇಶ. ಸಮಾವೇಶ ಆಯೋಜನೆ ಮಾಡಿದವರು ನನ್ನನ್ನು ಕರೆದಿಲ್ಲ. ಹೀಗಿರುವಾಗ ಯಾಕೆ ನನ್ನನ್ನು ಕರೆದಿಲ್ಲ ಎಂದು ಕೇಳುವುದಕ್ಕೆ ಆಗುತ್ತಾ? ಅಹಿಂದ ಸಂಘಟನೆ ಭದ್ರವಾಗಿದೆ ಎಂದು ಸತೀಶ್​​ ತಿಳಿಸಿದ್ದಾರೆ.

ಇದನ್ನೂ ಓದಿ: ಅಹಿಂದ ಯಾರ ಆಸ್ತಿಯೂ ಅಲ್ಲ ಎಂದ ಸಚಿವ ಸತೀಶ್ ಜಾರಕಿಹೊಳಿ

‘2028ಕ್ಕೂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿ’

2028ಕ್ಕೂ ಡಿ.ಕೆ.ಶಿವಕುಮಾರ್​ರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ, ಅವರೇ ಮುಖ್ಯಮಂತ್ರಿ ಆಗಲಿ. ತನಗೆ ಇನ್ನೂ ವಯಸ್ಸಿದೆ, ಇನ್ನೂ ಕಾಯುತ್ತೇನೆ. ಅವಕಾಶ ಸಿಕ್ಕರೆ 2028ಕ್ಕೆ ಸಿಎಂ ಆಗುತ್ತೇನೆ ಎಂದಿದ್ದೆ. ಆದರೆ ಡಿಕೆಶಿ ಅವರು ಮುಂದೆಯೂ ನಾನೇ ಸಿಎಂ ಅಂತಿದ್ದಾರೆ. ಸಂತೋಷ ನನಗೆ ಅವರೇ ಸಿಎಂ ಆಗಲಿ, ನಾವು ಕಾಯ್ತೇವೆ ಎಂದು ಸತೀಶ್​​ ಹೇಳಿದ್ದಾರೆ.

‘ಆರ್ಥಿಕ ಇಲಾಖೆ ಪತ್ರದ ಅರ್ಥ ಸರ್ಕಾರ ದಿವಾಳಿ ಅಂತಲ್ಲ’

ಆರ್ಥಿಕ ಇಲಾಖೆ ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂದಿಲ್ಲ. ಬಜೆಟ್​ನಲ್ಲಿ ನಾವು ಏನು ಘೋಷಣೆ ಮಾಡಿದ್ದೇವೋ ಅಷ್ಟಕ್ಕೆ ಮಾತ್ರ ನಮ್ಮ ಬಳಿ ಹಣ ಇದೆ ಎಂದು ಇಲಾಖೆ ಹೇಳಿದೆ. ಹೊಸ ಘೋಷಣೆಗೆ ಹಣ ಹೊಂದಿಸುವುದು ಕಷ್ಟ ಎಂದಿದೆ. ಇದನ್ನು ಎಲ್ಲಾ ಸರ್ಕಾರಕ್ಕೂ ಆರ್ಥಿಕ ಇಲಾಖೆ ಹೇಳುತ್ತೆ. ಯೋಚನೆ ಮಾಡಿ ಹೊಸ ಘೋಷಣೆ ಮಾಡಿ ಎಂದು ತಿಳಿಸಿದ್ದು, ಅದನ್ನು‌ ನಾವು ಗಮನಿಸುತ್ತೇವೆ. ಕೆಲವೊಂದು ಇಲಾಖೆಗಳಲ್ಲಿ ಹಣ ವೆಚ್ಚವಾಗುವುದಿಲ್ಲ. ಆ ಹಣವನ್ನು ಹೊಸ ಘೋಷಣೆಗಳಿಗೆ ಬಳಸುತ್ತೇವೆ ಎಂದವರು ತಿಳಿಸಿದ್ದಾರೆ.

‘ಇಡಿ ದಾಳಿ ರಾಜಕೀಯ ಪ್ರೇರಿತ

ಇದೇ ವೇಳೆ ಇಡಿ ದಾಳಿ ಬಗ್ಗೆಯೂ ಪ್ರತಿಕ್ರಿಯಿಸಿರುವ ಸತೀಶ್​​ ಜಾರಕಿಹೊಳಿ, ತನ್ನ ಮೇಲೆ ನಡೆದ ಇಡಿ ದಾಳಿ ರಾಜಕೀಯ ಪ್ರೇರಿತ. ಯಾವುದೇ ಕ್ಷಣದಲ್ಲಿ ತನಗೆ ನೋಟಿಸ್ ಬರಬಹುದು. ಇಡಿಯಿಂದ ನೋಟಿಸ್ ಬಂದೇ ಬರುತ್ತದೆ. ಬಂದಾಗ ಹೋಗಿ ನೋಟಿಸ್​​ಗೆ ಉತ್ತರ ಕೊಡುತ್ತೇನೆ. ವಿದೇಶದಲ್ಲಿನ ಹೂಡಿಕೆ ಬಗ್ಗೆ ED ಎದುರು ಉತ್ತರಿಸ್ತೇನೆ. ಯಾವುದೋ ಕಮಿಷನ್ ವಿಚಾರಕ್ಕೆ ದಾಳಿಯಾಗಿದ್ಯಾ, ಬೇರೆ ವಿಚಾರಕ್ಕೆ ದಾಳಿಯಾಗಿದೆಯೋ ಇಡಿಗೆ ಹೇಳ್ತೇನೆ. 14 ವರ್ಷಗಳಿಂದ ಬಿಜೆಪಿ, ಮಿತ್ರಪಕ್ಷಗಳ ಮೇಲೆ ದಾಳಿ ಆಗಿಲ್ಲ. ಇಡಿ ದಾಳಿಯಿಂದ‌ ನಾನೇನು ಮಾನಸಿಕವಾಗಿ ಕುಗ್ಗಿಲ್ಲ, ಎಲ್ಲವನ್ನೂ ತಾನು ರಾಜಕೀಯವಾಗಿ ಎದುರಿಸುತ್ತೇನೆ ಎಂದು ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ರಾಮ್​, ಮೈಸೂರು
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
ಜನರ ನಡುವೆ ಬೆರೆಯಿರಿ, ಭಾರತದ ವೈವಿಧ್ಯತೆಯನ್ನು ಹತ್ತಿರದಿಂದ ಅರಿಯಿರಿ: ಮೋದಿ
ಜನರ ನಡುವೆ ಬೆರೆಯಿರಿ, ಭಾರತದ ವೈವಿಧ್ಯತೆಯನ್ನು ಹತ್ತಿರದಿಂದ ಅರಿಯಿರಿ: ಮೋದಿ
ಕರ್ನಾಟಕದ ಖಾಸಗಿ ಕಂಪನಿಯ ನೇಮಕಾತಿ ನೀತಿಗೆ ಬಿಜೆಪಿ ಆಕ್ಷೇಪ
ಕರ್ನಾಟಕದ ಖಾಸಗಿ ಕಂಪನಿಯ ನೇಮಕಾತಿ ನೀತಿಗೆ ಬಿಜೆಪಿ ಆಕ್ಷೇಪ
ನಕಲಿ ಪನೀರ್‌ ಹಾವಳಿಗೆ ಬ್ರೇಕ್ ಹಾಕಲು FSSAI ಬಿಗ್ ಪ್ಲಾನ್
ನಕಲಿ ಪನೀರ್‌ ಹಾವಳಿಗೆ ಬ್ರೇಕ್ ಹಾಕಲು FSSAI ಬಿಗ್ ಪ್ಲಾನ್
ವೀಕೆಂಡ್ ಎಪಿಸೋಡ್​ನಲ್ಲಿ ಮತ್ತಿಬ್ಬರು ಹೊರ ಹೋಗ್ತಾರೆ; ಬಿಗ್ ಬಾಸ್ ಸೂಚನೆ
ವೀಕೆಂಡ್ ಎಪಿಸೋಡ್​ನಲ್ಲಿ ಮತ್ತಿಬ್ಬರು ಹೊರ ಹೋಗ್ತಾರೆ; ಬಿಗ್ ಬಾಸ್ ಸೂಚನೆ
ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀವ್ರ ಕುಸಿತ
ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀವ್ರ ಕುಸಿತ
ವಿಶ್ವಸಂಸ್ಥೆಯಲ್ಲಿ ಹಫೀಜ್ ಸಯೀದ್ ಪ್ರಶ್ನೆಗೆ ಮುಖ ತಿರುಗಿಸಿದ ಪಾಕ್ ಪಿಎಂ
ವಿಶ್ವಸಂಸ್ಥೆಯಲ್ಲಿ ಹಫೀಜ್ ಸಯೀದ್ ಪ್ರಶ್ನೆಗೆ ಮುಖ ತಿರುಗಿಸಿದ ಪಾಕ್ ಪಿಎಂ
ಬಿಜೆಪಿ ನಾಯಕಿ ಮಾಧವಿ ಲತಾಗೆ ಬಾಗಲಕೋಟೆ ಪ್ರವೇಶಕ್ಕೆ ನಿರ್ಬಂಧ
ಬಿಜೆಪಿ ನಾಯಕಿ ಮಾಧವಿ ಲತಾಗೆ ಬಾಗಲಕೋಟೆ ಪ್ರವೇಶಕ್ಕೆ ನಿರ್ಬಂಧ
ಧಾರಾಕಾರ ಮಳೆಗೆ ನಡುಗಿದ ಸಿಕ್ಕಿಂ, ರಿಂಬಿ ಗ್ರಾಮದಲ್ಲಿ ಭೂಕುಸಿತ
ಧಾರಾಕಾರ ಮಳೆಗೆ ನಡುಗಿದ ಸಿಕ್ಕಿಂ, ರಿಂಬಿ ಗ್ರಾಮದಲ್ಲಿ ಭೂಕುಸಿತ
ಇಂದು ಅನಂತ ಪದ್ಮನಾಭ ವ್ರತ ಆಚರಣೆಯಿಂದ ಐಶ್ವರ್ಯ ಮತ್ತು ಯಶಸ್ಸು ಲಭ್ಯ
ಇಂದು ಅನಂತ ಪದ್ಮನಾಭ ವ್ರತ ಆಚರಣೆಯಿಂದ ಐಶ್ವರ್ಯ ಮತ್ತು ಯಶಸ್ಸು ಲಭ್ಯ
ಭಾರೀ ಭೂಕುಸಿತ, ತಡೆಗೋಡೆ ಕುಸಿತದಿಂದ ಒಡಿಶಾದ ಕಳಿಂಗ ಘಾಟ್ ರಸ್ತೆ ಬಂದ್
ಭಾರೀ ಭೂಕುಸಿತ, ತಡೆಗೋಡೆ ಕುಸಿತದಿಂದ ಒಡಿಶಾದ ಕಳಿಂಗ ಘಾಟ್ ರಸ್ತೆ ಬಂದ್