AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೆಮ್​ಡೆಸಿವರ್​ ಬೇಕೋ? ಬೇಡವೋ? ವೈದ್ಯರಲ್ಲೇ ಭಿನ್ನಾಭಿಪ್ರಾಯ, ಒಬ್ರು ಬೇಡ ಅಂತಾರೆ, ಇನ್ನೊಬ್ರು ಜೀವ ರಕ್ಷಕ ಅಂತಾರೆ

ರೆಮ್​ಡೆಸಿವಿರ್ ಬಳಕೆಗೆ ಸಹಮತ ವ್ಯಕ್ತಪಡಿಸುವವರ ಬಗ್ಗೆ ಗಂಭೀರ ಆರೋಪಗಳೂ ಇದ್ದು, ಇದೆಲ್ಲಾ ಹಣಕ್ಕಾಗಿ ಮಾಡುತ್ತಿರುವುದು ಎಂದು ಕೆಲವರು ದೂಷಿಸುತ್ತಾರೆ. ಕೊವಿಡ್​ ಅಲ್ಲದೇ ನ್ಯುಮೋನಿಯಾ ರೋಗಿಗಳಿಗೂ ರೆಮ್​ಡೆಸಿವಿರ್​ ನೀಡಲು ಹೇಳುತ್ತಿರುವುದು ಕೇವಲ ಹಣದ ದೃಷ್ಟಿಯಿಂದ ಎಂಬ ಮಾತುಗಳು ಕೇಳಿಬರುತ್ತಿವೆ.

ರೆಮ್​ಡೆಸಿವರ್​ ಬೇಕೋ? ಬೇಡವೋ? ವೈದ್ಯರಲ್ಲೇ ಭಿನ್ನಾಭಿಪ್ರಾಯ, ಒಬ್ರು ಬೇಡ ಅಂತಾರೆ, ಇನ್ನೊಬ್ರು ಜೀವ ರಕ್ಷಕ ಅಂತಾರೆ
ರೆಮ್​ಡೆಸಿವಿರ್ ಇಂಜೆಕ್ಷನ್ (ಪ್ರಾತಿನಿಧಿಕ ಚಿತ್ರ)
Skanda
| Updated By: preethi shettigar|

Updated on: May 01, 2021 | 10:43 AM

Share

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆಯಿಂದಾಗಿ ಸೋಂಕಿತರ ಸಂಖ್ಯೆ ನಿರೀಕ್ಷೆಗಿಂತಲೂ ಅತ್ಯಧಿಕ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಈ ಬಾರಿ ಸೋಂಕಿನಿಂದ ಗಂಭೀರಾವಸ್ಥೆಗೆ ತಲುಪಿದವರನ್ನು ಬಚಾಯಿಸುವುದೇ ವೈದ್ಯರಿಗೆ ಬಹುದೊಡ್ಡ ಸವಾಲಾಗಿದ್ದು, ವೈದ್ಯಕೀಯ ಸೌಲಭ್ಯಗಳ ಕೊರತೆಯೂ ತಲೆದೋರಿದ ಕಾರಣ ಮರಣ ಪ್ರಮಾಣವೂ ಆತಂಕ ಮೂಡಿಸಿದೆ. ಏತನ್ಮಧ್ಯೆ, ಕೊರೊನಾ ಸೋಂಕಿತರಿಗೆ ಜೀವರಕ್ಷಕ ಎಂದು ಬಿಂಬಿತವಾಗಿರುವ ರೆಮ್​ಡೆಸಿವಿರ್ ಆ್ಯಂಟಿ ವೈರಲ್ ಇಂಜೆಕ್ಷನ್ ಬಗ್ಗೆ ವೈದ್ಯರಲ್ಲೇ ಹಲವು ಗೊಂದಲಗಳಿದ್ದು ಕೆಲವರು ರೆಮ್​ಡೆಸಿವಿರ್ ಅವಶ್ಯಕತೆಯೇ ಇಲ್ಲ ಎಂದರೆ, ಇನ್ನು ಕೆಲವರು ಕೊವಿಡ್​ಗೆ ಮಾತ್ರವಲ್ಲದೇ, ನ್ಯುಮೋನಿಯಾ ರೋಗಿಗಳಿಗೂ ರೆಮ್​ಡೆಸಿವಿರ್​ ಬರೆದುಕೊಡುತ್ತಿದ್ದಾರೆ. ವೈದ್ಯರ ಈ ನಡೆಯಿಂದ ರೋಗಿಗಳು ಹಾಗೂ ಅವರ ಕುಟುಂಬಸ್ಥರು ಸಹಜವಾಗಿ ಗೊಂದಲಕ್ಕೀಡಾಗಿದ್ದಾರೆ.

ರೆಮ್​ಡೆಸಿವಿರ್​ ಬಳಕೆ ಬಗ್ಗೆ ಮಾತನಾಡುವ ಕೆಲ ವೈದ್ಯರು, ಇದು ಮೊದಲ ಅಲೆಯಲ್ಲಿ ನಿಸ್ಸಂದೇಹವಾಗಿ ಹಲವರ ಜೀವ ಉಳಿಸಿದೆ. ಆದರೆ, ಈ ಬಾರಿ ಸೋಂಕಿತರನ್ನು ಗುಣಪಡಿಸುವಲ್ಲಿ ಅಷ್ಟು ಪರಿಣಾಮಕಾರಿ ಎನಿಸುತ್ತಿಲ್ಲ. ಬಹುಮುಖ್ಯವಾಗಿ ಸರ್ಕಾರವೇ ಕಳೆದ ಬಾರಿ ರೆಮ್​ಡೆಸಿವಿರ್​ ಬಗ್ಗೆ ಹೆಚ್ಚು ಒತ್ತು ನೀಡಿತ್ತು. ಅದರಿಂದಾಗಿ ಜನರಿಗೆ ರೆಮ್​ಡೆಸಿವಿರ್ ಜೀವರಕ್ಷಕ ಎಂಬ ಭಾವನೆ ಬೇರೂರಿದೆ. ಈಗ ರೆಮ್​ಡೆಸಿವಿರ್ ಉಪಯೋಗಕ್ಕೆ ಬರುವುದಿಲ್ಲ ಎಂದರೆ ಜನರು ವೈದ್ಯರ ಮೇಲೆಯೇ ಅನುಮಾನ ಪಡುತ್ತಾರೆ. ಎರಡನೇ ಅಲೆಯ ಸೋಂಕು ವಿಭಿನ್ನವಾಗಿ ವರ್ತಿಸುತ್ತಿರುವುದರಿಂದ ರೆಮ್​ಡೆಸಿವಿರ್​ ಚುಚ್ಚುಮದ್ದನ್ನೇ ನಂಬಿಕೊಂಡಿರಲು ಸಾಧ್ಯವಿಲ್ಲ ಎನ್ನುತ್ತಾರೆ.

ಆದರೆ, ಇನ್ನು ಕೆಲ ವೈದ್ಯರು ಕೊರೊನಾ ಸೋಂಕಿನಿಂದ ಉಸಿರಾಟದ ಸಮಸ್ಯೆಗೆ ತುತ್ಥಾಗಿ ಗಂಭೀರ ಸ್ಥಿತಿ ತಲುಪಿದವರಿಗೆ ರೆಮ್​ಡೆಸಿವಿರ್ ಅನಿವಾರ್ಯ. ಕೆಲವರು ಸ್ಟಿರಾಯ್ಡ್ ಬಳಸುವಂತೆ ಸೂಚನೆ ನೀಡುತ್ತರಾದರೂ ಅದು ಮಧುಮೇಹದ ಮಟ್ಟವನ್ನು ಏರಿಳಿತ ಮಾಡುವುದರಿಂದ ಅಷ್ಟೊಂದು ಸುರಕ್ಷಿತವಲ್ಲ ಎನ್ನುವ ಮೂಲಕ ರೆಮ್​ಡೆಸಿವಿರ್ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಇದಕ್ಕೆ ವ್ಯತಿರಿಕ್ತವಾಗಿ ರೆಮ್​ಡೆಸಿವಿರ್ ಬಳಕೆಗೆ ಸಹಮತ ವ್ಯಕ್ತಪಡಿಸುವವರ ಬಗ್ಗೆ ಗಂಭೀರ ಆರೋಪಗಳೂ ಇದ್ದು, ಇದೆಲ್ಲಾ ಹಣಕ್ಕಾಗಿ ಮಾಡುತ್ತಿರುವುದು ಎಂದು ಕೆಲವರು ದೂಷಿಸುತ್ತಾರೆ. ಕೊವಿಡ್​ ಅಲ್ಲದೇ ನ್ಯುಮೋನಿಯಾ ರೋಗಿಗಳಿಗೂ ರೆಮ್​ಡೆಸಿವಿರ್​ ನೀಡಲು ಹೇಳುತ್ತಿರುವುದು ಕೇವಲ ಹಣದ ದೃಷ್ಟಿಯಿಂದ ಎಂಬ ಮಾತುಗಳು ಕೇಳಿಬರುತ್ತಿವೆ. ವೈದ್ಯರ ನಡುವೆಯೇ ಇರುವ ಈ ಭಿನ್ನಾಭಿಪ್ರಾಯಗಳಿಂದಾಗಿ ಜನರಲ್ಲಿ ಯಾರನ್ನು ನಂಬಬೇಕು, ಯಾರು ಸತ್ಯ ಹೇಳುತ್ತಿದ್ದಾರೆ, ಯಾರು ಮೋಸ ಮಾಡುತ್ತಿದ್ದಾರೆ ಎಂಬ ಗೊಂದಲ ಮೂಡಿದೆ.

ಇದನ್ನೂ ಓದಿ: Covid Helpline Numbers: ಆಕ್ಸಿಜನ್​, ರೆಮ್​ಡೆಸಿವರ್​ ಬೇಕಾದಲ್ಲಿ ಈ ಸಂಖ್ಯೆಗಳನ್ನು ಸಂಪರ್ಕಿಸಿ 

25 ಮಂದಿಗೆ ರೆಮ್​ಡೆಸಿವರ್​ಗೆ ವೈದ್ಯರ ಸೂಚನೆ; ಬೆಂಗಳೂರಿನ ಕಿಮ್ಸ್ ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರೋಶ

ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ