AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಡೇಂಜರ್ಸ್ ದುಬೈಗಿಡ: ಕೋನೋ ಕಾರ್ಪಸ್ ಮನುಷ್ಯನಿಗೆ ಎಷ್ಟು ಡೇಂಜರ್ ಗೊತ್ತಾ?

ಸುಪ್ರೀಂಕೋರ್ಟ್ ಸೂಚನೆ ನೀಡಿದರೂ ರಾಜ್ಯ ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ನಿಷೇಧಿತ ಡೇಂಜರ್​​ ದುಬೈ ಗಿಡ ಬೆಳೆಸಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಈ ನಡೆಗೆ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಗಿಡಗಳನ್ನ ತೆರವು ಮಾಡುವಂತೆ ಆಗ್ರಹಿಸಿದ್ದಾರೆ. ಹಾಗಾದರೆ ಈ ದುಬೈ ಗಿಡದಿಂದ ಮನುಷ್ಯರಿಗೆ ಹೇಗೆ ಹಾನಿ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರಿನಲ್ಲಿ ಡೇಂಜರ್ಸ್ ದುಬೈಗಿಡ: ಕೋನೋ ಕಾರ್ಪಸ್ ಮನುಷ್ಯನಿಗೆ ಎಷ್ಟು ಡೇಂಜರ್ ಗೊತ್ತಾ?
ದುಬೈ ಗಿಡ
ಶಾಂತಮೂರ್ತಿ
ಶಾಂತಮೂರ್ತಿ | Edited By: |

Updated on:Oct 13, 2025 | 5:00 PM

Share

ಬೆಂಗಳೂರು, ಅಕ್ಟೋಬರ್​ 13: ರಾಜಧಾನಿಯ ರಸ್ತೆಗಳಲ್ಲಿ ನಿಷೇಧಿತ ಕೋನೋ ಕಾರ್ಪಸ್ (conocarpus plants) (ದುಬೈ ಗಿಡ) ಬೆಳೆಸಲಾಗುತ್ತಿದೆ. ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಈ ದುಬೈ ಗಿಡವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ನೆಟ್ಟು ಪೋಷಿಸುತ್ತಿರುವ ಆರೋಪಗಳು ಕೇಳಿಬಂದಿವೆ. ಪರಿಸರ ಪ್ರಿಯರು ಕಳೆದ ವರ್ಷ ಈ ಗಿಡದ ಬಗ್ಗೆ ದೂರು ಸಲ್ಲಿಸಿದ್ದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬೆಂಗಳೂರಿನ ರಸ್ತೆಗಳಲ್ಲಿ ನಿಷೇಧಿತ ದುಬೈ ಗಿಡವನ್ನು ಬೆಳೆಸಿ ಸೈಲೆಂಟ್​ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆಂಧ್ರ, ಗುಜರಾತ್, ತೆಲಂಗಾಣದಲ್ಲಿ ಈಗಾಗಲೇ ಈ ಡೇಂಜರ್​ ಗಿಡವನ್ನು ಬ್ಯಾನ್​ ಮಾಡಲಾಗಿದೆ. ಆದರೆ ವರ್ಷ ಕಳೆದರೂ ಬೆಂಗಳೂರಿನ ರಸ್ತೆಗಳಲ್ಲಿ ತೆರವಾಗಿಲ್ಲ. ಒಟ್ಟು 5500 ದುಬೈ ಗಿಡಗಳನ್ನ ತನ್ನ ವ್ಯಾಪ್ತಿಯಲ್ಲಿ ಜಿಬಿಎ ಬೆಳೆಸಿದೆ. ನಿರ್ವಹಣೆ ಸುಲಭ ಎಂದು ಇದೇ ಗಿಡಗಳ ಪೋಷಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: 4 ವರ್ಷಗಳ ಕಾಲ ಖಿನ್ನತೆಗೆ ಒಳಗಾಗಿದ್ದ ಬೆಂಗಳೂರು ಮೂಲದ ವ್ಯಕ್ತಿ, ಅದರಿಂದ ಹೊರಬಂದದ್ದು ಹೇಗೆ ಗೊತ್ತಾ?

ಈಗಾಗಲೇ ಬೆಂಗಳೂರಿನ ರಸ್ತೆಗಳಲ್ಲಿ ದುಬೈ ಗಿಡ ಆಳೆತ್ತರ ಬೆಳೆದು ನಿಂತಿವೆ. ಈ ದುಬೈ ಗಿಡ ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತೆ ಎನ್ನಲಾಗುತ್ತಿದೆ. ಅಸ್ತಮಾ, ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಅಷ್ಟೇ ಅಲ್ಲದೆ ಈ ಡೇಂಜರ್ ಟ್ರೀ ಆಕ್ಸಿಜನ್ ಬದಲು ಕಾರ್ಬನ್ ಡೈಆಕ್ಸೈಡ್ ರಿಲೀಸ್ ಮಾಡುತ್ತದೆ.

ಗಿಡ ತೆರವಿಗೆ ಪರಿಸರ ಪ್ರೇಮಿಗಳ ಆಗ್ರಹ

ಸದ್ಯ ರಾಜಧಾನಿಯ ರಸ್ತೆಗಳಲ್ಲಿ ಬೆಳೆಸಿರುವ ಈ ದುಬೈ ಗಿಡ ತೆರವಿಗೆ ಪರಿಸರ ಪ್ರೇಮಿಗಳಿಂದ ಆಗ್ರಹಿಸಲಾಗಿದೆ. ಇತ್ತ ದುಬೈ ಗಿಡ ಬೆಳೆಯದಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಆದರೂ ರಾಜಧಾನಿಯಲ್ಲಿ ಈವರೆಗೆ  ತೆರವಾಗಿಲ್ಲ.

ಸೂಚನೆ ಬಂದ ಮೇಲೆ ಮುಂದಿನ ಕ್ರಮ

ಇನ್ನು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ, ಸರ್ಕಾರದ ಸೂಚನೆ ಬಂದ ಮೇಲೆ ಮುಂದಿನ ಕ್ರಮ ಎನ್ನುತ್ತಿದ್ದಾರೆ. ಸುಪ್ರೀಂಕೋರ್ಟ್ ಸೂಚನೆ ನೀಡಿದೆ, ಇಲ್ಲಿ ಸೂಚನೆ ಬಂದರೆ ಕ್ರಮಕೈಗೊಳ್ಳುತ್ತೇವೆ  ಎಂದು ಜಿಬಿಎ ಅಧಿಕಾರಿಗಳು ಹೇಳಿದ್ದಾರೆ.

ಕೋನೋಕಾರ್ಪಸ್ ಏಕೆ ಡೇಂಜರ್?

  • ಈ ಗಿಡ ಆಕ್ಸಿಜನ್ ಬದಲು ಕಾರ್ಬನ್ ಬಿಡುಗಡೆ ಮಾಡುತ್ತೆ
  • ಇದರ ಸುತ್ತಮುತ್ತ ವಾಸಿಸುವ ಜನರಿಗೆ ಅಸ್ತಮಾ, ಉಸಿರಾಟ ಸಮಸ್ಯೆ ಬರುತ್ತೆ
  • ಬೇರುಗಳಿಂದ ಪೈಪ್ ಲೈನ್​ಗಳಿಗೆ ಹಾನಿ ಮಾಡುತ್ತದೆ
  • ಅಂತರ್ಜಲ ಮಟ್ಟ ಕುಸಿಯುವಂತೆ ಮಾಡುವ ಸಾಧ್ಯತೆ
  • ಅತಿಹೆಚ್ಚು ಆಳದಲ್ಲಿ ಬೇರು ಬಿಡುವುದರಿಂದ ಅಕ್ಕಪಕ್ಕದ ಮರಗಿಡಗಳಿಗೆ ಸಮಸ್ಯೆ ಉಂಟು ಮಾಡುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:58 pm, Mon, 13 October 25

Follow Us
ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ಸೇತುವೆ ಕುಸಿತ; 10 ಜನರಿಗೆ ಗಾಯ
ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ಸೇತುವೆ ಕುಸಿತ; 10 ಜನರಿಗೆ ಗಾಯ
ಮಂಗಳೂರಿಗೆ ಬಂದ ಶಾರುಖ್ ಖಾನ್, ಬಾದ್​​ಶಾನ ನೋಡಲು ಮುಗಿಬಿದ್ದ ಜನ
ಮಂಗಳೂರಿಗೆ ಬಂದ ಶಾರುಖ್ ಖಾನ್, ಬಾದ್​​ಶಾನ ನೋಡಲು ಮುಗಿಬಿದ್ದ ಜನ
ಅಂಗಡಿ ಗೋಡೆ ಕೊರೆದು 10 ಕೆಜಿ ಬೆಳ್ಳಿ ಕಳ್ಳತನ ಕೇಸ್​​: ಯುವಕ ಅರೆಸ್ಟ್
ಅಂಗಡಿ ಗೋಡೆ ಕೊರೆದು 10 ಕೆಜಿ ಬೆಳ್ಳಿ ಕಳ್ಳತನ ಕೇಸ್​​: ಯುವಕ ಅರೆಸ್ಟ್
33 ಕ್ರಸ್ಟ್ ಗೇಟ್ ಚೇಂಜ್ ಮಾಡಿ ಉದ್ಘಾಟಿಸಿದ್ದು ನನ್ನ ಭಾಗ್ಯ: ಡಿಕೆಶಿ
33 ಕ್ರಸ್ಟ್ ಗೇಟ್ ಚೇಂಜ್ ಮಾಡಿ ಉದ್ಘಾಟಿಸಿದ್ದು ನನ್ನ ಭಾಗ್ಯ: ಡಿಕೆಶಿ
ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ವೈಶಾಖ್ ಸಾವು, ಆಪ್ತ ಗೆಳೆಯ ಹೇಳಿದ್ದೇನು?
ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ವೈಶಾಖ್ ಸಾವು, ಆಪ್ತ ಗೆಳೆಯ ಹೇಳಿದ್ದೇನು?
ಜೂ 28ರಂದು ರಾಷ್ಟ್ರೀಯ ಲಸಿಕಾ ದಿನ: ಚಿಕ್ಕ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ
ಜೂ 28ರಂದು ರಾಷ್ಟ್ರೀಯ ಲಸಿಕಾ ದಿನ: ಚಿಕ್ಕ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ
ಮುತ್ತತ್ತಿ ದುರಂತ: ಕೊನೇ ಕ್ಷಣದ ವಿಡಿಯೋ ವೈರಲ್
ಮುತ್ತತ್ತಿ ದುರಂತ: ಕೊನೇ ಕ್ಷಣದ ವಿಡಿಯೋ ವೈರಲ್
ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಂದ ಕ್ರಸ್ಟ್ ಗೇಟ್‌ಗಳು ಲೋಕಾರ್ಪಣೆ
ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಂದ ಕ್ರಸ್ಟ್ ಗೇಟ್‌ಗಳು ಲೋಕಾರ್ಪಣೆ
ಸಾಯುವುದಕ್ಕೂ ಮೊದಲು ಕೃಷಿ ತಾಪಂಡಗೆ ವೈಶಾಕ್ ಕಳುಹಿಸಿದ ಸಂದೇಶ ಏನು?
ಸಾಯುವುದಕ್ಕೂ ಮೊದಲು ಕೃಷಿ ತಾಪಂಡಗೆ ವೈಶಾಕ್ ಕಳುಹಿಸಿದ ಸಂದೇಶ ಏನು?
ಪಠ್ಯದಲ್ಲಿ ಕೇಸರೀಕರಣ ವಿವಾದ: ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕಿಡಿ
ಪಠ್ಯದಲ್ಲಿ ಕೇಸರೀಕರಣ ವಿವಾದ: ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕಿಡಿ