ಬೆಂಗಳೂರಿನಲ್ಲಿ ಇಂಗ್ಲಿಷ್​ ಬೋರ್ಡ್​ಗಳು ಪೀಸ್​ ಪೀಸ್​: ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ

ಏರ್ ಪೋರ್ಟ್ ರಸ್ತೆಯಿಂದ ಬೆಂಗಳೂರಿಗೆ ಬರುವ ಮಾರ್ಗ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಚಿಕ್ಕಜಾಲ ಲೈಫ್ ಕೇರ್ ಆಸ್ಪತ್ರೆ ಬೋರ್ಡ್​ನ್ನು ಕಾರ್ಯಕರ್ತರು ಹಾನಿಗೊಳಿಸಿದ್ದಾರೆ. ಅಂಗಡಿ ಮುಂಗಟ್ಟುಗಳ ಮುಂಭಾಗದ ಇಂಗ್ಲಿಷ್ ಫ್ಲೆಕ್ಸ್ ಹರಿದಿದ್ದು, ಮಳಿಗೆಗಳಿಗೆ ಕಲ್ಲು ತೂರಾಟ ಮಾಡಲಾಗಿದೆ.

Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Dec 27, 2023 | 3:06 PM

ಬೆಂಗಳೂರು, ಡಿಸೆಂಬರ್​​ 27: ಫಲಕಗಳಲ್ಲಿ ಕಡ್ಡಾಯ ಕನ್ನಡ ಬಳಕೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (Karave) ಕಾರ್ಯಕರ್ತರಿಂದ ಅಭಿಯಾನ ಮಾಡಲಾಗುತ್ತಿದೆ. ನಗರದ ಲಾವೆಲ್ಲಿ ರಸ್ತೆಯಲ್ಲಿರುವ ಅಂಗಡಿಗಳ ಇಂಗ್ಲಿಷ್​ ಬೋರ್ಡ್​ಗಳನ್ನು ಪೀಸ್​ ಪೀಸ್​ ಮಾಡಿದ್ದಾರೆ. ದೊಣ್ಣೆಯಿಂದ ಬೋರ್ಡ್​​ಗಳನ್ನ ಒಡೆದು ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ನಗರದ ಹುಣಸಮಾರನಹಳ್ಳಿ ಬಳಿ ಕರವೇ ಟಿ.ಎ.ನಾರಾಯಣಗೌಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರ್ಯಕರ್ತರು ಶಾಂತ ರೀತಿಯಿಂದ ವರ್ತಿಸುವಂತೆ ಮನವಿ ಮಾಡಿದ ಟಿ.ಎ.ನಾರಾಯಣ ಗೌಡ 

ಟಿವಿ9ಗೆ ಟಿ.ಎ.ನಾರಾಯಣ ಗೌಡ ಪ್ರತಿಕ್ರಿಯಿಸಿದ್ದು, ಕರವೇ ಕಾರ್ಯಕರ್ತರು ಶಾಂತ ರೀತಿಯಿಂದ ವರ್ತಿಸುವಂತೆ ಮನವಿ ಮಾಡುತ್ತೇನೆ. ನನ್ನ ಈಗಾಗಲೇ ಪೋಲಿಸರು ಸಾದಹಳ್ಳಿ ಬಳಿಯೇ ವಶಕ್ಕೆ ಪಡೆದಿದ್ದಾರೆ. ಬಿಬಿಎಂಪಿ 8 ವಲಯದ ಅಧಿಕಾರಿಗಳು ಸಂಪರ್ಕವಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿಯೇ ನಾವು ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕರವೇ ರ‍್ಯಾಲಿ: ಏರ್​ಪೋರ್ಟ್​ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗದಂತೆ ಪೊಲೀಸರಿಂದ ಹೊಸ ಪ್ಲ್ಯಾನ್

ನಗರ ಪೊಲೀಸ್ ಆಯುಕ್ತರಿಗೂ ನಾನು ಈ ಮೊದಲೇ ಮನವಿ ಮಾಡಿದ್ದೆ. ನಮ್ಮ ಕರವೇ ಹೋರಾಟ ಹತ್ತಿಕ್ಕಬೇಡಿ, ಕಬ್ಬನ್ ಪಾರ್ಕ್​ವರೆಗೆ ಬರಲು ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದೇವು. ಆದರೆ ಪೊಲೀಸರು ಈಗಲೇ ನನ್ನ ವಶಕ್ಕೆ ಪಡೆದಿದ್ದಾರೆ.

ಪೋಲಿಸರ ವರ್ತನೆ ಸರಿಯಿಲ್ಲದ ಕಾರಣ ನಮ್ಮ ಹೋರಾಟ ತೀವ್ರ ಸ್ವರೂಪ ಪಡೆದಿದೆ. ಈ ಹಿನ್ನಲೆ ಸ್ವಲ್ಪ ಮಟ್ಟಿಗೆ ಹಾನಿಯಾಗಿದೆ, ಆದರೆ ಕಾನೂನು ಸುವ್ಯವಸ್ಥೆ ಹದಗೆಡದಂತೆ ನಮ್ಮ ಕರವೇ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿಂದು ಕರವೇ ಮೆರವಣಿಗೆ, ಕನ್ನಡ ಫಲಕ ಹಾಕದಿದ್ದರೆ ಹುಷಾರ್!

ಏರ್ ಪೋರ್ಟ್ ರಸ್ತೆಯಿಂದ ಬೆಂಗಳೂರಿಗೆ ಬರುವ ಮಾರ್ಗ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಚಿಕ್ಕಜಾಲ ಲೈಫ್ ಕೇರ್ ಆಸ್ಪತ್ರೆ ಬೋರ್ಡ್​ನ್ನು ಕಾರ್ಯಕರ್ತರು ಹಾನಿಗೊಳಿಸಿದ್ದಾರೆ. ಅಂಗಡಿ ಮುಂಗಟ್ಟುಗಳ ಮುಂಭಾಗದ ಇಂಗ್ಲಿಷ್ ಫ್ಲೆಕ್ಸ್ ಹರಿದಿದ್ದು, ಮಳಿಗೆಗಳಿಗೆ ಕಲ್ಲು ತೂರಾಟ ಮಾಡಲಾಗಿದೆ.

ಗ್ರಾಹಕರಿಲ್ಲದೇ ಮಾಲ್ ಆಫ್ ಏಷ್ಯಾ ಖಾಲಿಖಾಲಿ

ಕರವೇ ಪ್ರತಿಭಟನೆ ಹಿನ್ನೆಲೆ ಮಾಲ್ ಆಫ್ ಏಷ್ಯಾ ಸಂಪೂರ್ಣ ಬಂದ್ ಆಗಿದೆ. ಗ್ರಾಹಕರಿಲ್ಲದೇ ಇಡೀ ಮಾಲ್ ಖಾಲಿ ಖಾಲಿ ಆಗಿದೆ. ಬೆಳಗ್ಗೆಯಿಂದ ಮಾಲ್ ಬಂದ್ ಮಾಡಿ ಗ್ರಾಹಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಕರವೇ ಕಾರ್ಯಕರ್ತರು ಗಲಾಟೆ ಮಾಡುವ ಭೀತಿ ಹಿನ್ನೆಲೆ ಗೇಟ್ ಬಂದ್​ ಮಾಡಲಾಗಿದೆ. ಮಾಲ್ ಒಳಗೆ ಬರೀ ಮಾಲ್ ನೌಕರರು ಮಾತ್ರ ಓಡಾಟ ಮಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್