ಯುಎಸ್​ನಲ್ಲಿ ಮೃತಪಟ್ಟ ಮಗನ ಅಂತ್ಯಕ್ರಿಯೆಗೆ ಹೋಗಲು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ದಂಪತಿಗೆ ಶಾಕ್

ದೂರದ ಅಮೆರಿಕದಲ್ಲಿ ಹೃದಯಾಘಾತದಿಂದ ಮೃತಪಟ್ಟ ಮಗನ ಅಂತ್ಯಕ್ರಿಯೆಗೆ ಹೋಗಲು ಪೋಷಕರು ವಿಮಾನದ ಟಿಕೆಟ್​ ಬುಕ್​ ಮಾಡಿದ್ದರು. ಹೀಗಾಗಿ ದಂಪತಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಇಲ್ಲಿ ಪಾಸ್​ಪೋರ್ಟ್​ ಪರಿಶೀಲನೆ ವೇಳೆ ದಂಪತಿಗೆ ಆಘಾತವೊಂದು ಎದುರಾಗಿದೆ. ಏನದು ಇಲ್ಲಿದೆ ಓದಿ...

ಯುಎಸ್​ನಲ್ಲಿ ಮೃತಪಟ್ಟ ಮಗನ ಅಂತ್ಯಕ್ರಿಯೆಗೆ ಹೋಗಲು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ದಂಪತಿಗೆ ಶಾಕ್
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ
Follow us
ವಿವೇಕ ಬಿರಾದಾರ
|

Updated on: Dec 27, 2023 | 2:25 PM

ಬೆಂಗಳೂರು, ಡಿಸೆಂಬರ್​ 27: ಅಮೆರಿಕದಲ್ಲಿ (America) ಹೃದಯಾಘಾತದಿಂದ (Heart Attack) ಮೃತಪಟ್ಟಿರುವ ಮಗನ ಅಂತ್ಯಕ್ರಿಯೆಯನ್ನು ನೆರವೇರಿಸಲು ಪೋಷಕರು ಬುಧವಾರ ಮುಂಜಾನೆ ಬೆಂಗಳೂರಿನಿಂದ (Bengaluru) ಹೊರಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಯಲಹಂಕದ ನಿವಾಸಿಗಳಾದ ಎಪ್ಪತ್ತು ವರ್ಷದ ರಂಗರಾಜು ಮತ್ತು ಗೀತಾ ದಂಪತಿಗಳು ಬುಧವಾರ ಮುಂಜಾನೆ 3 ಗಂಟೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Kempegowda International Airport) ಟೆಕ್ಸಾಸ್‌ಗೆ ತೆರಳಲಿದ್ದಾರೆ.

ಮಗ ಆರ್ ಕಾರ್ತಿಕ್ ಸಾವಿನ ಸುದ್ದಿಯನ್ನು ಸೋಮವಾರ ಬೆಳಿಗ್ಗೆ (ಡಿಸೆಂಬರ್ 25) ಯುಎಸ್‌ನಲ್ಲಿರುವ ಸಂಬಂಧಿಕರ ಮೂಲಕ ದಂಪತಿಗೆ ತಿಳಿದಿದೆ. 43 ವರ್ಷದ ಮಗ ಆರ್​ ಕಾರ್ತಿಕ್​ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ಅಮೆರಿಕಾದಲ್ಲಿ ವಾಸವಾಗಿದ್ದರು. ಈ ಕುಟುಂಬ ಸೋಮವಾರ ಕೊಲೊರಾಡೋಗೆ ವಿಹಾರಕ್ಕೆ ಹೋಗುತ್ತಿದ್ದಾಗ, ಆರ್​​ ಕಾರ್ತಿಕ್​ ಹಠಾತ್ತನೆ ಕುಸಿದು ಮೃತಪಟ್ಟರು.

ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಟೆಕ್ಸಾಸ್‌ನಲ್ಲಿ ನಡೆಸಲು ಪೋಷಕರು ನಿರ್ಧರಿಸಿದರು. ಅದರಂತೆ ಆರ್​ ಕಾರ್ತಿಕ್​ ಅವರ ತಂದೆ-ತಾಯಿ ಟೆಕ್ಸಾಸ್​​ಗೆ ಹೋಗಲು ತೀರ್ಮಾನಿಸಿದರು. ಇದಕ್ಕಾಗಿ ವಿಮಾನ ಟಿಕೆಟ್‌ಗಳನ್ನು ಬುಕ್​ ಮಾಡಿದರು. ಇಬ್ಬರೂ ಜಾಲ್ತಿಯಲ್ಲಿರುವ ವೀಸಾಗಳನ್ನೇ ಹೊಂದಿದ್ದಾರೆ.

ದಂಪತಿ ಟೆಕ್ಸಾಸ್​ಗೆ ಹೋಗಲು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗ​​ ಪಾಸ್‌ಪೋರ್ಟ್‌ಗಳನ್ನು ಪರಿಶೀಲಿಸಲಾಯಿತು. ಗೀತಾ ಅವರ ಪಾಸ್​​ಪೋರ್ಟ್ 2024ರ ಮಾರ್ಚ್​​ವರೆಗೆ ಮಾತ್ರ ಮಾನ್ಯತೆ ಹೊಂದಿದೆ. ಆದರೆ ನಿಯಮಗಳ ಪ್ರಕಾರ ಯುಎಸ್‌ಗೆ ಭೇಟಿ ನೀಡಲು ಕನಿಷ್ಠ ಆರು ತಿಂಗಳ ಸಿಂಧುತ್ವ ಅಗತ್ಯ. ರಂಗರಾಜು ಅವರಿಗೆ ಅಗತ್ಯ ಪಾಸ್‌ಪೋರ್ಟ್‌ ಸಿಂಧುತ್ವ ಇತ್ತು. ಆದರೆ ಗೀತಾ ಅವರಿಗೆ ಇರಲಿಲ್ಲ.

ಇದನ್ನೂ ಓದಿ:  Bengaluru Airport:ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ವಿಶ್ವದ ಅತ್ಯಂತ ಸುಂದರ ಏರ್ಪೋಟ್

ಈ ವಿಚಾರವನ್ನು ದಂಪತಿ ಸಂಬಂಧಿಕ ಕಿಶೋರ್ ಅವರಿಗೆ ತಿಳಿಸಿದರು. ಕಿಶೋರ್​ ಕೂಡಲೆ ಪರಿಚಯಸ್ತ ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ಕೆ ಕೃಷ್ಣ ಅವರನ್ನು ಸಂಪರ್ಕಿಸಿದರು. ಆಗ ಕೆ ಕೃಷ್ಣ ಅವರು ಮಂಗಳವಾರ ಬೆಳಗ್ಗೆ ಪಾಸ್‌ಪೋರ್ಟ್ ಕಚೇರಿಗೆ ಬರುವಂತೆ ಗೀತಾ ಅವರಿಗೆ ಹೇಳಿದರು.

ದಂಪತಿಗಳು ಕೋರಮಂಗಲದ ಆರ್‌ಪಿಒ ಮುಖ್ಯ ಕಚೇರಿಗೆ ಬೆಳಿಗ್ಗೆ 10 ಗಂಟೆಗೆ ಹೋಗಿ ದಾಖಲೆಗಳನ್ನು ಸಲ್ಲಿಸಿದರು. ಬಳಿಕ ಕೆ. ಕೃಷ್ಣ ಅವರು ದಾಖಲೆಗಳನ್ನು ಪರಿಶೀಲಿಸಿ ಗೀತಾ ಅವರ ಪಾಸ್‌ಪೋರ್ಟ್​​ ಅನ್ನು ನವೀಕರಿಸಿ ಮಧ್ಯಾಹ್ನ 1 ಗಂಟೆಗೆ ನೀಡಿದರು. ದಂಪತಿ ಮತ್ತೆ ವಿಮಾನದ ಟಿಕೆಟ್​ ಅನ್ನು ಬುಕ್​ ಮಾಡಿದರು. ಅದರಂತೆ ಬುಧವಾರ ನಸುಕಿನಜಾವ 3 ಗಂಟೆಗೆ ವಿಮಾನದ ಮೂಲಕ ಟೆಕ್ಸಾಸ್​ಗೆ ತೆರಳಿದರು.

ಇದು ಇಷ್ಟು ಬೇಗ ಆಗುತ್ತದೆ ಎಂದು ಊಹಿಸಿರಲಿಲ್ಲ. ಕೆ. ಕೃಷ್ಣ ಅವರ ತ್ವರಿತ ಸಹಾಯವು ನಮಗೆ ಬಹಳ ಅನುಕೂಲವಾಯಿತು. ಕೃಷ್ಣನಿ ಅವರಿಗೆ ನಾವು ಆಭಾರಿಯಾಗಿದ್ದೇವೆ. ಈ ನೆರವು ಇಲ್ಲದಿದ್ದರೆ, ಅವರು ತಮ್ಮ ಮಗನನ್ನು ಕೊನೆಯ ಬಾರಿ ನೋಡುವ ಅವಕಾಶವನ್ನು ಕಳೆದುಕೊಳ್ಳುತ್ತಿದ್ದರು ಎಂದು ಕಿಶೋರ್​ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್