
ಬೆಂಗಳೂರು, ಮೇ 13: ರಾಷ್ಟ್ರಧ್ವಜಕ್ಕೆ (National Flag) ಕೈ ಒರೆಸಿ ಅಪಮಾನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಎಫ್ಐಆರ್ (FIR) ರದ್ದು ಕೋರಿ ಎ.ಕೃಷ್ಣಪ್ಪ (A Krishnappa) ಎಂಬುವರು ಹೈಕೋರ್ಟ್‌ಗೆ (High Court) ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರ ಪರ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ವಾದ ಮಂಡಿಸಿದ್ದು, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವ ಉದ್ದೇಶವಿರಲಿಲ್ಲವೆಂದು ಪೀಠಕ್ಕೆ ತಿಳಿಸಿದ್ದಾರೆ. ಪ್ರಕರಣ ಸಂಬಂಧ ತಿಲಕನಗರ ಪೊಲೀಸ್ ಮತ್ತು ದೂರುದಾರ ಮಂಜುನಾಥ್ ಎಂಬುವರಿಗೆ ಹೈಕೋರ್ಟ್ ನೋಟಿಸ್ ನೀಡಿದೆ. ಪ್ರಕರಣ ಸಂಬಂಧ ಆರೋಪ ಪಟ್ಟಿ ದಾಖಲಿಸದಂತೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಕಳೆದ ಗುರುವಾರ (ಮೇ.08) ರಂದು ಜಯನಗರ ಬಿಜೆಪಿ ಶಾಸಕ ರಾಮಮೂರ್ತಿ ಅವರು ತಮ್ಮ ಬೆಂಬಲಿಗರೊಂದಿಗೆ ಸಹಿ ಹಂಚ್ಚಿದ್ದರು. ಬಿಜೆಪಿ ಶಾಸಕ ರಾಮಮೂರ್ತಿ ಅವರ ಜೊತೆ ಎ. ಕೃಷ್ಣಪ್ಪ ಎಂಬುವರು ಕೂ ಸಿಹಿ ಹಂಚಿದ್ದರು. ಸಿಹಿ ಹಂಚಿದ ಬಳಿಕ ತಮ್ಮ ಕೈಯನ್ನು ಎ.ಕೃಷ್ಣಪ್ಪ ಅವರು ರಾಷ್ಟ್ರಧ್ವಜಕ್ಕೆ ಒರೆಸಿದ್ದಾರೆ. ಎ. ಕೃಷ್ಣಪ್ಪ ಅವರು ರಾಷ್ಟ್ರಧ್ವಜಕ್ಕೆ ಕೈ ಒರೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ನೋಡಿ: ನಾಗರಿಕರ ಹೆಸರಿನಲ್ಲಿ ರಾಜ್ಯಾದ್ಯಂತ ತಿರಂಗಾ ಯಾತ್ರೆ: ಆರ್ ಅಶೋಕ್
“ಬೆಂಗಳೂರಿನ ಜಯನಗರದಲ್ಲಿ ನಡೆದ ಸಿಹಿ ಹಂಚಿಕೆ ಸಂದರ್ಭದಲ್ಲಿ ರಾಷ್ಟ್ರಧ್ವಜವನ್ನು ಕರವಸ್ತ್ರದಂತೆ ಬಳಸಿ ಅಪಮಾನಿಸಿದ ಬಿಜೆಪಿ ಶಾಸಕ ಸಿ.ಕೆ ರಾಮಮೂರ್ತಿ ಹಾಗೂ ಬಿಜೆಪಿ ನಾಯಕರು! ನಕಲಿ ದೇಶಪ್ರೇಮಿ ಬಿಜೆಪಿಗರು ಭಾರತದ ರಾಷ್ಟ್ರಧ್ವಜ, ಸಂವಿಧಾನವನ್ನು ಎಂದಿಗೂ ಒಪ್ಪುವುದಿಲ್ಲ. ಮನುವಾದಿಗಳು ಸಮಾನತೆ, ಐಕ್ಯತೆ, ಸಮಗ್ರತೆ ಸಾರುವ ರಾಷ್ಟ್ರಧ್ವಜವನ್ನು ಒಪ್ಪಲು ಸಾಧ್ಯವೂ ಇಲ್ಲ!” ಎಂದು ಟ್ವೀಟ್ ಮಾಡಿದ್ದಾರೆ.
Published On - 3:39 pm, Tue, 13 May 25