
ಬೆಂಗಳೂರು, ಜೂನ್ 25: ಬೆಂಗಳೂರಿನಲ್ಲಿ ಅಪರಾಧ (Bengaluru Crime) ಪ್ರಕರಣಗಳನ್ನು ತಗ್ಗಿಸುವ ಉದ್ದೇಶದಿಂದ ನೂತನ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ (Seemanth Kumar Singh) ಅವರು ವಿಶೇಷ ಗಸ್ತು ವ್ಯವಸ್ಥೆ ಜಾರಿಗೆ ತಂದಿದ್ದಾರೆ. ಪಿಎಸ್ಐ ಶ್ರೇಣಿಯ ಅಧಿಕಾರಿಗಳು ಕಾಲ್ನಡಿಗೆ ಮೂಲಕ ಗಸ್ತು (Bengaluru Police Patrolling) ತಿರುಗುವಂತೆ ಸೂಚನೆ ನೀಡಿದ್ದಾರೆ. ಇಷ್ಟು ದಿನ ಹೊಯ್ಸಳ ಚೀತಾ ವಾಹನದಲ್ಲಿ ರೌಂಡ್ಸ್ ಹಾಕುತ್ತಿದ್ದ ಪೊಲೀಸರು ಇದೀಗ, ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರ ಸೂಚನೆ ಮೇರೆಗೆ ತಮ್ಮ ಠಾಣೆ ವ್ಯಾಪ್ತಿಯಲ್ಲಿ ಕಾಲ್ನಡಿಗೆ ಮೂಲಕ ಗಸ್ತು ಹಾಕುತ್ತಿದ್ದಾರೆ.
ಜನರು 112 ಗೆ ಕರೆ ಮಾಡಿದ ನಂತರ ಪೊಲೀಸರಿಗೆ ಅಪರಾಧ ಪ್ರಕರಣಗಳ ಮಾಹಿತಿ ಗೊತ್ತಾಗುತ್ತಿತ್ತು. ಬಳಿಕ, ಪೊಲೀಸರು ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ. ಆದರೆ, ಇದೀಗ ಪಿಎಸ್ಐ ಶ್ರೇಣಿಯ ಅಧಿಕಾರಿಗಳು ತಮ್ಮ ಠಾಣೆ ವ್ಯಾಪ್ತಿಯಲ್ಲಿ ಕಾಲ್ನಡಿಗೆಯಲ್ಲಿ ಗಸ್ತು ಹಾಕುವುದರಿಂದ ಗ್ರೌಂಡ್ ಲೆವೆಲ್ನಲ್ಲಿ ಏನು ನಡೆಯುತ್ತಿದೆ ಎಂಬುವುದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು. ಕಾಲ್ನಡಿಗೆ ಗಸ್ತಿನಿಂದ ಕೂಡಲೇ ಅಪರಾಧ ಪ್ರಕರಣಗಳು ನಿಯಂತ್ರಣಕ್ಕೆ ತರಬಹದು ಎಂಬುವುದು ಪೊಲೀಸರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: ಸ್ನೇಹಿತನ ಕೊಲೆ: ತನಿಖೆಯಲ್ಲಿ ಪರಸ್ತ್ರೀಯೊಂದಿಗಿನ ಲವ್ವಿಡವ್ವಿ ಬಯಲು
ಪ್ರಾರ್ಥನಾ ಸ್ಥಳ, ಮಾಲ್, ದೇವಾಲಯ, ಮಾರುಕಟ್ಟೆ ಮತ್ತು ಮುಂತಾದ ಜನನಿಬಿಡ ಸ್ಥಳಗಳಲ್ಲಿ ಪ್ರತಿ ದಿನ ಸಂಜೆ ಮತ್ತು ವಾರಾಂತ್ಯದಲ್ಲಿ ಕಡ್ಡಾಯವಾಗಿ ಕಾಲ್ನಡಿಗೆ ಮೂಲಕ ಗಸ್ತು ಹಾಕುತ್ತಾರೆ. ರೌಡಿ ಶೀಟರ್ಗಳು, ರೂಢಿಗತ ಆರೋಪಿಗಳು, ಯಾವ ಅವಧಿ ಹಾಗೂ ಯಾವ ಪ್ರದೇಶಗಳಲ್ಲಿ ಹೆಚ್ಚಾಗಿ ಅಪರಾಧ ಕೃತ್ಯಗಳು ನಡೆಯುತ್ತಿವೆ ಎನ್ನುವ ಮಾಹಿತಿಯು ಠಾಣಾಧಿಕಾರಿಗಳು ಮತ್ತು ಎಸಿಪಿ ಮಟ್ಟದ ಅಧಿಕಾರಿಗಳಿಗೆ ಇರಬೇಕು ಎಂದು ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ.
Published On - 2:51 pm, Wed, 25 June 25