ಮಾಜಿ ಸಚಿವ ಸುರೇಶ್ ಕುಮಾರ್ ಬಿಎಂಟಿಸಿ ಬಸ್ನಲ್ಲಿ ಸಂಚಾರ; ಸರಳತೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ
ನಿರ್ವಾಹಕರು ಬೇಡವೆಂದರೂ ಕೇಳದೇ ತಮ್ಮ ಜೊತೆಗಿದ್ದ ಒಬ್ಬರು ಸ್ನೇಹಿತರದ್ದೂ ಸೇರಿದಂತೆ ತಲಾ ಇಪ್ಪತ್ತು ರೂಪಾಯಿ ಕೊಟ್ಟು ಟಿಕೇಟು ಪಡೆದು ಮಾದರಿಯಾಗಿದ್ದಾರೆ. ತಮ್ಮೊಂದಿಗೆ ಅಂಗರಕ್ಷಕರನ್ನು ಸಹ ಕರೆದೊಯ್ಯದೇ ಸುರೇಶ್ ಕುಮಾರ್ ಸರಳ ನಡೆಯನ್ನು ಅನುಸರಿಸಿದ್ದಾರೆ.
ಬೆಂಗಳೂರು: ಇಂದು (ಡಿಸೆಂಬರ್ 31) ಮುಂಜಾನೆಯೇ ಬೆಂಗಳೂರು ನಗರದಿಂದ ಮಾಗಡಿ ರಸ್ತೆಯಲ್ಲಿ ಬಿಎಂಟಿಸಿ (BMTC) ಬಸ್ ಮೂಲಕ ಸಂಚರಿಸಿ ಮಾಜಿ ಸಚಿವ ಸುರೇಶ್ ಕುಮಾರ್ (Suresh Kumar) ಸರಳತೆಯನ್ನು ಮೆರೆದಿದ್ದಾರೆ. ಸುರೇಶ್ ಕುಮಾರ್ ಅವರ ಈ ನಡೆಗೆ ಸದ್ಯ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಬಸವೇಶ್ವರ ನಗರದ ತಮ್ಮ ಮನೆಯಿಂದ ಮಾಗಡಿ ರಸ್ತೆಯ ಸುಮನಹಳ್ಳಿ ಬಸ್ ನಿಲ್ದಾಣದವರೆಗೂ ಒಬ್ಬರೇ ನಡೆದು ಬಂದು, ಅಲ್ಲಿಂದ ತಮ್ಮೊಬ್ಬ ಸ್ನೇಹಿತರೊಂದಿಗೆ ಬಿಎಂಟಿಸಿ ಬಸ್ ಹತ್ತಿದ್ದಾರೆ. ತಾವರೆಕೆರೆಯವರೆಗೂ ಬಸ್ನಲ್ಲಿ ಸಂಚರಿಸಿದ ಸುರೇಶ್ ಕುಮಾರ್, ಈ ಮಧ್ಯೆ ಬಸ್ ಪ್ರಯಾಣಿಕರ ಕುಶಲೋಪರಿ ವಿಚಾರಿಸಿದ್ದಾರೆ.
ನಿರ್ವಾಹಕರು ಬೇಡವೆಂದರೂ ಕೇಳದೇ ತಮ್ಮ ಜೊತೆಗಿದ್ದ ಒಬ್ಬರು ಸ್ನೇಹಿತರದ್ದೂ ಸೇರಿದಂತೆ ತಲಾ ಇಪ್ಪತ್ತು ರೂಪಾಯಿ ಕೊಟ್ಟು ಟಿಕೇಟು ಪಡೆದು ಮಾದರಿಯಾಗಿದ್ದಾರೆ. ತಮ್ಮೊಂದಿಗೆ ಅಂಗರಕ್ಷಕರನ್ನು ಸಹ ಕರೆದೊಯ್ಯದೇ ಸುರೇಶ್ ಕುಮಾರ್ ಸರಳ ನಡೆಯನ್ನು ಅನುಸರಿಸಿದ್ದಾರೆ. ಸುರೇಶ್ ಕುಮಾರ್ ಈ ಹಿಂದೆ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಬೆಂಗಳೂರು: ದೇವಸ್ಥಾನಗಳನ್ನು ಭಕ್ತರ ಕೈಗೆ ನೀಡಬೇಕೆಂಬುದು ನಮ್ಮ ಚಿಂತನೆ : ಸಚಿವ ಶ್ರೀನಿವಾಸ ಪೂಜಾರಿ ಸರ್ಕಾರದ ವ್ಯಾಪ್ತಿಯಲ್ಲಿರುವ ದೇವಾಲಯ ಹಸ್ತಾಂತರ ವಿಚಾರಕ್ಕೆ ಸಂಬಂಧಿಸಿ ಡಿಕೆಶಿ ಆರೋಪಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ಕೊಟ್ಟಿದ್ದಾರೆ. ದೇಗುಲಗಳನ್ನು ಭಕ್ತರ ಕೈಗೆ ನೀಡಬೇಕೆಂಬುದು ನಮ್ಮ ಚಿಂತನೆ. ಭಕ್ತರು ಅಂದ್ರೆ ಬಿಜೆಪಿ, RSS ಕಾರ್ಯಕರ್ತರು ಆಗಿರಬಹುದು. ಡಿ.ಕೆ.ಶಿವಕುಮಾರ್ ಕೂಡ ಆಗಿರಬಹುದು ಎಂದ ಬೆಂಗಳೂರಿನಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ಕೊಟ್ಟಿದ್ದಾರೆ.
ಇದೇ ವೇಳೆ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲೆಯ ಕೋಟಾದಲ್ಲಿ ಗಿರಿಜನರ ಮೇಲೆ ಪೋಲಿಸರು ವಿನಾಕಾರಣ ಹಲ್ಲೆ ಮಾಡಲಾಗಿತ್ತು. ಒಬ್ಬ ಪಿಎಸ್‌ಐ ಸಸ್ಪೆಂಡ್ ಆಗಿದ್ದಾರೆ. ಆರು ಜನರ ವರ್ಗಾವಣೆ ಕೂಡ ಮಾಡಲಾಗಿದೆ. ನಾನು ಸ್ಥಳಕ್ಕೆ ಭೇಟಿ ನೀಡಿದ್ದೆ. ಎಸ್‌ಪಿ ಮತ್ತು ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆಸಿದ್ದೆ. ಈ ಮಧ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿತ್ತು. ಒಬ್ಬ ಕಾನ್ಸ್‌ಟೇಬಲ್ ಮೇಲೆ ಹಲ್ಲೆಯಾಗಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದಿವಾಸಿ ಕೇರಿಯಲ್ಲಿ ಆತಂಕ ಸೃಷ್ಟಿಯಾಗಿತ್ತು. ಪ್ರಕರಣದ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ಮಾಡಿದ್ದೆ. ಅಲ್ಲಿರುವ ಪರಿಸ್ಥಿತಿಯನ್ನು ಗೃಹಸಚಿವರಿಗೆ ವಿವರಿಸಿದ್ದೆ. ಯಾವುದೇ ಕಾರಣಕ್ಕೂ ಅಲ್ಲಿರುವವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಎಸ್‌ಪಿ ಅವರಿಗೆ ಕರೆ ಮಾಡಿ ಪ್ರಕರಣದ ವಿಚಾರ ಕಾನೂನುಪ್ರಕಾರ ದೂರು ದಾಖಲಿಸಲು ಸೂಚಿಸಿದ್ದಾರೆ. ದಲಿತರಿಗೆ ಯಾವುದೇ ತೊಂದರೆಯಾಗದಂತೆ ಗೃಹಸಚಿವರು ಸೂಚಿಸಿದ್ದಾರೆ. ಕೊರಗರ, ಗಿರಿ ಜನರ,ದಲಿತ ಬಂಧುಗಳಿಗೆ ಭಯ ಪಡುವ ಅವಶ್ಯಕತೆ ಇಲ್ಲ. ನಾನು,ಗೃಹ ಸಚಿವರು,ಸರ್ಕಾರ ನಿಮ್ಮ ಜತೆ ಇದ್ದೇವೆ. ಏನಾದರೂ ಇದ್ರೆ ಸಿಎಂಗೂ ಮಾಹಿತಿ ನೀಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಗೊಂದಲದ ಪ್ರಶ್ನೋತ್ತರಕ್ಕೆ ಗ್ರೇಸ್ ಅಂಕ ನೀಡಿ, ವಿಡಿಯೋ ಮೂಲಕ ಶಿಕ್ಷಣ ಸಚಿವ ಸುರೇಶ್ ಕುಮಾರ್ಗೆ ವಿದ್ಯಾರ್ಥಿನಿ ಒತ್ತಾಯ
Published On - 1:53 pm, Fri, 31 December 21