ಇಂದಿರಾನಗರದಲ್ಲಿ ನಾಲ್ವರಿಗೆ ಚಾಕು ಇರಿತ: ಆರೋಪಿ ಹೇಳಿಕೆ ಕೇಳಿ ಪೊಲೀಸರೇ ಶಾಕ್

| Updated By: ಗಂಗಾಧರ​ ಬ. ಸಾಬೋಜಿ

Updated on: Feb 17, 2025 | 3:54 PM

ಇಂದಿರಾನಗರದಲ್ಲಿ ನಡೆದ ಚಾಕು ಇರಿತ ಪ್ರಕರಣದ ಆರೋಪಿ ಕದಂಬನನ್ನು ಪೊಲೀಸರು ಬಂಧಿಸಿದ್ದಾರೆ. ನಾಲ್ಕು ಜನರಿಗೆ ಚಾಕು ಇರಿದ ಆರೋಪಿಯು ತಾನು ಏಕೆ ಇರಿದೆ ಎಂದು ಗೊತ್ತಿಲ್ಲ ಎಂದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. ಈ ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಆರೋಪಿಯನ್ನು ಎಂಟು ದಿನಗಳ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇಂದಿರಾನಗರದಲ್ಲಿ ನಾಲ್ವರಿಗೆ ಚಾಕು ಇರಿತ: ಆರೋಪಿ ಹೇಳಿಕೆ ಕೇಳಿ ಪೊಲೀಸರೇ ಶಾಕ್
ಇಂದಿರಾನಗರದಲ್ಲಿ ನಾಲ್ವರಿಗೆ ಚಾಕು ಇರಿತ: ಆರೋಪಿ ಹೇಳಿಕೆ ಕೇಳಿ ಪೊಲೀಸರರೇ ಶಾಕ್
Follow us on

ಬೆಂಗಳೂರು, ಫೆಬ್ರವರಿ 17: ಇಂದಿರಾನಗರದಲ್ಲಿ ನಾಲ್ಕು ಜನರ ಮೇಲೆ ರೌಡಿಶೀಟರ್ (Rowdy sheeter)  ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಆರೋಪಿ ಕದಂಬನನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿದ ಪೊಲೀಸರು, ಕೈಯಲ್ಲಿ ಚಾಕು ಇತ್ತು. ಯಾಕೆ ಇರಿದೆ ಅಂತಾ ಗೊತ್ತೇ ಇಲ್ಲ ಎಂದು ರೌಡಿಶೀಟರ್​ ಹೇಳಿದ್ದಾನೆ. ಆತನ ಹೇಳಿಕೆ ಕೇಳಿ ಪೊಲೀಸರೇ ಒಂದು ಕ್ಷಣ ಶಾಕ್​ ಆಗಿದ್ದಾರೆ.

ಪಾನಿಪುರಿ ಅಂಗಡಿಯವನಿಗೆ ಯಾಕೆ ಚಾಕು ಇರಿದೆ ಎಂದು ಗೊತ್ತಿಲ್ಲ ಎಂದಿದ್ದಾನೆ. ಇನ್ನು ಬೈಕ್​ನಲ್ಲಿ ಡ್ರಾಪ್ ಕೊಟ್ಟಿದ್ದ ವ್ಯಕ್ತಿಗೂ ಆರೋಪಿ ಚಾಕು ಇರಿದಿದ್ದ, ಈ ಬಗ್ಗೆ ಪೊಲೀಸರು ಕೇಳಿದಕ್ಕೆ, ಎಡ ತಿರುವು ತಗೋ ಅಂದರೆ ಬಲ ತಿರುವು ತಗೊಂಡ ಅದಕ್ಕೆ ಚಾಕು ಚುಚ್ಚಿದೆ ಎಂದಿದ್ದಾನೆ.

ಇದನ್ನೂ ಓದಿ: ಅರ್ಧಗಂಟೆಯಲ್ಲಿ ನಾಲ್ವರಿಗೆ ಚಾಕುವಿನಿಂದ ಇರಿದು ಪರಾರಿಯಾದ ಆರೋಪಿ ಕದಂಬ

ಅಲ್ಲದೇ ಬೇರೆ ಮೂವರಿಗೂ ಚಾಕು ಇರಿದಿದ್ದ ಆರೋಪಿ, ಆದರೆ ಅವರಿಗೆಲ್ಲಾ ಯಾಕೆ ಚಾಕುವಿನಿಂದ ಇರಿದೆ ಅಂತಾ ಗೊತ್ತೇ ಇಲ್ಲ ಎಂದು ಕದಂಬ ಹೇಳಿದ್ದಾನೆ. ಸದ್ಯ ಆರೋಪಿಯನ್ನ ಎಂಟು ದಿನ ಕಸ್ಟಡಿಗೆ ಪಡೆದು ಇಂದಿರಾನಗರ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಇಂದಿರಾನಗರ ರೌಡಿಶೀಟರ್ ಆಗಿರುವ ಕದಂಬ ರಾಬರಿ ಕೇಸ್​ನಲ್ಲಿ ಜೈಲಿಗೆ ಹೋಗಿ ಇತ್ತೀಚೆಗಷ್ಟೇ ಹೊರಬಂದಿದ್ದ. ಆದರೆ ಜೈಲಿಂದ ಬಂದ ಬಳಿಕವೂ ತನ್ನ ಚಾಳಿ ಬಿಡದೆ ಮತ್ತೆ ಏರಿಯಾದಲ್ಲಿ ಅಟ್ಟಹಾಸಮೆರೆದಿದ್ದ. ತಡರಾತ್ರಿ ಕುಡಿದ ಮತ್ತಲ್ಲಿ ಪಾನಿ ಪುರಿ ಅಂಗಡಿಬಳಿ ಹೋಗಿ ಮಾಲೀಕ ಹಾಗೂ ಸಿಬ್ಬಂದಿ ಜೊತೆ ಕಿರಿಕ್ ತೆಗೆದಿದ್ದಾನೆ. ಹೀಗಿರುವಾಗ್ಲೇ ತಳ್ಳಾಟ ನೂಕಾಟದಲ್ಲಿ ಮಾಲೀಕನ ಮೇಲೆ ಡ್ರಾಗರ್ ಇರಿದಿದ್ದಾನೆ. ಅದಾದ ಬಳಿಕ ಅಡ್ಡ ಬಂದ ಸಿಬ್ಬಂದಿಯ ಕತ್ತಿನ ಬಳಿಯೂ ಬಲವಾಗಿ ಕೊಯ್ದಿದ್ದಾನೆ. ಈ ವೇಳೆ ರಸ್ತೆಯಲ್ಲಿ ಸಿಕ್ಕ ಸಿಕ್ಕ ಮೂವರಿಗೆ ಅಟ್ಯಾಕ್ ಮಾಡಿದ್ದಾನೆ.

ಇದನ್ನೂ ಓದಿ: ಚೇತನ್ ಮೆಕ್ಯಾನಿಕಲ್ ಇಂಜಿನೀಯರ್, ಕಾರ್ಮಿಕ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದರು: ಸೀಮಾ ಲಾಟ್ಕರ್, ಪೊಲೀಸ್ ಆಯುಕ್ತರು

ಈ ನಡುವೆ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದು, ಸಿನಿಮೀಯ ಶೈಲಿಯಲ್ಲಿ ಅವರ ಮುಂದೆಯೇ ಬೈಕ್ ನಲ್ಲಿ ಪರಾರಿಯಾಗಿದ್ದಾನೆ. ಆದರೆ ಅಟ್ಯಾಕ್ ಒಳಗಾದ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಯುವಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.