ಬೆಂಗಳೂರು: ಗ್ರೀನ್ ಕಾರಿಡಾರ್ ವ್ಯವಸ್ಥೆಯಡಿ ಜೀವರಕ್ಷಕ ಅಂಬ್ಯೂಲೆನ್ಸ್ ಸಂಚಾರ; ಉಳಿದ ಅಮಾಯಕ ಜೀವಗಳು
ಬೆಂಗಳೂರು ನಗರದಲ್ಲಿರುವ ಆಸ್ಪತ್ರೆಗಳಿಗೆ ಹೊರದೇಶಗಳಿಂದ ಹಾಗೂ ಹೊರರಾಜ್ಯಗಳಿಂದ ತುರ್ತು ಚಿಕಿತ್ಸೆಯ ಸೌಲಭ್ಯವನ್ನು ಪಡೆಯುವ ಸಲುವಾಗಿ, ಅಂದರೆ ಅಂಗಾಂಗ ಕಸಿಯಂತಹ ಶಸ್ತ್ರಿ ಚಿಕಿತ್ಸೆ ಹಾಗೂ ಜೀವಂತ ಹೃದಯಗಳನ್ನು ಕೊಂಡೊಯ್ಯುವ ವಾನಗಳಿಗೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲಾಗಿದೆ. ತುರ್ತು ಚಿಕಿತ್ಸೆಗೆ ಕೊಂಡೊಯ್ಯುವ ವೇಳೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಹೆಚ್ಚುವರಿ ಸಂಚಾರಿ ಪೊಲೀಸರ ಮೂಲಕ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತಿದೆ.
ಬೆಂಗಳೂರು, ಜ.5: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ರೋಗಿಗಳನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ತುರ್ತಾಗಿ ಸ್ಥಳಾಂತರ ಮಾಡಲು ಅಥವಾ ಅಂಗಾಂಗ ಕಸಿ ಮಾಡಲು ಅಂಗಾಂಗಗಳನ್ನು ಕೊಂಡೊಯ್ಯುವ ಆ್ಯಂಬುಲೆನ್ಸ್ಗಳಿಗೆ ಗ್ರೀನ್ ಕಾರಿಡಾರ್ (Green Corridor) ವ್ಯವಸ್ಥೆ ಮಾಡಲಾಗಿದೆ. ಟ್ರಾಫಿಕ್ ಪೊಲೀಸರ ಈ ಕಾರ್ಯದಿಂದಾಗಿ ಅನೇಕ ಜೀವಗಳು ಉಳಿದಿವೆ.
- ಪ್ರಕರಣ 1:- ಜ.12 – ವಿಸ್ಟರ್ ಸಿಎಂ ಆಸ್ಪತ್ರೆ ಹೆಬ್ಬಾಳದಿಂದ ಮಣಿ ಪಾಲ್ ಆಸ್ಪತ್ರೆಗೆ – ಲಿವರ್ ಡ್ರಾನ್ಸಮಿಷನ್ – 11 ಕಿ.ಮೀ ದೂರವನ್ನು ಆ್ಯಂಬುಲೆನ್ಸ್ 29 ನಿಮಿಷದಲ್ಲಿ ತಲುಪಿದೆ.
- ಪ್ರಕರಣ 2- ಜನವರಿ 19 – ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಿಂದ ಮಣಿಪಾಲ್ ಆಸ್ಪತ್ರೆಗೆ – ಹೃದಯ ಕಸಿ – 22 ಕಿ. ಮೀ ದೂರವನ್ನು ಆ್ಯಂಬುಲೆನ್ಸ್ 39 ನಿಮಿಷದಲ್ಲಿ ತಲುಪಿದೆ.
- ಪ್ರಕರಣ 3:- ಫೆಬ್ರವರಿ 27 ಮಲ್ಲಿಗೆ ಆಸ್ಪತ್ರೆಯಿಂದ ಮಣಿಪಾಲ್ ಆಸ್ಪತ್ರೆ – ಪೆಷೆಂಟ್ ಶಿಫ್ಟ್ – 10 ಕಿಮೀ ದೂರವನ್ನು ತುರ್ತು ವಾಹನ 15 ನಿಮಷದಲ್ಲಿ ತಲುಪಿದೆ.
- ಪ್ರಕರಣ 4:- ಮಾರ್ಚ್ 17 ಜಯದೇವ ಆಸ್ಪತ್ರೆಯಿಂದ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆ – ಪೆಷೆಂಟ್ ಶಿಫ್ಟ್ – 11 ಕಿಮೀ ದೂರವನ್ನು ತುರ್ತು ವಾಹನ 15 ನಿಮಿಷದಲ್ಲಿ ತಲುಪಿದೆ.
- ಪ್ರಕರಣ 5 :- ಏಪ್ರಿಲ್ 30 ಕೆಂಪೇಗೌಡ ವಿಮಾನ ನಿಲ್ದಾಣದಿಂ ಮಣಿಪಾಲ್ ಆಸ್ಪತ್ರೆ – ಪೆಷೆಂಟ್ ಶಿಫ್ಟ್ – 40 ಕಿಮೀ ದೂರವನ್ನು 35 ನಿಮಿಷದಲ್ಲಿ ತಲುಪಲಾಗಿದೆ.
- ಪ್ರಕರಣ 6 :- ಮೇ 26 ಕೆಂಪೇಗೌಡ ವಿಮಾನ ನಿಲ್ದಾಣದಿಂ ಮಣಿಪಾಲ್ ಆಸ್ಪತ್ರೆ – ಹೃದಯ ಸಂಬಂಧಿ ಖಾಯಿಲೆ – 40 ಕಿಮೀ ದೂರವನ್ನು 35 ನಿಮಿಷದಲ್ಲಿ ತಲುಪಿದೆ.
- ಪ್ರಕರಣ 7 :- ಮೇ 30 ಚಿನ್ಮಯಿ ಆಸ್ಪತ್ರೆ ಆಶೋಕ್ ನಗರ ಪೋರ್ಟೀಸ್ ಆಸ್ಪತ್ರೆ ಬನ್ನೇರುಘಟ್ಟ – ಹೃದಯ – 40 ಕಿಮೀ ದೂರವನ್ನು 35 ನಿಮಿಷದಲ್ಲಿ ತಲುಪಲಾಗಿದೆ.
ಈ ಪ್ರಕರಣಗಳು ಸೇರಿದಂತೆ 22 ಪ್ರಕರಣಗಳಲ್ಲಿ ಸಂಚಾರಿ ಪೊಲೀಸರು ಜೀವರಕ್ಷಕ ಆಂಬ್ಯೂಲೆನ್ಸ್ಗಳಿಗೆ ಗ್ರೀನ್ ಕಾರಿಡಾರ್ ಮೂಲಕ ವೇಗದ ಸಂಚಾರಕ್ಕೆ ಅನುವು ಮಾಡಿಕೊಟ್ಟು ಕಾರ್ಯಕ್ಷಮತೆ ತೋರಿದ್ದಾರೆ.
ಇದನ್ನೂ ಓದಿ: Bengaluru Metro: ಏರ್ಪೋರ್ಟ್ ಆಯ್ತು, ಬೆಂಗಳೂರು ಮೆಟ್ರೋ ಕಂಡು ಚಕಿತಗೊಂಡ ವಿಶ್ವಖ್ಯಾತ ಹೂಡಿಕೆದಾರ ಮಾರ್ಕ್ ಮೋಬಿಯಸ್
ಪ್ರತಿದಿನ 500ಕ್ಕೂ ಹೆಚ್ಚು ಅಂಬ್ಯೂಲೆನ್ಸ್ಗಳಿಗೆ ಆದ್ಯತೆ ಮೇರೆಗೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಅಂಬ್ಯುಲೆನ್ಸ್ ಚಾಲಕರು ತುರ್ತು ಸಮಯದಲ್ಲಿ 112 ಕ್ಕೆ ಮಾಹಿತಿ ನೀಡಿದರೆ ಸಂಚಾರಿ ಪೊಲೀಸರು ಅಂತಹ ಆ್ಯಂಬುಲೆನ್ಸ್ಗಳಿಗೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡುತ್ತಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ