ಗೃಹಜ್ಯೋತಿ ಗುಂಗಿನಲ್ಲಿ ಹೆಚ್ಚುವರಿ ವಿದ್ಯುತ್​ ಬಿಲ್ ಕಟ್ಟುವುದನ್ನೇ ಮರೆತ ಜನ, ಬೆಸ್ಕಾಂ ಬರಬೇಕಿದೆ ಕೋಟಿಗಟ್ಟಲೇ ಹಣ

ಭರವಸೆ ನೀಡಿದಂತೆ ಕಾಂಗ್ರೆಸ್ , ಕರ್ನಾಟಕದಲ್ಲಿ 200 ವರೆಗಿನ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದಿದೆ. ಆದ್ರೆ, ಜನರು ಗೃಹಜ್ಯೋತಿ ಗುಂಗಿನಲ್ಲಿ ಕರೆಂಟ್ ಬಿಲ್ ಕಟ್ಟುವುದನ್ನೇ ಮರೆತಿದ್ದಾರೆ. ನಿಗದಿಗಿಂತ ಹೆಚ್ಚು ವಿದ್ಯುತ್​ ಬಳಕೆ ಮಾಡಿದ ವಿದ್ಯುತ್​ ಬಿಲ್ ಪಾವತಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಹೀಗಾಗಿ ಬೆಸ್ಕಾಂಗೆ ಕೋಟಿಗಟ್ಟಲೇ ಬಾಕಿ ವಿದ್ಯುತ್​ ಬಿಲ್ ಹಣ ಬರಬೇಕಿದೆ. ಹಾಗಾದ್ರೆ, ಎಷ್ಟು ಜನ ವಿದ್ಯುತ್ ಬಾಕಿ ಕಟ್ಟಿಲ್ಲ| ಎಷ್ಟು ಹಣ ಬೆಸ್ಕಾಂಗೆ ಬರಬೇಕು ಎನ್ನುವ ವಿವರ ಇಲ್ಲಿದೆ.

ಗೃಹಜ್ಯೋತಿ ಗುಂಗಿನಲ್ಲಿ ಹೆಚ್ಚುವರಿ ವಿದ್ಯುತ್​ ಬಿಲ್ ಕಟ್ಟುವುದನ್ನೇ ಮರೆತ ಜನ, ಬೆಸ್ಕಾಂ ಬರಬೇಕಿದೆ ಕೋಟಿಗಟ್ಟಲೇ ಹಣ
Edited By:

Updated on: Nov 05, 2023 | 11:27 AM

ಬೆಂಗಳೂರು, (ನವೆಂಬರ್ 05): ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ್ದ 200 ಯುನಿಟ್​ ಉಚಿತ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದಿದ್ದು, ಜುಲೈ ತಿಂಗಳಿನಿಂದ ರಾಜ್ಯದಲ್ಲಿ ಗೃಹ ಜ್ಯೋತಿ ಗ್ಯಾರಂಟಿ‌ ಜಾರಿಯಾಗಿದೆ. ಹಲವರು ಉಚಿತವಾಗಿ ವಿದ್ಯುತ್ ಉಪಯೋಗಿಸುತ್ತಿದ್ದಾರೆ. ಆದ್ರೆ, ಇನ್ನೂ ಕೆಲವರು ಕೆಲ ಕಾರಣಾಂತರಗಳಿಂದ ಉಚಿತ ವಿದ್ಯುತ್ ಅನ್ವಯಿಸಿಲ್ಲ. ಇನ್ನು ಈ ಫ್ರೀ ವಿದ್ಯುತ್ ಖುಷಿಯಲ್ಲಿ ಜನರು ಬಿಲ್ (electricity bill )ಕಟ್ಟುವುದನ್ನೇ ಮರೆತುಬಿಟ್ಟಿದ್ದಾರೆ. ಹೌದು..​..ಬೆಸ್ಕಾಂ(bescom) ವ್ಯಾಪ್ತಿಯಲ್ಲಿ ಇನ್ನೂ 10 ಲಕ್ಷ ಜನರು ಕರೆಂಟ್ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡಿದ್ದಾರೆ. ಗೃಹ ಜ್ಯೋತಿಯ ನಿಗದಿತ ಯೂನಿಟ್ ಗಿಂತ ಹೆಚ್ಚಿನ ವಿದ್ಯುತ್​ ಬಳಸಿದ್ದಾರೆ. ಆದ್ರೆ  ಹೆಚ್ಚುವರಿಯಾಗಿ ಬಳಸಿದ್ದ ವಿದ್ಯುತ್​ ಬಿಲ್​ ಕಟ್ಟಿಲ್ಲ.

10 ಲಕ್ಷ ಜನರಿಂದ ಬೆಸ್ಕಾಂಗೆ ಬರೋಬ್ಬರಿ 147 ಕೋಟಿ ರೂಪಾಯಿ ವಿದ್ಯುತ್​ ಬಿಲ್​ ಬಾಕಿ ಇದೆ. ಬೆಂಗಳೂರು ನಗರದಲ್ಲೇ 7.6 ಲಕ್ಷ ಜನರು ಬಿಲ್​ ಕಟ್ಟದಿರುವುದರಿಂದ ಬರೋಬ್ಬರಿ 113 ಕೋಟಿ ರೂಪಾಯಿ ಬಿಲ್ ಬಾಕಿ ಇದೆ. ಹೀಗಾಗಿ ಬೆಸ್ಕಾಂ, ಬಾಕಿ ಬಿಲ್ ಕಟ್ಟದಿದ್ದರೆ ವಿದ್ಯುತ್ ಕಡಿತ ಮಾಡುವುದಾಗಿ ಎಚ್ಚರಿಕೆ ನೀಡಿದೆ.

ವರ್ಷದ ವಿದ್ಯುತ್ ಬಳಕೆಯನ್ನ ಸರಾಸರಿಗೆ ಹೆಚ್ಚುವರಿ 10 ಯೂನಿಟ್ ವರೆಗೂ ಉಚಿತ ನೀಡಲಾಗುತ್ತ. ಅಂದರೆ ವರ್ಷದ ಸರಾಸರಿ ಬಳಕೆ 85 ಯೂನಿಟ್ ಇದ್ದಾರೆ 95 ಯೂನಿಟ್ ವರೆಗೂ ಬಿಲ್ ಕಟ್ಟುವುದು ಬೇಡ. ನಿಗದಿತ ಯೂನಿಟ್ ಗಿಂದ ಹೆಚ್ಚು ಬಳಸಿದರೆ ಮಾತ್ರ ಬಿಲ್ ಪಾವತಿಸಬೇಕು. ಉದಾಹರಣಗೆ ಒಂದು ಮನೆಯ ವಿದ್ಯುತ್​ 95 ಯೂನಿಟ್ ಸರಾಸರಿಯಿ ಇದೆ ಎಂದು ಇಟ್ಟುಕೊಳ್ಳಿ. ಆದ್ರೆ, 110 ಯೂನಿಟ್ ಬಳಸಿದ್ರೆ 10 ಯೂನಿಟ್ ಬಿಲ್ ಕಟ್ಟಬೇಕು. ಹೀಗಾಗಿ ಬೆಸ್ಕಾಂ ನಿಗದಿತ ಯೂನಿಟ್ ಗಿಂತ ಹೆಚ್ಚು ಬಳಸಿದವರಿಗೆ ಬಿಲ್ ನೀಡಿದೆ. ಹೆಚ್ಚುವರಿ ಬಳಕೆಗೆ 100 ರಿಂದ 200 ರೂಪಾಯಿ ಮಾತ್ರ ಬಿಲ್ ಬರುತ್ತಿದೆ. ಆದರೂ ಜನ ಹೆಚ್ಚುವರಿ ಯೂನಿಟ್ ಬಳಕೆಯ ಬಿಲ್ ಕಟ್ಟದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಹಾಗಾದ್ರೆ, ಎಲ್ಲೆಲ್ಲಿ ಎಷ್ಟು ವಿದ್ಯುತ್ ಬಿಲ್ ಬಾಕಿ ಇದೆ ಎನ್ನುವುದು ಈ ಕೆಳಗಿನಂತಿದೆ ನೋಡಿ.

ಎಲ್ಲಿ ಎಷ್ಟು ವಿದ್ಯುತ್ ಬಿಲ್ ಬಾಕಿ?

  1.  ಬೆಂಗಳೂರು ನಗರ
    ಜನ: 7 ಲಕ್ಷದ 61 ಸಾವಿರದ 464
    ಬಾಕಿ: 113 ಕೋಟಿ 67 ಲಕ್ಷದ 3 ಸಾವಿರದ 6 ರೂಪಾಯಿ
  2. 2. ಬೆಂಗಳೂರು ಗ್ರಾಮೀಣ
    ಜನ: 29 ಸಾವಿರದ 695
    ಬಾಕಿ: 4ಕೋಟಿ 14 ಲಕ್ಷದ 86 ಸಾವಿರದ 753 ರೂ
  3. 3. ಚಿಕ್ಕಬಳ್ಳಾಪುರ
    ಜನ: 30 ಸಾವಿರದ 984
    ಬಾಕಿ: 4 ಕೋಟಿ 52 ಲಕ್ಷದ 2 ಸಾವಿರದ 950 ರೂ
  4. 4. ಚಿತ್ರದುರ್ಗ
    ಜನ: 27 ಸಾವಿರದ 287
    ಬಾಕಿ: 2 ಕೋಟಿ 9 ಲಕ್ಷದ 15 ಸಾವಿರದ 463 ರೂ
  5. 5. ದಾವಣಗೆರೆ
    ಜನ: 65 ಸಾವಿರದ 35
    ಬಾಕಿ: 5 ಕೋಟಿ 59 ಲಕ್ಷದ 14 ಸಾವಿರದ 420 ರೂ
  6. 6. ರಾಮನಗರ
    ಜನ: 31 ಸಾವಿರದ 250
    ಬಾಕಿ: 2 ಕೋಟಿ 67 ಲಕ್ಷದ 40 ಸಾವಿರದ 597 ರೂ
  7. 7. ತುಮಕೂರು
    ಜನ: 59 ಸಾವಿರದ 990
    ಬಾಕಿ: 5 ಕೋಟಿ 77 ಲಕ್ಷದ 36 ಸಾವಿರದ 752 ರೂ
  8. 8. ಕೋಲಾರ
    ಜನ: 49 ಸಾವಿರದ 335
    ಬಾಕಿ: 9 ಕೋಟಿ 36 ಲಕ್ಷದ 69 ಸಾವಿರದ 881 ರೂ