ಅರ್ಹರಲ್ಲದ ಸ್ವಯಂ ಘೋಷಿತ ಸ್ವಾಮೀಜಿಗಳಿಗೆ ಸಂಕಷ್ಟ; ಸುಖಾಸುಮ್ಮನೇ ಹೆಸರು ಮುಂದೆ ಭಗವಾನ್, ಮಹರ್ಷಿ, ಅವಧೂತ ಬಿರುದು ಹಾಕಿಕೊಂಡ್ರೆ ಕೇಸ್?
ಹಿಂದೂ ಧರ್ಮ ಪರಂಪರೆಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ. ಅರ್ಹತೆ ಇಲ್ಲದಿದ್ರೂ ಸ್ವಯಂಘೋಷಿತ ಬಿರುದು ಹಾಕಿಕೊಳ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವಂತೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಎಂಬುವವರು ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಿದ್ದರು.

ಬೆಂಗಳೂರು: ಸ್ವಯಂ ಘೋಷಿತ ಸ್ವಾಮೀಜಿಗಳಿಗೆ ಕಡಿವಾಣ ಹಾಕಲು ಧಾರ್ಮಿಕ ದತ್ತಿ ಇಲಾಖೆ ಮುಂದಾಗಿದೆ. ಇನ್ನುಮುಂದೆ ಅರ್ಹರಲ್ಲದ ಸ್ವಯಂ ಘೋಷಿತ ಸ್ವಾಮೀಜಿಗಳಿಗೆ ಸಂಕಷ್ಟ ಎದುರಾಗಲಿದೆ. ಸುಖಾಸುಮ್ಮನೇ ಹೆಸರು ಮುಂದೆ ಬಿರುದು ಹಾಕಿಕೊಂಡ್ರೆ ಕೇಸ್? ಬೀಳಲಿದೆ. ಇನ್ಮುಂದೆ ತಮಗಿಷ್ಟ ಬಂದಂತೆ ಭಗವಾನ್, ಮಹರ್ಷಿ, ಅವಧೂತ ಎಂದು ಬಳಸುವಂತಿಲ್ಲ. ಬೆಂಗಳೂರಿನಲ್ಲಿ ಸಾಮಾಜಿಕ ಕಾರ್ಯಕರ್ತರ ದೂರಿನ ಹಿನ್ನೆಲೆ ಎಚ್ಚೆತ್ತ ಧಾರ್ಮಿಕ ದತ್ತಿ ಇಲಾಖೆ ಸ್ವಯಂಘೋಷಿತ ಸ್ವಾಮೀಜಿಗಳ ಅರ್ಹತೆ ಕುರಿತು ಪರಿಶೀಲನೆ ನಡೆಸಲು ನಿರ್ಧರಿಸಿದೆ. ಆಗಮ ಪಂಡಿತರಿಂದ ವರದಿ ಪಡೆಯಲು ಇಲಾಖೆ ಮುಂದಾಗಿದ್ದು ವರದಿ ತರಿಸಲು ಅಧಿಕಾರಿಗಳಿಗೆ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.
ಹಿಂದೂ ಧರ್ಮ ಪರಂಪರೆಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ. ಅರ್ಹತೆ ಇಲ್ಲದಿದ್ರೂ ಸ್ವಯಂಘೋಷಿತ ಬಿರುದು ಹಾಕಿಕೊಳ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವಂತೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಎಂಬುವವರು ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಿದ್ದರು. ದೂರಿನ ಬಳಿಕ ಎಚ್ಚೆತ್ತ ಇಲಾಖೆ ಈ ಬಗ್ಗೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಮಹರ್ಷಿ, ಜಗದ್ಗುರು, ಪರಮಹಂಸ, ಅವಧೂತ, ವೇದಧೂತ ಎಂಬ ಹತ್ತು ಹಲವು ಹೆಸರುಗಳಿಂದ ಕೆಲವರು ಸ್ವಯಂ ಬಿರುದು ಘೋಷಿಸಿಕೊಳ್ಳುತ್ತಿದ್ದಾರೆ. ಇದರಿಂದ ಹಿಂದೂ ಧರ್ಮ ಪಾವಿತ್ರ್ಯಗೆ ಧಕ್ಕೆಯಾಗುವ ಆತಂಕವಿದೆ. ಸ್ವಯಂಘೋಷಿತ ಶ್ರೀಗಳಿಂದ ಅರ್ಹತೆ ಇಲ್ಲದಿದ್ರೂ ಬಿರುದುಗಳಿಂದ ಕರೆಸಿಕೊಂಡು ನಿಜವಾದ ಧರ್ಮ ಗುರುಗಳಿಗೆ ಅಪಚಾರ ಮಾಡುತ್ತಿದ್ದಾರೆ. ಈ ಕುರಿತು ಧಾರ್ಮಿಕ ದತ್ತಿ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಾಯಿದತ್ತ ದೂರಿನಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ನಮ್ಮನ್ನು ಬಲಹೀನರು ಅಂದುಕೊಳ್ಳದಿರಿ: ತೈವಾನ್ ಬಗ್ಗೆ ಬೈಡೆನ್ ಎಚ್ಚರಿಕೆಗೆ ಚೀನಾ ಕಠಿಣ ಪ್ರತಿಕ್ರಿಯೆ
ಬಿರುದು ವಿಚಾರದಲ್ಲಿ ಧಾರ್ಮಿಕ ದತ್ತಿ ಇಲಾಖೆಗೆ ಫುಲ್ ಕಫ್ಯೂಷನ್ ಇನ್ನು ಮತ್ತೊಂದು ಕಡೆ ಸ್ವಯಂ ಘೋಷಿತ ಸ್ವಾಮೀಜಿಗಳ ಬಿರುದು ವಿಚಾರಕ್ಕೆ ಸಂಬಂಧಿಸಿ ಧಾರ್ಮಿಕ ದತ್ತಿ ಇಲಾಖೆಗೆ ಫುಲ್ ಕಫ್ಯೂಷನ್ನಲ್ಲಿದೆ. ನಾವು ದೇವಸ್ಥಾನದ ಆಡಳಿತಕ್ಕೆ ಸಂಬಂಧಪಟ್ಟ ವಿಚಾರಗಳನ್ನ ಮಾತ್ರ ನೋಡ್ತೀವಿ. ಪ್ರವರ ಮತ್ತು ಪ್ರವೀಣಾ ವಿಷಯಗಳಿಗೆ ಪರೀಕ್ಷೆ ನಡೆಸುತ್ತೇವೆ. ಈ ಪರೀಕ್ಷೆಗೆ ಅಂಕಪಟ್ಟಿ ಕೊಡ್ತೀವಿ, ಯಾವುದೇ ವೈಯಕ್ತಿಕ ಬಿರುದು ಕೊಡೊಲ್ಲ. ಧಾರ್ಮಿಕ ದತ್ತಿ ಇಲಾಖೆಯಲ್ಲಿ ಯಾವುದೇ ಬಿರುದುಗಳನ್ನ ಕೊಡೋದಿಲ್ಲ. ಸಾಮಾಜಿಕ ಕಾರ್ಯಕರ್ತರು ಈ ವಿಚಾರವಾಗಿ ಪತ್ರ ಬರೆದಿದ್ದಾರೆ. ಸ್ವಯಂ ಘೋಷಿತ ಬಿದುರು ಹೊಂದಿರುವ ಸ್ವಾಮೀಜಿಗಳ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಸಂಬಂಧ ಮೇ 17ರಂದು ಧಾರ್ಮಿಕ ದತ್ತಿ ಇಲಾಖೆಯ ಪ್ರಭಾರ ಪ್ರಭಾರ ಆಯುಕ್ತ ದಯಾನಂದ್ ಇಲಾಖೆಯ ಆಗಮನ ಪಂಡಿತರ ವಿಭಾಗಕ್ಕೆ ಪತ್ರ ಬರೆದು ಪರಿಶೀಲನೆ ನಡೆಸಿ, ಮಾಹಿತಿ ನೀಡುವಂತೆ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಆಗಮನ ಪಂಡಿತರಿಗೆ ನಾವು ಈ ವಿಚಾರವನ್ನ ವರ್ಗಾಯಿಸಿದ್ದೇವೆ. ಯಾವುದಾದರೊಂದು ಬಿರುದನ್ನ ತೆಗೆದುಕೊಳ್ಳಬೇಕಂದ್ರೆ ಸಂಬಂಧಪಟ್ಟಂತೆ ವಿಶ್ವವಿದ್ಯಾಲಯಗಳು ಬಿರುದು ಕೊಡುತ್ವೆ. ವ್ಯಕ್ತಿಯ ಸಾಧನೆ ಮೇರೆಗೆ ಬಿರುದನ್ನ ಘೋಷಿಸುತ್ತೆ. ನಾವು ಕೇವಲ ಆಗಮನ ಭಾಷೆ ಪರೀಕ್ಷೆ ಮಾಡ್ತೀವಿ. ನಮ್ಮ ವ್ಯಾಪ್ತಿಗೆ ಬಿರುದಿನ ವಿಚಾರ ಬರೋದಿಲ್ಲ. ಹೀಗಾಗಿ ಸ್ವಯಂ ಘೋಷಿತ ಬಿರುದುಗಳ ವಿರುದ್ಧ ನಾವು ಯಾವುದೇ ಕ್ರಮ ಕೈಗೊಳ್ಳಲು ಆಗೋದಿಲ್ಲ. ಅವ್ರಿಗೆ ನಾವು ಪ್ರಶ್ನೆ ಮಾಡೋಕೆ ಸಾಧ್ಯವಿಲ್ಲ ಎಂದು ಧಾರ್ಮಿಕ ದತ್ತಿ ಇಲಾಖೆಯ ಕೇಂದ್ರ ಸ್ಥಾನಿಕ ಸಹಾಯಕಿ ಕೆ.ಲಕ್ಷ್ಮಿ ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಭಾರೀ ಮಳೆ, ರಸ್ತೆ ಮೇಲೆ ನೀರು: ವರ್ಕ್ ಫ್ರಂ ಹೋಂಗೆ ಆದ್ಯತೆ ಕೊಡಿ ಎಂದ ಟ್ರಾಫಿಕ್ ಪೊಲೀಸರು