ಫೀಸ್ ಕಟ್ಟಿಲ್ಲ ಎಂದು RTE ವಿದ್ಯಾರ್ಥಿಗಳನ್ನ ಪರೀಕ್ಷೆಗೆ ಕೂರಿಸದ ಶಾಲೆ; ಆಡಳಿತ ಮಂಡಳಿ ವಿರುದ್ಧ ಪೋಷಕರ ಆಕ್ರೋಶ

ಬೆಳಗ್ಗೆ 10 ಗಂಟೆಗೆ ಪರೀಕ್ಷೆ ಆರಂಭವಾಗಿದೆ. ಆದ್ರೆ ಶಾಲಾ ಸಿಬ್ಬಂದಿ ವಿದ್ಯಾರ್ಥಿಗಳನ್ನು ಪರೀಕ್ಷೆ ಕೂರಿಸಿಲ್ಲ. ಹೀಗಾಗಿ ಪೋಷಕರು ಶಾಲೆ ಬಳಿ ಗಲಾಟೆ ಮಾಡಿದ ಬಳಿಕ 11 ಗಂಟೆಗೆ RTE ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಕೊಡಲಾಗಿದೆ.

ಫೀಸ್ ಕಟ್ಟಿಲ್ಲ ಎಂದು RTE ವಿದ್ಯಾರ್ಥಿಗಳನ್ನ ಪರೀಕ್ಷೆಗೆ ಕೂರಿಸದ ಶಾಲೆ; ಆಡಳಿತ ಮಂಡಳಿ ವಿರುದ್ಧ ಪೋಷಕರ ಆಕ್ರೋಶ
HMR School
Follow us
ಆಯೇಷಾ ಬಾನು
|

Updated on:Mar 13, 2023 | 2:50 PM

ಬೆಂಗಳೂರು: ಆರ್​ಟಿಇ ವಿದ್ಯಾರ್ಥಿಗಳು ಶುಲ್ಕ ಪಾವತಿಸುವಂತೆ ಶಾಲಾ ಆಡಳಿತ ಮಂಡಳಿ ಪೋಷಕರಿಗೆ ಟಾರ್ಚರ್ ಮಾಡ್ತಿದ್ದು ನಾವು ಆರ್​ಟಿಇ ಅಡಿಯಲ್ಲಿ ಪ್ರವೇಶ ಪಡೆದಿದ್ದೇವೆ. ಶುಲ್ಕ ಕಟ್ಟೊಲ್ಲ ಎಂದು ಪೋಷಕರು ಗಲಾಟೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ವಿದ್ಯಾರ್ಥಿಗಳು ಶುಲ್ಕ ಪಾವತಿಸದ ಕಾರಣ ಪರೀಕ್ಷೆಯಿಂದ ಕಿಕ್ ಔಟ್ ಮಾಡಲಾಗಿದೆ. ಬೆಳಗ್ಗೆ 10 ಗಂಟೆಗೆ ಪರೀಕ್ಷೆ ಆರಂಭವಾಗಿದೆ. ಆದ್ರೆ ಶಾಲಾ ಸಿಬ್ಬಂದಿ ವಿದ್ಯಾರ್ಥಿಗಳನ್ನು ಪರೀಕ್ಷೆ ಕೂರಿಸಿಲ್ಲ. ಹೀಗಾಗಿ ಪೋಷಕರು ಶಾಲೆ ಬಳಿ ಗಲಾಟೆ ಮಾಡಿದ ಬಳಿಕ 11 ಗಂಟೆಗೆ RTE ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಕೊಡಲಾಗಿದೆ. ಒಂದೂವರೆ ತಾಸಿನ ಪರೀಕ್ಷೆಗೆ ಕೇವಲ 30 ನಿಮಿಷ ಕಾಲಾವಕಾಶ ನೀಡಲಾಗಿದೆ.

ಜ್ಞಾನಭಾರತಿ  ಪೊಲೀಸ್ ಠಾಣೆ ವ್ಯಾಪಿಯ ಉಲ್ಲಾಳ ಸಮೀಪದ ಜ್ಞಾನಗಂಗ ನಗರದ ಉಲ್ಲಾಳ ಮುಖ್ಯ ರಸ್ತೆಯಲ್ಲಿರುವ HMR ಶಾಲೆ ಆಡಳಿತ‌ ಮಂಡಳಿಯಿಂದ ಶುಲ್ಕ ವಸೂಲಿ ಮಾಡಲಾಗುತ್ತಿದೆ. 7 ವಿದ್ಯಾರ್ಥಿಗಳು ಆರ್​ಟಿಇ‌ ಯೋಜನೆ ಅಡಿ ಪ್ರವೇಶ ಪಡೆದಿದ್ದಾರೆ. ಶುಲ್ಕ‌ ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಶಾಲೆ ಆಡಳಿತ ಮಂಡಳಿ ಪರೀಕ್ಷೆಗೆ ಕೂರಿಸಿಲ್ಲ. ಶಾಲೆ ವಿರುದ್ಧ ರಶೀದಿ‌ ನೀಡದೆ ಶುಲ್ಕ ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಕೊರೊನಾ‌ ವರ್ಷದ ಶುಲ್ಕವನ್ನೂ‌ ನೀಡುವಂತೆ ಪೋಷಕರಿಗೆ ಟಾರ್ಚರ್ ಮಾಡಲಾಗುತ್ತಿದೆಯಂತೆ. ಖಾಸಗಿ ಶಾಲೆ ಹಣದಾಹದ ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಕಲಬುರಗಿ: ರಾತ್ರಿ ಮನೆಯಲ್ಲಿ ಮಲಗಿದ್ದ ಯುವಕ, ಪಕ್ಕದ ಮನೆಯಲ್ಲಿ ಶವವಾಗಿ ಪತ್ತೆ; ಕೊಲೆ ಎಂದು ಆರೋಪಿಸಿದ ತಾಯಿ

ಫೀಸ್ ಕಟ್ಟಿ ಕಟ್ಟಿ ಅಂತಿದ್ದಾರೆ. ಎಕ್ಸಾಂ ಬಂದಾಗೆಲ್ಲ ಫೀಸ್ ಕಟ್ಟಿ ಅಂತ ಟಾರ್ಚರ್ ಮಾಡ್ತಿದ್ದಾರೆ. ಕೋವಿಡ್ ಸಮಯದಿಂದಲೂ ಫೀಸ್ ಕೇಳ್ತಿದ್ದಾರೆ. ಒಟ್ಟು 40 ಸಾವಿರ ಹಣ ಕಟ್ಟಿಸಿಕೊಳ್ತಿದ್ದಾರೆ. ನನ್ನ ಮಗಳು ಅಳುತ್ತಾ, ನಡುಗುತಿದ್ಳು. ಹಾಲ್ ಟಿಕೆಟ್ ಕೊಟ್ಟಿರಲಿಲ್ಲ, ಈಗ ಕೊಟ್ಟಿದ್ದಾರೆ. ಶಾಲಾ ಆಡಳಿತ ಮಂಡಳಿ ನಮ್ಮ ನೋವಿಗೆ ಸ್ಪಂದಿಸದಿದ್ರೆ, ಮೇಲಾಧಿಕಾರಿಗಳಿಗೆ ದೂರು ನೀಡ್ತೇವೆ. ಮತ್ತೆ ಶನಿವಾರ ಫೀಸ್ ಕಟ್ಟೋಕೆ ಹೇಳಿದ್ದಾರೆ ಎಂದು ಶಾಲೆಯ ಮುಂದೆ ಆರ್​ಟಿಇ ಪೋಷಕರು ಅಸಹಾಯಕತೆ ತೋರಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಶಾಲಾ ಆಡಳಿತ ಮಂಡಳಿ ನಿರಾಕರಿಸಿದೆ. ಅಲ್ಲದೆ ಫೀಸ್ ಕಟ್ಟಿದ ರಶೀದಿ ಕೊಡಲು ಆಗಲ್ಲ ಎಂದು ಶಾಲೆ ಸೆಕ್ರೆಟರಿ ರಾಜಕುಮಾರ್ ಉಡಾಫೆ ಉತ್ತರ ನೀಡಿದ್ದಾರೆ.

ಮಗಳ ಫೀಸ್ ಕಟ್ಟಲು ಬಡ್ಡಿಗೆ ಹಣ ತಂದ ಪೋಷಕರು

ಇನ್ನು ಮಗಳ ಫೀಸ್ ಕಟ್ಟಲು 5% ಬಡ್ಡಿಯಂತೆ 5 ಸಾವಿರ ರೂ. ಸಾಲ ಮಾಡಿ ಪೋಷಕರು ಫೀಸ್ ಕಟ್ಟಿದ್ದಾರೆ. ಆರ್​ಟಿಇ ಮಕ್ಕಳು ಸಹ 40 ಸಾವಿರ ಪಾವತಿಸಬೇಕಂತೆ. ಫೀಸ್ ಬಾಕಿ ಉಳಿಸಿಕೊಂಡ ಕಾರಣ ನನ್ನ ಮಗಳಿಗೆ ಪರೀಕ್ಷೆ ಕೊಟ್ಟಿಲ್ಲ. ಫೀಸ್ ಕೊಟ್ಟ ಮೇಲೆ ಪರೀಕ್ಷೆ ಅವಕಾಶ ಕೊಟ್ಟಿದ್ದಾರೆ. ಆರ್ ಟಿಇ ಮಕ್ಕಳು ಫೀಸ್ ಕಟ್ಟಬೇಕಂತೆ ಇದು ಯಾವ ನ್ಯಾಯ? ಎಂದು ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:50 pm, Mon, 13 March 23