AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಡಿಎ ಸೈಟ್ ಖರೀದಿಸಲು ಏನು ಮಾಡಬೇಕು? ಅರ್ಜಿ ಸಲ್ಲಿಸುವುದು ಹೇಗೆ? ಅರ್ಹತೆ ಏನು? ಇಲ್ಲಿದೆ ಮಾಹಿತಿ

BDA Site allotment process: ಬೆಂಗಳೂರಿನಲ್ಲಿ ಬಿಡಿಎ ಸೈಟ್​ ಕೊಂಡುಕೊಳ್ಳಬೇಕೆಂಬ ಕನಸು ಅನೇಕರಿಗೆ ಇರುತ್ತದೆ. ಆದರೆ, ಅದಕ್ಕೆ ಏನು ಮಾಡಬೇಕು? ಅರ್ಹತೆ ಏನು? ಹರಾಜು ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬ ಮಾಹಿತಿ ತಿಳಿದಿರುವುದಿಲ್ಲ. ಹಾಗಾದರೆ, ಬಿಡಿಎ ಸೈಟ್ ಹರಾಜು ಪ್ರಕ್ರಿಯೆ ಹೇಗಿರುತ್ತದೆ? ಸೈಟ್ ಖರೀದಿಸಬೇಕಾದರೆ ಏನು ಮಾಡಬೇಕು? ರಿಯಲ್ ಎಸ್ಟೇಟ್ ತಜ್ಞರು, ಬಿಡಿಎ ಅಧಿಕಾರಿಗಳ ಹಲವು ಸಂದರ್ಭಗಳಲ್ಲಿ ನೀಡಿದ ಮಾಹಿತಿ ಆಧರಿಸಿದ ವಿವರಣೆ ಇಲ್ಲಿದೆ.

ಬಿಡಿಎ ಸೈಟ್ ಖರೀದಿಸಲು ಏನು ಮಾಡಬೇಕು? ಅರ್ಜಿ ಸಲ್ಲಿಸುವುದು ಹೇಗೆ? ಅರ್ಹತೆ ಏನು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Apr 19, 2025 | 6:20 PM

ಬೆಂಗಳೂರಿನಲ್ಲಿ (Bengaluru) ನಿವೇಶನ ಕೊಂಡುಕೊಳ್ಳುವುದು ಮಧ್ಯಮವರ್ಗದ ಅನೇಕ ಜನರ ಕನಸು. ಆದರೆ, ಇದನ್ನು ನನಸಾಗಿಸುವುದು ಅಷ್ಟು ಸುಲಭವಲ್ಲ. ರಾಜ್ಯ ರಾಜಧಾನಿಯಲ್ಲಿ ನಿವೇಶನಗಳ ಬೆಲೆ ಗಗನಕ್ಕೇರಿರುವ ಈ ಸಂದರ್ಭದಲ್ಲಿ ಖಾಸಗಿ ಸೈಟ್​​ಗಳನ್ನು ಕೊಂಡುಕೊಳ್ಳುವುದು ಸುಲಭವೂ ಅಲ್ಲ, ದಾಖಲೆ ಇನ್ನಿತರ ವಿಚಾರಗಳ ದೃಷ್ಟಿಯಿಂದ ಅಷ್ಟು ಸರಳವೂ ಅಲ್ಲ. ಹಾಗಾದರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಅಭಿವೃದ್ಧಿಪಡಿಸಿರುವ ಸೈಟ್​​ಗಳನ್ನು (BDA Site) ಕೊಂಡುಕೊಳ್ಳಬೇಕಾದರೆ? ಅರ್ಹತೆ ಏನು? ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ? ಏನೆಲ್ಲ ದಾಖಲೆಗಳು ಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆ ಕುರಿತ ಸಂದೇಹಗಳನ್ನು ನಿವಾರಿಸಲು ಇಲ್ಲಿ ಪ್ರಯತ್ನಿಸಲಾಗಿದೆ.

ಬಿಡಿಎ ನಿವೇಶನವನ್ನು ಯಾರು ಬೇಕಾದರೂ ಖರೀದಿಸಬಹುದೇ?

ಬಿಡಿಎ ನಿವೇಶನದ ಮರು ಮಾರಾಟ ಅಥವಾ ರೀಸೆಲ್ ವೇಳೆ ಯಾರು ಬೇಕಾದರೂ ಕೊಂಡುಕೊಳ್ಳಬಹುದು. ಆದರೆ ಹರಾಜು ಪ್ರಕ್ರಿಯೆ ಮೂಲಕ ಮಾರಾಟ ಮಾಡಲಾಗುವ ಬಿಡಿಎ ಸೈಟ್ ಅನ್ನು ಭಾರತೀಯ ನಾಗರಿಕ ಮಾತ್ರ ಖರೀದಿಸಬಹುದಾಗಿದೆ. ಒಂದು ವೇಳೆ, ಅನಿವಾಸಿ ಭಾರತೀಯರು ಬಿಡಿಎ ಸೈಟ್ ಖರೀದಿಸಬೇಕು ಎಂದಿದ್ದಲ್ಲಿ ಸರ್ಕಾರದಿಂದ ಅನುಮತಿ ಪಡೆದಿರಬೇಕು. ಬೇರೊಬ್ಬ ಮಾಲೀಕನಿಂದ ಖರೀದಿಸುವುದಾದರೆ (ರೀ ಸೇಲ್) ಯಾರು ಬೇಕಾದರೂ ಖರೀದಿ ಮಾಡಬಹುದು.

ಹೊಸದಾಗಿ ಬಿಡಿಎ ಸೈಟ್​ಗೆ ಅರ್ಜಿ ಸಲ್ಲಿಸಲು ಏನು ಅರ್ಹತೆ ಬೇಕು?

ಹೊಸದಾಗಿ ಬಿಡಿಎ ಸೈಟ್ ಖರೀದಿ ಮಾಡಬೇಕಾದರೆ ಅಂಥವರು ಕರ್ನಾಟಕದಲ್ಲಿ ವಾಸವಾಗಿರಬೇಕು. ಅವರ ಉದ್ಯೋಗ ಏನು ಎಂಬುದನ್ನು ಅರ್ಜಿಯಲ್ಲಿ ನಮೂದಿಸಬೇಕಾಗುತ್ತದೆ. ಈಗಾಗಲೇ ಎಷ್ಟು ಆಸ್ತಿ ಇದೆ ಎಂಬ ವಿವರ ನೀಡಬೇಕಾಗುತ್ತದೆ. ಬಿಡಿಎ ಸೈಟು ಮಾರಾಟದ ವಿಚಾರದಲ್ಲಿ ಹಲವು ಕೆಟಗರಿಗಳನ್ನು ಮಾಡಲಾಗಿದೆ. ಬಿಪಿಎಲ್, ಎಪಿಎಲ್, ಜನರಲ್ ಇತ್ಯಾದಿಯಾಗಿ ವರ್ಗೀಕರಣ ಮಾಡಲಾಗಿದೆ. ಬಿಡಿಎ ವೆಬ್​ಸೈಟ್​​ಗಳಲ್ಲಿ ಮತ್ತು ಕಚೇರಿಯಲ್ಲಿ ಕೂಡ ಈ ಬಗ್ಗೆ ಮಾಹಿತಿ ಪಡೆಯಬಹುದು.

ಇದನ್ನೂ ಓದಿ
Image
ಗ್ರಾಮೀಣ ಭಾಗದ ಜನರಿಗೆ ಗುಡ್​ನ್ಯೂಸ್: ಇ ಖಾತಾ ನೀಡಲು ಸಂಪುಟ ಒಪ್ಪಿಗೆ
Image
ಬೆಂಗಳೂರು ಆಸ್ತಿ ಮಾಲೀಕರಿಗೆ ಶಾಕ್ ನೀಡಲು ಮುಂದಾದ ಬಿಬಿಎಂಪಿ
Image
ಬಿಡಿಎ ಸೈಟ್ ಖರೀದಿಸಿ ಖಾಲಿ ಬಿಟ್ಟಿದ್ದೀರಾ? ಎಚ್ಚರ, ತೆರಬೇಕಾಗಲಿದೆ ದಂಡ
Image
ಎ ಮತ್ತು ಬಿ ಖಾತಾ ಎಂದರೇನು? ಗುರುತಿಸುವುದು ಹೇಗೆ?

ನಿವೇಶನ ಖರೀದಿಗೆ ಅರ್ಜಿ ಸಲ್ಲಿಸಿದ ಬಳಿಕ ಅಂಚೆಯ ಮೂಲಕವೇ ಬಿಡಿಎ ಸಂವಹನ ನಡೆಸುತ್ತದೆ. ಎರಡು ಬಾರಿ, ಮೂರು ಬಾರಿ ಅರ್ಜಿ ಸಲ್ಲಿಸಲು ಅವಕಾಶಗಳಿವೆ. ಬಹಳ ಸುಲಭದಲ್ಲಿ ಬಿಡಿಎ ಸೈಟು ದೊರೆಯುವುದಿಲ್ಲ. ಹಿರಿಯ ನಾಗರಿಕರ ವರ್ಗದಲ್ಲಿ ಬರುವವರಿಗೆ ಸ್ವಲ್ಪ ಬೇಗನೆ ಸೈಟ್ ಹಂಚಿಕೆಯಾಗುವ ಸಾಧ್ಯತೆ ಇದೆ.

ಈಗಾಗಲೇ ಬಿಡಿಎ ಸೈಟ್ ಇದ್ದರೆ ಸೈಟು ಪಡೆಯುವುದು ಸುಲಭವೇ?

ಈಗಾಗಲೇ ಬೇರೆ ಸೈಟು, ನಿವೇಶನ ಅಥವಾ ಮನೆ ಇದ್ದರೆ ಅಂಥವರು ಬೇಗನೆ ಸೈಟ್ ಪಡೆಯುವ ಸಾಧ್ಯತೆ ತುಂಬಾ ಕಡಿಮೆ. ನಿವೇಶನವೇ ಇಲ್ಲದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಬಿಡಿಎ ಸೈಟ್‌ಗೆ ಅರ್ಜಿ ಸಲ್ಲಿಸುವ ವೇಳೆ ಯಾವೆಲ್ಲ ಕೆಟಗರಿಗಳಿವೆ?

ಜನರಲ್, ಎಸ್​ಸಿ ಎಸ್‌ಟಿ, ಸ್ವಾತಂತ್ರ್ಯ ಹೋರಾಟಗಾರರು, ಸರ್ಕಾರಿ ಉದ್ಯೋಗಿಗಳು, ಅಂಗವಿಕಲರು ಹೀಗೆ ಒಂದು 20 ರಷ್ಟು ಕೆಟಗರಿಗಳಿವೆ.

ಬಿಡಿಎ ಸೈಟ್ ಹರಾಜು ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಬಿಡಿಎ ಸೈಟ್ ಹರಾಜು ಪ್ರಕ್ರಿಯೆ ಸಾಮಾನ್ಯವಾಗಿ ಪ್ರತಿ ವರ್ಷ ನಡೆಯುತ್ತದೆ. ಕೆಲವು ಸೈಟ್​ಗಳನ್ನು ಮೂಲೆನಿವೇಶನ ಅಥವಾ ಕಾರ್ನರ್ ಪ್ರಾಪರ್ಟಿ ಎಂದು ಕರೆಯಲಾಗುತ್ತದೆ. ಇವುಗಳನ್ನು ಮೊದಲು ಹರಾಜು ಹಾಕುತ್ತಾರೆ. ಕಮರ್ಷಿಯಲ್ ಸ್ಪೇಸ್ ಎಂದು ಮತ್ತೊಂದು ವಿಭಾಗ ಇರುತ್ತದೆ. ಅದನ್ನು ಕೂಡ ಹರಾಜು ಮೂಲಕ ಮಾರಾಟ ಮಾಡಲಾಗುತ್ತದೆ. ಇದರಿಂದ ಬಿಡಿಎಗೆ ಹೆಚ್ಚು ಆದಾಯ ದೊರೆಯುತ್ತದೆ.

ಬಿಡಿಎ ಸೈಟ್ ಹರಾಜಿನ ಹಂತಗಳು

  • ಮೊದಲು ಬಿಡಿಎ ಅಧಿಸೂಚನೆ ಹೊರಡಿಸುತ್ತದೆ.
  • ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗುತ್ತದೆ.
  • ಬಿಡಿಎ ವೆಬ್​​ಸೈಟ್​ನಲ್ಲಿ ಕೂಡ ಪ್ರಕಟಣೆ ಹೊರಡಿಸುತ್ತಾರೆ.
  • ಎಲ್ಲಿ ನಿವೇಶನ ಇದೆ ಎಂಬ ಬಗ್ಗೆ ಗೂಗಲ್ ಮ್ಯಾಪ್​ನಲ್ಲಿ ಮಾಹಿತಿ ನೀಡುತ್ತಾರೆ.
  • ನಿವೇಶನ ಖರೀದಿಸುವ ಇಚ್ಛೆ ಉಳ್ಳವರು ಆ ಜಾಗಕ್ಕೆ ಹೋಗಿ ಪರಿಶೀಲಿಸಬೇಕಾಗುತ್ತದೆ.
  • ಆಯ್ಕೆ ಮಾಡಿದ ನಿವೇಶನದ ಮೇಲೆ ಮೂಲ ಬೆಲೆ (ಬೇಸಿಕ್ ರೇಟ್) ನಿಗದಿ ಮಾಡುತ್ತಾರೆ.
  • ಆ ಮೂಲ ಬೆಲೆಗಿಂತ ಹೆಚ್ಚು ದರಕ್ಕೆ ಬಿಡ್ ಮಾಡಿ ನಿವೇಶನ ಖರೀದಿಸಬಹುದು.

ಬಿಡಿಎ ಸೈಟ್ ಖರೀದಿಗೆ ಯಾವೆಲ್ಲ ದಾಖಲೆಗಳು ಬೇಕು?

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಬ್ಯಾಂಕ್ ಖಾತೆ ವಿವರಗಳು
  • ವಿಳಾಸ, ಈ ಪ್ರೊಕ್ಯೂರ್ಮೆಂಟ್ ಐಡಿ.

ಬಿಡಿಎ ಸೈಟ್ ಎಂದರೇನು?

ಬಿಡಿಎ ಒಂದಿಷ್ಟು ಜಾಗವನ್ನು ಖರೀದಿಸಿ ಅಭಿವೃದ್ಧಿಪಡಿಸುತ್ತದೆ. ನಿವೇಶನಗಳನ್ನಾಗಿ ಪರಿವರ್ತಿಸಿ ಬಿಬಿಎಂಪಿಗೆ ಹಸ್ತಾಂತರಿಸುತ್ತದೆ. ಇಲ್ಲಿ ಬಿಡಿಎ ಹಾಗೂ ಬಿಬಿಎಂಪಿ ನಿಯಮಗಳು ಈ ಸೈಟ್​​ಗಳಿಗೆ ಅನ್ವಯವಾಗುತ್ತವೆ. ನಿವೇಶನ ಖರೀದಿಸಿದ ನಂತರ ಖಾತಾ ಮಾಡಿಸಿಕೊಳ್ಳುವುದು ಬಹು ಮುಖ್ಯವಾಗಿದೆ. ಇವಾಗ ಇ ಖಾತಾ ಕಡ್ಡಾಯಗೊಳಿಸಿರುವುದು ಗಮನಾರ್ಹ.

ಇದನ್ನೂ ಓದಿ: ಎ ಮತ್ತು ಬಿ ಖಾತಾ ಎಂದರೇನು? ಗುರುತಿಸುವುದು ಹೇಗೆ, ಬಿ ಖಾತಾ ಇದ್ದರೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ

ನಿವೇಶನದ ಉದ್ದೇಶಕ್ಕೆಂದು ಖರೀದಿಸಿದ ಸೈಟ್ ಅನ್ನು ವಾಣಿಜ್ಯಕ್ಕೆ ಪರಿವರ್ತಿಸಲು ಅವಕಾಶವೂ ಇದೆ. ತೆರಿಗೆ ಆಯ್ಕೆಯ ವೇಳೆ ಅದನ್ನು ಮಾಡಬೇಕಾಗುತ್ತದೆ. ಬಿಬಿಎಂಪಿಗೆ ತೆರಿಗೆ ಪಾವತಿ ಮಾಡುವ ಸಂದರ್ಭದಲ್ಲಿ ಅದಕ್ಕೆ ಬೇಕಾದ ಬದಲಾವಣೆಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಾಟ್ನಾದಲ್ಲಿ 1,200 ಕೋಟಿ ವೆಚ್ಚದ ಟರ್ಮಿನಲ್ ಉದ್ಘಾಟಿಸಿದ ಮೋದಿ
ಪಾಟ್ನಾದಲ್ಲಿ 1,200 ಕೋಟಿ ವೆಚ್ಚದ ಟರ್ಮಿನಲ್ ಉದ್ಘಾಟಿಸಿದ ಮೋದಿ
ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು
ಬಂಟ್ವಾಳ್ ರಹಿಮಾನ್ ಹತ್ಯೆ: ರಣಾಂಗಣವಾದ ಮುಸ್ಲಿಂ ಮುಖಂಡರ ಸಭೆ
ಬಂಟ್ವಾಳ್ ರಹಿಮಾನ್ ಹತ್ಯೆ: ರಣಾಂಗಣವಾದ ಮುಸ್ಲಿಂ ಮುಖಂಡರ ಸಭೆ