ಒಂದೇ ಗಂಟೆಯಲ್ಲಿ ಎತ್ತಂಗಡಿ ಮಾಡ್ತೀನಿ: ಸಭೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಡಿಕೆಶಿ ಖಡಕ್ ವಾರ್ನ್

ಸಿಎಂ ಡಿಕೆ ಶಿವಕುಮಾರ್ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬೆಂಗಳೂರಿನಲ್ಲಿ ಐದು ಹೊಸ ಪೊಲೀಸ್ ಕಮಿಷನರೇಟ್‌ಗಳ ಸ್ಥಾಪನೆ ಕುರಿತು ಚರ್ಚಿಸಿದ್ದಾರೆ. ಉತ್ತಮ ಆಡಳಿತ, ಕಾನೂನು ಸುವ್ಯವಸ್ಥೆ ಕಾಪಾಡಲು ನಿರ್ದೇಶನ ನೀಡಿದ್ದಾರೆ. ಜೊತೆಗೆ ಭ್ರಷ್ಟಾಚಾರ ಮತ್ತು ರಿಯಲ್ ಎಸ್ಟೇಟ್ ದಂಧೆಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆ ನೀಡಿರುವ ಸಿಎಂ, ಪರೀಕ್ಷಾ ಅಕ್ರಮ ತಡೆಯಲು ಮತ್ತು ಡ್ರಗ್ಸ್ ಮುಕ್ತ ಬೆಂಗಳೂರಿಗೆ ಶ್ರಮಿಸಲು ಕರೆ ನೀಡಿದ್ದಾರೆ.

ಒಂದೇ ಗಂಟೆಯಲ್ಲಿ ಎತ್ತಂಗಡಿ ಮಾಡ್ತೀನಿ: ಸಭೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಡಿಕೆಶಿ ಖಡಕ್ ವಾರ್ನ್
ಪೊಲೀಸ್​ ಅಧಿಕಾರಿಗಳ ಜೊತೆ ಸಿಎಂ ಡಿಕೆ ಶಿವಕುಮಾರ್​ ಸಭೆ
Image Credit source: x.com/DKShivakumar
Edited By:

Updated on: Nov 20, 2026 | 9:38 PM

ಮುಖ್ಯಾಂಶಗಳು

  • ಪೊಲೀಸ್​ ಅಧಿಕಾರಿಗಳ ಜೊತೆ ಸಿಎಂ ಡಿಕೆ ಶಿವಕುಮಾರ್​ ಮಹತ್ವದ ಸಭೆ
  • ನೋ‌ ಕರಪ್ಷನ್, ನೋ ರಿಯಲ್ ಎಸ್ಟೇಟ್ ಎಂದ ಸಿಎಂ
  • ಜಿಬಿಎ 5 ಕಾರ್ಪೊರೇಷನ್ ನೋಡಿ ಇಡೀ ದೇಶದಲ್ಲಿ ಮೆಚ್ಚುಗೆ

ಬೆಂಗಳೂರು, ನವೆಂಬರ್​​ 20: ಬೆಂಗಳೂರಿಗೆ ಐದು ಕಮಿಷನರ್ ನೇಮಕ ಬೆನ್ನಲ್ಲೇ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ, ಬೆಂಗಳೂರು ನಗರ ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಸಿಎಂ ಡಿಕೆ ಶಿವಕುಮಾರ್​ ಮಹತ್ವದ ಸಭೆ ಮಾಡಿದ್ದು, ನಗರದ ಕಾನೂನು ಸುವ್ಯವಸ್ಥೆ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಚರ್ಚೆ ಮಾಡಿದ್ದಾರೆ. ನಿಮಗೆ ನಿಮ್ಮನ್ನು ಸಾಬೀತುಪಡಿಸಿಕೊಳ್ಳಲು ಉತ್ತಮ ಅವಕಾಶ ಎಂದು ಸಿಎಂ ಹೇಳಿದ್ದಾರೆ.

ನಮ್ಮ ಸರಕಾರಕ್ಕೆ ಒಳ್ಳೆ ಹೆಸರು ತನ್ನಿ: ನಾನು ಬಯಸೋದು ಅಷ್ಟೇ ಎಂದ ಡಿಕೆ ಶಿವಕುಮಾರ್​

ಪೊಲೀಸ್​ ಅಧಿಕಾರಿಗಳ ಜೊತೆ ಸಭೆ ಬಳಿಕ ಸಿಎಂ ಡಿಕೆ ಶಿವಕುಮಾರ್​ ಪ್ರತಿಕ್ರಿಯಿಸಿದ್ದು, ‘6ನೇ ವರ್ಷದವನಿದ್ದಾಗಲೇ ನಾನು ಬೆಂಗಳೂರಿಗೆ ಬಂದಿದ್ದೇನೆ. ಬೆಂಗಳೂರು ಜೊತೆ ಬೆಳೆದವನು ನಾನು, ಬಾಲ್ಯದಿಂದ ಬಲ್ಲೆ. ಬೆಂಗಳೂರಿಗೆ ಬದಲಾವಣೆ ತರಬೇಕು ಅಂತಾ ದೃಢ ನಿರ್ಧಾರ ಮಾಡಿ 5 ಪಾಲಿಕೆ ಮಾಡಿದ್ದೇವೆ. ಈಗ 5 ಪೊಲೀಸ್ ಕಮಿಷನರೇಟ್ ಮಾಡಿದ್ದೇವೆ. ನನಗೆ ಪರ್ಫಾರ್ಮೆನ್ಸ್, ಗವರ್ನೆನ್ಸ್, ಅಕೌಂಟೆಬಿಲಿಟಿ ಬೇಕು. ನ್ಯೂಯಾರ್ಕ್ ಟೈಮ್ಸ್ ಬೆಂಗಳೂರು ಬಗ್ಗೆ ಬರೆಯುತ್ತಿದೆ. ಏಕೆ ಅಂದರೆ ಬೆಂಗಳೂರು ಈಗ ಗ್ಲೋಬಲ್ ಸಿಟಿ. ಮುಂಬೈ, ವಿಶಾಖಪಟ್ಟಣ ನಗರಗಳಲ್ಲಿ ಸಮುದ್ರ ಇದ್ದರೂ ಜನ ಬೆಂಗಳೂರು ಕಡೆ ನೋಡುತ್ತಾರೆ. ನಮಗೆ, ನಮ್ಮ ಸರಕಾರಕ್ಕೆ ಒಳ್ಳೆ ಹೆಸರು ತನ್ನಿ, ನಾನು ಬಯಸೋದು ಅಷ್ಟೇ’ ಎಂದು ಅವರು ಹೇಳಿದ್ದಾರೆ.

Loading...

ಸಿಎಂ ಡಿಕೆ ಶಿವಕುಮಾರ್​ ಟ್ವೀಟ್​

ಒಂದೇ ಗಂಟೆಯಲ್ಲಿ ಎತ್ತಂಗಡಿ ಮಾಡ್ತೀನಿ: ಸಿಎಂ ಎಚ್ಚರಿಕೆ 

‘ನೀವು ಯಾರಾದರೂ ನಮ್ಮ ಸರ್ಕಾರದ ರಾಜಕೀಯ ಪ್ರತಿನಿಧಿಗಳಿಗೆ ಒಂದು ರೂ ಲಂಚ ಕೊಟ್ಟು ಈ ಹುದ್ದೆಗೆ ಬಂದಿದ್ದೀರಾ ಹೇಳಿ ನೋಡೋಣ. ನೀವು ಸರಿಯಾಗಿ ಕೆಲಸ ಮಾಡಿ. ಈಗ ಹೊಸದಾಗಿ ಬಂದಿದ್ದೇನೆ. ಒಂದು ವರ್ಷ ಯಾರೂ ನಮ್ಮನ್ನು ಏನೂ ಮಾಡಲು ಆಗಲ್ಲ ಅಂತಾ ನೀವೇನಾದರೂ ತಿಳಿದುಕೊಂಡದ್ದರೆ ಅದು ಭ್ರಮೆ. ಸರಿಯಾಗಿ ಕೆಲಸ ಮಾಡಲಿಲ್ಲ ಅಂದರೆ ಒಂದೇ ಗಂಟೆಯೊಳಗೆ ಚೇಂಜ್ ಮಾಡುತ್ತೇವೆ. ಕೆಲವು ಪೊಲೀಸ್ ಇನ್ಸ್‌ಪೆಕ್ಟರ್ ಬರೀ ವ್ಯವಹಾರ ಮಾಡಿಕೊಂಡು ಕೂತಿದ್ದಾರೆ. ಅವರ ಕುಟುಂಬ ಸದಸ್ಯರ ಹೆಸರಲ್ಲಿ ಎಕರೆಗಟ್ಟಲೇ ಜಮೀನು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಬೇನಾಮಿ ಆಸ್ತಿ ಮಾಡುವುದೇ ಅವರ ಕೆಲಸ ಆಗಿದೆ. ನನ್ನತ್ರ ಪ್ರತಿಯೊಂದು ವಿವರ ಇದೆ. ನಿಮಗೆ ಅವಕಾಶ ಕೊಟ್ಟಿದ್ದೇವೆ. ಯಾವುದೇ ಒತ್ತಡಕ್ಕೆ ಮಣಿದು ನಿಮಗೆ ಈ ಜವಾಬ್ದಾರಿ ಕೊಟ್ಟಿಲ್ಲ. ಉತ್ತಮವಾಗಿ ಕೆಲಸ ಮಾಡಿ. ಸೈಬರ್ ಕ್ರೈಂ, ಆನ್ಲೈನ್ ಕ್ರೈಂ, ಡ್ರಗ್ ಮಾಫಿಯಾ ಪರಿಣಾಮಕಾರಿಯಾಗಿ ತಡೆಯಬೇಕು’ ಎಂದಿದ್ದಾರೆ.

ಪೊಲೀಸ್ ಠಾಣೆಯಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಯಬಾರದು

‘ಪೊಲೀಸ್ ಠಾಣೆಯಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಯಬಾರದು. ಅದಕ್ಕೆಲ್ಲ ಕ್ರಮ ತೆಗೆದುಕೊಂಡಿದ್ದೇವೆ. ಯಾವುದೇ ರೀತಿಯ ಆಂತರಿಕ ಜಗಳ ಮತ್ತು ಗೊಂದಲ ಆಗಬಾರದು. ಸಭೆಯಲ್ಲಿ ಅಧಿಕಾರಿಗಳಿಗೆ ಎಲ್ಲಾ ನಿರ್ದೇಶನಗಳನ್ನೂ ಕೊಟ್ಟಿದ್ದೇವೆ. ನಾವು ಹಿರಿಯ ಅಧಿಕಾರಿಗಳ ತಂಡ ಮಾಡಿದ್ದೇವೆ. ರಾಜ್ಯದ ಅಭಿಪ್ರಾಯದ ವಿವರವಾದ ರಿಪೋರ್ಟ್ ಕೊಡುತ್ತೇವೆ. ನೋ‌ ಕರಪ್ಷನ್, ನೋ ರಿಯಲ್ ಎಸ್ಟೇಟ್ ಎಂದು ಹೇಳಿದ್ದೇನೆ. ಸಭೆಯಲ್ಲಿ ಪೊಲೀಸರಿಗೆ ವಾರ್ನಿಂಗ್​ ಕೊಟ್ಟಿದ್ದೇವೆ. ಅರ್ಥ ಮಾಡಿಕೊಂಡು ಕೆಲಸ ನಿರ್ವಹಿಸುತ್ತಾರೆಂದು ಭಾವಿಸ್ತೇನೆ’ ಎಂದಿದ್ದಾರೆ.

ಇದನ್ನೂ ಓದಿ: ‘ಬಸವ ಮಂಟಪ’ ಕೃತಿ ವಿವಾದ: ಕರ್ನಾಟಕಕ್ಕೆ ದೊಡ್ಡ ಅಗೌರವ, ಮುಟ್ಟುಗೋಲಿಗೆ ಈಗಾಗಲೇ ಸೂಚನೆ ನೀಡಿದ್ದೇವೆ ಎಂದ ಸಿಎಂ ಡಿಕೆಶಿ

‘ಜಿಬಿಎ 5 ಕಾರ್ಪೊರೇಷನ್ ನೋಡಿ ಇಡೀ ದೇಶದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಅದೇ ರೀತಿ ಐದು ಪೊಲೀಸ್ ಕಮಿಷನರೇಟ್​​ ಮಾಡಿದ್ದೇವೆ. ಬೆಂಗಳೂರು ನಗರಕ್ಕೆ ಒಬ್ಬರು ಚೀಫ್ ಪೊಲೀಸ್​ ಕಮಿಷನರ್, ಜೊತೆಗೆ ಬೆಂಗಳೂರಿನ ಬಾರ್ಡರ್ ಸಹ ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಗೌರವ ಸಿಗುವವರಿಗೆ ಗೌರವ, ರಕ್ಷಣೆ ಸಿಗಬೇಕಾದವರಿಗೆ ರಕ್ಷಣೆ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಅದಕ್ಕೆ 5 ಕಮಿಷನರೇಟ್ ಮಾಡಿದ್ದೇವೆ’ ಎಂದು ಸಿಎಂ ಡಿಕೆ ಶಿವಕುಮಾರ್​ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಹರೀಶ್ ಜಿ.ಆರ್​.

ಹರೀಶ್ ಜಿ.ಆರ್ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಪೌಢ ಶಿಕ್ಷಣವನ್ನು ಉಜಿರೆಯ ಎಸ್ ಡಿಎಂ ಸಂಸ್ಥೆಯಲ್ಲಿ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ದಲ್ಲಿ ಬಿ.ಎ ಪದವಿಯನ್ನು, ಮಾನಸ ಗಂಗೋತ್ರಿಯ EMMRC ಸಂಸ್ಥೆಯ ಎಲೆಕ್ಟ್ರಾನಿಕ್ ಮೀಡಿಯಾ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಧ್ಯ ಪತ್ರಿಕೋದ್ಯಮದಲ್ಲಿ 14 ವರ್ಷದ ಅನುಭವ ಹೊಂದಿರುವ ಇವರು, ದೆಹಲಿಯಲ್ಲಿಯೇ 10 ವರ್ಷಗಳ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ, ರಾಜಕೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಸುಪ್ರೀಂಕೋರ್ಟ್ ವರದಿಗಾರಿಕೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅಯೋಧ್ಯೆ ರಾಮಮಂದಿರದ ತೀರ್ಪು ನಿಂದ ಹಿಡಿದು ಮಂದಿರ ಉದ್ಘಾಟನೆವರೆಗೂ ವರದಿ ಮಾಡಿದ ಅನುಭವ ಹೊಂದಿದ್ದಾರೆ. ಪುಲ್ವಾಮ ಉಗ್ರರ ದಾಳಿ, ಪಹಲ್ಗಾಂ ಉಗ್ರರ ದಾಳಿ, ಆದಾದ ನಂತರದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೌಂಡ್ ರಿಪೋರ್ಟ್ ಮಾಡಿರುವ ಅನುಭವ ಹೊಂದಿದ್ದಾರೆ.. ಉತ್ತರಖಂಡದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳನ್ನು ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ. 2019‌ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜ್ಯಗಳನ್ನು ಸುತ್ತಿ ಜನರ ರಾಜಕೀಯ ನಾಡಿಮಿಡಿತದ ವರದಿ ಮಾಡಿದ್ದಾರೆ.. ಸಧ್ಯ ಇವರು ಬೆಂಗಳೂರಿನಲ್ಲಿ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Read More
Loading...
Unable to load recommendations.
Follow Us