ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಮಾಲೀಕನಿಗೆ ಅರಿವಿಲ್ಲದಿದ್ದರೆ ಆತ ಅಪರಾಧಿಯಲ್ಲ – ಹೈಕೋರ್ಟ್ ಆದೇಶ
ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆಗೆ ನಡೆಯುತ್ತಿರುವುದು ಮಾಲೀಕನಿಗೆ ಅರಿವಿರದಿದ್ದರೆ ಆತ ಅಪರಾಧಿಯಾಗುವುದಿಲ್ಲ. ಆದ್ರೆ ಮಾಲೀಕನಿಗೆ ಈ ಬಗ್ಗೆ ಮೊದಲೇ ಗೊತ್ತಿದ್ದರೆ ಮಾತ್ರ ಆತ ಹೊಣೆಗಾರನಾಗುತ್ತಾನೆ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.
ಬೆಂಗಳೂರು: ಬಾಡಿಗೆ ಮನೆಯ ವೇಶ್ಯಾವಾಟಿಕೆಗೆ(Prostitution) ಅರಿವಿರದ ಮಾಲೀಕ ಹೊಣೆಯಲ್ಲ ಎಂದು ಹೈಕೋರ್ಟ್(Karnataka High Court) ಏಕಸದಸ್ಯ ಪೀಠ ಮಹತ್ವದ ಆದೇಶ ನೀಡಿದೆ. ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆಗೆ ನಡೆಯುತ್ತಿರುವುದು ಮಾಲೀಕನಿಗೆ(House Owner) ಅರಿವಿರದಿದ್ದರೆ ಆತ ಅಪರಾಧಿಯಾಗುವುದಿಲ್ಲ. ಆದ್ರೆ ಮಾಲೀಕನಿಗೆ ಈ ಬಗ್ಗೆ ಮೊದಲೇ ಗೊತ್ತಿದ್ದರೆ ಮಾತ್ರ ಆತ ಹೊಣೆಗಾರನಾಗುತ್ತಾನೆ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.
ಬೆಂಗಳೂರಿನ ನಾಗರಭಾವಿಯ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಸಿಕ್ಕ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಅನೈತಿಕ ವೇಶ್ಯಾವಾಟಿಕೆ ತಡೆ ಕಾಯ್ದೆಯಡಿ ಕೇಸ್ ದಾಖಲಿಸಿದ್ದರು. ಮಾಲೀಕ ಪ್ರಭುರಾಜ್ ಮೇಲೂ ಕೇಸ್ ದಾಖಲಿಸಿದ್ದರು. ಹಾಗಾಗಿ ಮಾಲೀಕ ಬಾಡಿಗೆ ಕರಾರಿನ ಪತ್ರ ಹಾಜರುಪಡಿಸಿದ್ದರು. ಸದರಿ ಕಟ್ಟಡದಲ್ಲಿ ತಾನು ವಾಸವಾಗಿಲ್ಲವೆಂದು ಉತ್ತರ ನೀಡಿದ್ದರು. ವೇಶ್ಯಾವಾಟಿಕೆಯ ಅರಿವಿರಲಿಲ್ಲವೆಂದು ಪೊಲೀಸರಿಗೆ ಉತ್ತರಿಸಿದ್ದರು. ಆತ ಬೇರೆಡೆ ನೆಲೆಸಿರುವುದು ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿತ್ತು. ಆದರೂ ಪೊಲೀಸರು ಆರೋಪ ಪಟ್ಟಿ ದಾಖಲಿಸಿದ್ದರು. ಪ್ರಕರಣ ರದ್ದುಪಡಿಸಲು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಹೈಕೋರ್ಟ್ ಮಾಲೀಕನ ವಿರುದ್ಧದ ಕೇಸ್ ರದ್ದುಪಡಿಸಿದ್ದು ನ್ಯಾ.ಎಂ.ನಾಗಪ್ರಸನ್ನ ರವರಿದ್ದ ಏಕಸದಸ್ಯ ಪೀಠ ಆದೇಶ ಹೊರ ಬಿದ್ದಿದೆ.
ಸ್ಥಳೀಯ ಪಂಚಾಯತಿಗಳಿಗೆ ಲಕ್ಷ ಲಕ್ಷ ರೂ. ತೇರಿಗೆ ಕಟ್ಟದೆ ಕಳ್ಳಾಟ; ಮೊಬೈಲ್ ಟವರ್ ಕಂಪನಿಗಳಿಗೆ ಅಧಿಕಾರಿಗಳಿಂದ ಶಾಕ್