AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸ್ ವೈಫಲ್ಯಕ್ಕೆ ಯಾರು ಹೊಣೆ: ವಿಧಾನಸಭೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ

‘ಪೊಲೀಸ್ ಇಲಾಖೆಯಲ್ಲಿ ಇಂಥದ್ದೆಲ್ಲಾ ಯಾವಾಗಿನಿಂದ ಆರಂಭವಾಯಿತು ಸ್ವಾಮಿ? ಹಿಂದೆ ಏಜೆಂಟರನ್ನು ಇಟ್ಟುಕೊಂಡಿದ್ದರು. ನಾವು ಹತ್ತಿರ ಸೇರಿಸಿಲ್ಲ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಪೊಲೀಸ್ ವೈಫಲ್ಯಕ್ಕೆ ಯಾರು ಹೊಣೆ: ವಿಧಾನಸಭೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ
ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ
TV9 Web
| Edited By: |

Updated on: Mar 24, 2022 | 3:17 PM

Share

ಬೆಂಗಳೂರು: ಕರ್ನಾಟಕದ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಕುರಿತು ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ಸಿದ್ದರಾಮಯ್ಯ ಮಾತಿಗೆ ಆಕ್ಷೇಪಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ‘ನಿಮ್ಮ ಕಾಲದಲ್ಲಿ ಎನಾಗಿತ್ತು’ ಎಂದು ಪ್ರಶ್ನಿಸಿದರು. ‘ನಮ್ಮ ಕಾಲದಲ್ಲಿ ತಪ್ಪು ಆಗಿದ್ದರೆ ಅದನ್ನು ನಮ್ಮ ವೈಫಲ್ಯ ಎಂದು ಒಪ್ಪಿಕೊಳ್ತೀವಿ. ನಿಮ್ಮದನ್ನು ನೀವು ಒಪ್ಪಿಕೊಳ್ತೀರಾ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ‘ಎಲ್ಲದಕ್ಕೂ ನಿಮ್ಮ ಕಾಲದಲ್ಲಿ ಹೀಗಾಗಿತ್ತು ಎನ್ನುವುದೇ ನಿಮ್ಮ ಉತ್ತರವಾಗಿದ್ದರೆ, ನೀವು ಅಲ್ಲಿರುವುದೇಕೆ? ನಾವು ಇಲ್ಲಿರುವುದೇಕೆ’ ಎಂದು ಎದಿರೇಟು ನೀಡಿದರು. ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ ಪ್ರಸ್ತಾಪಿಸಿದ ಅವರು, ‘ಕಾಸು ಕೊಟ್ಟರೆ ಅಷ್ಟೇ ಪೊಲೀಸ್ ಬಾಸು’ ಎಂಬ ಶೀರ್ಷಿಕೆಯಡಿ ಪ್ರಜಾವಾಣಿ ವರದಿ ಪ್ರಕಟಿಸಿದೆ. ಇಲ್ಲಿಯವರೆಗೆ ಇದನ್ನ ನೀವಾಗಲಿ, ಸಿಎಂ ಆಗಲಿ ಅದನ್ನು ತಳ್ಳಿ ಹಾಕಿಲ್ಲ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ನಾನು ವರದಿಯನ್ನ ಅಲ್ಲಗಳೆಯಲ್ಲ. ಆದರೆ ಏಜೆಂಟರನ್ನು ದೂರ ಇಟ್ಟಿದ್ದೇವೆ ಎಂದರು.

‘ಪೊಲೀಸ್ ಇಲಾಖೆಯಲ್ಲಿ ಇಂಥದ್ದೆಲ್ಲಾ ಯಾವಾಗಿನಿಂದ ಆರಂಭವಾಯಿತು ಸ್ವಾಮಿ? ಹಿಂದೆ ಏಜೆಂಟರನ್ನು ಇಟ್ಟುಕೊಂಡಿದ್ದರು. ನಾವು ಹತ್ತಿರ ಸೇರಿಸಿಲ್ಲ. ಹಿಂದಿನ ಸರ್ಕಾರದಲ್ಲಿ ಇರಲಿಲ್ಲವಾ? ಹೊಸ ಸವಾರ ಬಂದ ತಕ್ಷಣ ಹಳೇ ಕುದುರೆ ತನ್ನ ಚಾಳಿ ಬಿಡುವುದಿಲಲ್ಲ. ತನಗೆ ಬೇಕಾದ ಕಡೆಗೆ ಎಳೆದುಕೊಂಡು ಹೋಗುತ್ತದೆ’ ಎಂದರು. ‘ಕೊಟ್ಟ ಕುದುರೆಯನ್ನು ಏರದವನು ಶೂರನು ಅಲ್ಲ ವೀರನೂ ಅಲ್ಲ’ ಎಂದು ಸಿದ್ದರಾಮಯ್ಯ ಅಲ್ಲಮಪ್ರಭು ಅವರ ವಚನ ಉದಾಹರಿಸಿದರು.

ಭಾರತದಲ್ಲಿ ಶಾಂತಿ ಕದಡಿದ್ರೆ ಯಾವುದೇ ಅಭಿವೃದ್ಧಿ ಆಗಲ್ಲ. ರಾಜ್ಯದ ಪರಿಸ್ಥಿತಿ ಕೂಡ ಹಾಗೆ ಆಗಿದೆ. ಗ್ರಾಸ್ ಎನ್​ರೋಲ್​ಮೆಂಟ್ ರೇಷಿಯೋದಲ್ಲಿ ರಾಜ್ಯ ಹಿಂದೆ ಉಳಿದಿದೆ. ಬಿಜೆಪಿ ಸರ್ಕಾರ ಬಂದ ಮೇಲೆ ಕಾನೂನು ಸುವ್ಯವಸ್ಥೆ ಕುಸಿದಿದೆ. ರಾಜಕೀಯದಲ್ಲಿ ಧರ್ಮ ಬೆರೆಸುವುದರಿಂದ ದೇಶ ಅಭಿವೃದ್ಧಿಯಾಗಲ್ಲ. ಬಹು ಸಂಸ್ಕೃತಿ, ಸಂವಿಧಾನ ಮರೆತರೆ ದೇಶ ಅಭಿವೃದ್ಧಿ ಆಗಲ್ಲ. ಅಭಿವೃದ್ಧಿಗೂ ಶಾಂತಿ ಸುವ್ಯವಸ್ಥೆಗೆ ನೇರ ಸಂಬಂಧ ಇದೆ. ಪ್ರತಿಯೊಬ್ಬರು ನಾವು ಇದನ್ನು ಅರ್ಥ ಮಾಡಿಕೊಳ್ಳಬೇಕು. ಕಾನೂನು, ತಿದ್ದುಪಡಿಗಳ ಉದ್ದೇಶ ಅರ್ಥ ಮಾಡಿಕೊಳ್ಳಬೇಕು. 2 ವರ್ಷದಿಂದ ಹೂಡಿಕೆ ಬಂದಿಲ್ಲ, ಉದ್ಯೋಗ ಸೃಷ್ಟಿ ಆಗಿಲ್ಲ ಎಂದು ವಿವರಿಸಿದರು.

ಸರ್ಕಾರಿ ಶಾಲೆಗಳಿಗೆ ಕಟ್ಟಡ ಸಮಸ್ಯೆ

ಪ್ರಶ್ನೋತ್ತರ ಕಲಾಪದಲ್ಲಿ ಮಳವಳ್ಳಿ ಶಾಸಕ ಡಾ.ಅನ್ನದಾನಿ ಸರ್ಕಾರಿ ಶಾಲೆಗಳ ಕಟ್ಟಡ ಸಮಸ್ಯೆ ವಿವರಿಸಿದರು. ನಾನು ಶಾಲೆಗೆ ಜಾಗ ಕೊಡ್ತಿನಿ. ಎಲ್ಲಾ ಶಾಲೆಗಳಿಗೂ ಸ್ವಂತ ಕಟ್ಟಡಗಳನ್ನು ಕಟ್ಟಬೇಕು ಎಂದು ಮನವಿ ಮಾಡಿದರು. ಪ್ರಾಥಮಿಕ ಶಾಲೆಗಳಿಗೆ ಇರುವ ಕಟ್ಟಡಗಳಲ್ಲಿ ಅರ್ಧದಷ್ಟು ಪ್ರಯೋಜನಕ್ಕೆ ಬರುತ್ತಿಲ್ಲ. ಮಳೆ ಬಂದಾಗ ಸೋರುತ್ತದೆ, ಮರದ ಕೆಳಗೆ ವಿಧ್ಯಾಭ್ಯಾಸ ಮಾಡಿಸುವ ವ್ಯವಸ್ಥೆ ನಿರ್ಮಾಣ ಆಗಿದೆ. ದೆಹಲಿ ರೀತಿಯಲ್ಲಿ ಸರ್ಕಾರಿ ಶಾಲೆ ಹಾಗೂ ಆಸ್ಪತ್ರೆಗಳನ್ನು ಸರ್ಕಾರ ಮಾಡಿದ್ರೆ ಒಳ್ಳೆಯದು. ನಾಲ್ಕು ಶಾಲೆಗಳಿಗೆ ಯಾವಾಗ ಸ್ವಂತ ಕಟ್ಟಡ ಕಟ್ಟಿಸಿಕೊಡ್ತಿರಾ ಎಂದು ಪ್ರಶ್ನಿಸಿದರು.

ಶಿಕ್ಷಣ ಸಚಿವ ಬಿ.ಸಿ‌. ನಾಗೇಶ್ ಉತ್ತರಿಸಿ, ಅನ್ನದಾನಿ ಹೇಳಿದ್ದು ನಿಜ. ಆದರೆ ನಾಲ್ಕು ಶಾಲೆ ಅಲ್ಲ ಮೂರು. ಬಜೆಟ್​ನಲ್ಲಿ ಮಾದರಿ ಶಾಲೆಗಳ ಬಗ್ಗೆ ಸಿಎಂ ಹೇಳಿದ್ದಾರೆ. ಮಾದರಿ ಶಾಲೆಗಳನ್ನು ತೆಗೆದುಕೊಂಡು ನಮ್ಮ ಬಳಿ ಇರುವ ಹಣ ಹಾಕಿ ಅಭಿವೃದ್ಧಿ ಮಾಡ್ಬೇಕು ಎಂದು ಹೇಳಿದ್ದಾರೆ. ದೆಹಲಿ ಶಾಲೆಗಳಿಗಿಂತಲೂ ನಮ್ಮ ಕೆಪಿಎಸ್ ಶಾಲೆಗಳು ಉತ್ತಮವಾಗಿಯೇ ಇವೆ. ಒಂದೊಂದು ಶಾಲೆಗಳನ್ನು ಅಭಿವೃದ್ಧಿ ಮಾಡುವಂತೆ ಯೋಚನೆ ಮಾಡಿದೆ. ಯಾವ ಶಾಲೆಗಳಿಗೆ ಮಕ್ಕಳ ಸಂಖ್ಯೆ ಹಾಗೂ ಅವಶ್ಯಕತೆ ಇರುವಂತೆ ಮುಂದಿನ ದಿನಗಳಲ್ಲಿ ಅನುದಾನ ಹೊಂದಿಸುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಸಿದ್ದರಾಮಯ್ಯನವರೇ, ತಲವಾರು ಹಿಡಿದು ಹಟ್ಟಿಗೆ ನುಗ್ಗಿ ಗೋಕಳ್ಳತನ ಮಾಡಲಾಗ್ತಿತ್ತು; ಆಗ ಯಾಕೆ ಮೌನವಾಗಿದ್ದಿರಿ? ಭಜರಂಗದಳ ಪ್ರಶ್ನೆ

ಇದನ್ನೂ ಓದಿ: ನಮ್ಮ ಆರ್​ಎಸ್​ಎಸ್​ ಎಂದು ನೀವು ಹೇಗೆ ಹೇಳಲು ಸಾಧ್ಯ: ಸ್ಪೀಕರ್ ಮಾತಿಗೆ ಕಾಂಗ್ರೆಸ್ ಗರಂ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್