ಬೆಂಗಳೂರಿಗೆ ಐದು ದಿನ ಮಳೆ ಅಲರ್ಟ್, ಆಗಸ್ಟ್ ತಿಂಗಳಲ್ಲಿ ರಾಜಧಾನಿಗೆ ಕಾದಿದ್ಯಾ ವರುಣನ ಗಂಡಾಂತರ?

| Updated By: ರಮೇಶ್ ಬಿ. ಜವಳಗೇರಾ

Updated on: Aug 06, 2024 | 10:08 PM

ರಾಜ್ಯ ರಾಜಾಧಾನಿ ಬೆಂಗಳೂರಿನಲ್ಲಿ ಮಳೆರಾಯ ಆರ್ಭಟಿಸುತ್ತಿದ್ದಾನೆ. ಸದ್ಯ ಸಿಲಿಕಾನ್ ಸಿಟಿಯಲ್ಲಿ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಆರ್ಭಟಿಸುತ್ತಿದ್ದು, ಈ ತಿಂಗಳು ವಾಡಿಕೆಗಿಂತ ಹೆಚ್ಚು ಧಾರಕಾರ ಮಳೆಯಾಗುವ ಸಾಧ್ಯಾತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆ ಕುರಿತ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಬೆಂಗಳೂರಿಗೆ ಐದು ದಿನ ಮಳೆ ಅಲರ್ಟ್, ಆಗಸ್ಟ್ ತಿಂಗಳಲ್ಲಿ ರಾಜಧಾನಿಗೆ ಕಾದಿದ್ಯಾ ವರುಣನ ಗಂಡಾಂತರ?
ಮಳೆ
Follow us on

ಬೆಂಗಳೂರು, (ಆಗಸ್ಟ್​ 06): ಕರ್ನಾಟಕದೆಲ್ಲೆಡೆ ಮುಂಗಾರು ಮಳೆ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ಶ್ರಾವಣ ಶುರುವಾಗುತ್ತಿದ್ದಂತೆಯೇ ರಾಜ್ಯ ರಾಜಾಧಾನಿ ಬೆಂಗಳೂರಿನಲ್ಲೂ ಸಹ ಮಳೆ ಚುರುಕಾಗಿದೆ. ಮೊದಲ ಶ್ರಾವಣ ಸೋಮವಾರದ ಸಂಜೆ ಮತ್ತು ರಾತ್ರಿ ಸುರಿದ ಮಳೆಗೆ ಬೆಂಗಳೂರು ನಗರ ತತ್ತರಿಸಿ ಹೋಗಿದ್ದು, ರಸ್ತೆಗಳು ಜಲಾವೃತಗೊಂಡು ಎಲ್ಲೊಂದರಲ್ಲಿ ಗುಂಡಿಗಳು ಓಪನ್ ಆಗಿವೆ. ಈ ಮಧ್ಯೆ ಹವಾಮಾನ ಇಲಾಖೆ ಮತ್ತೆ ರಾಜಧಾನಿಗೆ ಇನ್ನೂ ಐದು ದಿನದ ಮಳೆಯ ಆಲರ್ಟ್ ನೀಡಿದ್ದು, ಜನರು ತುಂಬ ಎಚ್ಚರಿಕೆಯಿಂದ ಇರಬೇಕಾಗಿದೆ.

ಹೌದು, ಅರಬ್ಬಿ ಸಮುದ್ರದಲ್ಲಿ ಟ್ರಫ್ ಹಾಗೂ ವಾಯುಭಾರ ಕುಸಿತ ಹಿನ್ನೆಲೆ ಸಿಲಿಕಾನ್​ ಸಿಟಿಯಲ್ಲಿ ಮಳೆ ಮುಂದುವರೆದಿದ್ದು, ಇನ್ನು ಐದು ದಿನಗಳ ಕಾಲ ರಾಜ್ಯದಲ್ಲಿ‌ ಮಳೆಯ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು, ಕಾರವಳಿಭಾಗಕ್ಕೆ ಮಳೆ ಅಲರ್ಟ್ ಘೋಷಣೆ‌ ಮಾಡಲಾಗಿದೆ. ಅದರಲ್ಲಿ ಇಂದು ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಭಾಗಕ್ಕೆ ಸಾಧಾರಣ ಮಳೆ ಸಾಧ್ಯತೆ ಇದ್ಯಂತೆ.‌ ಇನ್ನು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಹಗುರದಿಂದ ಸಾಧಾರಣ ಮಳೆ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಕಲ್ಬುರ್ಗಿ, ಜಿಲ್ಲೆಗಳಿಗೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಲಾಲ್‌ಬಾಗ್​ನಲ್ಲಿ ಆ.8ರಿಂದ ಸ್ವಾತಂತ್ರೋತ್ಸವ ಫ್ಲವರ್‌ ಶೋ: ಯಾವ ಥೀಮ್‌? ಟಿಕೆಟ್ ಎಷ್ಟು? ಏನೆಲ್ಲಾ ವಿಶೇಷ?

ಇನ್ನು ಬೆಂಗಳೂರಿನಲ್ಲಿ‌ ನಿನ್ನೆ(ಆಗಸ್ಟ್ 06) 4 ಸೆಂ ಮೀ ಮಳೆಯಾಗಿದೆ. ಅತಿಹೆಚ್ಚು ಶಿರಾಲೂರಿನಲ್ಲಿ 9 ಸೆಂ ಮೀ ಮಳೆಯಾಗಿದ್ದು, ಇನ್ನು ನಾಲ್ಕು ದಿನಗಳ ಬೆಂಗಳೂರಿನಲ್ಲಿ ಮಳೆಯಾಗಲಿದೆ. ಹವಾಮಾನ ಇಲಾಖೆಯ ಪ್ರಕಾರ ಆಗಸ್ಡ್ ತಿಂಗಳಿನಲ್ಲಿ ರಾಜ್ಯದಲ್ಲಿ 22 ಸೆಂ‌ಮೀ‌ ಮಳೆಯಾಗಬೇಕು. ಆದ್ರೆ 22 ಸೆಂ ಮೀ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಇನ್ನು ಕರಾವಳಿಯಲ್ಲಿ ಆಗಸ್ಟ್ ತಿಂಗಳಲ್ಲಿ 82 ಸೆಂ ಮೀ‌ಮಳೆಯಾಗುವ ನಿರೀಕ್ಷೆ ಇದೆ‌. ಆದ್ರೆ ಟ್ರಫ್ ಉಂಟಾದ್ರೆ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ.

ಇನ್ನು ಉತ್ತರ ಒಳನಾಡಿನಲ್ಲಿ 12 ಸೆಂ ಮೀ ಮಳೆಯಾಗಬೇಕು. ಆದ್ರೆ ನೀರಿಕ್ಷೆಗೂ ಮೀರಿ ಮಳೆಯಾಗುವ ಸಾದ್ಯಾತೆ ಇದೆ. ಇನ್ನು ದಕ್ಷಿಣಒಳನಾಡಿನಲ್ಲಿ 18 ಸೆಂ ಮೀ ಮಳೆಯಾಗಬೇಕು. ಇದಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯಾತೆ ಇದೆ. ಇನ್ನು ಬೆಂಗಳೂರಿನಲ್ಲಿ 12 ಸೆಂ ಮೀಟರ್ ಮಳೆಗಬೇಕು. ಆದ್ರೆ ನೆನ್ನೆ ಒಂದೇ ದಿನ 4 ಸೆಂ ಮೀ ಮಳೆಯಾಗಿದ್ದು, ಇನ್ನು ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ.

ಈ ಮಳೆಯ ಅಲರ್ಟ್ ನೀಡುತ್ತಿದ್ದಂತೆ ತಗ್ಗು ಪ್ರದೇಶದ ಜನರಿಗೆ ಭಯದ ವಾತವರಣ ಶುರುವಾಗಿದೆ. ಸಣ್ಣ – ಸಣ್ಣ ಮಳಗೆ ನಗರದ ಶಾಂತಿನಗರ, ರೇಸ್ ಕೋರ್ಸ್ ರೋಡ್, ಡಬಲ್ ರೋಡ್ ಸುತ್ತ- ಮುತ್ತ ಭಯದ ವಾತಾವರಣ ಇದೆ.‌ಯಾಕಂದ್ರೆ ಮಳೆ ಬಂದ್ರೆ ಮಳೆ ನೀರು ಹೋಗುವುದಕ್ಕೆ ಸರಿಯಾಗಿ ವ್ಯವಸ್ಥೆ ಇಲ್ಲ. ಹೀಗಾಗಿ ಮಳೆ ಬಂದಾಗಲೆಲ್ಲ ಅಕ್ಮಪಕ್ಕದ ಮನೆಗಳಿಗೆ, ಅಂಗಡಿಗಳಿಗೆ ನೀರು ನುಗ್ಗುವುದು ಸಾಮಾನ್ಯವಾಗಿದೆ. ಇನ್ನು ವಾಹನ ಸಂಚಾರಕ್ಕೆ ಇನ್ನಿಲ್ಲದ ಸಮಸ್ಯೆ ಉಂಟಾಗುತ್ತೆ.‌ ಹೀಗಾಗಿ‌ ಮಳೆಯಿಂದ ಹಾನಿಯಾಗುವ ತಗ್ಗು ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ‌ ಸಮಸ್ಯೆಯನ್ನ ಬಗೆಹರಿಸಿ ಎಂದು ಸಿಲಿಕಾನ್ ಮಂದಿ ಹೇಳುತ್ತಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ