ಸಣ್ಣಪುಟ್ಟ ಸಮಸ್ಯೆಗೂ ಆ್ಯಂಟಿ ಬಯಾಟಿಕ್ ಮಾತ್ರೆಗಳಿಂದ ಆರೋಗ್ಯಕ್ಕೆ ಕುತ್ತು: ಜನರ ನಡೆಗೆ ವೈದ್ಯರು ಟೆನ್ಷನ್
ಆರೋಗ್ಯ ಇಲಾಖೆ ಹಾಗೂ ವೈದ್ಯರ ಟೆನ್ಷನ್ಗೆ ಕಾರಣವಾಗುತ್ತಿದೆ ಜನರ ನಡೆ. ಕೊವಿಡ್ ಬಳಿಕ ಜನರು ಹೆಚ್ಚಾಗಿ ಸೆಲ್ಪ್ ಮೆಡಿಕೇಶನ್ ಹಾಗೂ ಮಾತ್ರೆಗಳ ಸೇವೆನೆಗೆ ಮುಂದಾಗಿದ್ದಾರೆ. ಜ್ವರ, ಕೆಮ್ಮು, ನೆಗಡಿ, ಕಾಲು-ಕೈ ನೋವು ಏನೇ ಬಂದರೂ ಮೆಡಿಕಲ್ ಶಾಪ್ಗಳಿಗೆ ಹೋಗಿ ಮೆಡಿಸಿನ್ ಹಾಗೂ ಆ್ಯಂಟಿ ಬಯಾಟಿಕ್ ಮಾತ್ರೆ ನುಂಗುತ್ತಿದ್ದಾರೆ. ಇನ್ನು ಇತ್ತೀಚೆಗೆ ಮಹಿಳೆಯರು ಅಸುರಕ್ಷಿತ ಗರ್ಭಪಾತ ಮಾತ್ರೆಗಳನ್ನು ನುಂಗುತ್ತಿದ್ದು ವೈದ್ಯರ ಟೆನ್ಷನ್ಗೆ ಕಾರಣವಾಗಿದೆ.
ಬೆಂಗಳೂರು, ಆ.06: ಸಣ್ಣಪುಟ್ಟ ಸಮಸ್ಯೆಗೂ ಆ್ಯಂಟಿ ಬಯಾಟಿಕ್ ಮಾತ್ರೆಗಳ ಮೊರೆ ಹೋಗುತ್ತಿದ್ದು, ತಾವೇ ಔಷಧ ಮಳಿಗೆಗೆ ಹೋಗಿ ಮಾತ್ರೆ ಖರೀದಿ ಮಾಡುತ್ತಿದ್ದಾರೆ. ಇನ್ನು ಔಷಧ ಮಾರಟ ಮಳಿಗೆ ಮೆಡಿಕಲ್ ಶಾಪ್(Medical Shop) ಗಳು ಕೂಡ ಕನಿಷ್ಠ ಪ್ರಜ್ಞೆ ಇಲ್ಲದೆ ಯಾರೆಂದರೆ ಅವರಿಗೆ ಕೇಳಿದ ಔಷಧ ನೀಡುತ್ತಿವೆ. ಕೌಂಟರ್ ಮೆಡಿಸಿನ್ ನೀಡುತ್ತಿರುವುದರಿಂದ ಇತ್ತೀಚೆಗೆ ಅಸುರಕ್ಷಿತ ಗರ್ಭಪಾತ ಪ್ರಕರಣಗಳು ವರದಿಯಾಗುತ್ತಿವೆ. ಹೌದು, ಅಸುರಕ್ಷಿತ ಗರ್ಭಪಾತ ಮಾತ್ರೆಗಳ ಸೇವನೆಯಿಂದ ಗರ್ಭಿಣಿಯರ ಸಾವು ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ.
ಇತ್ತೀಚೆಗೆ ಗರ್ಭಿಣಿಯರು ಸ್ವಯಂ ಪ್ರೇರಿತರಾಗಿ ಅಸುರಕ್ಷಿತವಾದ ಗರ್ಭಪಾತ ಮಾತ್ರೆಗಳನ್ನ ಸೇವನೆ ಮಾಡುತ್ತಿದ್ದಾರೆ. ಈ ಅಸುರಕ್ಷಿತವಾದ ಮಾತ್ರೆಗಳ ಸೇವನೆಯಿಂದ ಜೀವ ಕೈಚೆಲ್ಲುತ್ತಿದ್ದು, ಈ ಹಿನ್ನಲೆ ಆರೋಗ್ಯ ಇಲಾಖೆ ಬೆಂಗಳೂರು ಸೇರಿದ್ದಂತೆ ರಾಜ್ಯದ ಔಷಧ ಮಾರಟಗಾರರಿಗೆ ಚಾಟಿ ಬೀಸಿದೆ. ಗರ್ಭಪಾತ ಮಾತ್ರೆಗಳನ್ನ ವೈದ್ಯರ ಪ್ರಿಸ್ಕ್ರಿಪ್ಷನ್(ಔಷಧ ಚೀಟಿ) ಇಲ್ಲದೆ ಔಷಧವನ್ನ ಕೌಂಟರ್ ಮೆಡಿಸಿನ್ ನೀಡಬಾರದು ಎಂದು ಆರೋಗ್ಯ ಇಲಾಖೆ ಆದೇಶ ನೀಡಿದರೂ ಮಾತ್ರೆಗಳನ್ನ ಕೊಡುತ್ತಿರುವ ಹಿನ್ನಲೆ ಅಸುರಕ್ಷಿತ ಗರ್ಭಪಾತ ಮಾತ್ರೆಗಳ ಸೇವಿಸಿ ಗರ್ಭಿಣಿಯರು ಸಾವು ಬದುಕಿನ ಸ್ಥಿತಿಯಲ್ಲಿ ಆಸ್ಪತ್ರೆಗೆ ಬರುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕ ಆಸ್ಪತ್ರೆಗಳಿಂದ ವೈದ್ಯರು ಆರೋಗ್ಯ ಇಲಾಖೆಗೆ ಸಾಕಷ್ಟು ದೂರುಗಳು ಕೂಡ ನೀಡಿದ್ದಾರೆ.
ಮೆಡಿಕಲ್ ಶಾಪ್ಗಳ ಲೈಸೆನ್ಸ್ ರದ್ದು ಮಾಡಲು ಮುಂದಾದ ಆರೋಗ್ಯ ಇಲಾಖೆ
ಇನ್ನು ಔಷಧ ಮಳಿಗೆಗಳು ಕೌಂಟರ್ ಮೆಡಿಸಿನ್ ರೂಪದಲ್ಲಿ ಗರ್ಭಪಾತ ಮಾತ್ರೆ ಸೇರಿದ್ದಂತೆ ಕೆಲವು ಅಪಾಯಕಾರಿಯಾದ ಔಷಧಗಳನ್ನ ವೈದ್ಯರ ಸಲಹಾ ಚೀಟಿ ಇಲ್ಲದೆ ನೀಡಬಾರದು. ಈ ಬಗ್ಗೆ ಆರೋಗ್ಯ ಇಲಾಖೆಯ ಆದೇಶ ಇದ್ದರೂ ಕೂಡ ಕೆಲವು ಔಷಧ ಮಳಿಗೆಗಳು ನಿಯಮ ಉಲ್ಲಂಘನೆ ಮಾಡುತ್ತೀವೆ. ಈ ಹಿನ್ನಲೆ ಎಚ್ಚೆತ್ತುಗೊಂಡಿರುವ ಆರೋಗ್ಯ ಇಲಾಖೆ ಕಾನೂನು ಬಾಹಿರವಾಗಿ ಗರ್ಭಪಾತ ಮಾತ್ರೆಗಳನ್ನ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೌಂಟರ್ ಮೆಡಿಸಿನ ನೀಡುವ ಮೆಡಿಕಲ್ ಶಾಪ್ಗಳ ಲೈಸೆನ್ಸ್ ರದ್ದು ಮಾಡುವುದರ ಜೊತೆಗೆ ಕಾನೂನು ಶಿಕ್ಷೆಗೆ ಒಳಪಡಿಸಲು ಮುಂದಾಗಿದೆ.
ಒಟ್ಟಿನಲ್ಲಿ ಕೊವಿಡ್ ಬಳಿಕ ಜನರುಲ್ಲಿ ಸೆಲ್ಪ್ ಮೆಡಿಕೇಶನ್ ಹೆಚ್ಚಾಗಿದೆ. ಜ್ವರ, ಕೆಮ್ಮು, ನೆಗಡಿ, ಕಾಲು ಕೈ ನೋವು ಏನೇ ಬಂದರೂ ಮೆಡಿಕಲ್ ಶಾಪ್ಗಳಿಗೆ ಹೋಗಿ ಮೆಡಿಸಿನ್ ಹಾಗೂ ಆ್ಯಂಟಿ ಬಯಾಟಿಕ್ ಮಾತ್ರೆ ನುಂಗುತ್ತಿದ್ದಾರೆ. ಇನ್ನು ಇದನ್ನ ಬಂಡವಾಳ ಮಾಡಿಕೊಂಡ ಕೆಲವು ಮೆಡಿಕಲ್ ಶಾಪ್ಗಳು ಜನರು ಕೇಳುವ ಮಾತ್ರೆಗಳನ್ನ ವೈದ್ಯರ ಸಲಹೆ ಇಲ್ಲದೆ ನೀಡುತ್ತಿರುವುದು ಜನರ ಆರೋಗ್ಯಕ್ಕೆ ಕುತ್ತು ತರುತ್ತಿದೆ. ಹೀಗಾಗಿ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ. ಜೊತೆಗೆ ಜನರು ಕೊಂಚ ಎಚ್ಚರವಹಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ