ಪೊಲೀಸರ ವಿರುದ್ಧ ದೂರಿದ್ದಕ್ಕೆ ಸುಳ್ಳು ಕೇಸ್​ನಲ್ಲಿ ಫಿಟ್​: ಜಡ್ಜ್​ ಮುಂದೆ ಅಳಲು ತೋಡಿಕೊಂಡ KPTCL ಉದ್ಯೋಗಿ

ಪೊಲೀಸರು ತಮ್ಮ ವಿರೋಧಿಗಳನ್ನು ಯಾವುದೋ ಒಂದು ಸುಳ್ಳು ಕೇಸ್​ನಲ್ಲಿ ಫಿಟ್ ಮಾಡುತ್ತಾರೆ ಅಂತೆಲ್ಲಾ ಮಾತುಗಳು ಕೇಳಿದ್ದೇವೆ. ಸಿನಿಮಾದಲ್ಲೂ ಸಹ ನೋಡಿದ್ದೇವೆ. ಅದರಂತೆ ಇಲ್ಲಿ ರಿಯಲ್​ ಆಗಿ ವ್ಯಕ್ತಿಯೊಬ್ಬರನ್ನು ಪೊಲೀಸರು ಸುಳ್ಳು ಗಾಂಜಾ ಕೇಸ್​ನಲ್ಲಿ ಫಿಟ್​ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ವತಃ ಬಂಧನವಾಗಿದ್ದ ವ್ಯಕ್ತಿ ಕೋರ್ಟ್​ನಲ್ಲಿ ಜಡ್ಜ್​ ಮುಂದೆ ಪೊಲೀಸರ ಅಸಲಿ ಮುಖವನ್ನು ಬಿಚ್ಚಿಟ್ಟಿದ್ದಾರೆ. ಏನಿದು ಪ್ರಕರಣ ಎನ್ನುವ ವಿವರ ಇಲ್ಲಿದೆ.

ಪೊಲೀಸರ ವಿರುದ್ಧ ದೂರಿದ್ದಕ್ಕೆ ಸುಳ್ಳು ಕೇಸ್​ನಲ್ಲಿ ಫಿಟ್​: ಜಡ್ಜ್​ ಮುಂದೆ ಅಳಲು ತೋಡಿಕೊಂಡ KPTCL ಉದ್ಯೋಗಿ
ಹೈಕೋರ್ಟ್​​
Follow us
Ramesha M
| Updated By: ರಮೇಶ್ ಬಿ. ಜವಳಗೇರಾ

Updated on:Aug 06, 2024 | 8:00 PM

ಬೆಂಗಳೂರು, (ಆಗಸ್ಟ್​ 06): ಪೊಲೀಸರ ವಿರುದ್ಧ ದೂರಿದ್ದಕ್ಕೆ ಸುಳ್ಳು ಕೇಸ್ ಹಾಕಿ ಬಂಧನ ಮಾಡಿದ್ದಾರೆ ಎಂದು ಕೆಪಿಟಿಸಿಎಲ್ ಉದ್ಯೋಗಿಯೊಬ್ಬರು ಗಂಭೀರ ಅರೋಪ ಮಾಡಿದ್ದಾರೆ. ಹೌದು…ಪೊಲೀಸರು ಗಾಂಜಾ ಕೇಸ್ ಹಾಕಿದ್ದಾರೆ ಎಂದು ಕೆಪಿಟಿಸಿಎಲ್ ಇಂಜಿನಿಯರ್ ಆಗಿರುವ ಶಾಂತಕುಮಾರಸ್ವಾಮಿ ಎನ್ನುವರು ಹೈಕೋರ್ಟ್​ ಮೊರಹೋಗಿದ್ದು, ಹೈಕೋರ್ಟ್​ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ಮುಂದೆ ಪೊಲೀಸರಿಂದ ತಮಗಾದ ಕಿರುಕುಳವನ್ನು ಬಿಚ್ಚಿಟ್ಟಿದ್ದಾರೆ. ಇದನ್ನು ಆಲಿಸಿದ ಹೈಕೋರ್ಟ್​, ಕಿರುಕುಳ ನೀಡದಂತೆ ಪೊಲೀಸರಿಗೆ ಹೇಳುವಂತೆ ಎಸ್​​ಪಿಪಿಗೆ ಸೂಚನೆ ನೀಡಿದೆ. ಅಲ್ಲದೇ ಆರೋಪ ಸತ್ಯವಾದರೆ ಡಿವೈಎಸ್​ಪಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಪೊಲೀಸರ ವಿರುದ್ಧ ಮಾಡಿದ ಆರೋಪಗಳೇನು?

ಮದುವೆ ರದ್ದಾಗಿದ್ದಕ್ಕೆ ದುಡ್ಡು ಕೊಡುವಂತೆ ಶಾಸಕ ಹಾಗೂ‌ ಪೊಲೀಸರು ಬೆದರಿಕೆ ಹಾಕಿದ್ದಾರೆ. ಹೀಗಾಗಿ ಪೊಲೀಸರ ವಿರುದ್ಧ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಗಾಂಜಾ ಕೇಸ್ ಹಾಕಿ ಬಂಧಿಸಿದ್ದಾರೆ. ಅಲ್ಲದೇ ಪೊಲೀಸರು ಡೋರ್ ಕ್ಲೋಸ್ ಮಾಡಿ ಹೊಡೆದಿದ್ದಾರೆ ಎಂದು ಸಾಗರ ಡಿವೈಎಸ್​ಪಿ ಗೋಪಾಲಕೃಷ್ಣ ನಾಯಕ್ ವಿರುದ್ಧ‌ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಕೊಟ್ಟೇ ಕೊಡ್ತಾರೆ: ರಾಜ್ಯಪಾಲರ ಭೇಟಿ ಬಳಿಕ ಅಬ್ರಾಹಂ ಸ್ಫೋಟಕ ಹೇಳಿಕೆ

ಅಲ್ಲದೇ ಎನ್​ಕೌಂಟರ್ ಮಾಡುವುದಾಗಿ ಗನ್ ಇಟ್ಟು ಬೆದರಿಸಿದ್ದಾರೆ. ಪರ್ಸ್,‌ ಸಾಕ್ಷ್ಯವಿದ್ದ ಮೊಬೈಲ್‌ ಕಿತ್ತಿಟ್ಟುಕೊಂಡಿದ್ದಾರೆ. ಸಾಲದಕ್ಕೆ ರೌಡಿಶೀಟರ್ ಮಾಡಿಸಿ ಕೆಲಸದಿಂದ ಸಸ್ಪೆಂಡ್ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಕೆಪಿಟಿಸಿಎಲ್ ಇಂಜಿನಿಯರ್ ಶಾಂತಕುಮಾರಸ್ವಾಮಿ ಎಂಬುವರು ಹೈಕೋರ್ಟ್​ ನ್ಯಾಯಾಧೀಶರ ಮುಂದೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಆರೋಪಗಳನ್ನು ಕೇಳಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನರಿದ್ದ ಹೈಕೋರ್ಟ್ ಪೀಠ, ಆರೋಪ ಸತ್ಯವಾದರೆ ಡಿವೈಎಸ್​ಪಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಪ್ರಕರಣದ ಹಿನ್ನೆಲೆ

ಕೆಪಿಟಿಸಿಎಲ್​ ಇಂಜಿನಿಯರ್ ಆಗಿರುವ ಶಾಂತಕುಮಾರಸ್ವಾಮಿ  ಅವರಿಗೆ ಮದುವೆ ಫಿಕ್ಸ್ ಆಗಿದ್ದು, ಬಳಿಕ ಕೆಲ ಕಾರಣಾಂತರಗಳಿಂದ ಮದುವೆ ರದ್ದಾಗಿದೆ. ಈ ಸಂಬಂಧ ಸಾಗರ ಶಾಸಕ ಮತ್ತು ಪೊಲೀಸರು ಸೇರಿಕೊಂಡು ಮದುವೆ ರದ್ದು ಮಾಡಿಕೊಂಡಿದ್ದಕ್ಕೆ ಹಣ ನೀಡಬೇಕೆಂದಿದ್ದಾರೆ. ಇದನ್ನು ರೆಕಾರ್ಡ್​ ಮಾಡಿಕೊಂಡು ಶಾಂತಕುಮಾರಸ್ವಾಮಿ ಅವರು ಲೋಕಾಯುಕ್ತಗೆ ದೂರು ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡ ಪೊಲೀಸರು, ಮದುವೆ ಫಿಕ್ಸ್​ ಆಗಿದ್ದ ಯುವತಿ ಕಡೆಯಿಂದ ದೂರು ಕೊಡಿಸಿದ್ದಾರೆ. ಬಳಿಕ ಶಾಂತಕುಮಾರಸ್ವಾಮಿ ತಮ್ಮ ವಿರುದ್ಧ ದೂರನ್ನು ರದ್ದುಗೊಳಿಸುವಂತೆ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ಇದನ್ನು ಗಮನಿಸಿದ ಸಾಗರ ಪೊಲೀಸರು, ಶಾಂತಕುಮಾರಸ್ವಾಮಿ ವಿರುದ್ಧ ಗಾಂಜಾ ಕೇಸ್ ಹಾಕಿ ಬಂಧಿಸಿದ್ದರು. ನಂತರ ಜೈಲಿಗೆ ಹೋಗಿ ಬಂದ ಶಾಂತಕುಮಾರಸ್ವಾಮಿ ತಮ್ಮ ಮೇಲಿನ ಪ್ರಕರಣವನ್ನು ರದ್ದು ಕೋರಿ ಹೈಕೋರ್ಟ್​ಗೆ ಮನವಿ ಸಲ್ಲಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:13 pm, Tue, 6 August 24

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM