IND vs NED Match: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಪೊಲೀಸ್ ಭದ್ರತೆ, ವಿದ್ವಾಂಸಕ ಕೃತ್ಯ ತಡೆಗೆ ವಿಶೇಷ ತಂಡಗಳ ನಿಯೋಜನೆ
ಬೆಂಗಳೂರು ನಗರದಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವೆ ನಡುವೆ ಕೊನೆಯ ಲೀಗ್ ಪಂದ್ಯ ನಡೆಯಲಿದ್ದು, ಸ್ಟೇಡಿಯಂ ಸುತ್ತಾ ಮುತ್ತಾ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈ ಬಗ್ಗೆ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಹೆಚ್ಟಿ ಮಾಹಿತಿ ನೀಡಿದ್ದು, ವಿದ್ವಾಂಸಕ ಕೃತ್ಯ ತಡೆಗಟ್ಟಲು 7 ವಿಶೇಷ ತಂಡಗಳನ್ನು ನಿಯೋಜನೆ ಮಾಡಲಾಗಿದೆ ಎಂದಿದ್ದಾರೆ.

ಬೆಂಗಳೂರು, ನ.11: ನಗರದಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ನೆದರ್ಲ್ಯಾಂಡ್ಸ್ (IND-NED Match) ನಡುವೆ ನಡುವೆ ಕೊನೆಯ ಲೀಗ್ ಪಂದ್ಯ ನಡೆಯಲಿದ್ದು, ಸ್ಟೇಡಿಯಂ ಸುತ್ತಾ ಮುತ್ತಾ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈ ಬಗ್ಗೆ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಹೆಚ್ಟಿ ಮಾಹಿತಿ ನೀಡಿದ್ದಾರೆ.
ಬೆಂಗಳೂರಲ್ಲಿ ಒಟ್ಟು ಐದು ಪಂದ್ಯ ನಿಗಧಿಯಾಗಿತ್ತು. ಈಗಾಗಲೇ ನಾಲ್ಕು ಪಂದ್ಯಗಳು ಮುಗಿದಿದೆ, ಐದನೇ ಪಂದ್ಯ ನಾಳೆ ನಡೆಯಲಿದೆ. ನಾಳೆ ಭಾರತ-ನೆದರ್ಲ್ಯಾಂಡ್ ನಡುವೆ ಕೊನೆಯ ಲೀಗ್ ಪಂದ್ಯ ನಡೆಯಲಿದೆ. ಹೀಗಾಗಿ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಾ ಮುತ್ತಾ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದರು.
ಇದನ್ನೂ ಓದಿ: IND vs NED: ಬ್ಯಾಟಿಂಗ್ ಸ್ವರ್ಗ ಬೆಂಗಳೂರಿನಲ್ಲಿ ಅಬ್ಬರಿಸುತ್ತಾ ಭಾರತ? ಪಂದ್ಯಕ್ಕೆ ಮಳೆಯ ಆತಂಕ? ಇಲ್ಲಿದೆ ವಿವರ
ಒಂಬತ್ತು ಮಂದಿ ಎಸಿಪಿ, 28 ಇನ್ಸ್ಪೆಕ್ಟರ್, 86 ಮಂದಿ ಪಿಎಸ್ಐಗಳು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅಲ್ಲದೆ, 4 ಕೆಎಸ್ಆರ್ಪಿ ತುಕಡಿ, 2 ಡಿ ಸ್ವಾಟ್ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ ಎಂದರು.
ವಿದ್ವಾಂಸಕ ಕೃತ್ಯ ತಡೆಗಟ್ಟಲು 7 ವಿಶೇಷ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಸ್ಟೇಡಿಯಂನ ಎಲ್ಲಾ ಗೇಟ್ ಬಳಿ ವಿದ್ವಾಂಸಕ ಕೃತ್ಯ ತಪಾಸಣೆ ಕೈಗೊಳ್ಳುತ್ತೇವೆ. ಟಿಕೆಟ್ ಹಿಂದೆ ನಮೂದಿಸಿರುವ ನಿಯಮಗಳನ್ನು ಪಾಲಿಸಬೇಕು ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:26 pm, Sat, 11 November 23