AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಅಮಾನವೀಯ ಘಟನೆ; ಸಂಬಳ ಕೇಳಿದ್ದಕ್ಕೆ ನಗ್ನಗೊಳಿಸಿ ಹಲ್ಲೆ ನಡೆಸಿ ವಿಡಿಯೋ ಮಾಡಿದ ದುರುಳರು

ಬಾಕಿ ಇದ್ದ ಸಂಬಳ ನೀಡುವುದಾಗಿ ಕರೆಸಿ ಅಂಗಡಿ ಮಾಲೀಕ ಯುವಕನ ಮೇಲೆ ದರ್ಪ ಮೆರೆದಿದ್ದಾರೆ. ಬೆತ್ತದಿಂದ ಮನಬಂದಂತೆ ಹಲ್ಲೆ ನಡೆಸಿ ನಗ್ನಗೊಳಿಸಿ ವಿಡಿಯೋ ರೆಕಾರ್ಡ್​ ಮಾಡಿದ್ದಾರೆ. ಸದ್ಯ ಸುಬ್ರಮಣ್ಯಪುರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಬೆಂಗಳೂರಿನಲ್ಲಿ ಅಮಾನವೀಯ ಘಟನೆ; ಸಂಬಳ ಕೇಳಿದ್ದಕ್ಕೆ ನಗ್ನಗೊಳಿಸಿ ಹಲ್ಲೆ ನಡೆಸಿ ವಿಡಿಯೋ ಮಾಡಿದ ದುರುಳರು
ಸುಬ್ರಮಣ್ಯಪುರ ಠಾಣೆ
Jagadisha B
| Edited By: |

Updated on: Aug 14, 2024 | 9:49 AM

Share

ಬೆಂಗಳೂರು, ಆಗಸ್ಟ್​.14: ಸಿಲಿಕಾನ್ ಸಿಟಿ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಸಂಬಳ ಕೊಡುವುದಾಗಿ ಯುವಕನನ್ನು ಕರೆಸಿಕೊಂಡ ಅಂಗಡಿ ಮಾಲೀಕ ಬೆತ್ತದಿಂದ ಮನಬಂದಂತೆ ಹಲ್ಲೆ (Assault) ನಡೆಸಿ ನಗ್ನಗೊಳಿಸಿ ವಿಡಿಯೋ ಮಾಡಿ ದರ್ಪ ಮೆರೆದಿದ್ದಾನೆ. ಅಲ್ಲದೆ ನನ್ನ ತಾಯಿ ಬಗ್ಗೆಯೇ ಅವಾಚ್ಯವಾಗಿ ನಿಂದಿಸಿದ್ದಾನೆ ಎಂದು ಯುವಕನ ವಿರುದ್ಧ ಅಂಗಡಿ ಮಾಲೀಕ ದೂರು ದಾಖಲಿಸಿದ್ದು ಸದ್ಯ ಈಗ ಯುವಕನ ಮೇಲೆ ಹಲ್ಲೆ ನಡೆದಿರುವ ವಿಡಿಯೋ ಪೊಲೀಸರ ಕೈಗೆ ಸಿಕ್ಕಿದೆ. ಸುಬ್ರಮಣ್ಯಪುರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಬೆಂಗಳೂರಿನ ಸುಬ್ರಮಣ್ಯಪುರದ ಉತ್ತರಹಳ್ಳಿಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಶರೀಫ್ ಎಂಬ ಯುವಕನ ಮೇಲೆ ಹಲ್ಲೆ ನಡೆದಿದೆ. ಹಾಸಿಗೆ ವ್ಯಾಪಾರಿ ಶೆಕ್ಷಾವಾಲ ಎಂಬ ಅಂಗಡಿ ಮಾಲೀಕ ಹಲ್ಲೆ ನಡೆಸಿ ನಗ್ನ ಗೊಳಿಸಿ ಅಮಾನವೀಯ ವರ್ತನೆ ತೋರಿದ್ದಾನೆ. ಅಸಲಿಗೆ ಹಲ್ಲೆಗೊಳಗಾದ ಶರೀಫ್ ಹಾಗೂ ಶೆಕ್ಷಾವಲ ಇಬ್ಬರು ಸಂಬಂಧಿಕರು. ಹಾಸಿಗೆ ಕೆಲಸಕ್ಕೆ ಬೇಕು ಎಂದು ಶರೀಫ್​ನನ್ನು ಆಂಧ್ರದಿಂದ ಶೆಕ್ಷಾವಲ ಕರೆಸಿಕೊಂಡಿದ್ದ. ಬಳಿಕ ಹೆಚ್ಚಿಗೆ ಕೆಲಸ ಕೊಟ್ಟು ಕಡಿಮೆ ಸಂಬಳ ನೀಡಿದ್ದ. ಹಗಲು ರಾತ್ರಿ ಎನ್ನದೇ ಹೆಚ್ಚು ಕೆಲಸ ಮಾಡಿಸಿಕೊಳ್ಳುತ್ತಿದ್ದ. ಇದರಿಂದ ಬೇಸತ್ತು ಶರೀಫ್ ಕೆಲಸ ಬಿಟ್ಟಿದ್ದ. ಬಾಬು ಎಂಬ ಮತ್ತೋರ್ವರ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದ.

ಈ ವಿಚಾರ ತಿಳಿದು ಶರೀಫ್ ಗೆ ಕರೆ ಮಾಡಿದ್ದ ಶೆಕ್ಷಾವಲ ಕೆಲಸ ಬಿಟ್ಟು ಹೋಗಿದಕ್ಕೆ ಬೈದಿದ್ದ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಶರೀಫ ಶೆಕ್ಷಾವಲನ ತಾಯಿ ಬಗ್ಗೆ ನಿಂದಿಸಿದ್ದ. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಶೆಕ್ಷಾವಲ ಬಾಕಿ ಸಂಬಳ ಕೊಡೊದಾಗಿ ಯುವಕನನ್ನು ತನ್ನ ಅಂಗಡಿಗೆ ಕರೆಸಿ ದರ್ಪ ಮೆರೆದಿದ್ದಾನೆ.

ಇದನ್ನೂ ಓದಿ: ವಿದ್ಯುತ್​ ಟವರ್​ನಿಂದ ಬಿದ್ದು ಪ್ರಾಣಬಿಟ್ಟ ಸ್ನೇಹಿತನನ್ನು ಗುಟ್ಟಾಗಿ ಸುಟ್ಟು ಹಾಕಿದ್ದ ಇಬ್ಬರ ಬಂಧನ

ತಾಯಿ ಬಗ್ಗೆ ಅವಾಚ್ಯ ನಿಂದನೆ ಕೇಳಿ ಮಾಲೀಕ ಮಾಡಿದ್ದೇನು ಗೊತ್ತಾ?

ಇನ್ನು ಜುಲೈ 24ರಂದು ಮಾಲೀಕ ಶೆಕ್ಷಾವಲ ಶರೀಫನಿಗೆ ಕರೆ ಮಾಡಿ ಬಾಕಿ ಸಂಬಳ ಕೊಡೊದಾಗಿ ಹೇಳೀ ತನ್ನ ಉತ್ತರಹಳ್ಳಿಯ ಅಂಗಡಿಗೆ ಬರುವಂತೆ ತಿಳಿಸಿದ್ದ. ದುಡಿದ ಹಣ ಪಡೆಯೋ ಆಸೆಗೆ ಶರೀಫ ತನ್ನ ಊರಿಂದ ಓಡಿ ಬಂದಿದ್ದ. ಆದರೇ ಹಣ ಕೊಡೊದಾಗಿ ಕರೆಸಿ ಅಂಗಡಿಯ ಶೆಟರ್ ಎಳೆದು ಬೆತ್ತದಿಂದ ಮನ ಬಂದಂತೆ ಶರೀಫ್ ಮೇಲೆ ಹಲ್ಲೆ ನಡೆಸಿ ನಗ್ನಗೊಳಿಸಿ ವಿಡಿಯೋ ರೆಕಾರ್ಡ್ ಮಾಡಿ ಶೆಕ್ಷಾವಲ ಅಟ್ಟಹಾಸ ಮೆರೆದಿದ್ದಾನೆ.

ಇಷ್ಟೆಲ್ಲಾ ಆದ ಬಳಿಕ ತುಂಬಾ ಹೆದರಿದ್ದ ಶರೀಫ ತನ್ನ ಊರು ಸೇರಿಕೊಂಡಿದ್ದ. ಇತ್ತ ಶರೀಫ್ ಊರು ಬಿಟ್ಟ ಬಳಿಕ ಶೆಕ್ಷಾವಾಲ ಸೀದಾ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ತೆರಳಿ ತನ್ನ ತಾಯಿ ಬಗ್ಗೆ ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ್ದಾನೆಂದು ದೂರು ನೀಡಿದ್ದಾನೆ. ದೂರು ದಾಖಲಾದ ಹಿನ್ನಲೆ‌ ಪೊಲೀಸರು ಶರೀಫ್​ನನ್ನು ಕರೆಸಿ ಬುದ್ದಿ ಹೇಳಿದ್ದಾರೆ. ಈ ವೇಳೆ ಶರೀಫ್, ನಾನು ಬೆಂಗಳೂರಿಗೆ ಮತ್ತೆ ಯಾವತ್ತೂ ಬರಲ್ಲ ಎಂದು ಹೇಳಿ ತನ್ನ ಊರಿಗೆ ಹೋಗಿದ್ದಾನೆ. ಈ ವೇಳೆ ಪೊಲೀಸರ ಬಳಿ ತನ್ನ ಮೇಲೆ ಆದ ಹಲ್ಲೆ ಬಗ್ಗೆ ಬಾಯ್ಬಿಟ್ಟಿರಲಿಲ್ಲ.

ಕೆಲ ದಿನಗಳ ಬಳಿಕ ಸುಬ್ರಮಣ್ಯಪುರ ಪೊಲೀಸರಿಗೆ ಶರೀಫ್​ ಹಲ್ಲೆಯ ವಿಡಿಯೋ ಕೈ ಸೇರಿತ್ತು. ವಿಡಿಯೋ ನೋಡಿದ ಪೊಲೀಸರು ಮತ್ತೆ ಶರೀಫ್​ಗೆ ಕರೆ ಮಾಡಿ ಬೆಂಗಳೂರಿಗೆ ಬರುವಂತೆ ಒತ್ತಾಯಿಸಿದರು. ಬಳಿಕ ಶರೀಫ್​ ಬಳಿ ಹಲ್ಲೆ ಬಗ್ಗೆ ವಿಚಾರಿಸಿದ್ದು ಹಲ್ಲೆ ನಡೆದಿರುವ ವಿಚಾರವನ್ನು ಶರೀಫ್ ಬಾಯ್ಬಿಟ್ಟಿದ್ದಾನೆ. ಸದ್ಯ ಶರೀಫ್​ನಿಂದ ದೂರು ದಾಖಲಿಸಿಕೊಂಡಿರುವ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ