ಕೆಎಸ್​​ಸಿಎ ಸದಸ್ಯರಿಂದಲೇ ಐಪಿಎಲ್ ಟಿಕೆಟ್ ಬ್ಲ್ಯಾಕ್​ನಲ್ಲಿ ಮಾರಾಟ ಶಂಕೆ: ಸಿಸಿಬಿ ಪೊಲೀಸರಿಂದ ನಿಗಾ

ಐಪಿಎಲ್ ಕ್ರಿಕೆಟ್ ಕಾವು ಜೋರಾಗಿರುವ ಸಂದರ್ಭದಲ್ಲಿಯೇ ಕರ್ನಾಟಕದಲ್ಲಿ ಬೆಟ್ಟಿಂಗ್ ಭರಾಟೆ ಕೂಡ ಹೆಚ್ಚಾಗಿದ್ದು, ಇದರ ವಿರುದ್ಧ ಪೊಲೀಸರು ಈಗಾಗಲೇ ಕಾರ್ಯಾಚರಣೆ ಆರಂಭಿಸಿದ್ದಾರೆ. ಇದೀಗ ಐಪಿಎಲ್ ಟಿಕೆಟ್ ಬ್ಲ್ಯಾಕ್​ನಲ್ಲಿ ಮಾರಾಟ ಮಾಡುವ ದಂಧೆ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿಯ ಸದಸ್ಯರೇ ಶಾಮಿಲಾಗಿದ್ದಾರೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದ್ದು, ಸಿಸಿಬಿ ಪೊಲೀಸರು ನಿಗಾ ವಹಿಸಿದ್ದಾರೆ.

ಕೆಎಸ್​​ಸಿಎ ಸದಸ್ಯರಿಂದಲೇ ಐಪಿಎಲ್ ಟಿಕೆಟ್ ಬ್ಲ್ಯಾಕ್​ನಲ್ಲಿ ಮಾರಾಟ ಶಂಕೆ: ಸಿಸಿಬಿ ಪೊಲೀಸರಿಂದ ನಿಗಾ
ಸಾಂದರ್ಭಿಕ ಚಿತ್ರ

Updated on: Apr 12, 2025 | 12:44 PM

ಬೆಂಗಳೂರು, ಏಪ್ರಿಲ್ 12: ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿಯ (KSCA) ಪ್ರಭಾವಿ ಸದಸ್ಯರು ಐಪಿಎಲ್ ಟಿಕೆಟ್ (IPL Ticket) ಅನ್ನು ಬ್ಲ್ಯಾಕ್ ಮಾರ್ಕೆಟ್​​ನಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಅನುಮಾನಗಳು ಬಲವಾಗಿದ್ದು, ಕರ್ನಾಟಕ ಪೊಲೀಸ್ ಕ್ರೈಂ ಬ್ರಾಂಚ್ (CCB Police) ಹದ್ದಿನ ಕಣ್ಣಿಟ್ಟಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗುರುವಾರ ನಡೆದಿದ್ದ ಐಪಿಎಲ್ ಪಂದ್ಯದ ಮುನ್ನ ಬ್ಲ್ಯಾಕ್​​ನಲ್ಲಿ ಟಿಕೆಟ್​ ಮಾರಾಟ ಮಾಡಿದ 8 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಸ್ಟೇಡಿಯಂನ ಕ್ಯಾಂಟೀನ್ ಬಾಯ್​​ಗಳು ಮತ್ತು ಸಿಬ್ಬಂದಿ ಎಂದು ಶಂಕಿಸಲಾಗಿದೆ. ಇದರ ಬೆನ್ನಲ್ಲೇ, ಕೆಎಸ್​ಸಿಎ ಪ್ರಭಾವಿ ಸದಸ್ಯರ ಮೇಲೆ ಅನುಮಾನಗಳು ಹೆಚ್ಚಾಗಿವೆ.

ಶಂಕಿತ ವ್ಯಕ್ತಿಗಳ ಬಳಿ ಸಾಕಷ್ಟು ಪ್ರಮಾಣದಲ್ಲಿ ಟಿಕೆಟ್ ಇದ್ದವು. ಸಾರ್ವಜನಿಕರಿಗೆ ಐಪಿಎಲ್ ಟಿಕೆಟ್ ಖರೀದಿಸುವುದು ಕಷ್ಟವಾಗಿರುವ ಈ ಸಂದರ್ಭದಲ್ಲಿ, ಶಂಕಿತರ ಬಳಿ ಸಾಕಷ್ಟು ಟಿಕೆಟ್ ಇದ್ದವು. ಅವರು ದೊಡ್ಡ ಪ್ರಮಾಣದಲ್ಲಿ ಟಿಕೆಟ್ ಮಾರಾಟ ಮಾಡುತ್ತಿದ್ದರು ಎಂದು ಪ್ರಕರಣದ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಶಂಕಿತರಿಗೆ ಪ್ರಭಾವಿ ವ್ಯಕ್ತಿಗಳ ಬೆಂಬಲವಿದೆ ಎಂದು ನಾವು ಭಾವಿಸಿದ್ದೇವೆ. ಶೀಘ್ರದಲ್ಲೇ ಕೆಲವು ಮಂದಿ ಕೆಎಸ್‌ಸಿಎ ಸದಸ್ಯರನ್ನು ವಿಚಾರಣೆ ಕರೆಸಲು ಚಿಂತನೆ ನಡೆಸಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.

32 ಸಾವಿರ ರೂ.ಗೆ ಐಪಿಎಲ್ ಟಿಕೆಟ್ ಮಾರಾಟ!

ಬಂಧಿತರಿಂದ ಸಿಸಿಬಿ ಪೊಲೀಸರು 1,200 ರೂ., 5,000 ರೂ. ಮತ್ತು 13,000 ರೂ. ಬೆಲೆಯ 18 ಟಿಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಟಿಕೆಟ್‌ಗಳನ್ನು ಕನಿಷ್ಠ 7,000 ರೂ.ಗಳಿಂದ ಗರಿಷ್ಠ 32,000 ರೂ.ಗಳಿಗೆ ಮಾರಾಟ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಐಪಿಎಲ್ ಟಿಕೆಟ್‌ಗಳನ್ನು ಬ್ಲ್ಯಾಕ್​ನಲ್ಲಿ ಮಾರಾಟ ಮಾಡುವುದರ ವಿರುದ್ಧ ತನಿಖೆಗೆ ಗುರುವಾರದ  ಪಂದ್ಯಾವಳಿ ಪ್ರಾರಂಭವಾಗುವ ಮೊದಲು ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ ಆದೇಶಿಸಿದ್ದರು. ಅದರಂತೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ಇದನ್ನೂ ಓದಿ
PSL 2025: ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ RCB ಮಾಜಿ ಆಟಗಾರರು
ಪ್ರಿಯಾಂಶ್ ಆರ್ಯನ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್
ಕ್ರಿಸ್​ ಗೇಲ್ ದಾಖಲೆ ಜಸ್ಟ್ ಮಿಸ್: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
ಉಲ್ಟಾ ಹೊಡೆದ RCB ಕಪ್ ಗೆಲ್ಲಬಾರದು ಎಂದಿದ್ದ ಅಂಬಾಟಿ ರಾಯುಡು

ಇದನ್ನೂ ಓದಿ: ಒಂದೇ ಮೈದಾನದಲ್ಲಿ ಅತಿ ಹೆಚ್ಚು ಸೋಲು; ತವರಿನಲ್ಲಿ ಬೇಡದ ದಾಖಲೆ ಬರೆದ ಆರ್​ಸಿಬಿ

ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯಕ್ಕೂ ಮುನ್ನ, ಸಿಸಿಬಿ ಪೊಲೀಸರ ವಿವಿಧ ತಂಡಗಳು ಕ್ರೀಡಾಂಗಣ ಸುತ್ತಮುತ್ತ ಸುತ್ತಾಡಿ ಎಂಟು ಮಂದಿಯನ್ನು ಬಂಧಿಸಿದ್ದವು. ಬಂಧಿತರ ವಿರುದ್ಧ ಮೂರು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ.

ಕೆಎಸ್​ಸಿಎ ಸದಸ್ಯರ ಮೇಲೆ ಬಲವಾದ ಅನುಮಾನ

ಸಿಸಿಬಿ ಪೊಲೀಸರು ವಶಪಡಿಸಿಕೊಂಡ ಟಿಕೆಟ್‌ಗಳಲ್ಲಿ ಆಯ್ದ ಜನರಿಗೆ ಮಾತ್ರ ನೀಡಲಾಗುವ ವಿಶೇಷ ಪಾಸ್‌ಗಳು ಕೂಡ ಸೇರಿದ್ದವು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಕೆಎಸ್‌ಸಿಎ ಸದಸ್ಯರು ಶಾಮೀಲಾಗದೆ ಇದು ಸಾಧ್ಯವಿಲ್ಲ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:44 pm, Sat, 12 April 25