AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಸೈಲೆಂಟ್​​ ಆಗಲು ಮಾಟ ಮಂತ್ರ ಕಾರಣವಾ?: ಕಾಂಗ್ರೆಸ್​​ನಲ್ಲಿಯೇ ಹೀಗೊಂದು ಹೊಸ ಚರ್ಚೆ

ಆಪ್ತರೇ ಟಾರ್ಗೆಟ್ ಆಗುತ್ತಿದ್ದರೂ ಸಿಎಂ ಸಿದ್ದರಾಮಯ್ಯ ಮೌನವಾಗಿರುವುದಕ್ಕೆ ಕಾಂಗ್ರೆಸ್‌ನಲ್ಲಿಯೇ ನಾನಾ ರೀತಿಯ ಚರ್ಚೆ ಶುರುವಾಗಿದೆ. ಮಾಟ ಮಂತ್ರದಿಂದಾಗಿ ಸಿದ್ದರಾಮಯ್ಯ ಅಸಹಾಯಕರಾಗಿದ್ದಾರಾ? ಎಂದು ಯೋಚಿಸುತ್ತಿರೋದಾಗಿ ಶಾಸಕ ಕೆ.ಎನ್. ರಾಜಣ್ಣ ಹೇಳಿದ್ದು, ಇದಕ್ಕೆ ಶಾಸಕ ಶಾಸಕ ಹೆಚ್​.ಸಿ.ಬಾಲಕೃಷ್ಣ ಟಾಂಗ್​ ನೀಡಿದ್ದಾರೆ. ಸಿಎಂ ಮೇಲೆ ಮಾಟ ಮಂತ್ರ ಮಾಡೋ ಶಕ್ತಿ ಇರೋದು ರಾಜಣ್ಣಗೆ ಮಾತ್ರ ಎಂದಿದ್ದಾರೆ. ಮತ್ತೊಂದೆಡೆ ಗೃಹ ಸಚಿವರೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಆ ಕುರಿತ ಮಾಹಿತಿ ಇಲ್ಲಿದೆ.

ಸಿದ್ದರಾಮಯ್ಯ ಸೈಲೆಂಟ್​​ ಆಗಲು ಮಾಟ ಮಂತ್ರ ಕಾರಣವಾ?: ಕಾಂಗ್ರೆಸ್​​ನಲ್ಲಿಯೇ ಹೀಗೊಂದು ಹೊಸ ಚರ್ಚೆ
ಸಿದ್ದರಾಮಯ್ಯ ಸೈಲೆಂಟ್​​ ಆಗಲು ಮಾಟ ಮಂತ್ರ ಕಾರಣವಾ?Image Credit source: Tv9 Kannada
ಪ್ರಸನ್ನ ಹೆಗಡೆ
|

Updated on:Apr 22, 2026 | 2:50 PM

Share

ಬೆಂಗಳೂರು, ಏಪ್ರಿಲ್​​ 22: ಇತ್ತೀಚೆಗೆ ರಾಜ್ಯ ಕಾಂಗ್ರೆಸ್​​ನಲ್ಲಿ ಭಾರಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ತಮ್ಮ ಆಪ್ತರೇ ಪಕ್ಷದಲ್ಲಿ ಟಾರ್ಗೆಟ್​​ ಆಗುತ್ತಿದ್ದರೂ ಸಿಎಂ ಸಿದ್ದರಾಮಯ್ಯ ಮಾತ್ರ ಸೈಲೆಂಟ್​​ ಆಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಈ ನಡುವೆ ಇದಕ್ಕೆ ಮಾಜಿ ಸಚಿವ, ಹಾಲಿ ಕಾಂಗ್ರೆಸ್​​ ಶಾಸಕ ಕೆ.ಎನ್​​. ರಾಜಣ್ಣ ಹೊಸ ವ್ಯಾಖ್ಯಾನ ನೀಡಿದ್ದಾರೆ. ಸಿದ್ದರಾಮಯ್ಯ ಇಷ್ಟೊಂದು‌ ಅಸಹಾಯಕ ರೀತಿ ಇದ್ದಾರೆ ಅಂದರೆ ಯಾರೋ ಮಾಟ ಮಂತ್ರ ಮಾಡಿಸಿರಬಹುದಾ ಎಂದು ಯೋಚಿಸ್ತಿದ್ದೇನೆ ಎಂದು ಅವರು ಹೇಳಿರೋದು ‘ಕೈ’ ಮನೆಯಲ್ಲಿಯೇ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

ರಾಜಣ್ಣ ಹೇಳಿದ್ದು ಏನು?

ನಾನು, ಸಿಎಂ ಸಿದ್ದರಾಮಯ್ಯ ಇಬ್ಬರೂ ಮಾಟ ಮಂತ್ರ ನಂಬಲ್ಲ. ಆದರೆ ಗಟ್ಟಿಯಾಗಿ ನಿಲ್ಲಿ‌ ಅಂತಾ ಹೇಳಿಸಿಕೊಳ್ಳುವಷ್ಟು ಸಿಎಂ ಅಸಹಾಯಕರಲ್ಲ. ಹೀಗಾಗಿ ಮಾಟ ಮಂತ್ರ ಮಾಡಿಸಿರಬಹುದಾ ಅಂತ ಯೋಚಿಸ್ತಿದ್ದೇನೆ. ಮಾಟ ಮಂತ್ರದ ಬಗ್ಗೆ ಜನರು ಮಾತಾಡುತ್ತಿದ್ದಾರೆ. ನಮ್ಮ ಹಳೇ ಮನೆ ಮುಂದೆಯೂ ನಿಂಬೆಹಣ್ಣು, ದಾರ ಹಾಕಿ ಹೋಗಿದ್ರು. ಕೇರಳದಲ್ಲಿ ಮಾಟ ಮಂತ್ರ ಮಾಡಿಸುತ್ತಾರೆ ಎಂದು ರಾಜಣ್ಣ  ಹೇಳಿದ್ದರು.

ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಸದ್ದು ಮಾಡಿದ ಮಾಟ, ಮಂತ್ರ; ಕೆಎನ್ ರಾಜಣ್ಣ ಸ್ಫೋಟಕ ಹೇಳಿಕೆ

‘ಈಗ ಯಾವ ಮಾಟ ಮಂತ್ರ ನಡೆಯಲ್ಲ’

ಇನ್ನು ರಾಜಣ್ಣ ಅವರ ಈ ಹೇಳಿಕೆಗೆ ಶಾಸಕ ಹೆಚ್​.ಸಿ.ಬಾಲಕೃಷ್ಣ ಟಾಂಗ್​ ನೀಡಿದ್ದು, ಸಿಎಂ ಮೇಲೆ ಮಾಟ ಮಂತ್ರ ಮಾಡೋ ಶಕ್ತಿ ಇರೋದು ರಾಜಣ್ಣಗೆ ಮಾತ್ರ. ಇನ್ಯಾರಿಗೂ ಆ ಶಕ್ತಿ ಇಲ್ಲ ಎಂದಿದ್ದಾರೆ. ಮುಖ್ಯಮಂತ್ರಿಗೆ ಯಾರು ಆಪ್ತರು ಇರ್ತಾರೆ ಅವರೇ ಮಾಡಬೇಕು. ಬೇರೆಯವರು ಮಾಟ ಮಂತ್ರ ಮಾಡಿದ್ರೆ ಮುಖ್ಯಮಂತ್ರಿಗಳು ಬಿಡ್ತಾರಾ? ಎಂದು ಪ್ರಶ್ನಿಸಿದ್ದಾರೆ. ಬಳಿಕ ರಾಜಣ್ಣ ಮಾತುಗಳನ್ನ ಅಷ್ಟೊಂದು ಸೀರಿಯಸ್ ಆಗಿ ಪರಿಗಣಿಸಿದ್ದೀರಾ? ಹಾಗಾದ್ರೆ ನಾನು ಅದಕ್ಕೆ ಉತ್ತರ ಕೊಡಲು ಸಾಧ್ಯವಿಲ್ಲ. ಮಂತ್ರದ ಬಗ್ಗೆ ಕ್ಯಾಶುವಲ್ ಆಗಿ ಹೇಳಿದ್ದಾರೆ ಅಂತಾ ಕಾಣಿಸುತ್ತೆ. ಮಾಟದಮೂಲಕ ಅಧಿಕಾರ ಕಸಿದುಕೊಳ್ಳುವುದು, ಅಧಿಕಾರ ಕೊಡಿಸುವ ಕಾಲ ಹೋಯ್ತು. ಈಗ ಯಾವ ಮಾಟ ಮಂತ್ರ ನಡೆಯಲ್ಲ ಎಂದಿದ್ದಾರೆ. ಮತ್ತೊಂದೆಡೆ ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ರಾಜಣ್ಣಗೆ ಮಾಹಿತಿ ಇರಬಹುದು, ಇಲ್ಲ ಯಾರಾದರೂ ಹೇಳಿರಬಹುದು. ಅದಕ್ಕೆ ಅವರು ಹಾಗೆ ಹೇಳಿರಬೇಕು ಎಂದಿದ್ದಾರೆ. ಒಟ್ಟಾರೆಯಾಗಿ ಸಿದ್ದರಾಮಯ್ಯ ಅವರು ಸೈಲೆಂಟ್​ ಆಗಿರುವ ವಿಚಾರ ಈಗ ನಾನಾರೀತಿ ಚರ್ಚೆಗಳಿಗೆ ಕಾರಣವಾಗಿರೋದಂತೂ ಸುಳ್ಳಲ್ಲ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:50 pm, Wed, 22 April 26

Follow Us