‘ಕಾರ್ಡ್ ಪ್ರಿಂಟ್ ಮಾಡಿ ವಶಕ್ಕೆ ಪಡೆಯಲು ಇದೇನು ಮದುವೇನಾ?’: ಕುಮಾರಸ್ವಾಮಿ ಆರೋಪಕ್ಕೆ ಪ್ರಿಯಾಂಕ್​​ ಖರ್ಗೆ ಕೌಂಟರ್​​

ಜೆಡಿಎಸ್ ಕಾರ್ಯಕರ್ತನ ವಶ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಾಡಿದ್ದ ಆರೋಪಗಳಿಗೆ ತಿರುಗೇಟು ನೀಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಕಾರ್ಡ್ ಪ್ರಿಂಟ್ ಮಾಡಿ ವಶಕ್ಕೆ ಪಡೆಯಲು ಇದು ಮದುವೆಯಲ್ಲ ಎಂದು ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ಆರೋಪಗಳಿಗೆ ಉತ್ತರ ಕೊಡೋದಕ್ಕೆ ಆಗೋದಿಲ್ಲ. ಒಂದು ದೂರು ಬಂದಿದ್ದು, ಪ್ರಕರಣ ಸಂಬಂಧ ಯಾರ ಯಾರ ಮೇಲೆ ಸಂಶಯವಿದೆ ಅವರನ್ನು ಕರೆಸುತ್ತೇವೆ. ಪ್ರೋಟೋಕಾಲ್ ಪ್ರಕಾರವಾಗಿ ತನಿಖೆ ನಡೆಸುತ್ತಿದ್ದೇವೆ ಎಂದವರು ತಿಳಿಸಿದ್ದಾರೆ.

ಕಾರ್ಡ್ ಪ್ರಿಂಟ್ ಮಾಡಿ ವಶಕ್ಕೆ ಪಡೆಯಲು ಇದೇನು ಮದುವೇನಾ?: ಕುಮಾರಸ್ವಾಮಿ ಆರೋಪಕ್ಕೆ ಪ್ರಿಯಾಂಕ್​​ ಖರ್ಗೆ ಕೌಂಟರ್​​
ಕುಮಾರಸ್ವಾಮಿ ಆರೋಪಕ್ಕೆ ಪ್ರಿಯಾಂಕ್​​ ಖರ್ಗೆ ಕೌಂಟರ್​​
Image Credit source: Tv9 Kannada
Edited By:

Updated on: Oct 15, 2026 | 11:19 AM

ಬೆಂಗಳೂರು, ಅಕ್ಟೋಬರ್​​ 15: ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಹೇಳಿದ ಹಾಗೆ ತನಿಖೆ ಮಾಡೋಕೆ ಆಗಲ್ಲ. ಯಾರ ಮೇಲೆ ಸಂಶಯವಿದೆ ಅವರನ್ನ ಕರೆಸ್ತೀವಿ. ಅದು ನೀವೂ ಇರಬಹುದು ಅಥವಾ ಯಾರಾದರೂ ಇರಬಹುದು. ಕಾರ್ಡ್ ಪ್ರಿಂಟ್ ಮಾಡಿ ವಶಕ್ಕೆ ಪಡೆಯಲು ಇದೇನು ಮದುವೇನಾ? ಎಂದು ಹೇಳುವ ಮೂಲಕ ಹೆಚ್​​ಡಿಕೆ ಮಾಡಿದ್ದ ಆರೋಪಗಳಿಗೆ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ ಕೌಂಟರ್​​ ಕೊಟ್ಟಿದ್ದಾರೆ. ಸ್ಟಿಂಗ್​​ ಆಪರೇಷನ್​​ ವಿಚಾರದಲ್ಲಿ ಯಾವುದೇ ಪ್ರಕರಣ ದಾಖಲಿಸದೇ ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು.

‘ಮಾಜಿ ಸಿಎಂಗೆ ಪೊಲೀಸರು ಹೇಗೆ ಕೆಲಸ ಮಾಡ್ತಾರೆಂಬುದು ಗೊತ್ತಿಲ್ವಾ?’

Priyank Kharge on HD Kumaraswamy: ವಿಚಾರಣೆನೂ ಕುಮಾರಸ್ವಾಮಿ ಹೇಳ್ದಂಗೆ ಮಾಡಬೇಕಾ ಅಂತಾ ಖರ್ಗೆ ಪ್ರಶ್ನೆ| #TV9D

ಕುಮಾರಸ್ವಾಮಿ ಆರೋಪಗಳಿಗೆ ಉತ್ತರ ಕೊಡೋದಕ್ಕೆ ಆಗೋದಿಲ್ಲ. ಒಂದು ದೂರು ಬಂದಿದ್ದು, ಪ್ರಕರಣ ಸಂಬಂಧ ಯಾರ ಯಾರ ಮೇಲೆ ಸಂಶಯವಿದೆ ಅವರನ್ನು ಕರೆಸುತ್ತೇವೆ. ಪ್ರೋಟೋಕಾಲ್ ಪ್ರಕಾರವಾಗಿ ತನಿಖೆ ನಡೆಸುತ್ತಿದ್ದೇವೆ. ದಿನಾಲೂ ಮಾಧ್ಯಮ ಮುಂದೆ ತನಗೆಲ್ಲ ಮಾಹಿತಿ ಇದೆ ಎಂದು ಕೇಂದ್ರ ಸಚಿವರು ಹೇಳುತ್ತಿದ್ದಾರೆ. ಫೈವ್ ಸ್ಟಾರ್ ಹೋಟೆಲ್​​ನಲ್ಲಿ ಏನೇನು ನಡೆದಿದೆ ಎಂಬುದು ಗೊತ್ತಿದೆ ಎನ್ನುತ್ತಿದ್ದಾರೆ. ಆ ಬಗ್ಗೆ ಮಾಹಿತಿ ಕೊಟ್ಟರೂ ತನಿಖೆ ನಡೆಸುತ್ತೇವೆ. ಕುಮಾರಸ್ವಾಮಿ ಯಾವುದೇ ಸಾಕ್ಷಿ ಕೊಟ್ಟರೂ ಅದನ್ನು ಪಡೆಯುತ್ತೇವೆ. ನಮ್ಮ ಮೇಲೆ ನಂಬಿಕೆಯಿಲ್ಲ ಅಂದರೆ ಜಡ್ಜ್ ಮುಂದೆ 164 ಸ್ಟೇಟ್​​ಮೆಂಟ್ ಕೊಡಲಿ. ಮಾಜಿ ಮುಖ್ಯಮಂತ್ರಿಯಾಗಿರುವ ಅವರಿಗೆ ಕರ್ನಾಟಕ ಪೊಲೀಸರು ಹೇಗೆ ಕೆಲಸ ಮಾಡ್ತಾರೆ ಎಂಬುದು ಗೊತ್ತಿಲ್ವಾ ಎಂದು ಪ್ರಿಯಾಂಕ್​​ ಖರ್ಗೆ ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಸ್ಟಿಂಗ್ ಆಪರೇಷನ್: ಜೆಡಿಎಸ್ ಕಾರ್ಯಕರ್ತ ಸಿಸಿಬಿ ವಶಕ್ಕೆ, ಕುಮಾರಸ್ವಾಮಿ ಕೆಂಡಾಮಂಡಲ

‘ಹೋರಾಟಕ್ಕೆ ರೆಡಿ ಇದ್ದೀನಿ, ಬನ್ನಿ ಅಖಾಡಕ್ಕೆ’

ಪ್ರಿಯಾಂಕ್​​ ಹೇಳಿಕೆಗೆ ಕೌಂಟರ್​​ ನೀಡಿರುವ ಕುಮಾರಸ್ವಾಮಿ, ಸಂಶಯಬಂದರೆ ನನ್ನನ್ನು ವಶಕ್ಕೆ ಪಡೆಯುವುದಾಗಿ ಹೇಳಿದ್ದೀರಿ. ನನ್ನನ್ನು ಮುಟ್ಟಿ ನೋಡಿ ಎಂದು ಸವಾಲು ಹಾಕಿದ್ದಾರೆ. ತಾಕತ್‌, ಯೋಗ್ಯತೆ ಇದ್ದರೆ ಹಾಲಿ ಜಡ್ಜ್‌ ನೇತೃತ್ವದಲ್ಲಿ ತನಿಖೆ ನಡೆಸಿ. ಹೋರಾಟಕ್ಕೆ ರೆಡಿ ಇದ್ದೀನಿ, ಬನ್ನಿ ಅಖಾಡಕ್ಕೆ ಎಂದು ಪಂಥಾಹ್ವಾನವನ್ನೂ ಸಿಎಂ ಡಿಕೆಶಿ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ನೀಡಿದ್ದಾರೆ. ನಿಮ್ಮದು ನಾನು ನೋಡದೆ ಇರುವ ಅಧಿಕಾರನಾ? ಎಂದವರು ಗುಡುಗಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:18 am, Thu, 15 October 26

ವಿಕಾಸ್​ ಬಿಎಂ

ವಿಕಾಸ್​ ಬಿಎಂ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ. ಮೈಸೂರು ಯೂನಿವರ್ಸಿಟಿ ಯಲ್ಲಿ ಶಿಕ್ಷಣ ಮುಗಿಸಿ, 2014 ರಿಂದ ಎಲೆಕ್ಟ್ರಾನಿಕ್ ಮಾದ್ಯಮದಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ಸದ್ಯ ಬೆಂಗಳೂರು ಕ್ರೈಂ ವರದಿಗಾರನಾಗಿ 11 ವರ್ಷ ಸೇವೆ ಸಲ್ಲಿಸಿದ್ದಾರೆ. ಕ್ರೈಂ ರಿಪೋರ್ಟಿಂಗ್ ಹಾಗು ಇನ್ವೆಷ್ಟಿಗೇಟಿವ್ ವರದಿಗಾರರಾಗಿ ಹಾಗು ಸ್ಟಿಂಗ್ ಆಪರೇಷನ್​ಗಳನ್ನ ಮಾಡಿದ್ದಾರೆ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಸುದ್ದಿ ಮೊದಲು ಬ್ರೇಕ್ ಮಾಡಿದ್ದಲ್ಲದೆ, ಶಂಕಿತರ ಸಿಸಿ ಕ್ಯಾಮರಾ ವಿಡಿಯೋಗಳನ್ನ ಪ್ರಸರಣ ಮಾಡಿ ಸಂಸ್ಥೆಯಿಂದ ಪ್ರಶಂಸೆಗೆ ಪಾತ್ರನಾಗಿದ್ದಾರೆ. ಅಲ್ಲದೇ ಬೆಂಗಳೂರಲ್ಲಿ ಟೈಡಾಲ್ ಡ್ರಗ್ ಸೇವನೆಯ ಸ್ಟಿಂಗ್ ಆಪರೇಷನ್ ಮಾಡಿ, ಮೆಡಿಕಲ್ ಗಳಲ್ಲಿ ಟೈಡಾಲ್ ಮಾತ್ರೆಯ ಮಾರಟ ನಿಯಂತ್ರಣಕ್ಕೆ ಬರುವಂತೆ ಮಾಡಿದ್ದಾರೆ. ನೊಂದವರ ಪರವಾಗಿ ನಿಂತು ವಸ್ತುನಿಷ್ಠವಾಗಿ ಸುದ್ದಿಗಳನ್ನ ನೀಡಿ ನ್ಯಾಯ ಕೊಡಿಸುವುದು ಇವರ ಮೊದಲ ಉದ್ದೇಶ. ಸದ್ಯ ಟಿವಿ9 ಸಂಸ್ಥೆಯಲ್ಲಿ ಬೆಂಗಳೂರು ಕ್ರೈಂ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ರೋಡ್ ಟ್ರಿಪ್, ಕ್ರಿಕೆಟ್‌, ವಾಲಿಬಾಲ್ ಆಡುವುದು, ಕ್ರೈಂ ಇನ್ವೆಷ್ಟಿಗೇಷನ್ ಪುಸ್ತಕ ಓದುವುದು ಮತ್ತು ಕ್ರೈಂ ತ್ರಿಲ್ಲರ್ ಸಿನಿಮಾಗಳನ್ನ ನೋಡುವುದು ಇವರ ಹವ್ಯಾಸಗಳು.

Read More
Loading...
Unable to load recommendations.
Follow Us