ಕಾಡುಗೋಡಿ ಪೊಲೀಸರ ಭರ್ಜರಿ ಕಾರ್ಯಚರಣೆ; ವನ್ಯಜೀವಿ ಅವಶೇಷ ಮಾರಟಗಾರರ ಬಂಧನ
ರಾಜ್ಯದಲ್ಲಿ ಹುಲಿ ಉಗುರಿನ ಸುದ್ದಿ ದೊಡ್ಡಮಟ್ಟದ ಸದ್ದು ಮಾಡಿತ್ತು. ಇದೀಗ ಕಾಡುಗೋಡಿ ಪೊಲೀಸರು(Kadugodi Police) ಭರ್ಜರಿ ಕಾರ್ಯಚರಣೆ ನಡೆಸಿದ್ದು, ವನ್ಯಜೀವಿ ಅಂಗಾಗಳ ಅವಶೇಷ ಮಾರಟ ಮಾಡಲು ಮುಂದಾಗಿದ್ದಅಂತರಾಜ್ಯ ಸ್ಮಗ್ಲರ್ಸ್ಗಳನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ 33 ಜಿಂಕೆ ಕೊಂಬನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು, ಫೆ.21: ನಗರದ ಕಾಡುಗೋಡಿ ಪೊಲೀಸರು(Kadugodi Police) ಭರ್ಜರಿ ಕಾರ್ಯಚರಣೆ ನಡೆಸಿದ್ದು, ವನ್ಯಜೀವಿ ಅಂಗಾಗಳ ಅವಶೇಷ ಮಾರಟ ಮಾಡಲು ಮುಂದಾಗಿದ್ದ ಆರೋಪಿಗಳು ಖೆಡ್ಡಾಕ್ಕೆ ಕೆಡವಿದ್ದಾರೆ. ಪಣಿಂದರ್ ಮತ್ತು ರೆಹಮತುಲ್ಲಾ ಬಂಧಿತ ಆರೋಪಿಗಳು. ಇಬ್ಬರು ಅಂತರಾಜ್ಯ ಸ್ಮಗ್ಲರ್ಸ್ ಆಗಿದ್ದು, ಖಾಸಗಿ ಬಸ್ಸಿನಲ್ಲಿ ಆಂಧ್ರದಿಂದ ತಂದು ಮೈಸೂರಿನಲ್ಲಿ ಮಾರಟ ಮಾಡಲು ಯತ್ನಿಸುತ್ತಿದ್ದರು. ಈ ವೇಳೆ ಪೊಲೀಸರು ದಾಳಿ ಮಾಡಿ 33 ಜಿಂಕೆ ಕೊಂಬು ಸೇರಿ 6 ತಲೆಯನ್ನು ವಶಕ್ಕೆ ಪಡೆಕೊಂಡಿದ್ದಾರೆ. ಇನ್ನು ಕಾಡುಗೋಡಿ ಪೊಲೀಸರ ಕಾರ್ಯಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಅಭಿನಂದಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್, ವನ್ಯಜೀವಿ ಕೊಂಬು ಮಾರಲು ಯತ್ನಿಸಿದವರ ಬಂಧನ ಆಗಿದೆ. ಕಾಡುಗೋಡಿ ಪೊಲೀಸರು ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಬಂಧಿತರಿಂದ 33 ಜಿಂಕೆ ಕೊಂಬು, ತಲೆ ಇರುವ 6 ಜಿಂಕೆ ಕೊಂಬು ವಶ ಪಡೆಯಲಾಗಿದೆ. ಆಂಧ್ರದಿಂದ ಜಿಂಕೆ ಕೊಂಬು ತಂದು 40ರಿಂದ 50 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು. ಅವರನ್ನ ಕಾಡುಗೋಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಚಿಕನ್ ಸೆಂಟರ್ ನಲ್ಲಿ ಕೆಲಸ ಮಾಡುವ ಯುವಕನಿಂದಲೇ ಕಳ್ಳತನ
ಬೆಂಗಳೂರು: ಹೆಸರಘಟ್ಟ ರಸ್ತೆಯ ಮಲ್ಲಸಂದ್ರದ ಚಿಕನ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸಚಿನ್(28) ಎಂಬಾತನೇ 50 ಸಾವಿರ ರೂ. ಕಳ್ಳತನ ಮಾಡಿದ ಘಟನೆ ನಡೆದಿದೆ. ಮಹೇಶ್ ಎಂಬುವರಿಗೆ ಸೇರಿದ ಎನ್.ಆರ್ ಚಿಕನ್ ಸೆಂಟರ್ ಇದಾಗಿದ್ದು. ರಾತ್ರಿ ಸಮಯದಲ್ಲಿ ಚಿಕನ್ ಸೆಂಟರ್ ನಲ್ಲಿ ಮಲಗಿ ಕೃತ್ಯ ಎಸಗಿದ್ದಾನೆ. ಬಾಗಲಗುಂಟೆ, ನೆಲಮಂಗಲ, ಮಂಡ್ಯ ಸೇರಿ ಹಲವೆಡೆ ಇತನ ವಿರುದ್ಧ ಆರೋಪಿ ವಿರುದ್ಧ ಕೇಸ್ ದಾಖಲಾಗಿತ್ತು. ಇನ್ನು ಮಂಡ್ಯದ ಸರ್ವೋದಯ ಚಿಕನ್ ಸೆಂಟರ್ನಲ್ಲಿ 1 ಲಕ್ಷದ 17 ಸಾವಿರ, ಲಗ್ಗರೆ BCC ಚಿಕನ್ ಸೆಂಟರ್ನಲ್ಲಿ 45 ಸಾವಿರ ಹಣ ದುಷ್ಕರ್ಮಿ ದೋಚಿದ್ದಾನರ. ಕೆಲಸಕ್ಕೆ ಬಂದು ಮಾಲಿಕರ ನಂಬಿಕೆ ಗಳಿಸಿ ಕೃತ್ಯವೆಸಗಿದ್ದಾನೆ.
ದ್ವಿಚಕ್ರ ವಾಹನ ಕಳ್ಳತನ ಮಾಡ್ತಿದ್ದ ಆರೋಪಿಗಳ ಬಂಧನ
ಬೆಂಗಳೂರು: ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೊಪಿ ಆನಂದ್(31) ಬಂಧಿತ ಆರೋಪಿ. ಇತನಿಂದ 35 ಲಕ್ಷ ಮೌಲ್ಯದ 40 ದ್ವಿಚಕ್ರ ವಾಹನಗಳು ವಶಕ್ಕೆ ಪಡೆಯಲಾಗಿದೆ. ಮಾರತ್ತಹಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:39 pm, Wed, 21 February 24